ಮೇಷರಾಶಿ
ಕೆಲಸ, ಕಾರ್ಯಗಳಲ್ಲಿ ಅಭಿವೃದ್ದಿ, ನಿಮ್ಮಂಥ ಸುಖೀಗಳು ಯಾರು ಇಲ್ಲ ಎಂಬ ಅನುಭವ ಗೋಚರಕ್ಕೆ ಬರುವುದು. ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಂಡುಬರುವುದು. ಶುಭವಿದೆ.
ವೃಷಭರಾಶಿ
ಉತ್ತಮ ಫಲಗಳಿದ್ದರೂ ಆಗಾಗ ನಿರುತ್ಸಾಹಿಗಳಾಗಿ ಯೇ ಇರುವ ಸಾಧ್ಯತೆ ಕಂಡುಬರುವುದು. ಧನಾರ್ಜನೆ ಯಲ್ಲಿ ಆಗಾಗ ತೊಡಕು ಕಂಡುಬರುವುದು. ವೃತ್ತಿರಂಗ ದಲ್ಲಿ ಬೇರೆಯವರ ವಿಚಾರದಲ್ಲಿ ಮದ್ಯಸ್ಥಿಕೆ ಬೇಡ.
ಮಿಥುನರಾಶಿ
ಆರ್ಥಿಕವಾಗಿ ಬಲಿಷ್ಠರಾಗುವ ಸೂಚನೆ ಕಂಡುಬಂದೀತು. ನಿಮಗೆ ಅಧಿಕ ಲಾಭವಿದ್ದರೂ ಖರ್ಚು ಅಧಿಕವಾಗಲಿದೆ. ಪತ್ನಿಯಿಂದ ಸಹಕಾರ ಕಂಡು ಬರುವುದು. ನಿರಾಸೆ ಮನೋಭಾವವನ್ನು ದೂರ ಮಾಡಿರಿ.
ಕರ್ಕಾಟಕರಾಶಿ
ವ್ಯವಹಾರದಲ್ಲಿ ಬುದ್ಧಿವಂತಿಕೆ ಇದ್ದರೂ ಎಚ್ಚರಿಕೆ ಯಿಂದ ವ್ಯವಹರಿಸಿ, ದಾಂಪತ್ಯ ಜೀವನದಲ್ಲಿ ಸಂಯಮವಿರಲಿ. ಕಾರ್ಯಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಗೆಲುವು.
ಸಿಂಹರಾಶಿ
ವ್ಯವಹಾರದಲ್ಲಿ ಜಾಣ್ಮೆಯಿಂದ ಗೆಲುವು, ಅವಿವಾಹಿತರಿಗೆ ಅಚ್ಚರಿಯ ವಾರ್ತೆ. ದೇಹಾಯಾಸವು ಕಂಡುಬರುವುದು. ಆತ್ಮವಿಶ್ವಾಸ ಹಾಗೂ ಪ್ರಯತ್ನ ಬಲ ನಿಮಗೆ ಪೂರಕವಾಗಿ ಕಂಡುಬರುವುದು.
ಕನ್ಯಾರಾಶಿ
ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ. ಎಚ್ಚರಿಕೆಯಿಂದ ವ್ಯವಹರಿಸಿ. ಆರ್ಥಿಕವಾಗಿ ಭಿನ್ನಾಭಿಪ್ರಾಯದಿಂದ ಗೊಂದಲಗಳು ತೋರಿಬಾರದಂತೆ ನೋಡಿರಿ.
ತುಲಾರಾಶಿ
ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ, ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ವಾಹನ ಚಾಲನೆಯಲ್ಲಿ ಎಚ್ಷರಿಕೆ. ಯೋಗ್ಯ ಸಂಬಂಧಗಳು ಒದಗಿಬಂದರೂ ಕಂಕಣಬಲ ಫಲಿಸದು.
ವೃಶ್ಚಿಕರಾಶಿ
ಪ್ರಯತ್ನ ಮಾಡುವ ಮುನ್ನ ಫಲದ ಯೋಚನೆ ಮಾಡದಿರಿ. ಹಲವು ವಿಚಾರದಲ್ಲಿ ನಿಮ್ಮ ಮನಸ್ಸು ಕೆರಳಬಹುದು. ನ್ಯಾಯಾಲಯದ ವಿಚಾರದಲ್ಲಿ ಅನಾವಶ್ಯಕವಾಗಿ ಅವಮಾನ, ಅಪಮಾನ ಎದುರಿಸಬೇಕಾದೀತು.
ಧನುರಾಶಿ
ಕೆಲಸ ಬಿಟ್ಟು ಇತರರ ಕಾರ್ಯಕ್ಕಾಗಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿರಿ. ಅದರ ಬೆಲೆ ತಿಳಿಯುವವರಾದರೆ ಪರವಾಗಿಲ್ಲ. ನಿಮ್ಮ ವಿಶ್ವಾಸದ ದುರುಪಯೋಗವಾಗಲಿದೆ. ಆರ್ಥಿಕವಾಗಿ ಸಮಾಧಾನ ತಂದೀತು.
ಮಕರರಾಶಿ
ಕೆಲಸಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುವುದು. ಅನಾವಶ್ಯಕ ದುಂದುವೆಚ್ಚ ಕಡಿವಾಣ ಹಾಕಿರಿ. ಹಿರಿಯರ ಮಾರ್ಗದರ್ಶನ ಪಡೆಯಿರಿ.
ಕುಂಭರಾಶಿ
ಹಿತಶತ್ರುಗಳ ಉದಾಸೀನ ಮಾಡದಿರಿ. ಇವರು ನಿಮ್ಮನ್ನು ಉಪಯೋಗಿಸಿಕೊಳ್ಳಲಿರುವರು. ವೃತ್ತಿರಂಗ, ಸಾಂಸಾರಿಕವಾಗಿ ಯಾವುದೇ ಪ್ರಚೋದನೆಗೆ ವಿರುದ್ಧವಾಗಿ ಪ್ರತಿಕ್ರಿಯೆ ನೀಡದಿರುವುದೇ ಒಳ್ಳೆಯದು.
ಮೀನರಾಶಿ
ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡರೂ ಪ್ರಗತಿ ಸಾಧಿಸುವಿರಿ. ಮಹಿಳೆ ಯರ ಬಹುದಿನಗಳ ಬೇಡಿಕೆಗಳು ನೆರವೇರುವುದು. ಕಲಾವಿದರು, ಸಾಹಿತಿಗಳು ಯಶಸ್ಸು ಕಾಣುವಿರಿ.
