ಕೊಡಗಿನ ಕುವರಿ ಮುಟ್ಟಿದ್ದೆಲ್ಲ‌ಚಿನ್ನ…! ಹೊಸ ದಾಖಲೆ ಬರೆಯಿತು ರಶ್ಮಿಕಾ ಹಾಡು…!!

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳ ದಾಟಿ ಬಾಲಿವುಡ್ ಅಂಗಳ ಸೇರಿ ಎರಡೆರಡು ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ. ಈ ಮಧ್ಯೆ ರಶ್ಮಿಕಾ‌ಮಂದಣ್ಣ ನಟನೆಯ ಹಾಡೊಂದು ಹೊಸ ದಾಖಲೆ ಬರೆದಿದೆ.

ರಶ್ಮಿಕಾ‌ ನಟನೆಯ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಚಿನ್ನದ ಗಳಿಕೆ ನೋಡುತ್ತಿರುವ ಬೆನ್ನಲ್ಲೇ ರಶ್ಮಿಕಾ ನಟನೆಯ ಹಾಡೊಂದು ಯೂ ಟ್ಯೂಬ್ ನಲ್ಲಿ ಬರೋಬ್ಬರಿ ೧೦ ಕೋಟಿ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ.

ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ನಟನೆಯ ಸರಿಲೇರು ನಿಕೆವ್ವೆರು ಚಿತ್ರದ ಮೈಂಡ್ ಬ್ಲಾಕ್ ಹಾಡು ಯೂಟ್ಯೂಬ್ ನಲ್ಲಿ ಬರೋಬ್ಬರಿ ೧೦ ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಅಷ್ಟೇ ಅಲ್ಲ ೧೦ ಕೋಟಿ ವೀಕ್ಷಣೆ ಪಡೆದ ತೆಲುಗಿನ ಕೆಲವೇ ಕೆಲವು ಹಾಡುಗಳ ಪಟ್ಟಿಯಲ್ಲಿ ಈ ಹಾಡು ಸ್ಥಾನ ಪಡೆದಿದೆ. ಈ ಹಿಂದೆ ಅಲ್ಲೂ ಅರ್ಜುನ್ ನಟನೆಯ ವೈಕುಂಟಪುರಂಲೋ ಚಿತ್ರದ ಬುಟ್ಟಬೊಮ್ಮ ಹಾಡು ಕೂಡ ೧೦ ಕೋಟಿ ವೀಕ್ಷಣೆ ಪಡೆದಿತ್ತು.

ಇದನ್ನು ಬಿಟ್ಟರೇ ತೆಲುಗಿದ ಫಿದಾ ಸಿನಿಮಾದ ಹಾಡುಗಳು ಯೂಟ್ಯೂಬ್ ನಲ್ಲಿ ದಾಖಲೆ ಬರೆದಿತ್ತು. ಈಗ ಮತ್ತೊಮ್ಮೆ ರಶ್ಮಿಕಾ ನಟನೆಯ ಹಾಡು ಸೂಪರ್ ಹಿಟ್ ಎನ್ನಿಸಿ ದಾಖಲೆ ಬರೆದಿದೆ.


ಸದ್ಯ ತೆಲುಗಿನ ಪುಷ್ಪ ಚಿತ್ರೀಕರಣ ಮುಗಿಸಿರುವ ರಶ್ಮಿಕಾ ಬಾಲಿವುಡ್ ನ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಒಂದು ಸಿನಿಮಾದಲ್ಲಿ ಬಿಗ್ ಬೀ ಗೆ ಮಗಳಾಗಿ ನಟಿಸುತ್ತಿದ್ದಾರೆ.


ಕಳೆದ‌ ಒಂದು ವರ್ಷದಿಂದ ರಶ್ಮಿಕಾ ಅದೃಷ್ಟ ಖುಲಾಯಿಸಿದ್ದು, ಮುಟ್ಟಿದ್ದೆಲ್ಲ ಚಿನ್ನವಾಗಿಸುತ್ತ ಕೊಡಗಿನ ಕುವರಿ ಬಹುಭಾಷಾ ನಟಿ ಪಟ್ಟಕ್ಕೆ ಪ್ರಮೋಶನ್ ಪಡೆದಿದ್ದಾರೆ.

Comments are closed.