ಭಾನುವಾರ, ಏಪ್ರಿಲ್ 27, 2025
HomehoroscopeHoroscope : ದಿನಭವಿಷ್ಯ : ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ

Horoscope : ದಿನಭವಿಷ್ಯ : ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ

- Advertisement -

ಮೇಷರಾಶಿ
ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ಕೊಡುತ್ತವೆ, ಆತ್ಮವಿಶ್ವಾಸ ಹೆಚ್ಚಲಿದೆ, ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಅಧಿಕ ಲಾಭ, ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಿ, ಅಚ್ಚರಿಯ ಸಂದೇಶವು ನಿಮಗೆ ಸಿಹಿ ಕನಸನ್ನು ನೀಡುತ್ತದೆ. ಜೀವನವನ್ನು ಆನಂದಿಸಲು, ಸ್ನೇಹಿತರನ್ನು ಭೇಟಿಯಾಗುವಿರಿ, ದೂರ ಪ್ರಯಾಣದಿಂದ ಅಧಿಕ ಲಾಭ.

ವೃಷಭರಾಶಿ
ಪ್ರವಾಸ ನಿಮಗೆ ಸಂತಸವನ್ನು ತರಲಿದೆ, ತ್ವರಿತವಾಗಿ ಹಣ ಗಳಿಸುವ ಆಸೆ ಫಲಕೊಡಲಿದೆ, ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತದೆ, ಮಾನಸಿಕ ಒತ್ತಡ ಕಿರಿಕಿರಿಯನ್ನು ಉಂಟು ಮಾಡಲಿದೆ, ಸಾಮಾಜಿಕವಾಗಿ ಗೌರವ ಲಭಿಸಲಿದೆ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಧಾರ್ಮಿಕ ಕ್ಷೇತ್ರಗಳ ಭೇಟಿ.

ಮಿಥುರಾಶಿ
ಆರೋಗ್ಯ ಚೆನ್ನಾಗಿರುತ್ತದೆ. ಒಡಹುಟ್ಟಿದವರು ಹಣಕಾಸಿನ ಸಹಾಯಕ ಕೇಳುವರು, ಆರ್ಥಿಕ ಹೊರೆ ಹೆಚ್ಚಲಿದೆ, ಮನೆಯ ದುರಸ್ಥಿ ಕಾರ್ಯ ಕೈಗೊಳ್ಳುವಿರಿ, ಕೆಲಸಗಳಿಗೆ ಪ್ರಾಮುಖ್ಯತೆಯನ್ನು ನೀಡಿ, ನೆರೆ ಹೊರೆಯವರು ಸಹಕಾರ ನೀಡಲಿದ್ದಾರೆ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ.

ಕರ್ಕಾಟಕರಾಶಿ
ನಿಮ್ಮ ಪಾಲಿಗಿಂದು ಅತ್ಯಂತ ಶುಭ ದಿನ, ದುಶ್ಚಟದಿಂದ ದೂರವಿರಲು ಯತ್ನಿಸಿ, ಭೂಮಿ ಖರೀದಿ, ಮಾರಾಟದಿಂದ ಲಾಭ, ನಿಮ್ಮ ಸಿಹಿ ನೆನಪುಗಳನ್ನು ಮೆಲುಕು ಹಾಕುವಿರಿ, ಸಂಗಾತಿಯ ನಿರ್ಲಕ್ಷ್ಯದಿಂದ ಸಂಬಂಧ ಹಾಳಾಗಲಿದೆ, ವಿಶೇಷ ವ್ಯಕ್ತಿಗಳ ಭೇಟಿ ಸಂತಸವನ್ನ ತರಲಿದೆ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ಕೃಷಿ, ಹೈನುಗಾರಿಕೆ ವೃತ್ತಿ ಮಾಡುವವರಿಗೆ ಅಧಿಕ ಲಾಭ.

ಸಿಂಹರಾಶಿ
ಸ್ನೇಹಿತರೊಂದಿಗೆ ಸುಂದರ ಸಂಜೆ, ಅತಿಯಾದ ಆಹಾರ ಸೇವೆಯಿಂದ ಅನಾರೋಗ್ಯ, ಎಲೆಕ್ಟ್ರಾನಿಕ್ ವಸ್ತುಗಳ ದುರಸ್ಥಿ ಹಣ ವ್ಯಯ, ಒಡಹುಟ್ಟಿದವರ ಭೇಟಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ನ್ಯಾಯಾಲಯದಲ್ಲಿನ ವ್ಯಾಜ್ಯಗಳು ಪರಿಹಾರ ಕಾಣಲಿದೆ, ಬಾಕಿ ಉಳಿದಿದ್ದ ಕಾರ್ಯವನ್ನು ಈಡೇರಲಿದೆ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಕನ್ಯಾರಾಶಿ
ದುಶ್ಚಟವನ್ನು ದೂರ ಮಾಡಿಕೊಳ್ಳಿ, ಸಂಗಾತಿಯ ನಿರ್ಲಕ್ಷ್ಯದಿಂದ ವೈವಾಹಿಕ ಜೀವನ ಹಾಳಾಗಬಹುದು, ಸಂತೋಷ ದಿನವನ್ನು ಪಡೆಯಲು ಯತ್ನ, ವಿಶೇಷ ವ್ಯಕ್ತಿಗಳ ಭೇಟಿಯಿಂದ ಸಂತಸ, ಆಧ್ಯಾತ್ಮದ ಪುಸ್ತಕಗಳನ್ನು ಓದುವುದರಲ್ಲೇ ಕಾಲ ಕಳೆಯುವಿರಿ, ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ, ಮುಂಭಡ್ತಿ ದೊರೆಯುವ ಸಾಧ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ತುಲಾರಾಶಿ
ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ, ಆರೋಗ್ಯದಲ್ಲಿ ಚೇತರಿಕೆ, ಒಡ ಹುಟ್ಟಿದವರ ಸಹಕಾರ ದೊರೆಯಲಿದೆ, ಹಣಕಾಸಿನ ಲಾಭ ಪಡೆಯುತ್ತೀರಿ. ಅಂಚೆ ಮೂಲಕ ಪತ್ರವು ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿಯನ್ನು ತರುತ್ತದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮಗೆ ಒಳ್ಳೆಯ ದಿನ. ನಿಮ್ಮ ಪ್ರಿಯತಮೆಯು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ವೃಶ್ಚಿಕರಾಶಿ
ಕೆಲಸದ ಸ್ಥಳದಲ್ಲಿ ಹಿರಿಯರಿಂದ ಒತ್ತಡ, ಕೆಲಸದಲ್ಲಿ ಏಕಾಗ್ರತೆಗೆ ಭಂಗ, ಹೂಡಿಕೆ ಮಾಡುವ ಮೊದಲು ಯೋಚಿಸಿ, ಅನಿಯಮಿತ ನಡವಳಿಗೆ ಬೇಸರ ತರಿಸಲಿದೆ, ಅನಗತ್ಯ ವಿಷಯಗಳಲ್ಲಿ ನಿಮ್ಮ ಸಮಯ ಕಳೆಯಬೇಡಿ, ಹೊಸ ಭಾಷೆಯನ್ನು ಕಲಿಯಲು ಯತ್ನಿಸಿ, ಸ್ತ್ರೀಯರಿಂದ ಸಹಕಾರ ದೊರೆಯಲಿದೆ, ಗೃಹ ಗತಿಗಳು ನಿಮಗೆ ಉದ್ಯೋಗ, ವ್ಯವಹಾರದಲ್ಲಿ ಲಾಭವನ್ನು ತರಲಿದೆ.

ಇದನ್ನೂ ಓದಿ : ನಾಗದೋಷ, ಕಾಳಸರ್ಪ ದೋಷವನ್ನುನಿವಾರಣೆ ಮಾಡ್ತಾನೆ ನಾಗರಾಜ : ಇಲ್ಲಿ ಭಕ್ತರನ್ನು ಕಾಯುತ್ತೆ 30 ಸಾವಿರ ಸರ್ಪಗಳು

ಧನಸುರಾಶಿ
ನಕರಾತ್ಮಕ ಯೋಚನೆಗಳನ್ನು ದೂರ ಮಾಡಿ, ಅನುಮಾನ ಕೋಪವನ್ನು ದೂರ ಮಾಡಿ, ಕೆಲಸದ ಸ್ಥಳದಲ್ಲಿ ಹೊಂದಾಣಿಕೆಯಿಂದಿರಿ, ಮೇಲಾಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿಯ ಬೇಡಿ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ, ಸಮಯವನ್ನು ಏಕಾಂಗಿಯಾಗಿ ಕಳೆಯಲು ಯತ್ನಿಸಬೇಡಿ, ಬಿಡುವಿನ ಸಮಯವನ್ನು ಪ್ರೀತಿ ಪಾತ್ರರ ಜೊತೆಗೆ ಕಳೆಯುವಿರಿ.

ಮಕರರಾಶಿ
ಅನಗತ್ಯ ಆಲೋಚನೆಗಳು ಮನಸ್ಸನ್ನುಘಾಸಿ ಮಾಡಲಿದೆ. ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನುಎದುರಿಸುವಿರಿ, ಬುದ್ದಿವಂತಿಕೆಯಿಂದ ನಷ್ಟವನ್ನು ಲಾಭವಾಗಿ ಪರಿವರ್ತಿಸುವಿರಿ, ಪ್ರೀತಿ ಪಾತ್ರರಿಗೆ ಬಹುಮಾನ ನೀಡುವ ಸಾಧ್ಯತೆಯಿದೆ. ಬಿಡುವಿನ ವೇಳೆಯಲ್ಲಿ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ, ಅತಿಥಿಗಳಾ ಆಹ್ವಾನ ಸಂತಸ ಮೂಡಿಸಲಿದೆ.

ಕುಂಭರಾಶಿ
ನಿಮ್ಮ ಶಕ್ತಿಯ ಮಟ್ಟ ಹೆಚ್ಚಲಿದೆ, ಆರ್ಥಿಕ ಶಕ್ತಿಯನ್ನು ಬಲ ಪಡಿಸಲು ಅಗತ್ಯ ಸಲಹೆಯನ್ನು ಪಡೆಯುವಿರಿ, ನಿಮ್ಮ ಜ್ಞಾನ ಶಕ್ತಿ, ಹಾಸ್ಯದ ಪ್ರವೃತ್ತಿ ಇತರರನ್ನು ಆಕರ್ಷಿಸುತ್ತದೆ, ಏಕಾಂಗಿಯಾಗಿರಲು ಮನಸು ಬಯಸುತ್ತದೆ, ಸಹೋದ್ಯೋಗಿಗಳ ಜೊತೆಗೆ ಅನ್ಯೋನ್ಯವಾಗಿರಿ, ಕೊಟ್ಟ ಸಾಲ ಮರಳಿ ಬರುವ ಸಾಧ್ಯತೆ, ನಿಮ್ಮ ಆರ್ಥಿಕ ಶಕ್ತಿಯನ್ನು ನೋಡಿಕೊಂಡು ಇತರರಿಗೆ ಸಹಕಾರವನ್ನು ಮಾಡಿ.

ಮೀನರಾಶಿ
ದೈಹಿಕ ಸಮಸ್ಯೆಗೆ ಪರಿಹಾರ ಕಂಡುಕೊಳಿ, ಕ್ರೀಡೆಯಲ್ಲಿ ಸಮಯವನ್ನು ಕಳೆಯುವಿರಿ, ಉದ್ಯಮಿಗಳು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಲಿದ್ದಾರೆ, ವ್ಯವಹಾರದ ಸುಧಾರಣೆಗೆ ಹಲವು ಕ್ರಮಗಳನ್ನು ಅನುಸರಿಸಿ, ವಾಸ್ತವಾಂಶ ಅರಿತು ಮುನ್ನಡೆಯುವಿರಿ, ಹಳೆಯ ಬಾಕಿ ತೀರಿಸಲು ಒತ್ತಡ ಹೆಚ್ಚಲಿದೆ, ಮೇಲಾಧಿಕಾರಿಗಳ ಕಿರಿಕಿರಿ, ಭೂ ವ್ಯವಹಾರದಿಂದ ಲಾಭ ದೊರೆಯಲಿದೆ.

( Horoscope today astrological prediction for October 02)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular