ಮೇಷರಾಶಿ
ಕಾರ್ಯ ವಿಘ್ನ, ಭ್ರಾತೃಗಳಿಂದ ತೊಂದರೆ, ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ದೊರಕಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳ ಅಭ್ಯಾಸದ ಬಗ್ಗೆ ಚಿಂತೆಯು ಹತ್ತಲಿದೆ. ಕುಟುಂಬದಲ್ಲಿ ಅಸೌಖ್ಯ, ವಾಹನ ಅಪಘಾತ.
ವೃಷಭರಾಶಿ
ವಿಪರೀತ ಖರ್ಚು, ಪಾಪಕಾರ್ಯ, ಅನಾರೋಗ್ಯ, ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ ಎಚ್ಚರವಿರಲಿ. ಸಮುಷ್ಟಿ ವೃತ್ತಿಯಲ್ಲಿ ವಂಚನೆ ಕಂಡು ಬಂದೀತು. ವಾಹನಗಳಿಂದ ಖರ್ಚು ಬರಲಿದೆ. ಕಚೇರಿಯಲ್ಲಿ ಮುಂಭಡ್ತಿಗೆ ತಡೆಯು ಬಂದೀತು. ಉದ್ಯೋಗದಲ್ಲಿ ತೊಂದರೆ, ತಾಯಿ ಕಡೆಯ ಬಂಧುಗಳಿಂದ ಕಿರಿಕಿರಿ.
ಮಿಥುನರಾಶಿ
ಸಲ್ಲದ ಅಪವಾದ ಎಚ್ಚರದಿಂದಿರಿ, ಆಸ್ತಿ ವಿಚಾರದಲ್ಲಿ ಮನಸ್ತಾಪಕ್ಕೆ ಕಾರಣವಾಗಲಿದೆ. ಮನೆಯ ವಿಸ್ತರಣೆಯೂ ರಿಪೇರಿ ಕೆಲಸಕ್ಕೆ ಧನ ವಿನಿಯೋಗವಾದೀತು. ದುಡುಕಿ ಮಾಡಿದ ಕಾರ್ಯದಲ್ಲಿ ಆಶಾಭಂಗವಾದೀತು. ದಿನಸಿ ವ್ಯಾಪಾರದಲ್ಲಿ ಲಾಭವಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃ ಕ್ಲೇಷ, ಮಹಿಳೆಯರಿಗೆ ಅನುಕೂಲಕರ.
ಕಟಕರಾಶಿ
ಆಕಸ್ಮಿಕ ಧನಲಾಭ, ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿಯಾದರೂ ಕಿರಿಕಿರಿ ಹೆಚ್ಚಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದೀತು. ಉದರವ್ಯಾಧಿಯಿಂದ ಆರೋಗ್ಯ ಸರಿ ಇರದು. ಮನೆಯಲ್ಲಿ ದೇವತಾ ಕಾರ್ಯಗಳ ಚಿಂತನೆ ನಡೆದೀತು. ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷದಿಂದ ತೊಂದರೆ, ಕೃಷಿಕರಿಗೆ ಲಾಭ, ಗೆಳೆಯರಿಂದ ಅನರ್ಥ.

ಸಿಂಹರಾಶಿ
ಗಣ್ಯವ್ಯಕ್ತಿಯ ಭೇಟಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಎಂದೋ ಆಗಬೇಕಾಗಿದ್ದ ಕೆಲಸವೊಂದು ಸಲೀಸಾಗಿ ಆಗಲಿದೆ. ನಿರುದ್ಯೋಗಿಗಳಿಗೆ ಸಂದರ್ಶನದ ಅವಕಾಶವಿದೆ. ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ.ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು.
ಕನ್ಯಾರಾಶಿ
ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ನೂತನ ಕಾರ್ಯಾರಂಭಕ್ಕೆ ವಿಘ್ನ ಭೀತಿ ತಂದೀತು. ಹಿರಿಯರಿಗೆ ಪುಣ್ಯಕ್ಷೇತ್ರಕ್ಕೆ ಸಂದರ್ಶನ ತಂದೀತು. ಪ್ರಯಾಣದಲ್ಲಿ ವಂಚನೆ, ಕಳ್ಳಕಾಕರ ಭೀತಿ ಇದೆ. ಜಲ ಪದಾರ್ಥದ ಮಾರಾಟಗಾರರು ನಷ್ಟವನ್ನು ಅನುಭವಿಸಿ ಬವಣೆಪಟ್ಟಾರು. ವಿವಾಹ ಯೋಗ, ಅತಿಯಾದ ಭಯ, ಮನಃ ಕ್ಲೇಷ.

