ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 10-05-2020

ನಿತ್ಯಭವಿಷ್ಯ : 10-05-2020

- Advertisement -

ಮೇಷರಾಶಿ
ನೂತನ ವಸ್ತುಗಳ ಖರೀದಿ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಸಾಂಸಾರಿಕವಾಗಿ ಅನಿರೀಕ್ಷಿತ ನಿರಾಸೆಗೊಳ್ಳುವ ಪ್ರಸಂಗ ಒದಗಿಬರುವುದು. ಮುಖ್ಯವಾಗಿ ಬದುಕಿಗೆ ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಬೇಕಾಗುತ್ತದೆ. ಸಣ್ಣ ಪ್ರಯಾಣದ ಸಂಭವ ಕಂಡುಬಂದೀತು. ಮನಸ್ಸಿಗೆ ನೆಮ್ಮದಿ, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಗಣ್ಯ ವ್ಯಕ್ತಿಗಳ ಪರಿಚಯ.

ವೃಷಭರಾಶಿ
ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಡಿಸ್ಕೌಂಟ್ ವಸ್ತುಗಳಿಗೆ ಬೇಡಿಕೆ, ಆದಾಯ ಕಡಿಮೆ, ಅಧಿಕವಾದ ಖರ್ಚು, ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಆರ್ಥಿಕ ಪರಿಸ್ಥಿತಿ ಸಂಕೀರ್ಣವಾಗ ಬಹುದು. ಕುಟುಂಬಿಕವಾಗಿ ಸಂಬಂಧಗಳು ಗಟ್ಟಿಯಾಗಲಿವೆ. ಪ್ರಮುಖ ವಿಚಾರವನ್ನು ಇತ್ಯರ್ಥಗೊಳಿಸಲಾಗುವುದಿಲ್ಲ. ಷೇರು ವ್ಯವಹಾರದಲ್ಲಿ ಲಾಭ, ದುಷ್ಟರಿಂದ ತೊಂದರೆ.

ಮಿಥುನರಾಶಿ
ಮಕ್ಕಳಿಂದ ಶುಭ ಸುದ್ದಿ, ವಾಹನದಿಂದ ಅಧಿಕ ಖರ್ಚು, ಅವಿಶ್ರಾಂತದ ದಿನಗಳಿವು. ಕೆಲಸ ಕಾರ್ಯಗಳು ಹೆಚ್ಚಲಿವೆ. ಆದರೆ ಕಠಿನ ದುಡಿಮೆಗೆ ಸೂಕ್ತವಾದ ಪ್ರತಿಫ‌ಲ ದೊರಕಲಿದೆ. ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಸುಧಾರಣೆಯಾದೀತು. ಗೆಳೆಯರಿಂದ ಸಹಕಾರವಿದೆ. ಶತ್ರು ಬಾಧೆ, ವ್ಯಾಪಾರಿಗಳಿಗೆ ಧನ ಲಾಭ, ಕೃಷಿಕರಿಗೆ ಅಲ್ಪ ಲಾಭ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಸ್ತ್ರೀಯರಿಗೆ ಅನುಕೂಲ.

ಕಟಕರಾಶಿ
ಹಣಕಾಸು ವಿಚಾರದಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಆಪ್ತೇಷ್ಟರೊಂದಿಗೆ ಆತ್ಮೀಯ ಸಮಯ ಕಳೆಯುವಿರಿ. ಮಾನಸಿಕ ಅಸ್ಥಿರತೆಯಿಂದ ಪ್ರಮುಖ ನಿರ್ಧಾರ ಕೈಗೊಳ್ಳಲು ಕಷ್ಟಪಡುವಿರಿ. ವೃತ್ತಿ ಬದಲಾವಣೆಗೆ ಕಾಯಬೇಕಾದೀತು. ಇದರಿಂದ ಹಾನಿಯಾಗದು. ತಾಳ್ಮೆ ಇರಲಿ. ಕುಟುಂಬ ಸೌಖ್ಯ, ಅನಾವಶ್ಯಕ ಖರ್ಚು, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ.

ಸಿಂಹರಾಶಿ
ಗೆಳೆಯರಿಂದ ದುರ್ಘಟನೆ, ಗೆಳೆಯರಿಂದ ಸಲಹೆಗಳು ದೊರಕಿ ಮುನ್ನಡೆಗೆ ಸಾಧಕವಾಗಲಿವೆ. ವೃತ್ತಿಪರವಾಗಿ ಯಶಸ್ಸು ಸಿಗಲಿದೆ. ಆಗಾಗ ಖರ್ಚು ವೆಚ್ಚ ನಿಭಾಯಿಸಲು ಕಷ್ಟಪಡುವಂತಾದೀತು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಕೆಲಸ ಕಾರ್ಯಗಳಲ್ಲಿ ಜಯ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಕನ್ಯಾರಾಶಿ
ಭೂ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಗೆಳೆಯರಿಂದ ಸಲಹೆಗಳು ದೊರಕಿ ಮುನ್ನಡೆಗೆ ಸಾಧಕವಾಗಲಿವೆ. ವೃತ್ತಿಪರವಾಗಿ ಯಶಸ್ಸು ಸಿಗಲಿದೆ. ಆಗಾಗ ಖರ್ಚು ವೆಚ್ಚ ನಿಭಾಯಿಸಲು ಕಷ್ಟಪಡುವಂತಾದೀತು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ನಂಬಿಕಸ್ಥರಿಂದ ಮೋಸ, ಆಲಸ್ಯ ಮನೋಭಾವ, ಅಕಾಲ ಭೋಜನ, ಅಧಿಕಾರಿಗಳಲ್ಲಿ ಕಲಹ, ಸಾಮಾನ್ಯ ನೆಮ್ಮದಿಗೆ ಭಂಗ.

ತುಲಾರಾಶಿ
ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ವೃತ್ತಿರಂಗದಲ್ಲಿ ನಿಮ್ಮ ಸುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿ ಕಂಡುಬರುತ್ತದೆ. ವಾದ – ವಿವಾದಕ್ಕೆ ಕಾರಣರಾಗದಿರಿ. ತೀರ್ಥಯಾತ್ರೆ ದರ್ಶನ, ಧನ ನಷ್ಟ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ.

ವೃಶ್ಚಿಕರಾಶಿ
ಕಾರ್ಯ ಸಾಧನೆ, ಪ್ರಯಾಣದಲ್ಲಿ ಅಡೆತಡೆ, ಏಕಾಂಗಿ ಇರುವವರಿಗೆ ಅದೃಷ್ಟದ ದಿನವಿದು. ಹೊಸ ಗೆಳೆಯರು ದೊರಕಿಯಾರು. ಆದರೆ ಹಗಲು ಕನಸು ಬಿಟ್ಟು ವಾಸ್ತವಿಕತೆಗೆ ಆದ್ಯತೆ ಕೊಡಿರಿ. ಗ್ರಹಗಳು ಪೂರಕವಾಗಿವೆ. ಪ್ರಯತ್ನ ಬಲಕ್ಕೆ ಒತ್ತು ನೀಡಿರಿ. ಮಾನಸಿಕ ವ್ಯಥೆ, ಅಲ್ಪ ಪ್ರಗತಿ, ಶೀತ ಸಂಬಂಧಿತ ರೋಗ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ, ಅತಿಯಾದ ನಿದ್ರೆ, ಋಣ ಬಾಧೆ.

ಧನಸ್ಸುರಾಶಿ
ಸ್ಥಿರಾಸ್ತಿ ಖರೀದಿ, ಅನ್ಯರಲ್ಲಿ ವೈಮನಸ್ಸು, ದಿನವು ಸುಗಮವಾಗಿ ಸಾಗಲಿದೆ. ಫ‌ಲಪ್ರದ ದಿನವಿದು. ದಿನವನ್ನು ಸದುಪಯೋಗಿಸಿಕೊಳ್ಳಿರಿ. ವೃತ್ತಿರಂಗದಲ್ಲಿ ಆಪ್ತರಾಗಿರುವವರು ನಿಮ್ಮ ಮನಸ್ಸಿಗೆ ಮುದ ನೀಡಲಿದ್ದಾರೆ. ಆದರೆ ನಿರ್ಧಾರದಲ್ಲಿ ಖಚಿತತೆ ಅಗತ್ಯವಿದೆ. ಅಧಿಕ ಖರ್ಚು, ಸ್ತ್ರೀಯರಿಗೆ ಲಾಭ, ಪರರ ಧನ ಪ್ರಾಪ್ತಿ, ಕುಲದೇವರ ದರ್ಶನ ಮಾಡಿ, ದಾಯಾದಿಗಳ ಕಲಹ, ವಿವಾಹಕ್ಕೆ ಅಡೆತಡೆ.

ಮಕರರಾಶಿ
ಮಾಡಿದ ಕಾರ್ಯಗಳಲ್ಲಿ ಪ್ರಗತಿ, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವಿರಿ. ಕೆಲ ವಿಚಾರಗಳಲ್ಲಿ ಸಮಾಧಾನವಿರದು. ಆದರೆ ನಿಮ್ಮ ಸಾಮರ್ಥ್ಯವನ್ನು ಕೀಳಂದಾಜಿಸದಿರಿ. ಐಷಾರಾಮಕ್ಕೆ ಹೋಗದಿರಿ. ಸಂತೋಷ ಕೂಟಗಳನ್ನು ತ್ಯಜಿಸುವುದು ಉತ್ತಮ. ರೋಗ ಬಾಧೆ, ದ್ರವ್ಯ ಲಾಭ, ವಿದೇಶ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

ಕುಂಭರಾಶಿ
ಅನಿರೀಕ್ಷಿತ ದ್ರವ್ಯ ಲಾಭ, ಕಷ್ಟಗಳು ಆಗಾಗ ನಿಮ್ಮನ್ನು ಕಾಡಲಿವೆ. ಹತಾಶೆ ನಿಮ್ಮನ್ನು ಕಾಡಲಿದೆ. ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಲ್ಲಿ ಕಷ್ಟ ಕಾಣುವಿರಿ. ಆದರೆ ಇದು ತಾತ್ಕಾಲಿಕ ಸ್ಥಿತಿ ಶೀಘ್ರವೇ ಎಲ್ಲವೂ ಸರಿಹೋಗಲಿವೆ. ಕೃಷಿಯಲ್ಲಿ ಲಾಭ, ವ್ಯಾಸಂಗಕ್ಕೆ ತೊಂದರೆ, ಮಾತಿನ ಚಕಮಕಿ, ಉದರ ಬಾಧೆ, ಅತಿಯಾದ ಪ್ರಯಾಣ, ಬಾಕಿ ವಸೂಲಿ.

ಮೀನರಾಶಿ
ಆಗಾಗ ವಿಳಂಬ ಗತಿ ನಿಮ್ಮನ್ನು ಅಸಹನೆಗೆ ದೂಡಲಿದೆ. ಕೆಲವೊಂದು ವಿಚಾರದಲ್ಲಿ ಹೆಚ್ಚಿನ ನಿಯಂತ್ರಣ ನಿಮ್ಮಲ್ಲಿ ಇರಲಿ. ನಿಮ್ಮ ಒಳ್ಳೆಯತನವನ್ನು ದುರುಪಯೋಗಿಸಬಹುದು. ಎಚ್ಚರದಿಂದಿರುವುದು ಅಗತ್ಯ. ಪ್ರೀತಿ ಸಮಾಗಮ, ಮಾತೃವಿನಿಂದ ಲಾಭ, ಚಿನ್ನಾಭರಣ ಪ್ರಾಪ್ತಿ, ಧನ ಲಾಭ, ಹಿತ ಶತ್ರುಗಳಿಂದ ತೊಂದರೆ, ಆತ್ಮೀಯರಿಂದಲೇ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular