ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 03-08-2020

ನಿತ್ಯಭವಿಷ್ಯ : 03-08-2020

- Advertisement -

ಮೇಷರಾಶಿ
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವ್ಯಾಪಾರಿ ವರ್ಗದವರಿಗೆ ಋಣಬಾಧೆ ಹೆಚ್ಚಾದೀತು. ಕೌಟುಂಬಿಕವಾಗಿ ಸೋದರ ವರ್ಗದವರ ಪಾಲು ಪಂಚಾಯ್ತಿಯಿಂದ ವಂಚನೆ ಕಂಡು ಬಂದೀತು. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ. ಘಾತುಕರಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯವಿಕ್ರಯಗಳಲ್ಲಿ ಲಾಭ.

ವೃಷಭರಾಶಿ
ಹಿರಿಯರ ಮಾತಿಗೆ ಗೌರವ, ಅನಾರೋಗ್ಯ, ಕೃಷಿಯಲ್ಲಿ ನಷ್ಟ, ದಾಯಾದಿ ಕಲಹ, ಅಲ್ಪ ಪ್ರಗತಿ. ಅನಿರೀಕ್ಷಿತವಾಗಿ ಬಂಧುಬಳಗದವರು ಬಂದಾರು ಪ್ರವಾಸ ಯಾತ್ರಾದಿಗಳಿಂದ ಸಂತೃಪ್ತಿ ತರಲಿದೆ . ಮನೆಯ ವಿಸ್ತರಣೆಯ ಕಾರ್ಯ, ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ದುಡುಕಿ ಮಾಡಿದ ಕೆಲಸವು ಆಶಾಭಂಗವಾದೀತು.

ಮಿಥುನರಾಶಿ
ಪರಿಶ್ರಮಕ್ಕೆ ತಕ್ಕ ಫಲ, ಮಕ್ಕಳ ವಿದ್ಯಾ ಪ್ರಗತಿಯಿಂದ ಸಂತಸ. ಕಫ‌ ದೋಷದಿಂದ ಉದರ ವ್ಯಾಧಿ ತಂದೀತು. ಮಗನ ಆಲಸ್ಯದಿಂದ ವಿದ್ಯೆಯಲ್ಲಿ ಕೊರತೆ ಕಾಣಿಸಲಿದೆ. ಪಶುಸಂಗೋಪನೆಯಿಂದ ಸಮಾಧಾನ ಸಿಗಲಿದೆ. ಮಂಗಲ ಕಾರ್ಯದ ಸೂಚನೆ. ಮನಕ್ಲೇಷ, ಕಾರ್ಯಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.

ಕಟಕರಾಶಿ
ಆಕಸ್ಮಿಕ ಧನಲಾಭ, ಸ್ತ್ರೀಸೌಖ್ಯ, ಎಣಿಕೆಗಿಂತ ಮಿಗಿಲಾದ ಧನಸಂಪತ್ತು ನಿಮ್ಮದಾದೀತು. ದೂರ ಸಂಚಾರವು ಆಪತ್ತು ತರಲಿದೆ. ಎಚ್ಚರಿಕೆಯ ಅಗತ್ಯವಿದೆ. ಗೆಳೆಯರ ಸಹವಾಸದಿಂದ ದುರ್ವ್ಯಸನದ ದಾಸರಾಗದಿರಿ ಜೋಕೆ. ಮನದನ್ನೆಯ ಮಾತು ಹಿತತರಲಿದೆ. ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಿಶ್ರ ಫಲ.

ಸಿಂಹರಾಶಿ
ಅಧಿಕಾರಿಗಳಿಂದ ಪ್ರಶಂಸೆ, ಅಧಿಕಾರಿ ವರ್ಗದಲ್ಲಿ ಭಿನ್ನಮತ. ವ್ಯವಹಾರಕ್ಕಾಗಿ ದೂರ ಸಂಚಾರವಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಧರ್ಮಕಾರ್ಯ ಗಳಲ್ಲಿ ವಿಘ್ನಭೀತಿ ತಂದೀತು. ಸಾಂಸಾರಿಕವಾಗಿ ಪಾಲಕ ವರ್ಗದವರಿಗೆ ಕ್ಷೇಶ ಹೆಚ್ಚಾದೀತು. ಪುಣ್ಯಕ್ಷೇತ್ರ ದರ್ಶನ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.

ಕನ್ಯಾರಾಶಿ
ತಂಪು ಪಾನೀಯಗಳಿಂದ ಅನಾರೋಗ್ಯ, ವೃತ್ತಿರಂಗದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯವಹಾರದಲ್ಲಿ ಲಾಭ ಶೂನ್ಯವಾದೀತು. ವಿದ್ಯಾರ್ಥಿ ಗಳಿಗೆ ಅಭ್ಯಾಸದಲ್ಲಿ ಅಸಡ್ಡೆ ತೋರಿ ಬಂದೀತು. ವಾದ ವಿವಾದಗಳು ನ್ಯಾಯಾಲಯದ ದರ್ಶನ ಮಾಡಿಸಲಿದೆ. ಜಾಗ್ರತೆ ಇರಲಿ. ವಿವಾಹ ಯೋಗ, ಮನಶಾಂತಿ, ಅವಿವಾಹಿತರಿಗೆ ವಿವಾಹಯೋಗ, ಉತ್ತಮ ಫಲ.

ತುಲಾರಾಶಿ
ಗೆಳೆಯರ ಕಾರಣದಿಂದ ದುರ್ವ್ಯಸದ ದಾಸರಾಗಲಿದ್ದೀರಿ. ಹಲವಾರು ಖರ್ಚುಗಳ ಪಟ್ಟಿ ಬೆಳೆಯಲಿದೆ. ಗೃಹದಲ್ಲಿ ಸಂಭ್ರಮ ನಡೆಯಲಿದೆ. ಕಚೇರಿ ಕೆಲಸಗಳಲ್ಲಿ ಚಿಂತೆ ಹೆಚ್ಚಲಿದೆ. ಹಿರಿಯರ ಆರೋಗ್ಯ ಸರಿ ಇರದು. ಮಾನಸಿಕ ಒತ್ತಡ, ಅನಾರೋಗ್ಯ, ಕಾರ್ಯ ವಿಕಲ್ಪ, ಉದರ ತೊಂದರೆ, ಯಾರನ್ನು ನಂಬಬೇಡಿ, ಸಾಲ ಪೀಡನೆ.

ವೃಶ್ಚಿಕರಾಶಿ
ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಆದಾಯದ ವೃದ್ಧಿಯಲ್ಲಿ ಹೊಸ ಮಾರ್ಗಗಳು ಗೋಚರಕ್ಕೆ ಬರಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಮಾಡುವುದು. ಆಗಾಗ ಧನಾಗಮನದಿಂದ ಕಾರ್ಯಸಿದ್ಧಿಸಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿಡಿರಿ. ಆದಾಯಕ್ಕಿಂತ ಖರ್ಚು ಹೆಚ್ಚು, ಮನಸ್ಸಿನ ವಿಚಾರಗಳಲ್ಲಿ ಆಸಕ್ತಿ.

ಧನಸುರಾಶಿ
ಆತ್ಮೀಯರಲ್ಲಿ ಪ್ರೀತಿ ಯತ್ನ, ಕಾರ್ಯಗಳಲ್ಲಿ ವಿಳಂಬ, ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಸಮಾಧಾನ ತರಲಿದೆ. ಪತಿ ಪತ್ನಿಯ ಜಗಳದಲ್ಲಿ ಕೂಸು ಬಡವಾದೀತು ಜೋಕೆ. ನೂತನ ಕೆಲಸ ಕಾರ್ಯಗಳಿಗೆ ಅವಸರಿಸದಿರಿ. ಹೊಟ್ಟೆ ಸಂಬಂಧ ದೋಷ ಕಂಡುಬಂದೀತು. ದ್ರವ್ಯಲಾಭ, ವಸ್ತುಗಳಿಂದ ಲಾಭ.

ಮಕರರಾಶಿ
ವ್ಯವಹಾರಗಳಲ್ಲಿ ಏರುಪೇರು, ದುಡುಕು ಸ್ವಭಾವ, ಶತ್ರುಬಾಧೆ, ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ಇರುತ್ತದೆ. ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಲಾಭ ತರಲಿವೆ. ಹಿರಿಯರ ವಿಚಾರದಲ್ಲಿ ವಾದವಿವಾದಕ್ಕೆ ಕಾರಣರಾಗದಿರಿ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆದಾರು.ವಾದ-ವಿವಾದಗಳಲ್ಲಿ ಸೋಲು.

ಕುಂಭರಾಶಿ
ಸಹೋದರರಿಂದ ಸಹಾಯ, ವಾಹನ ಚಾಲಕರಿಗೆ ಅಪಘಾತ, ವೃತ್ತಿರಂಗದಲ್ಲಿ ಬದಲಾವಣೆ ಕಂಡುಬರಲಿದೆ. ಆಗಾಗ ಮನೆಯಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಕಲಹ ತಂದೀತು. ಕಾರ್ಮಿಕ ವರ್ಗದವರು ಚೇತರಿಕೆಯನ್ನು ಹೊಂದುವರು ಕೃಷಿಕರಿಗೆ ಉತ್ಸಾಹದ ವಾತಾವರಣವಿದೆ. ವ್ಯವಹಾರದಲ್ಲಿ ಮೋಸದ ಜಾಲಕ್ಕೆ ಸಿಲುಕುವ ಸಂಭವ.

ಮೀನರಾಶಿ
ಅನಾವಶ್ಯಕ ತಪ್ಪು ಅಭಿಪ್ರಾಯಗಳು ನಿಮ್ಮನ್ನು ಸುತ್ತಿಕೊಳ್ಳಲಿವೆ. ದೇವತಾ ಕಾರ್ಯಕ್ಕೆ ಧನವ್ಯಯ ತರಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಿಸಬೇಕು. ದಿನಾಂತ್ಯದಲ್ಲಿ ಶುಭವಾರ್ತಾ ಶ್ರವಣ. ಖರ್ಚಿನ ಬಗ್ಗೆ ನಿಗಾ ಇರಲಿ, ರಾಜಕಾರಣಿಗಳಲ್ಲಿ ಪಕ್ಷದ ಗೊಂದಲ, ಮನೆಯಲ್ಲಿ ಶಾಂತಿಯ ವಾತಾವರಣ, ಉತ್ತಮ ಪ್ರಗತಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular