ಮೇಷರಾಶಿ
ನಿಮ್ಮ ಮನೋಬಲವು ನಿಮ್ಮನ್ನು ಎಲ್ಲಾ ರೀತಿಯಲ್ಲಿ ಮುನ್ನಡೆಸಲಿದೆ. ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಕಾರ್ಯದ ಒತ್ತಡದಿಂದ ಕೋಪತಾಪಗಳು ಹೆಚ್ಚಲಿವೆ.ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಬೇಸರವಾಗಲಿದೆ
ವೃಷಭರಾಶಿ
ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭ ಕಾರ್ಯ ಸಿದ್ಧಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ,ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ. ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ವೃಥಾ ಮನಾಪಮಾನಗಳಿಗೆ ಬಲಿಯಾಗದಂತೆ ಜಾಗ್ರತೆ ವಹಿಸಿರಿ.ರಾಜಕೀಯ ಕ್ಷೇತ್ರದವರಿಗೆ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಆಗಾಗ ಉದಾಸೀನತೆ ಮಾಡಿಯಾರು.
ಮಿಥುನರಾಶಿ
ಆರ್ಥಿಕವಾಗಿ ಅತೀ ಹೆಚ್ಚಿನಜಾಗ್ರತೆ ವಹಿಸಬೇಕಾಗುತ್ತದೆ. ವೈವಾಹಿಕ ಪ್ರಸ್ತಾವಗಳಿಗೆ ಆಗಾಗ ಅಡಚಣೆಗಳು ತೋರಿ ಬಂದು ನಿರಾಸೆಯಾಗಲಿವೆ. ಸ್ವಂತ ಉದ್ಯಮದಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಜಯ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ಮನೆಯಲ್ಲಿ ಮಾಟ-ಮಂತ್ರದ ಭೀತಿ, ಉದ್ಯೋಗ ಕಳೆದುಕೊಳ್ಳುವ ಆತಂಕ. ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾಗದಂತೆ ಕಾಳಜಿ ವಹಿಸಿರಿ.

ಕಟಕರಾಶಿ
ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಿರುತ್ತದೆ. ವ್ಯಾಪಾರ, ದೂರ ಪ್ರಯಾಣ, ವಿಪರೀತ ರಾಜಯೋಗ, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಯಾಸ, ಬಂಧುಗಳಿಂದ ಸಾಲಕ್ಕಾಗಿ ಬೇಡಿಕೆ, ಕೆಲಸಗಾರರು-ಸೇವಕರಿಂದ ನಷ್ಟ, ಅನಗತ್ಯ ತಿರುಗಾಟ, ಅಧಿಕ ಖರ್ಚು. ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು.ಸಾಂಸಾರಿಕವಾಗಿ ಮಡದಿ,ಮಕ್ಕಳ ಸಹಕಾರವು ಸಮಾಧಾನ ತರಲಿದೆ.ಅನಿರೀಕ್ಷಿತವಾಗಿ ದೂರ ಸಂಚಾರವಿದೆ.
ಸಿಂಹರಾಶಿ
ಮಕ್ಕಳ ಭವಿಷ್ಯದಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ, ಇಚ್ಛೆಗಳು ಈಡೇರುವುದು, ಧರ್ಮ ಕಾರ್ಯಗಳನ್ನು ಮರೆಯುವಿರಿ, ಗೌರವಕ್ಕೆ ಧಕ್ಕೆ, ಅಪಕೀರ್ತಿ, ಮಾನಸಿಕ ವ್ಯಥೆ,ಉಷ್ಣ ಬಾಧೆ. ಅಮೂಲ್ಯ ವಸ್ತು ಕಳೆದುಕೊಳ್ಳುವ ಆತಂಕ. ಶನಿಗ್ರಹದ ದೈವಾನುಗ್ರಹದಿಂದ ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಚಯವಾದೀತು. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ಆತ್ಮವಿಶ್ವಾಸದಿಂದ ಮುನ್ನಡೆದ್ದಲ್ಲಿ ನಿಮ್ಮ ಮಾನೋಕಾಮನೆಗಳು ನಡೆಯಲಿವೆ.
ಕನ್ಯಾರಾಶಿ
ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಬಗ್ಗೆ ವಿಮರ್ಶೆಮಾಡಬೇಕಾದೀತು. ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಇಲ್ಲ ಸಲ್ಲದ ಮಾತಿನಿಂದ ತೊಂದರೆ, ಭುಜ, ಕೈಕಾಲು ನೋವು, ನೆರೆಹೊರೆಯವರಿಂದ ಸಮಸ್ಯೆ, ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿಯಿಂದ ಅನುಕೂಲ. ಗ್ರಹಗಳ ಪ್ರತಿಕೂಲತೆಗಳಿಂದ ಆಗಾಗ ಹೆಚ್ಚಿನ ಕೆಲಸಕಾರ್ಯಗಳಲ್ಲಿ ಹಿನ್ನಡೆ ತೋರಿ ಬರಲಿದೆ.ಗುರುಬಲದಿಂದ ಕಾರ್ಯಸಾಧನೆ ಕಂಡು ಬಂದೀತು.

ತುಲಾರಾಶಿ
ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಕುಟುಂಬ ನಿರ್ವಹಣೆಗೆ ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಜೀರ್ಣ ಸಮಸ್ಯೆ, ಮೈಕೈ ನೋವು, ಪತ್ರ ವ್ಯವಹಾರಗಳಲ್ಲಿ ಖರ್ಚು, ಬಂಧುಗಳಿಗಾಗಿ ಹಣವ್ಯಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು.ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಇತರರ ಪ್ರವೇಶ ಗೊಂದಲಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವು ದೊರಕಲಿದೆ.ಮುನ್ನಡೆಯಿರಿ.
ವೃಶ್ಚಿಕರಾಶಿ
ಕಾರ್ಯಸಾಧನೆಯಲ್ಲಿ ಸಾವಧಾನವಾಗಿ ಮುಂದುವರಿಯಿರಿ. ಆಕಸ್ಮಿಕ ಧನ ಯೋಗ, ಸೋಲು, ನಷ್ಟ, ನಿರಾಸೆ, ಅಪಕೀರ್ತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಧಿಕ ಉಷ್ಣ ಬಾಧೆ, ತಲೆ ನೋವು, ಮೃತ್ಯು ಭಯ, ಹಾರ್ಮೋನ್ಸ್ ವ್ಯತ್ಯಾಸ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಬಂಧುಮಿತ್ರರು ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡಲಿದ್ದಾರೆ. ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ.
ಧನುರಾಶಿ
ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ವಹಿಸಿರಿ. ದೈವ ಶಾಪದ ಕಾಟ, ಕುಲದೇವರ ನಿಂದನೆ, ಮಕ್ಕಳ ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳ ಬದಲಾವಣೆಯ ಕನಸು, ವಿವಾದದಲ್ಲಿ ಸಿಲುಕುವ ಸಂಭವ, ಹಿರಿಯರ ಗೌರವಕ್ಕೆ ಧಕ್ಕೆ, ಪ್ರವಾಸ ಕೈಗೊಳ್ಳುವ ಆಲೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಂಡು ಬಂದೀತು.ಕಾರ್ಯಕ್ಷೇತ್ರದಲ್ಲಿ ಜನರೊಳಗೆ ಅನಾವಶ್ಯಕ ಮನಸ್ತಾಪವಾದೀತು.ಬಂಧುಮಿತ್ರರ ಸಹಕಾರದಿಂದ ಕಾರ್ಯಸಾಧನೆ.

ಮಕರರಾಶಿ
ಸಾಂಸಾರಿಕವಾಗಿ ಮಡದಿ ಮಕ್ಕಳ ಸಹಕಾರದಿಂದ ತುಸು ನೆಮ್ಮದಿ ಕಾಡಲಿದೆ. ಸಾಲ ಬಾಧೆಯಿಂದ ಮುಕ್ತಿ, ಲಾಭದ ಪ್ರಮಾಣ ಅಧಿಕ, ವ್ಯಾಪಾರ-ಉದ್ಯಮ ಆರಂಭಕ್ಕೆ ಚಿಂತನೆ, ಕುತ್ತಿಗೆ ನೋವು, ನರ ದೌರ್ಬಲ್ಯ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಸಾಧ್ಯತೆ ವ್ಯಾಪಾರ,ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸುವುದು ಉತ್ತಮ.ದೂರ ಸಂಚಾರದಲ್ಲಿ ಅನಿರೀಕ್ಷಿತ ಕಾರ್ಯಸಿದ್ಧಿಯಾಗಿ ಸಂತೋಷ.
ಕುಂಭರಾಶಿ
ಆತ್ಮ ವಿಶ್ವಾಸದಿಂದ ಮುಂದುವರಿಯಿರಿ. ಉದ್ಯೋಗ ಸ್ಥಳದಲ್ಲಿ ಧನಾಗಮನ, ಮಕ್ಕಳಿಗೆ ಅದೃಷ್ಟ ಒಲಿಯುವುದು, ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಜೂಜು-ರೇಸು, ಲಾಟರಿಯಿಂದ ತೊಂದರೆ, ಲಾಭ ಪ್ರಮಾಣ ಅಧಿಕ, ವಿದ್ಯಾಭ್ಯಾಸದಲ್ಲಿ ಪ್ರಗತಿ. ನಿಮ್ಮ ವೈಯಕ್ತಿಕ ವಿಚಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿ ಇರುತ್ತದೆ.ಮಡದಿಯ ಸಹಕಾರದಿಂದ ನೆಮ್ಮದಿ ತೋರಿ ಬರುವುದು.ನಿರುದ್ಯೋಗಿಗಳಿಗೆ ಅವಕಾಶಗಳಿವೆ.
ಮೀನರಾಶಿ
ಆರ್ಥಿಕವಾಗಿ ಋಣಬಾಧೆ ನಿವಾರಣೆಯಾಗಲಿದೆ. ಶುಭಮಂಗಲ ಕಾರ್ಯಗಳಿಗೆ ಇದು ಉತ್ತಮ ಕಾಲ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ, ತಂದೆ ಮಾಡಿದ ತಪ್ಪುಗಳು ಕಾಡುವುದು, ಸ್ಥಿರಾಸ್ತಿ-ವಾಹನ ಯೋಗ, ಮಕ್ಕಳ ಕೌಟುಂಬಿಕ ಜೀವನದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಂದರ್ಭ, ಮಾಡುವ ಕೆಲಸದಲ್ಲಿ ಸಂತೃಪ್ತಿ. ಒಮ್ಮೊಮ್ಮೆ ಹಿತ ಶತ್ರುಗಳಿಂದ ಅಭಿಮಾನಕ್ಕೆ ಭಂಗ ವಾದೀತು.ಆದಾಯದ ಮಟ್ಟ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ತರಲಿದೆ