8,9,10ನೇ ತರಗತಿ ವಿದ್ಯಾರ್ಥಿಗಳಿಗಿನ್ನು ಟಿವಿಯಲ್ಲಿ ಪಾಠ : ಜುಲೈ 20ರಿಂದ ಚಂದನವಾಹಿನಿಯಲ್ಲಿ ‘ಸೇತುಬಂಧ’

0

ಬೆಂಗಳೂರು : ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲ ಶೈಕ್ಷಣಕ ಚಟುವಟಿಕೆಗಳಿನ್ನೂ ಆರಂಭಗೊಂಡಿಲ್ಲ. ಕೊರೊನಾ ಸೋಂಕು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಬಾರದು ಅನ್ನುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಕ್ಕಳಿಗೆ ಟಿವಿಯ ಮೂಲಕ ಪಾಠವನ್ನು ಬೋಧಿಸಲು ಮುಂದಾಗಿದ್ದು, ಜುಲೈ 20(ನಾಳೆ) ರಿಂದ ಚಂದನ ವಾಹಿಯಲ್ಲಿ 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ `ಸೇತುಬಂಧ ಕಾರ್ಯಕ್ರಮ ಪ್ರಸಾರವಾಗಲಿದೆ.

ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಪ್ರತಿ ಅರ್ಧಗಂಟೆಗೆ ಒಂದು ವಿಷಯವನ್ನು ಬೋಧನೆ ಮಾಡಲಾಗುತ್ತಿದ್ದು, ದಿನವೊಂದಕ್ಕೆ ನಾಲ್ಕು ಗಂಟೆಯಲ್ಲಿ 8 ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಮೂರು ವಿಷಯಗಳ ಬೋಧನೆ ನಂತರ ಅರ್ಧಗಂಟೆಗಳ ಕಾಲ ವಿರಾಮ ನೀಡಲಾಗುತ್ತದೆ. 10 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ಗಂಟೆ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಪ್ರಸಾರವಾಗಲಿದೆ.

ಪ್ರತಿ ದಿನ ಬೆಳಗ್ಗೆ 9.30 ರಿಂದ 11 ರವರೆಗೆ ಹಾಗೂ 11.30 ರಿಂದ 12 ಗಂಟೆವರೆಗೆ ತರಗತಿ ನಡೆಸಲಾಗುತ್ತಿದ್ದು, ನಂತರ ಮಧ್ಯಾಹ್ನ 3 ರಿಂದ 4.30 ಹಾಗೂ ಸಂಜೆ 5 ರಿಂದ 5.30 ರ ವರೆಗೆ ತರಗತಿಗಳ ಮೂಲಕ ಮಕ್ಕಳಿಗೆ ಪಾಠವನ್ನು ಬೋಧಿಸಲಾಗುತ್ತದೆ.

ಸೇತುಬಂಧ ಕಾರ್ಯಕ್ರಮ ಪ್ರಸಾರದ ಕುರಿತು ಈಗಾಗಲೇ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರು ವಹಿಸಬೇಕಾದ ಕ್ರಮಗಳ ಕುರಿತು ಪ್ರತ್ಯೇಕವಾಗಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳ ಪಾಠ ಪ್ರಸಾರಕ್ಕೂ ಮುನ್ನಾ ಶಿಕ್ಷಕರುಗಳಿಗೆ ಮತ್ತು ಪೋಷಕರಿಗೆ ಅಗತ್ಯ ಮಾಹಿತಿ ನೀಡಲು ಮತ್ತು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗಿನ ಅನುಷ್ಠಾನಾಧಿಕಾರಿಗಳು ವಹಿಸಬೇಕಾದ ಕ್ರಮ ಕುರಿತು ಮಾಹಿತಿ ನೀಡಲಾಗಿದೆ.

Leave A Reply

Your email address will not be published.