ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !

0

ಅದೆಷ್ಟೋ ಮಂದಿ ಕಂಕಣ ಬಲ ಕೂಡಿಬಂದಿಲ್ಲಾ ಅನ್ನೋ ಕೊರಗಲ್ಲಿದ್ದಾರೆ. ಇನ್ನಷ್ಟು ಮಂದಿ ಮದುವೆಯಾದ್ರೂ ಮಕ್ಕಳಾಗಿಲ್ಲಾ ಅನ್ನೋ ಚಿಂತೆಯಲ್ಲಿದ್ದಾರೆ. ಮದುವೆಯಾಗದವರು, ಮಕ್ಕಳಾಗದವರು ಈ ಪುಣ್ಯಕ್ಷೇತ್ರಕ್ಕೆ ಬಂದು ಕಾಳಿಕಾಂಬೆಯ ಮುಂದೆ ಪ್ರಾರ್ಥನೆಯಿಟ್ರೆ ಇಷ್ಟಾರ್ಥಗಳು ಸಿದ್ದಿಯಾಗುತ್ತೆ. ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ಮಕ್ಕಳಾಗದವರಿಗೆ ಮಕ್ಕಳಾಗುತ್ತೆ, ಮದುವೆಯಾಗದವರಿಗೆ ಮದುವೆಯಾಗುತ್ತೆ.

ಅಷ್ಟಕ್ಕೂ ಈ ಪುಣ್ಯ ಕ್ಷೇತ್ರವಿರೋದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಾಡಂಚಿನ ಗ್ರಾಮವಾದ ಮಾಣಿಲದಲ್ಲಿ. ಮಾಣಿಲ ಗ್ರಾಮದ ಕುಕ್ಕಾಜೆಯ ಕಾಳಿಕಾಂಬಾ ಆಂಜನೇಯ ದೇವಸ್ಥಾನ ಭಕ್ತರ ಇಷ್ಟಾರ್ಥಗಳು ಸಿದ್ದಿಸೋ ಪುಣ್ಯಕ್ಷೇತ್ರ.

ಇಲ್ಲಿರೋ ದೇವರಿಗೆ ತುಲಾಭಾರದ ಹರಿಕೆಯನ್ನು ಹೇಳಿಕೊಂಡರೆ ಸಾಕು ದೇವರು ವರ್ಷದ ಅವಧಿಯೊಳಗೆ ವರ ಕೊಡ್ತಾನೆ ಅನ್ನೋ ನಂಬಿಕೆಯಿದೆ.

ಕಂಕಣ ಬಲ ಕೂಡಿಬರ್ತಿಲ್ಲಾ ಅನ್ನೋ ಕೊರಗಿನಲ್ಲಿರುತ್ತಿದ್ದ ಅದೆಷ್ಟೋ ಮಂದಿಗೆ ಕಾಳಿಕಾಂಬೆ ನೋವನ್ನು ಮರೆಯಿಸಿದ್ದಾಳೆ. ಇನ್ನು ಸಂತಾನ ಭಾಗ್ಯವಿಲ್ಲದ ನೋವಲ್ಲಿದ್ದವರ ಕಣ್ಣೀರು ದೇವರು ಒರಿಸಿದ್ದಾನೆ.

ಇನ್ನು ಚರ್ಮ ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರೋ ಅದೆಷ್ಟೋ ಮಂದಿಗೆ ಕಾಳಿಕಾಂಬೆ ಮತ್ತು ಆಂಜನೇಯ ಸ್ವಾಮಿ ರೋಗಗಳನ್ನು ಗುಣಮಾಡಿದ್ದಾನೆಂಬ ನಂಬಿಕೆ ಭಕ್ತರದಲ್ಲಿದೆ.

ಇನ್ನು ಕ್ಷೇತ್ರಕ್ಕೆ ಪುರಾಣದ ಕಥೆಯೂ ಇದೆ. ದೇವಸ್ಥಾನವಿರೋ ಈ ಜಾಗದಲ್ಲಿ ಈ ಹಿಂದೆ ಹುತ್ತವಿತ್ತು. ಭೂ ಲೋಕಕ್ಕೆ ಬಂದ ಕಾಳಿಕಾಂಬ ದೇವಿ ಈ ಹುತ್ತದ ಮೇಲೆ ಉಯ್ಯಾಲೆಯಾಡಿ ಹೋಗಿದ್ದರಂತೆ.

ಇದ್ರಿಂದ ಈ ಕ್ಷೇತ್ರದಲ್ಲಿ ಇಷ್ಟೊಂದು ಶಕ್ತಿ ಬರಲು ಸಾಧ್ಯವಾಗಿದೆಯಂತೆ. ಈ ಎಲ್ಲಾ ವಿಚಾರಗಳು ಅಷ್ಟಮಂಗಲ ಪ್ರಶ್ನೆಯಿಂದಲೂ ತಿಳಿದುಬಂದಿದೆ. ಸಾಕ್ಷಾತ್ ಕಾಳಿಕಾಂಬ ದೇವಿಯೇ ಇಲ್ಲಿಗೆ ಬಂದು ಸಂಚರಿಸಿದ, ವಿಹರಿಸಿದ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು, ಕ್ಷೇತ್ರದ ಧರ್ಮದರ್ಶಿ ಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಿದೆ.

ಮದುವೆ ಆಗದವರು, ಮಕ್ಕಳು ಆಗದವರು ಮತ್ತು ಚರ್ಮ ಕಾಯಿಲೆ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಇಲ್ಲಿ ಬಂದು ಹರಕೆ ಮಾಡಿಕೊಳ್ಳುತ್ತಾರೆ. ಹರಕೆ ಮಾಡಿಕೊಂಡ ಒಂದು ವರ್ಷದಲ್ಲಿ ಇಲ್ಲಿಗೆ ವರ ಸಿಗುತ್ತೆ. ಇಂತಹ ಅದೆಷ್ಟೋ ಉಧಾಹರಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಮಗುವನ್ನು ಮಡಿಲಿನಲ್ಲಿ ಕೂರಿಸಿಕೊಂಡು ತಾಯಿ ತುಲಾಬಾರ ಸೇವೆಯಲ್ಲಿ ದವಸ ಧಾನ್ಯಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ದೇವರಿಗೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಇನ್ನು ಈ ಕ್ಷೇತ್ರದಲ್ಲಿ ಅದೆಂತಾ ಮಹಿಮೆ ಇದೆ ಎಂದು ಇಲ್ಲಿಗೆ ಬಂದವರಿಗೆ ತಿಳಿಯುತ್ತೆ.

ಇಂತಹ ಪುಣ್ಯಕ್ಷೇತ್ರದಲ್ಲೀಗ ಜಾತ್ರಾ ಮಹೋತ್ಸವ ವೈಭವ ಕಳೆಗಟ್ಟಿದೆ. ಭದ್ರಕಾಳಿಕಾಂಬ ಮತ್ತು ಆಂಜನೇಯಸ್ವಾಮಿ ಇದೇ ಕ್ಷೇತ್ರದಲ್ಲಿ ನೆಲೆನಿಂತಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ವರ್ಷದಲ್ಲಿ ನಾಲ್ಕು ಬಾರೀ ಜಾತ್ರೆ ನಡೆಯುತ್ತೆ. ಇದು ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವ. ಈ ಜಾತ್ರಾ ಮಹೋತ್ಸವ ದಲ್ಲಿ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹರಕೆಯನ್ನು ತೀರಿಸುತ್ತಾರೆ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?

(The Kalikamba Anjaneya Temple of Kukkaje in the village of Manila )

Leave A Reply

Your email address will not be published.