ಮೇಷರಾಶಿ
ಕಾರ್ಯರಂಗದಲ್ಲಿ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರವಹಿಸಿ, ಅನಿರೀಕ್ಷಿತ ದೂರ ಸಂಚಾರ ಕಂಡುಬರಲಿದೆ, ಮಾತಿನಿಂದ ಮತ್ತೊಬ್ಬರ ಮನಸ್ಸು ನೋಯಿಸದಿರಿ, ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು, ವಾಹನ ರಿಪೇರಿಯಿಂದ ಖರ್ಚು, ಹಿತ ಶತ್ರು ಭಾದೆ.
ವೃಷಭರಾಶಿ
ಕೌಟುಂಬಿಕವಾಗಿ ಹಿತಶತ್ರುಗಳ ಕಾಟ, ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಮನಸ್ಸಿಗೆ ನೆಮ್ಮದಿ, ವಿದ್ಯಾಭ್ಯಾಸಗಳಲ್ಲಿ ಗೊಂದಲ, ದಾಂಪತ್ಯದಲ್ಲಿ ವಿರಸ.
ಮಿಥುನರಾಶಿ
ಮಾನಸಿಕ ಸಮಸ್ಯೆಗಳು ಪರಿಹಾರವಾಗುತ್ತದೆ, ಋಣಬಾಧೆಯಿಂದ ಮುಕ್ತಿ, ಮಿತ್ರರಿಂದ ದ್ರೋಹ, ಸಾರ್ವಜನಿಕ ವಲಯದಲ್ಲಿ ಸಹಕಾರ, ಕಾರ್ಯದೊತ್ತಡ, ಮನಕ್ಲೇಷ, ಅಕಾಲ ಭೋಜನ, ವಾದ ವಿವಾದಗಳಿಂದ ದೂರವಿರಿ.
ಕರ್ಕಾಟಕರಾಶಿ
ವ್ಯವಹಾರ ಮಾಡುವಾಗ ಎಚ್ಚರವಹಿಸಿ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ಗುರು ಹಿರಿಯರಲ್ಲಿ ಭಕ್ತಿ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಮಂಗಳ ಕಾರ್ಯದಲ್ಲಿ ಭಾಗಿ, ಶತ್ರು ಭಯ, ಅಧಿಕ ಖರ್ಚು, ದುಡುಕು ಸ್ವಭಾವ.
ಸಿಂಹರಾಶಿ
ಮನಸಿಗೆ ನೆಮ್ಮದಿ, ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಅತೀ ಸ್ನೇಹ ಸಲುಗೆ ಬೇಡ, ತಾಳ್ಮೆಯಿಂದ ವರ್ತಿಸಿ, ಆಂತರಿಕ ವಿಚಾರವನ್ನು ಇತರರೊಡನೆ ಹಂಚಿಕೊಳ್ಳಿ, ಮಾನಸಿಕ ಒತ್ತಡ.
ಕನ್ಯಾರಾಶಿ
ಮಕ್ಕಳ ವಿಷಯದಲ್ಲಿ ಎಚ್ಚರಿಕೆವಹಿಸಿ, ಪತ್ನಿಯೊಂದಿಗೆ ಉತ್ತಮವಾಗಿ ವ್ಯವಹರಿಸಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಂಸಾರಿಕವಾಗಿ ನೆಮ್ಮದಿ, ವಿನಾಕಾರಣ ದ್ವೇಷ ಮಾಡುವಿರಿ, ಅತಿಯಾದ ನಿದ್ರೆ, ದುಡುಕ ಸ್ವಭಾವ.
ತುಲಾರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಉತ್ಸಾಹ, ಸ್ನೇಹಿತರಿಂದ ಸಹಕಾರ, ಅಮೂಲ್ಯ ವಸ್ತು ಖರೀದಿ, ಅಲ್ಪ ಆದಾಯ, ನಿರಾಸೆಯ ಮನೋಭಾವ, ಉದ್ಯೋಗದಲ್ಲಿ ಕಿರಿ-ಕಿರಿ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ.
ವೃಶ್ಚಿಕರಾಶಿ
ಮಕ್ಕಳಿಂದ ನೆಮ್ಮದಿ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಮೇಲಾಧಿಕಾರಿಗಳಿಂದ ಪ್ರಶಂಸೆ, ಕೈಗೊಂಡ ಕೆಲಸಗಳು ಕೈಗೂಡಲಿದೆ, ಮೃತ್ಯು ಭಯ, ಕಾರ್ಯ ವಿಘಾತ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ.
ಧನಸುರಾಶಿ
ವೃತ್ತಿರಂಗದಲ್ಲಿ ಸಮಸ್ಯೆಗಳು ಎದುರಾಗಲಿದೆ, ಮಾನಸಿಕ ನೆಮ್ಮದಿ, ಸ್ನೇಹಿತರು ಹಾಗೂ ಪ್ರೀತಿ ಪಾತ್ರರೊಡನೆ ಕಾಲ ಕಳೆಯುವಿರಿ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಶ್ರೀ ಸಮಾನ ವ್ಯಕ್ತಿಯಿಂದ ಶುಭ, ವಾಹನ ಖರೀದಿ.
ಮಕರರಾಶಿ
ಸಮಸ್ಯೆಗಳು ಧೈರ್ಯವಾಗಿ ಎದುರಿಸಿ, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ವೃತ್ತಿರಂಗದಲ್ಲಿ ಗೆಲುವನ್ನು ಕಾಣುವಿರಿ, ಖಾಸಗಿ ಬದುಕಿನಲ್ಲಿ ನಿರಾಸೆ ಕಾಡಲಿದೆ, ಹಿತ ಶತ್ರುಗಳಿಂದ ಬೋಧನೆ, ಪುಷ್ಪಹಾರದಿಗಳಿಂದ ಸನ್ಮಾನ.
ಕುಂಭರಾಶಿ
ಕೆಲಸ ಕಾರ್ಯಗಳು ನಿಧಾನವಾಗಿ ನಡೆಯಲಿದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಆಸ್ತಿ ಖರೀದಿಯ ಬಗ್ಗೆ ಮಾತುಕತೆ, ಚಂಚಲ ಮನಸ್ಸು, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ವಿವಾಹ ಯೋಗ, ಅಲ್ಪ ಲಾಭ ಅಧಿಕ ಖರ್ಚು.
ಮೀನರಾಶಿ
ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ, ಕೀರ್ತಿ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ನಂಬಿದವರೇ ಕೈಕೊಡುವ ಸಾಧ್ಯತೆಯಿದೆ. ದೂರ ಪ್ರಯಾಣ, ಮಹಿಳೆಯರಿಗೆ ಶುಭ ಫಲ, ಸಾಲ ಕೊಟ್ಟು ಸಮಸ್ಯೆ ಸಿಲುಕದಿರಿ, ದ್ರವ್ಯಲಾಭ.