ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ಒಡಹುಟ್ಟಿದವರಿಂದ ಧನಲಾಭ

Horoscope : ದಿನಭವಿಷ್ಯ : ಒಡಹುಟ್ಟಿದವರಿಂದ ಧನಲಾಭ

- Advertisement -

ಮೇಷರಾಶಿ
ಸ್ವಯಂ ಸುಧಾರಣೆ ಯೋಜನೆಯನ್ನು ರೂಪಿಸಿಕೊಳ್ಳಿ, ಒಡಹುಟ್ಟಿದವರ ಸಹಾಯದಿಂದ ಇಂದು ಹಣಕಾಸಿನ ಲಾಭ ಪಡೆಯುತ್ತಿರಿ, ಒಡಹುಟ್ಟಿದವರ ಸಲಹೆ ಪಡೆಯಿರಿ, ಆಭರಣ, ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ಮನೆಯಲ್ಲಿ ಸಮಸ್ಯೆಗಳು ಉದ್ಬವಿಸುವ ಸಾಧ್ಯತೆ, ಉದ್ಯಮಿಗಳಿಗೆ ಉತ್ತಮವಾದ ದಿನ, ಹಠಾತ್‌ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡಲಿದೆ.

ವೃಷಭರಾಶಿ
ಅನಗತ್ಯ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸವನ್ನು ಹೀರಿಕೊಳ್ಳಬಹುದು, ದುಶ್ಚಟಗಳಿಂದ ದೂರವಿರಲು ಯತ್ನಿಸಿ, ನಿಮ್ಮ ಅತಿರಂಜಿತ ಜೀವನಶೈಲಿಯು ಮನೆಯಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದು, ಖರ್ಚುಗಳ ಮೇಲೆ ಹಿಡಿತವಿರಲಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ.

ಮಿಥುನರಾಶಿ
ಇತರರ ಅಗತ್ಯತೆಯ ಬಗ್ಗೆ ಕಾಳಜಿವಹಿಸಿ, ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಡಿ, ವಿಶ್ರಾಂತಿಯನ್ನು ಪಡೆಯಲು ನೀವು ಇಷ್ಟಪಡುವ ಕೆಲಸವನ್ನು ಮಾಡಿ, ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ, ದಾನ ಮಾಡುವುದರಿಂದ ಮಾನಸಿಕ ನೆಮ್ಮದಿ, ಸಂಗಾತಿಯ ಬಯಕೆಯನ್ನು ಈಡೇರಿಸಲು ಯತ್ನಿಸಿ, ಉದ್ಯಮ ಪಾಲುದಾರಿಕೆಯಿಂದ ದೂರವಿರಿ. ಜಂಟಿ ಉದ್ಯಮಗಳು ಮತ್ತು ಪಾಲುದಾರಿಕೆಯಿಂದ ದೂರವಿರಿ.

ಕರ್ಕಾಟಕರಾಶಿ
ಕುಟುಂಬ ಸದಸ್ಯರ ವರ್ತನೆ ನಿಮ್ಮನ್ನು ಕೆರಳಿಸಬಹುದು, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಖರ್ಚುಗಳ ಮೇಲೆ ಹಿಡಿತವಿರಲಿ, ಭವಿಷ್ಯದ ಅನೇಕ ತೊಂದರೆಗಳಿಂದ ರಕ್ಷಿಸಿ, ಮನೆಯ ವಾತಾವರಣದಲ್ಲಿ ಬದಲಾವಣೆ ಮಾಡಿಕೊಳ್ಳಿ, ಸ್ನೇಹಿತರು ನಿಮ್ಮ ಮೇಲೆ ಪ್ರಶಂಸೆ ಬೀರುತ್ತಾರೆ. ತಾಯಿಯ ಅಗತ್ಯತೆಯನ್ನು ಪೂರೈಸಲು ಬಿಡುವಿನ ಸಮಯವನ್ನು ವಿನಿಯೋಗಿಸಿ.

ಸಿಂಹರಾಶಿ
ಸಣ್ಣಕೋಪ ನಿಮ್ಮನ್ನು ತೊಂದರೆಗೆ ಸಿಲುಕಿಸಲಿದೆ, ಕುಟುಂಬಕ್ಕೆ ಸರಿಯಾದ ಸಮಯವನ್ನು ನೀಡಿ, ನಿಮ್ಮ ಯೋಜನೆಗೆ ಅಡ್ಡಿ ಪಡಿಸಲು ಯಾರಾದರೂ ಪ್ರಯತ್ನಿಸಬಹುದು, ಬಿಡುವಿಲ್ಲದ ಜೀವನ ಶೈಲಿ ನಿಮಗೆ ಸಮಯವನ್ನು ಕಂಡುಕೊಳ್ಳಲು ಕಷ್ಟಕರವಾಗಲಿದೆ, ಇಂದು ನಿಮ್ಮ ಪಾಲಿಗೆ ಅದೃಷ್ಟದ ದಿನ, ಸಂಗಾತಿಯಿಂದ ಸಹಕಾರ ನಿರೀಕ್ಷೆ ಮಾಡಬಹುದಾಗಿದೆ. ದಿನಾಂತ್ಯಕ್ಕೆ ಶುಭವಾರ್ತೆ.

ಕನ್ಯಾರಾಶಿ
ಸಂಗಾತಿಯ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸಬೇಕಾಗಬಹುದು, ದೀರ್ಘ ಕಾಲದಿಂದ ಉಳಿಕೆ ಮಾಡಿದ್ದ ಹಣವನ್ನು ಉಪಯೋಗಕ್ಕೆ ಬರಲಿದೆ, ಹೊಸ ಹೂಡಿಕೆ ನಿಮಗೆ ಲಾಭವನ್ನು ತಂದುಕೊಡಲಿದೆ, ಸ್ನೇಹಿತರಿಗೆ ಸಹಾಯ ಮಾಡುವುದರಿಂದ ಸಾಮಾಜಿಕ ಗೌರವ, ಸಾಲವಾಗಿ ನೀಡಿದ್ದ ಹಣವು ಮರಳಿ ಕೈ ಸೇರಲಿದೆ, ಆಕಸ್ಮಿಕವಾಗಿ ಬಂಧುಗಳು ಇಂದು ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ.

ತುಲಾರಾಶಿ
ವೈಯಕ್ತಿಕ ಸಮಸ್ಯೆಗಳು ನಿಮ್ಮ ಮಾನಸಿಕ ಸಂತೋಷವನ್ನು ಹಾಳು ಮಾಡಲಿದೆ, ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ, ಹಣವನ್ನು ಸಂಗ್ರಹಿಸುವ ಮತ್ತು ಉಳಿಸುವ ಕೌಶಲ್ಯವನ್ನು ಕಲಿಯಬಹುದು, ಹೊಸ ವಿಷಯವನ್ನು ಬಹು ಬೇಗ ಕಲಿಯುವ ನಿಮ್ಮ ಸಾಮರ್ಥ್ಯ ಪ್ರಯೋಜನಕ್ಕೆ ಬರಲಿದೆ, ಸಂಗಾತಿಯೊಂದಿಗೆ ವಾದ ವಿವಾದಗಳಿಂದ ದೂರವಿರಿ.

ವೃಶ್ಚಿಕರಾಶಿ
ಹಣಕಾಸಿನ ಒಪ್ಪಂದವು ಅಂತಿಮಗೊಳ್ಳುತ್ತದೆ, ಪೋಷಕರ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ಹರಿಸಿ, ಕೆಲಸದಲ್ಲಿ ಜನರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ, ನಿಮ್ಮ ಆಸೆಗಳನ್ನು ಪೂರೈಸಲು ಪುಸ್ತಕವನ್ನು ಓದಿ, ನಿಮ್ಮ ಸಂಗಾತಿಯು ಇಂದು ಉತ್ತಮ ಆಹಾರವನ್ನು ನೀಡಲಿದ್ದಾರೆ, ದೂರದ ಪ್ರಯಾಣ ನಿಮಗೆ ಲಾಭವನ್ನು ತಂದುಕೊಡಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ಧನಸ್ಸುರಾಶಿ
ಅವಸರದಲ್ಲಿ ಹೂಡಿಕೆ ಮಾಡಬೇಡಿ, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ನಿಮ್ಮ ಹೆಂಡತಿಯ ಕೆಲಸದ ಹೊರೆ ಕಡಿಮೆ ಮಾಡಲು ಸಹಾಯವನ್ನು ಮಾಡಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಸಹೋದ್ಯೋಗಿಗಳ ಸಹಾಯ ದೊರೆಯಲಿದೆ, ಹಳೆಯ ಸ್ನೇಹಿತ ಭೇಟಿಯಿಂದ ಸಂತಸ.

ಮಕರರಾಶಿ
ಆಘಾತಗಳನ್ನು ಎದುರಿಸುವಾಗ ಶಕ್ತಿಯನ್ನು ಪ್ರದರ್ಶಿಸಿ, ನೀವಿಂದು ಆಶಾವಾದಿಯಾಗಿರುವಿರಿ, ಕುಟುಂಬದ ಸದಸ್ಯರಿಂದ ಹಣಕಾಸಿನ ನೆರವು ಪಡೆಯಲಿದ್ದೀರಿ, ಅನಿರೀಕ್ಷಿತ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣವನ್ನು ತರುತ್ತದೆ, ಜೀವನ ಸಂಗಾತಿಯು ನಿಮಗೆ ಅನಿರೀಕ್ಷಿತ ಸಂತೋಷವನ್ನು ತರಲಿದ್ದಾರೆ. ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ.

ಕುಂಭರಾಶಿ
ಕೈಲಾಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಬದಲು ಏನಾದರೂ ಮಾಡಿ, ಸ್ನೇಹಿತರೊಂದಿಗೆ ಸಂಜೆಯು ಆಹ್ಲಾದಕರವಾಗಿರುತ್ತದೆ. ಹಿಂದಿನ ತಪ್ಪುಗಳನ್ನು ಕ್ಷಮಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸಲಿದ್ದೀರಿ, ಸ್ವಜನಶೀಲ ಕ್ಷೇತ್ರದಲ್ಲಿರುವವರಿಗೆ ಯಶಸ್ವಿ ದಿನ, ಹೃದಯಕ್ಕೆ ಹತ್ತಿರವಾದವರ ಜೊತೆಗೆ ಸಮಯವನ್ನು ಕಳೆಯುವಿರಿ, ಸಂಗಾತಿಯ ಅನುಮಾನ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

ಮೀನರಾಶಿ
ನಿಮ್ಮ ಭರವಸೆ, ನಿರೀಕ್ಷೆ, ಆಸೆಗಳ ಸಾಕಾರಕ್ಕೆ ಬಾಗಿಲು ತೆರೆಯುತ್ತದೆ, ಹೊಸ ಒಪ್ಪಂದಗಳು ಲಾಭದಾಯಕವಾಗಿರಲಿದೆ, ಹಣ ಹೂಡಿಕೆ ವಿಚಾರದಲ್ಲಿ ಆತುರದ ನಿರ್ಧಾರ ಸಂಕಷ್ಟವನ್ನು ತಂದೊಡ್ಡಲಿದೆ, ಸ್ನೇಹಿತನ ಸಮಸ್ಯೆಗಳು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಕಚೇರಿಯಲ್ಲಿನ ರಾಜಕೀಯ ನಿಮಗೆ ಬೇಸರ ತರಿಸಲಿದೆ, ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಿ, ಆಧ್ಯಾತ್ಮದ ಕಡೆಗೆ ಆಸಕ್ತಿ ಮೂಡಲಿದೆ.

ಇದನ್ನೂ ಓದಿ : ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

ಇದನ್ನೂ ಓದಿ : ಎರಡು ಪ್ರಮುಖ ಗ್ರಹಗಳ ಕುತೂಹಲಕಾರಿ ನಡೆ: ವಕ್ರತ್ಯಾಗ ಮಾಡಲಿರುವ ಬುಧ ಮತ್ತು ಗುರು

Horoscope today astrological prediction for October 21

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular