ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ :19-07-2020

ನಿತ್ಯಭವಿಷ್ಯ :19-07-2020

- Advertisement -

ಮೇಷರಾಶಿ
ಸ್ನೇಹಿತರಿಂದ ನೆರವು, ಸಣ್ಣ ಪುಟ್ಟ ವಿಚಾರಗಳಲ್ಲಿ ಮನಃಸ್ತಾಪ, ಆಕಸ್ಮಿಕ ಪ್ರಯಾಣದಿಂದ ಕಾರ್ಯಸಾಧನೆ ಯಾಗಲಿದೆ.ಸರಕಾರಿ ಉದ್ಯಮಿಗಳಿಗೆ ಉತ್ತಮ ಧನಾಗಮನವಿರುತ್ತದೆ. ವಾಹನ ಸಂಚಾರದಲ್ಲಿ ಸಮಸ್ಯೆಗಳಿರುತ್ತವೆ. ಆರೋಗ್ಯದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅತಿಯಾದ ಒತ್ತಡ.

ವೃಷಭರಾಶಿ
ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಜಯ ಲಭಿಸಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಸಕಾಲಿಕ ಮಿತ್ರರ ಸಹಕಾರದಿಂದ ನೆಮ್ಮದಿ ಸಿಗಲಿದೆ. ಆರೋಗ್ಯಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಗಮನವಿರಲಿ. ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಬಂಧುಗಳಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನರಾಶಿ
ಧರ್ಮಕಾರ್ಯಗಳಲ್ಲಿ ಆಸಕ್ತಿ ತಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಿರಿ. ವ್ಯಾಪಾರಿಗಳಿಗೆ ಕಾದು ನೋಡುವ ಸಮಯ ವಿದು. ದುಡುಕದಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಕುಲದೇವರ ಆರಾಧನೆ ಮಾಡಿ, ಶೀತ ಸಂಬಂಧಿತ ರೋಗ, ಇತರರ ಮಾತಿಗೆ ಮರುಳಾಗಬೇಡಿ.

ಕಟಕರಾಶಿ
ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಖರ್ಚು, ಅನಿರೀಕ್ಷಿತ ದೂರ ಸಂಚಾರವಿದೆ. ಸಾಂಸಾರಿಕವಾಗಿ ಬಂಧುಗಳೊಂದಿಗೆ ನಿಷ್ಠುರಕ್ಕೆ ಕಾರಣ ರಾಗದಿರಿ. ಶೀತ, ಕಫ‌ ಇತ್ಯಾದಿ ಶಾರೀರಿಕ ದೋಷಗಳು ಕಂಡು ಬಂದಾವು. ವಿದ್ಯಾಭ್ಯಾಸದಲ್ಲಿ ಮಕ್ಕಳ ಉದಾಸೀನತೆ ಬೇಸರ ತರಲಿದೆ. ಮಹಿಳೆಯರಿಗೆ ತೊಂದರೆ, ಹಿತ ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಮಾಡುವ ಸಾಧ್ಯತೆ.

ಸಿಂಹರಾಶಿ
ವಾದ-ವಿವಾದಗಳಿಂದ ದೂರವಿರಿ, ಶತ್ರುತ್ವ ಹೆಚ್ಚಾಗುವುದು, ನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆಲಂಕಾರಿಕ, ವಿಲಾಸೀ ಸಾಮಗ್ರಿಗಳು ಮನೆಯನ್ನು ಅಲಂಕರಿಸಲಿವೆ. ಆದಾಯದಲ್ಲಿ ಕೊರತೆ ಇಲ್ಲವಾದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಮಾನಸಿಕ ವ್ಯಥೆ, ಆತ್ಮೀಯರಲ್ಲಿ ಮನಃಸ್ತಾಪ, ಅನಾವಶ್ಯಕ ಹಣವ್ಯಯ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವ್ಯಾಪಾರಸ್ಥರಿಗೆ ಸಾಧಾರಣ ಪ್ರಗತಿ.

ಕನ್ಯಾರಾಶಿ
ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ಪಂಚಮದ ಶನಿಯು ಆಗಾಗ ಮಾನಸಿಕ ಸ್ಥೆರ್ಯವನ್ನು ಕೆಡಿಸಲಿದೆ. ತೂಗುಯ್ನಾಲೆಯ ತಡ ನಿರ್ಧಾರದಿಂದ ಲಾಭ ಕೈತಪ್ಪುವ ಸಂಭವವಿರುತ್ತದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಜತೆ ಭಿನ್ನಾಭಿಪ್ರಾಯ ತಂದೀತು. ವಿಧೇಯತೆಯಿಂದ ಯಶಸ್ಸು, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಹಿರಿಯರ ಮಾತಿಗೆ ಗೌರವ ನೀಡುವುದು ಉತ್ತಮ, ವಾರಾಂತ್ಯದಲ್ಲಿ ನೆಮ್ಮದಿ ವಾತಾವರಣ.

ತುಲಾರಾಶಿ
ನಾನಾ ರೀತಿಯ ತೊಂದರೆ, ಅಕಾಲ ಭೋಜನ, ಆಗಾಗ ಅನೇಕ ವಿಘ್ನಗಳು ತೋರಿ ಬರುವುದರಿಂದ ತಾಳ್ಮೆ, ಸಮಾಧಾನದಿಂದ ಮುನ್ನಡೆಯಬೇಕಾದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಕಾರ್ಮಿಕ ವರ್ಗದವರು ಪುನಃ ಊರಿಗೆ ಹಿಂದಿರುಗಲಿದ್ದಾರೆ. ಮಾತಿನ ಚಕಮಕಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಆರ್ಥಿಕ ಸಂಕಷ್ಟ.

ವೃಶ್ಚಿಕರಾಶಿ
ದ್ರವ್ಯ ಲಾಭ, ಪರರಿಂದ ಸಹಾಯ, ದುಃಖದಾಯಕ ಪ್ರಸಂಗ, ವಿಘ್ನಭಯವಿದ್ದರೂ ನಿಮ್ಮ ಕಾರ್ಯಸಾಧನೆ ಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶವು ಸಮಾಧಾನ ತರಲಿದೆ. ಹಿರಿಯ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ತಂದೀತು. ಸಂಚಾರದಲ್ಲಿ ಜಾಗ್ರತೆ ಇರಲಿ. ವಿದ್ಯಾಭ್ಯಾಸಕ್ಕೆ ತೊಂದರೆ, ವಿಪರೀತ ವ್ಯಸನ, ಯತ್ನ ಕಾರ್ಯದಲ್ಲಿ ವಿಳಂಬ, ಹಣಕಾಸು ನಷ್ಟ.

ಧನಸ್ಸುರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಗೊಂದಲ, ವೃತ್ತಿರಂಗದಲ್ಲಿ ಚಾಣಕ್ಯ ವರ್ತನೆ ನಿಮಗೆ ಲಾಭವಾದೀತು. ವ್ಯಾಪಾರ, ವ್ಯವಹಾರದಲ್ಲಿ ಲಾಬಾಂಶ ಕಡಿಮೆಯಾದರೂ ನಷ್ಟವಾಗದು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ. ಸಂಸಾರಿಕವಾಗಿ ನೆಮ್ಮದಿ. ಋಣ ವಿಮೋಚನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಕ್ಕಳಿಗೆ ಅನಾರೋಗ್ಯ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.

ಮಕರರಾಶಿ
ಚಿಂತಿತ ಕೆಲಸಗಳು ಹಂತ ಹಂತವಾಗಿ ನೆರವೇರಲಿವೆ. ಇತರರ ಮಾತಿನಲ್ಲಿ ವಂಚನೆಯ ಅನುಭವ ವಾದೀತು. ಕಾರ್ಯಕ್ಷೇತ್ರದಲ್ಲಿ ಧೈರ್ಯದಿಂದ ಆತ್ಮವಿಶ್ವಾಸ ದಿಂದ ಮುಂದುವರಿಯಿರಿ. ಮಕ್ಕಳ ಬಗ್ಗೆ ಕಿರಿಕಿರಿ ಇದೆ. ಕುಟುಂಬ ಸೌಖ್ಯ, ವ್ಯವಹಾರಗಳಲ್ಲಿ ನಷ್ಟ, ಮೇಲಾಧಿಕಾರಿಗಳಿಂದ ತೊಂದರೆ, ನೀಚ ಜನರಿಂದ ದೂರವಿರಿ, ಮಾನಸಿಕ ಒತ್ತಡ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.

ಕುಂಭರಾಶಿ
ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ಆಕಸ್ಮಿಕ ತಪ್ಪು ಮಾಡುವಿರಿ, ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಶ್ರಮಕ್ಕೆ ತಕ್ಕ ಫ‌ಲ ದೊರಕಲಿದೆ. ಯಾವುದಕ್ಕೂ ದುಡುಕದೆ ಮುನ್ನಡೆಯಿರಿ. ಅವಿವಾಹಿತರಿಗೆ ಮಾಂಗಲ್ಯಭಾಗ್ಯದ ಸೂಚನೆಯು ಸಂತಸ ತರಲಿದೆ. ವ್ಯವಹಾರಗಳಲ್ಲಿ ಎಚ್ಚರ, ಅಧಿಕವಾದ ಚಿಂತೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಮೀನರಾಶಿ
ಕಾರ್ಯರಂಗದಲ್ಲಿ ಯಾವುದೇ ರೀತಿಯ ಮನಸ್ತಾಪಕ್ಕೆ ಗುರಿಯಾಗದಂತೆ ಜಾಗ್ರತೆ ವಹಿಸಿರಿ. ಶನಿಯ ಅನುಗ್ರಹದ ಬಲದಿಂದ ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ಭವಿಷ್ಯದ ಕರ್ತವ್ಯಗಳತ್ತ ಗಮನವಿರಲಿ. ಮುಖ್ಯವಾದ ವಿಚಾರ ಹೇಳಿಕೊಳ್ಳಬೇಡಿ, ಆದಾಯ ಕಡಿಮೆ, ಅಧಿಕವಾದ ಖರ್ಚು, ಕೆಲಸದಲ್ಲಿ ಒತ್ತಡ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ತಾಳ್ಮೆ ಅತ್ಯಗತ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular