ದೇಶದಲ್ಲಿ ತಗ್ಗಿದ ಡೆತ್, ಪಾಸಿಟಿವಿಟಿ ರೇಟ್ : ಜುಲೈ, ಅಗಸ್ಟ್ ನಲ್ಲಿ ಮೂರನೇ ಅಲೆ ಪಕ್ಕಾ..!

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗಿದೆ. ಅಲ್ಲೇ ಡೆತ್ ಹಾಗೂ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಆದ್ರೆ ಜುಲೈ ಅಥವಾ ಅಗಸ್ಟ್ ನಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸೋದು ಪಕ್ಕಾ ಅಂತಿದ್ದಾರೆ ತಜ್ಞರು.

ಕೊರೊನಾ ಎರಡನೇ ಅಲೆಯ ಅಬ್ಬರ ಸುಮಾರು 70 ದಿನಗಳ ನಂತರ ಕಡಿಮೆಯಾಗುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಲಕ್ಷದಷ್ಟು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ.

ನಿತ್ಯವೂ 4 ರಿಂದ 5 ಸಾವಿರದಷ್ಟು ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ಸಾವಿನ ಪ್ರಮಾಣದಲ್ಲಿಯೂ ತಗ್ಗಿದೆ. ಸುಮಾರು 50 ದಿನಗಳ ನಂತರ ಸಾವಿನ ಸಂಖ್ಯೆ 2000ಕ್ಕೆ ಇಳಿಕೆಯಾಗಿದೆ. ಎರಡನೇ ಅಲೆಯ ಅಬ್ಬರ ದೇಶದಲ್ಲಿ ಕಡಿಮೆಯಾಗಿದೆ. ಆದರೆ ತಜ್ಞರು ಕೊರೊನಾ ಮೂರನೆ ಅಲೆಯ ಬಗ್ಗೆ ಶಾಕಿಂಗ್ ಮಾಹಿತಿಯನ್ನು ತಿಳಿಸಿದ್ದಾರೆ.

ದೇಶದಲ್ಲಿ ಎರಡನೇ ಅಲೆಯ ಅಬ್ಬರ ಕಡಿಮೆಯಾದ್ರೂ ಕೂಡ ಜುಲೈ ಹಾಗೂ ಅಗಸ್ಟ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸೋದು ಗ್ಯಾರಂಟಿ. ಹೀಗಾಗಿ ಕೊರೊನಾ ವಿಚಾರದಲ್ಲಿ ಯಾರೂ ಕೂಡ ಮೈ ಮರೆಯಬಾರದು ಎಂದು ತಿಳಿಸಿದ್ದಾರೆ.

Comments are closed.