ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : (25-03-2021ಗುರುವಾರ ) ಈ ರಾಶಿಯವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು

ನಿತ್ಯಭವಿಷ್ಯ : (25-03-2021ಗುರುವಾರ ) ಈ ರಾಶಿಯವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು

- Advertisement -

ಮೇಷರಾಶಿ
ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯ ಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಅದೃಷ್ಟ ಸಂಖ್ಯೆ :  3

ವೃಷಭರಾಶಿ
ಮನೆಯಲ್ಲಿ ಅಸಮಾಧಾನ ಇರುವುದು. ಕೂಡಿಟ್ಟ ಹಣ ಹಾನಿಯಾಗುವ ಸಂಭವವಿದೆ. ಅಣ್ಣತಮ್ಮಂದಿರಲ್ಲಿ ಸಹಕಾರ ಅತ್ಯಂತ ಅವಶ್ಯಕ. ತೋಟಗಾರಿಕೆ ಫಲಪ್ರದವಾಗಲಿದೆ. ವ್ಯಾಪಾರ ವೃದ್ಧಿಯಾಗುವುದು
ಅದೃಷ್ಟ ಸಂಖ್ಯೆ : 8

ಮಿಥುನರಾಶಿ
ಅಪಮಾನ, ಅಪವಾದದಂತಹ ಸಮಸ್ಯೆಗೆ ಸಿಲುಕದಂತೆ ಜಾಗರೂಕರಾಗಿರಿ. ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವುದು ಉತ್ತಮ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವರು.
ಅದೃಷ್ಟ ಸಂಖ್ಯೆ : 6

ಕರ್ಕಾಟಕರಾಶಿ
ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿ ಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು.
ಅದೃಷ್ಟ ಸಂಖ್ಯೆ : 9

ಸಿಂಹರಾಶಿ
ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ
ಅದೃಷ್ಟ ಸಂಖ್ಯೆ : 1

ಕನ್ಯಾರಾಶಿ
ವಸ್ತು-ವಾಹನ-ಆಸ್ತಿ ಖರೀದಿ ಯೋಗವಿದೆ. ಅನಾವಶ್ಯಕ ಅಲೆದಾಟದ ಸಾಧ್ಯತೆ ಇದೆ. ಮನೆಯ ಹಿರಿಯರ ಆರೋಗ್ಯದ ಚಿಂತೆ ಇರುವುದು. ಬುದ್ಧಿವಂತಿಕೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ.
ಅದೃಷ್ಟ ಸಂಖ್ಯೆ : 5

ತುಲಾರಾಶಿ
ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರ ಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸ ಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ.
ಅದೃಷ್ಟ ಸಂಖ್ಯೆ : 7

ವೃಶ್ಚಿಕರಾಶಿ
ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂ ಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮ್ರತೆಗೆ ಯೋಗ್ಯ ಸಮ್ಮಾನ ದೊರೆಯುವುದು.
ಅದೃಷ್ಟ ಸಂಖ್ಯೆ : 7

ಧನುರಾಶಿ
ಧನ ಅಪವ್ಯಯವಾಗುವ ಲಕ್ಷಣಗಳಿವೆ. ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣ ಪರಿಹಾರವಾಗುವುದು.
ಅದೃಷ್ಟ ಸಂಖ್ಯೆ : 3

ಮಕರರಾಶಿ
ಸರಳತೆ ದುರುಪಯೋಗವಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿಯ ಕುಂದು ಕೊರತೆಗಳನ್ನು ನಿಭಾಯಿಸುವಿರಿ. ಮಹತ್ವದ ಅಧಿಕಾರ ದೊರೆಯುವ ಯೋಗವಿದೆ. ವ್ಯಾಪಾರದಲ್ಲಿ ಹೆಚ್ಚಿನ ಹಣ ಹೂಡಿಕೆ ಈಗ ಬೇಡ.
ಅದೃಷ್ಟ ಸಂಖ್ಯೆ : 8

ಕುಂಭರಾಶಿ
ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋ ಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.
ಅದೃಷ್ಟ ಸಂಖ್ಯೆ : 3

ಮೀನರಾಶಿ
ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ.
ಅದೃಷ್ಟ ಸಂಖ್ಯೆ : 2

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular