ಸಮಾಜಘಾತುಕ ಕೃತ್ಯವೆಸಗಿದ ಶಾಸಕನ ಮನೆಯನ್ನೇ ಒಡೆದು ಹಾಕಿದ ಯೋಗಿ

0

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆಯೇ ಪಾತಕಿಗಳಿಗೆ ಸಿಂಹಸ್ವಪ್ನವಾಗಿದ್ದರು. ಮಾತ್ರವಲ್ಲ ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದು ದೇಶದಾದ್ಯಂತ ಸುದ್ದಿಯಾಗಿದ್ದರು. ಇದೀಗ ಸಮಾಜಘಾತುಕರಿಗೆ ಸಹಕಾರ ನೀಡುತ್ತಿದ್ದ ಶಾಸಕರ ಮನೆಯನ್ನೇ ನೆಲಸಮಗೊಳಿಸಿದ್ದಾರೆ.

2005ರ ನವೆಂಬರ್ 29ರಂದು ಮೊಹಮ್ಮದಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಎಂಬರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಸಕ ಮುಖ್ತಾರ್ ಅನ್ಸಾರಿ ಜೈಲು ಸೇರಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಹಾಗೂ ಶಾಸಕ ಮುಖ್ತಾರ್ ಅನ್ಸಾರಿ ಸಹಚರರನ್ನು ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಪೊಲೀಸರು ಎನ್ ಕೌಂಟರ್ ಮಾಡಿದ್ದರು.

ಶಾಸಕ ಮುಖ್ತಾರ್ ಅನ್ಸಾರಿಗೆ ಸೇರಿದ ಎರಡು ಮನೆಗಳನ್ನು ಒಡೆದು ಹಾಕಲಾಗಿದೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂಧಿಗಳು ಸ್ಥಳದಲ್ಲಿ ಹಾಜರಾಗಿದ್ದರು.

ಇನ್ನು ಅಕ್ರಮ ಕಟ್ಟಡ ನಿರ್ಮಾಣದ ಮಾಡಿದ ತಪ್ಪಿಗೆ ಯೋಗಿ ಸರಕಾರ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿರುವ ಖರ್ಚನ್ನು ಕೂಡ ಆರೋಪಿಯಿಂದಲೇ ವಸೂಲಿ ಮಾಡಲು ಮುಂದಾಗಿದೆ. ಅಪರಾಧಿಗಳು ಅಪರಾಧವನ್ನು ತ್ಯೆಜಿಸಬೇಕು. ಇಲ್ಲವಾದ್ರೆ ಅಂತಹ ಕಠಿಣ ನಿರ್ಧಾರಗಳನ್ನು ಎದುರಿಸಲು ಸಿದ್ದರಾಗಿರಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಶಾಸಕ ಮುಖ್ತಾರ್ ಅನ್ಸಾರಿಗೆ ಪಾಕಿಸ್ತಾನದಿಂದ ವಲಸೆ ಬಂದವರು ವಾಸವಾಗಿದ್ದ ನಿಶ್ಕ್ರಾಂತ್ ಸಂಪಟ್ಟಿ ಪ್ರದೇಶದಲ್ಲಿ ಅಕ್ರಮವಾಗಿ ಶಾಸಕ ಮುಖ್ತಾರ್ ಅನ್ಸಾರಿ ಎರಡು ಮನೆಗಳನ್ನು ನಿರ್ಮಾಣ ಮಾಡಿದ್ದ. ಕಟ್ಟಡ ನಿರ್ಮಾಣದ ವೇಳೆಯಲ್ಲಿ ಲಕ್ನೋ ಅಭಿವೃದ್ದಿ ಪ್ರಾಧಿಕಾರ ದಿಂದ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ.

ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿರುವ ಬಿಎಸ್ ಪಿ ಶಾಸಕ ಮುಖ್ತಾರ್ ಅನ್ಸಾರಿಗೆ ಸೇರಿದ ಆಸ್ತಿಗಳನ್ನು ಯೋಗಿ ಸರಕಾರ ಇತ್ತೀಚಿಗೆ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಶಾಸಕ ಅನ್ಸಾರಿಗೆ ಸೇರಿದ ನಾಲ್ವರು ಸಹಾಯಕರಿಗೆ ನೀಡಲಾಗಿದ್ದ ಶಸ್ತ್ರಾಸ್ತ್ರ ಪರವಾನಿಗೆಯನ್ನು ಅಮಾನತ್ತುಗೊಳಿಸಲಾಗಿತ್ತು.

ಲಖೌನ್ ದ ದಾಲಿಭಾಗ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯನ್ನು ಜೆಸಿಬಿ ಬಳಿಸಿ ನೆಮಸಮ ಮಾಡಲಾಗಿದ್ದು ಈ ವಿಡಿಯೋ ಇದೀಗ ಶಾಸಕ ಅನ್ಸಾರಿ ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದನ್ವಯ ನೆಲಸಮ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply

Your email address will not be published.