ಮೇಷರಾಶಿ
ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಆಯಾಸವಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಇತರರ ಸಲಹೆಯನ್ನು ಪಡೆಯಿರಿ, ಆರ್ಥಿಕವಾಗಿ ಹಲವು ರೀತಿಯಲ್ಲಿ ಅನುಕೂಲ ದೊರೆಯಲಿದೆ, ಕುಟುಂಬ ಸದಸ್ಯರು ಉತ್ತಮ ಸಲಹೆ ನೀಡಲಿದ್ದಾರೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ವೃಷಭರಾಶಿ
ಆರೋಗ್ಯಕ್ಕೆ ಆದ್ಯತೆಯನ್ನು ನೀಡಿ, ಆರ್ಥಿಕವಾಗಿ ಅದೃಢರಾಗುತ್ತೀರಿ, ಗ್ರಹಗತಿಗಳು ಲಾಭದಾಯಕ ಸ್ಥಾನದಲ್ಲಿವೆ. ಹಣಗಳಿಸಲು ಹಲವಾರು ಅವಕಾಶಗಳು ದೊರೆಯಲಿದೆ, ಸಮಸ್ಯೆ ಯನ್ನು ಮರೆತು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಿರಿ, ಉದ್ಯಮಿಗಳಿಗೆ ಒಳ್ಳೆಯ ದಿನ.
ಮಿಥುನರಾಶಿ
ಮಗುವಿನಂತಹ ಸ್ವಭಾವ ಹೊರಹೊಮ್ಮುತ್ತದೆ, ತಮಾಷೆಯಿಂದಲೇ ದಿನ ಕಳೆಯುವಿರಿ, ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ, ಮಕ್ಕಳು ನಿಮ್ಮ ಸಾಧನೆಯನ್ನು ಕೊಂಡಾಡುತ್ತಾರೆ, ಬಾಕಿ ಇರುವ ಕಾರ್ಯಗಳು ಮುಕ್ತಾಯವಾಗಲಿದೆ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ.
ಕರ್ಕಾಟಕರಾಶಿ
ನಿಮ್ಮ ಹವ್ಯಾಸದ ವಿಷಯಗಳಲ್ಲಿ ಹೆಚ್ಚಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ, ಇಂದು ವಿಶ್ರಾಂತಿಯನ್ನು ಪಡೆಯಲು ಯತ್ನಿಸಿ, ಸಂಬಂಧದಲ್ಲಿ ಹೆಚ್ಚು ನಂಬಿಕೆಯನ್ನಿಡಿ, ನಿಮ್ಮ ಪ್ರಣಯ ಸಂಗಾತಿಯನ್ನು ಮೆಚ್ಚಿಸಲಿದೆ, ಹಠಾತ್ ಪ್ರವಾಸ ಸಕರಾತ್ಮಕ ಫಲಿತಾಂಶವನ್ನು ನೀಡಲಿದೆ, ಪುಸ್ತಕ ಓದಿನಲ್ಲಿ ಕಳೆಯುವಿರಿ.
ಇದನ್ನೂ ಓದಿ : ಗೆಜ್ಜೆಗಿರಿಯಲ್ಲೀಗ ನವರಾತ್ರಿ ವೈಭವ : ಪುಣ್ಯಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ
ಸಿಂಹರಾಶಿ
ಹಿಂದಿನ ದಿನಗಳ ಕಠಿಣ ಪರಿಶ್ರಮ ಉತ್ತಮ ಫಲಿತಾಂಶವನ್ನು ತರಲಿದೆ, ಕನಸು ನನಸಾಗುವ ಸಾಧ್ಯತೆ, ಹತ್ತಿರವಿರುವವರೇ ನಿಮಗೆ ದ್ರೋಹ ಮಾಡಬಹುದು, ನಿಮ್ಮನ್ನು ಇಡೀ ದಿನ ಚಿಂತೆಗೀಡು ಮಾಡಲಿದೆ, ಸಮಯವನ್ನು ವ್ಯರ್ಥ ಮಾಡುವ ಜನರ ಸಹವಾಸದಿಂದ ದೂರವಿರಿ, ಸಂಗಾತಿ ಭೂಮಿ ಮೇಲಿನ ಸ್ವರ್ಗವಿದ್ದಂತೆ.
ಕನ್ಯಾರಾಶಿ
ದುಶ್ಚಟದಿಂದ ದೂರವಿರಿ, ಇಂದು ನಿಮ್ಮ ಪಾಲಿಗೆ ಅತ್ಯಂತ ಶುಭದಿನ, ಇಡೀ ದಿನ ಹಣದ ಸಮಸ್ಯೆ ಎದುರಾಗಲಿದೆ. ಆದರೆ ಸಂಜೆಯ ಹೊತ್ತಿಗೆ ಹಣಕಾಸಿನ ಲಾಭವನ್ನು ಪಡೆಯಲಿ ದ್ದೀರಿ, ಹತ್ತಿರದ ಸಂಬಂಧಿ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಹೋದ್ಯೋಗಿಗಳ ಜೊತೆ ವ್ಯವಹರಿಸುವಾಗ ಹೆಚ್ಚು ಎಚ್ಚರಿಕೆ ವಹಿಸಿ.
ತುಲಾರಾಶಿ
ಆಭರಣ, ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ಸಂಗಾತಿಯು ನಿಮಗೆ ಸಹಕಾರವನ್ನು ನೀಡಲಿದ್ದಾರೆ, ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಮೇಲಾಧಿಕಾರಿಗಳ ಸಹಕಾರ ಸಂತಸವನ್ನು ತರಲಿದೆ.
ವೃಶ್ಚಿಕರಾಶಿ
ಸೃಜನಶೀಲ ಕೆಲಸವು ನಿಮ್ಮನ್ನು ನಿರಾಳರನ್ನಾಗಿಸುತ್ತದೆ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ, ವ್ಯವಹಾರ ಕ್ಷೇತ್ರದಲ್ಲಿ ಎತ್ತರದ ಸ್ಥಾನವನ್ನು ಏರಲಿದ್ದೀರಿ, ಸಾಮಾಜಿಕ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ, ಹೊಸ ಜನರ ಭೇಟಿಯಿಂದ ಹಲವು ಅವಕಾಶಗಳು ದೊರೆಯಲಿದೆ, ಸಂಗಾತಿಯ ವರ್ತನೆ ನಿಮಗೆ ಬೇಸರವನ್ನು ತರಿಸಲಿದೆ.
ಧನಸುರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಹಣಕಾಸಿನ ವಿಚಾರದ ವ್ಯಾಜ್ಯ ನ್ಯಾಯಾಲಯದಲ್ಲಿ ಪರಿಹಾರ ಕಾಣಲಿದೆ, ನಿಮಗೆ ಹಲವು ಆರ್ಥಿಕ ಪ್ರಯೋಜನಗಳು ದೊರೆಯಲಿದೆ, ಹಿರಿಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ, ಕೆಲಸದ ವಿಚಾರದಲ್ಲಿ ನಿಮಗೆ ಗೆಲುವು ದೊರೆಯಲಿದೆ, ಬಿಡುವಿನ ಸಮಯವನ್ನು ಕುಟುಂಬಸ್ಥರಿಗಾಗಿ ಮೀಸಲಿಡಿ.
ಮಕರರಾಶಿ
ಒಡಹುಟ್ಟಿದವರು ಹಣಕಾಸಿನ ಸಹಾಯ ಕೇಳಲಿದ್ದಾರೆ, ವೈಯಕ್ತಿಕ ಭಾವನೆಗಳನ್ನು ಹಂಚಿಕೊಳ್ಳಲು ಇದು ಸಮಯವಲ್ಲ, ಏಕಾಂಗಿಯಾಗಿ ಸಮಯ ಕಳೆಯುವುದು ಉತ್ತಮ, ಮನಸ್ಸಿನ ಗೊಂದಲಗಳ ಬಗ್ಗೆ ಚಿಂತಿತರಾಗಬೇಡಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ದೂರ ಪ್ರಯಾಣ ಹಲವು ಲಾಭವನ್ನು ತರಲಿದೆ.
ಕುಂಭರಾಶಿ
ದುಶ್ಚಟವನ್ನು ದೂರ ಮಾಡಲು ಇದು ಉತ್ತಮ ಸಮಯ, ಹೊಸ ಜನರ ಮೂಲಕ ಹೊಸ ಆದಾಯಗಳು ಸೃಷ್ಟಿಯಾಗಲಿದೆ, ಅತ್ತೆಯ ಕಡೆಯಿಂದ ಕೆಟ್ಟ ಸುದ್ದಿ ಕೇಳುವಿರಿ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸ್ನೇಹಿತರ ಜೊತೆಗೆ ಮುಕ್ತವಾಗಿ ಮಾತನಾಡುವಿರಿ, ಒಂಟಿತನ ಹಾಗೂ ಖಿನ್ನತೆಯ ಭಾವನೆಯನ್ನು ಅಳಿಸಿ ಹಾಕಲು ಯತ್ನಿಸಿ.
ಮೀನರಾಶಿ
ಬಿಡುವಿನ ಸಮಯವನ್ನು ಆನಂದಿಸಿ, ಭೂಮಿ, ರಿಯಲ್ ಎಸ್ಟೇಟ್ ಹಾಗೂ ಸಾಂಸ್ಕೃತಿಕ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಮನೆಯಲ್ಲಿ ಸಂತೋಷ ಕೂಟ ನಡೆಯಲಿದೆ, ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ಹೊಸ ಒಪ್ಪಂದಕ್ಕೆ ಇಂದು ಸಹಿ ಹಾಕುವಿರಿ, ಹೊಸ ಹೂಡಿಕೆ ಸದ್ಯಕ್ಕೆ ಬೇಡ.
ಇದನ್ನೂ ಓದಿ : ಪೊಟಾಶಿಯಂ, ಗಂಧಕ ಮತ್ತು ರಕ್ತ ಚಂದನ ಬಳಸಿ ಕೆಂಪು ರಕ್ತ ಸೃಷ್ಟಿಸಿದ್ದ ಆ ಮಾಂತ್ರಿಕ..!
ಇದನ್ನೂ ಓದಿ : ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ..!
( Horoscope today astrological prediction for October 12