ತುಲಾರಾಶಿ
ಸುತ್ತಾಟದಿಂದ ಹಣವ್ಯಯ, ಅನಿರೀಕ್ಷಿತ ರೂಪದಲ್ಲಿ ಹಣ ನೀರಿನಂತೆ ಖರ್ಚಾದೀತು. ಆಗಾಗ ಆಹಾರದಿಂದ ಆರೋಗ್ಯವು ಕೆಡಬಹುದು. ವೃತ್ತಿರಂಗದಲ್ಲಿ ಮುಂಭಡ್ತಿ ಇದೆ. ರಾಜಕೀಯ ವರ್ಗದವರಿಗೆ ಆಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾಗಲಿದೆ. ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ವೃಶ್ಚಿಕರಾಶಿ
ಹಿತಶತ್ರುಗಳಿಂದ ತೊಂದರೆ ಎಚ್ಚರದಿಂದಿರಿ, ಹಿತ ಶತ್ರು ಕಾಟದಿಂದ ಬಂದ ಅವಕಾಶವು ತಪ್ಪಿ ಹೋದೀತು. ಹಣ ಹೂಡಿಕೆಗೆ ಅವಸರ ಮಾಡದಿರಿ. ಸಾಂಸಾರಿಕವಾಗಿ ಆದಾಯಕ್ಕಿಂತ ವ್ಯಯವೇ ಹೆಚ್ಚಾದೀತು. ಸೇವಕರ ಹಠ ಸ್ವಭಾವಕ್ಕೆ ತಲೆ ಭಾಗಿಸುವಂತಾಗಲಿದೆ. ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ, ಅಧಿಕಾರಿಗಳಿಂದ ಪ್ರಶಂಸೆ.

ಧನಸ್ಸುರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಮನೆಯಲ್ಲಿ ಸ್ತ್ರೀ ಸೌಖ್ಯ ಉತ್ತಮ. ದೇವತಾ ಸಂದರ್ಶನದಿಂದ ಸಂತೃಪ್ತಿ. ಮಕ್ಕಳ ಶಿಕ್ಷಣದಲ್ಲಿ ಉತ್ತಮ ಪ್ರಗತಿ. ಯೋಗ್ಯ ವಯಸ್ಕರಿಗೆ ವಿವಾಹ ಭಾಗ್ಯವಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ಕಾಲವಿದು. ಮುನ್ನಡೆಯಿರಿ. ದೂರ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಗಾತಿ ಸಲಹೆ ಸ್ವೀಕರಿಸುವುದು ಉತ್ತಮ.
ಮಕರರಾಶಿ
ಸ್ವಗೃಹವಾಸ, ಕೀರ್ತಿ ಲಾಭ, ಯಶಸ್ಸಿನ ಹಿಂದೆ ಓಡುವ ನಿಮಗೆ ಹಣದ ಅಪವ್ಯಯ ಕಣ್ಣಿಗೆ ಕಾಣದಂತಾದೀತು. ಮಡದಿಯ ಹಿತವಚನಕ್ಕೆ ಅಲಕ್ಷ್ಯ ಮಾಡದಿರಿ. ಹೊಸತನದ ಕಾರ್ಯಕ್ಕೆ ಪ್ರಚೋದನೆ ನೀಡಲಿದೆ. ರಾಜಕೀಯದವರಿಗೆ ಉತ್ತಮವಿದೆ. ಪ್ರಿಯ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ಅನ್ಯ ಜನರಲ್ಲಿ ದ್ವೇಷ.

ಕುಂಭರಾಶಿ
ದಾಂಪತ್ಯದಲ್ಲಿ ಅನ್ಯೂನ್ಯತೆ, ಕೆಲಸ ನಿಧಾನಗತಿಯಿದ್ದರೂ ಚೊಕ್ಕದಾಗಿ ಮುಗಿಸುವಿರಿ. ಕೋರ್ಟು ವ್ಯವಹಾರದಲ್ಲಿ ತುಂಬಾ ವಿಳಂಬವಾಗಲಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ಪುರಸ್ಕಾವಿದೆ. ಬ್ರಹ್ಮಚಾರಿಗಳಿಗೆ ದಾಂಪತ್ಯ ಯೋಗವು ಕೂಡಿ ಬಂದು ಸಂತಸ. ದ್ರವ್ಯಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ಶೀತ ಸಂಬಂಧಿತ ರೋಗಗಳು.
ಮೀನರಾಶಿ
ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ವಾಹನ ಮನೆಗೆ ಬರಲಿದೆ. ವಿವಾಹಿತರಿಗೆ ಸಂತಸದ ವಾರ್ತೆ. ಪ್ರತಿಕೋದ್ಯಮದವರಿಗೆ ನಿರೀಕ್ಷೆಗೆ ಮೀರಿ ಯಶೋಭಿವೃದ್ಧಿ ಇದೆ. ಆಹಾರ ಪದಾರ್ಥ ತಯಾರಿಕೆಯಲ್ಲಿ ಲಾಭಾಂಶ ಹೆಚ್ಚು. ದಾಂಪತ್ಯದಲ್ಲಿ ಮುನಿಸು ತೋರಿ ಬರಲಿದೆ. ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ.