ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : (18-03-2021ರ ಗುರುವಾರ) ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ

ನಿತ್ಯಭವಿಷ್ಯ : (18-03-2021ರ ಗುರುವಾರ) ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ

- Advertisement -

ಮೇಷರಾಶಿ
ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವುದು. ಆರ್ಥಿಕ ಸಂಕಷ್ಟಗಳು ಎದುರಾಗುವುದು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ.
ಅದೃಷ್ಟ ಸಂಖ್ಯೆ : 6

ವೃಷಭರಾಶಿ
ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ,ನೆಮ್ಮದಿಯುಕ್ತ ಜೀವನ ಇರುವುದು. ನಡೆಯುತ್ತಿರುವ ದಾರಿ ಸರಿಯಾಗಿ ಇರುವುದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು.
ಅದೃಷ್ಟ ಸಂಖ್ಯೆ :   1

ಮಿಥುನರಾಶಿ
ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವುದು. ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು.
ಅದೃಷ್ಟ ಸಂಖ್ಯೆ : 5

ಕರ್ಕಾಟಕರಾಶಿ
ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಸಹೋದರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಪರಸ್ಪರ ದೋಷಾರೋಪ ಬೇಡ. ಮಿತ್ರರ ಸಹಾಯ ದೊರೆಯುವುದು.
ಅದೃಷ್ಟ ಸಂಖ್ಯೆ : 8

ಸಿಂಹರಾಶಿ
ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿ ಪರತೆಯಿಂದ ಕಾರ್ಯ ಕೈಗೂಡುವುದು. ಪರಿವಾರ ದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವುದು. ಉದ್ಯೋಗವನ್ನು ವಿಸ್ತರಿಸುವ ಕಾಲ ಇರುವುದು.
ಅದೃಷ್ಟ ಸಂಖ್ಯೆ : 4

ಕನ್ಯಾರಾಶಿ
ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವುದು. ಸಮತೋಲಿತ ಜೀವನವಿರುವುದು.
ಅದೃಷ್ಟ ಸಂಖ್ಯೆ : 9

ತುಲಾರಾಶಿ
ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವುದು. ಕೇಡು ಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ.
ಅದೃಷ್ಟ ಸಂಖ್ಯೆ : 3

ವೃಶ್ಚಿಕರಾಶಿ
ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬುದ್ದಿಯಿಂದ ತಾಳ್ಮೆಕಳೆದುಕೊಳ್ಳದೇ ಮುಂದುವರೆಯಿರಿ.
ಅದೃಷ್ಟ ಸಂಖ್ಯೆ : 2

ಧನುರಾಶಿ
ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆಕೇಳುವ ಪ್ರಸಂಗ ಇರುವದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವದು.
ಅದೃಷ್ಟ ಸಂಖ್ಯೆ : 6

ಮಕರರಾಶಿ
ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವುದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವುದು.
ಅದೃಷ್ಟ ಸಂಖ್ಯೆ : 3

ಕುಂಭರಾಶಿ
ಹೊಟ್ಟೆಕಿಚ್ಚಿನ ಜನರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಅತಿಯಾಗಿ ಹೇಳಿಕೊಳ್ಳುವುದು ಅಮಾಮಾನಕ್ಕೆ ಕಾರಣವಾಗದಂತೆ ವರ್ತಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇರುವುದು. ಕೈಗೊಂಡ ಕಾರ್ಯ ಯಶ ಕಾಣುವುದು.
ಅದೃಷ್ಟ ಸಂಖ್ಯೆ : 1

ಮೀನರಾಶಿ
ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರಸುಖ ಸಂಬ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ.
ಅದೃಷ್ಟ ಸಂಖ್ಯೆ : 9

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular