ಭಾನುವಾರ, ಏಪ್ರಿಲ್ 27, 2025
HomehoroscopeHoroscope : ದಿನಭವಿಷ್ಯ : ಉನ್ನತ ಹುದ್ದೆಗೇರಲು ಆರೋಗ್ಯ ಸಮಸ್ಯೆ ತೊಡಕಾಗಲಿದೆ

Horoscope : ದಿನಭವಿಷ್ಯ : ಉನ್ನತ ಹುದ್ದೆಗೇರಲು ಆರೋಗ್ಯ ಸಮಸ್ಯೆ ತೊಡಕಾಗಲಿದೆ

- Advertisement -

ಮೇಷರಾಶಿ
ಇಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಿ, ಕೋಪವನ್ನು ಕಡಿಮೆ ಮಾಡಿಕೊಳ್ಳಿ, ರಿಯಲ್ ಎಸ್ಟೇಟ್ ಹೂಡಿಕೆ ಲಾಭದಾಯಕ, ಹೊಸ ಯೋಜನೆಗಳು ಲಾಭವನ್ನು ತರಲಿದೆ, ಕುಟುಂಬದ ಸಮಸ್ಯೆಗಳಿಂದ ಕೆಲಸದ ಸ್ಥಳದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗಲಿದೆ, ಉದ್ಯಮಿಗಳಿಗೆ, ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಲಾಭ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ.

ವೃಷಭರಾಶಿ
ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ, ಅಧಿಕ ಶ್ರಮ ಆರ್ಥಿಕ ಲಾಭವನ್ನು ತರಲಿದೆ, ಅಪರಿಚಿತರ ಸಲಹೆಯಿಂದ ಹೂಡಿಕೆ ಮಾಡಿ, ಮೊಮ್ಮಕ್ಕಳಿಂದ ನೆಮ್ಮದಿ ದೊರೆಯಲಿದೆ, ಪ್ರೀತಿಯಲ್ಲಿ ನಿರಾಸೆಯನ್ನು ಅನುಭವಿಸುವಿರಿ, ಬಾಕಿ ಇರುವ ಕೆಲಸಗಳನ್ನು ಇಂದೇ ಮುಗಿಸಿ, ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ , ಶುಭ ಸುದ್ದಿ ಕೇಳುವಿರಿ.

ಮಿಥುನರಾಶಿ
ತಾಯಿಯ ಕುರಿತು ವಿಶೇಷ ಕಾಳಜಿ ವಹಿಸಿ, ಸಂಶಯಾಸ್ಪದ ಹಣಕಾಸು ಯೋಜನೆಯಲ್ಲಿ ಹೂಡಿಕೆ ಮಾಡಬೇಡಿ, ಬಿಡುವಿನ ವೇಳೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ, ಆತುರ ನಿರ್ಧಾರವನ್ನು ಕೈಗೊಳ್ಳಬೇಡಿ, ಕೆಲಸದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾತನ್ನಾಡಬೇಡಿ, ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ, ನಿಮ್ಮ ಕಾರ್ಯಗಳನ್ನು ಇಂದೇ ಮುಗಿಸಲು ನಿರ್ಧರಿಸಿ.

ಕರ್ಕಾಟಕರಾಶಿ
ಕೆಲಸ ಸ್ಥಳದಲ್ಲಿ ಹಿರಿಯರಿಂದ ಒತ್ತಡ, ಮನೆಯಲ್ಲಿ ಅಪಶ್ರುತಿ ಒತ್ತಡವನ್ನು ತರಬಹುದು, ಕೆಲಸದಲ್ಲಿ ಏಕಾಗ್ರತೆಗೆ ಭಂಗ ತರುತ್ತದೆ, ಆರ್ಥಿಕವಾಗಿ ಪ್ರಗತಿ ಕಂಡು ಬರಲಿದೆ, ಸ್ನೇಹಿತರು, ಸಂಬಂಧಿಕರ ಮೇಲೆ ಅಭಿಪ್ರಾಯವನ್ನು ಹೇರಬೇಡಿ, ಜೀವನದಲ್ಲಿ ಆಸಕ್ತಿದಾಯದ ಸಂಗತಿಗಳು ನಡೆಯಲಿವೆ, ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ದೂರ ಪ್ರಯಾಣವು ಲಾಭವನ್ನು ತರಲಿದೆ.

ಸಿಂಹರಾಶಿ
ಸಮಸ್ಯೆಗಳು ಮಾನಸಿಕ ಸಮಸ್ಯೆಯನ್ನು ತರುತ್ತದೆ, ದುಡಿಕಿನ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಹಣಕಾಸಿನ ವ್ಯವಹಾರಗಳು ಕೈಗೂಡಲಿದೆ, ಸಂಜೆಯ ವೇಳೆಗೆ ಹಠಾತ್‌ ಒಳ್ಳೆಯ ಸುದ್ದಿ ಕುಟುಂಬಕ್ಕೆ ಸಂತಸವನ್ನು ತರಲಿದೆ, ಕೆಲಸದ ಸ್ಥಳದಲ್ಲಿ ಸಾಕಷ್ಟು ಪ್ರೀತಿ ಸಿಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ದಿನಾಂತ್ಯಕ್ಕೆ ಶುಭ ಸುದ್ದಿ.

ಇದನ್ನೂ ಓದಿ : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ

ಕನ್ಯಾರಾಶಿ
ನಿಮ್ಮನ್ನು ಹೆಚ್ಚು ಆಶಾವಾದಿಯಾಗಿರಲು ಪ್ರೇರೇಪಿಸಿ, ನಿಮ್ಮ ಆತ್ಮವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ, ಭಯ ದ್ವೇಷ ಅಸೂಯೆಯನ್ನು ಕಡಿಮೆ ಮಾಡಿಕೊಳ್ಳಿ, ಅನಿರೀಕ್ಷಿತ ಬಿಲ್‌ಗಳು ಆರ್ಥಿಕ ಹೊರೆಯನ್ನು ತರುತ್ತದೆ, ಬೇರೆಯವರ ನೆರಳಿನಲ್ಲಿ ವ್ಯವಹಾರ ಮಾಡುವುದರಿಂದ ದೂರವಿರಿ, ಮಾನಸಿಕ ಶಾಂತಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಮಾನಸಿಕ ವಿಶ್ರಾಂತಿಯನ್ನು ಪಡೆಯಿರಿ.

ತುಲಾರಾಶಿ
ಮಾನಸಿಕ ನೆಮ್ಮದಿಗಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ತೆರಿಗೆ ವಂಚನೆ ಮಾಡುವವರು ತೊಂದರೆಗೆ ಸಿಲುಕುವ ಸಾಧ್ಯತೆ, ಸಂಬಂಧಿಕರು, ಸ್ನೇಹಿತರು ಹಣಕಾಸಿನ ಸಹಕಾರವನ್ನು ನೀಡಲಿದ್ದಾರೆ. ದೂರ ಪ್ರಯಾಣವು ಒತ್ತಡದಿಂದ ಕೂಡಿರಲಿದೆ, ರಾಜಕಾರಣಿಗಳಿಗೆ ಅನುಕೂಲಕರ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ, ವಿದೇಶಿ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ.

ವೃಶ್ಚಿಕರಾಶಿ
ಹಠಾತ್‌ ಪ್ರವೃತ್ತಿ ಗಂಭೀರ ಆರೋಗ್ಯ ಸಮಸ್ಯೆಯನ್ನು ತರಲಿದೆ, ಹಣಕಾಸಿನ ಆಗಮನದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ, ಮಕ್ಕಳಿಗೆ ಸಂತಸ ದೊರೆಯಲಿದೆ, ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದರಿಂದ ಕನಸು ನನಸಾಗುವ ಸಾಧ್ಯತೆ, ಬದ್ದತೆಯಿಂದ ಕೆಲಸ ಕಾರ್ಯಗಳನ್ನು ಮಾಡುವಿರಿ, ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ ದೊರೆಯಲಿದೆ, ಮೇಲಾಧಿಕಾರಿಗಳ ಪ್ರಶಂಸೆ.

ಧನಸುರಾಶಿ
ಕುಟುಂಬದೊಂದಿಗೆ ಸಮಯ ಕಳೆಯುವಿರಿ, ನಿಮ್ಮ ಒಂಟಿತನ ದೂರವಾಗಲಿದೆ, ಅತಿಯಾದ ಖರ್ಚು ನಿಮಗೆ ಬೇಸರ ಮೂಡಿಸುತ್ತದೆ, ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಿ, ಅವಿವಾಹಿತರಿಗೆ ವಿವಾಹ ಭಾಗ್ಯ, ನ್ಯಾಯಾಲಯದ ವ್ಯಾಜ್ಯ ಪರಿಹಾರವನ್ನು ಕಾಣಲಿದೆ, ಕಲಾವಿದರಿಗೆ ಹೊಸ ಅವಕಾಶ ದೊರೆಯಲಿದೆ. ವಿದೇಶಿ ಪ್ರಯಾಣ ಭಾಗ್ಯ, ವೈದ್ಯರನ್ನು ಭೇಟಿ ಮಾಡುವ ಸಾಧ್ಯತೆ.

ಇದನ್ನೂ ಓದಿ : Health Tips : ಸಾಮಾನ್ಯ ಗಿಡದ ಅಸಾಮಾನ್ಯ ಶಕ್ತಿ ‘ನೆಲನೆಲ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು?

ಮಕರರಾಶಿ
ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಿರುತ್ತೆ, ನಿಮ್ಮ ಪಾಲಿಗಿಂದು ಅದೃಷ್ಟದ ದಿನ, ಸ್ನೇಹಿತರೊಂದಿಗೆ ಸುಂದರ ಸಂಜೆ, ವೃತ್ತಿ ಭವಿಷ್ಯದ ನಿರ್ಧಾರವನ್ನು ಕೈಗೊಳ್ಳುವಿರಿ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಗೋಚರಿಸಲಿದೆ, ಸಂಗಾತಿಯೊಂದಿಗೆ ಸುಂದರ ಸಂಜೆ, ಕೆಲಸದಲ್ಲಿ ಹೆಚ್ಚಿನ ಶ್ರಮದಿಂದ ಅಧಿಕ ಲಾಭ, ಹಳೆಯ ಸಾಲದ ಬಾಕಿ ವಸೂಲಿಯಾಗಲಿದೆ, ಹೊಂದಾಣಿಕೆ ಅಗತ್ಯ.

ಕುಂಭರಾಶಿ
ಹಣಕಾಸಿನ ಖರ್ಚಿನ ಮೇಲೆ ಹಿಡಿತವಿರಲಿ, ಮಕ್ಕಳಿಂದ ನಿರಾಸೆಯನ್ನು ಅನುಭವಿಸುವಿರಿ, ಕನಸುಗಳು ಈಡೇರಿಕೆಯಾಗಲಿದೆ, ಸಾಮಾಜಿಕ ಕಾರ್ಯಗಳು ನಿಮ್ಮ ಆಕರ್ಷಿಸಲಿದೆ, ವೈವಾಹಿಕ ಜೀವನವು ನೆಮ್ಮದಿಯಿಂದ ಕೂಡಿರಲಿದೆ, ಅನಗತ್ಯ ಖರ್ಚುಗಳ ಮೇಲೆ ಹಿಡಿತವಿರಲಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹಿಂದೆ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವಿರಿ, ಆರ್ಥಿಕವಾಗಿ ಹೆಚ್ಚು ಅನುಕೂಲಕರ.

ಮೀನರಾಶಿ
ಆರೋಗ್ಯ ಸಮಸ್ಯೆಯಿಂದ ಉನ್ನತ ಹುದ್ದೆಗೇರಲು ಅನಾನುಕೂಲ, ವೃತ್ತಿಯಲ್ಲಿ ಹಲವು ಹಿನ್ನಡೆಗಳನ್ನು ಅನುಭವಿಸುವಿರಿ, ಅಪರಿಚಿತ ವ್ಯಕ್ತಿಯ ಸಲಹೆಯ ಮೇರೆಗೆ ತಮ್ಮ ಹಣವನ್ನು ಹೂಡಿಕೆ ಮಾಡಿ, ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು, ಆದರೆ ಗೆಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ. ವಾದ ವಿವಾದಗಳಿಂದ ಆದಷ್ಟು ದೂರವಿರಿ, ಸಂಗಾತಿಯನ್ನು ಸಂತೋಷವಾಗಿಡಲು ಯತ್ನಿಸಿ.

ಇದನ್ನೂ ಓದಿ : ಎಂದಾದ್ರೂ ತಿಂದಿದ್ರಾ ಹಲಸಿನ ಬೀಜದ ಹಲ್ವಾ

ಇದನ್ನೂ ಓದಿ : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಭಾರೀ ಏರಿಕೆ ಕಂಡ ಅಡುಗೆ ಎಣ್ಣೆಯ ದರ

( Horoscope today astrological prediction for October 06 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular