RCB vs KKR IPL 2021 : ಕೊಲ್ಕತ್ತಾ ಎದುರು ಸೋಲುಂಡ ಬೆಂಗಳೂರು

ಶಾರ್ಜಾ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಬೆಂಗಳೂರು ತಂಡ ನೀಡಿದ ಸುಲಭ ಗುರಿಯನ್ನು ಬೆನ್ನತಿದ ಕೆಕೆಆರ್‌ ತಂಡಕ್ಕೆ ಯಜುವೇಂದ್ರ ಚಹಲ್‌ ಹಾಗೂ ಹರ್ಷಲ್‌ ಪಟೇಲ್‌ ಆಘಾತವನ್ನು ನೀಡಿದ್ರು. ಆದರೂ ನಿತೇಶ್‌ ರಾಣಾ ಹಾಗೂ ಸುನಿಲ್‌ ನರೇನ್‌ ಅದ್ಬುತ ಆಟದಿಂದಾಗಿ ಕೆಕೆಆರ್‌ ಭರ್ಜರಿ ಗೆಲುವು ದಾಖಲಿಸಿದೆ.

ಶಾರ್ಜಾದ ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ ಆರಂಭಿಕರಾದ ವಿರಾಟ್‌ ಕೊಯ್ಲಿ ಹಾಗೂ ದೇವದತ್ತ ಪಡಿಕ್ಕಲ್‌ ಭರ್ಜರಿ ಜೊತೆಯಾಟ ನೀಡಿದ್ರು. ಆದರೆ 21 ರನ್‌ಗಳಿಸಿದ್ದ ಪಡಿಕ್ಕಲ್‌ ಫರ್ಗುಸನ್‌ಗೆ ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಭರತ್‌ ಹಾಗೂ ವಿರಾಟ್‌ ಕೊಯ್ಲಿ ಉತ್ತಮ ಆಟವಾಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಕೊಲ್ಕತ್ತಾದ ಸ್ಪಿನ್ನರ್‌ ಸುನಿಲ್‌ ನರೇನ್‌ ಬೆಂಗಳೂರು ತಂಡಕ್ಕೆ ಸತತ ಆಘಾತ ನೀಡಿದ್ರು. 9 ರನ್‌ಗಳಿಸಿದ್ದ ಭರತ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ ನರೇನ್‌ ನಂತರ 33 ರನ್‌ ಗಳಿಸಿದ ಕೊಯ್ಲಿಯನ್ನು ಬಲಿ ಪಡೆದರು. ಅಷ್ಟೇ ಅಲ್ಲಾ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿವಿಲಿಯರ್ಸ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ್ದರು. ಬೆಂಗಳೂರು ತಂಡದ ಯಾವೊಬ್ಬ ಆಟಗಾರರೂ ಕೂಡ ವಿಕೆಟ್‌ಗೆ ಕಚ್ಚಿಕೊಂಡು ಆಟವಾಡಿಲ್ಲ. ಅಂತಿಮವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 138 ರನ್‌ಗಳಿಸಿತ್ತು. ಕೋಲ್ಕತ್ತಾ ಪರ ಸುನಿಲ್‌ ನರೇನ್‌ 21/4, ಫರ್ಗುಸನ್‌ 30/2 ವಿಕೆಟ್‌ ಪಡೆದಿದ್ದಾರೆ.

ಕೊಯ್ಲಿ ಪಡೆದ ನೀಡಿದ್ದ ಸುಲಭ ರನ್‌ ಬೆನ್ನತ್ತಿಬೆಂಗಳೂರು ತಂಡ ನೀಡಿದ್ದ ಸುಲಭ ಗುರಿಯನ್ನು ಬೆನ್ನತಿದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡಕ್ಕೆ ಆರಂಭಿಕರಾದ ಶುಭಮನ್‌ ಗಿಲ್‌ ಹಾಗೂ ವೆಂಕಟೇಶ್‌ ಅಯ್ಯರ್‌ ಭರ್ಜರಿಗೆ ಜೊತೆಯಾಟ ನೀಡಿದ್ರು. ಗಿಲ್‌ 29 ರನ್‌ಗಳಿಸಿದ್ರೆ, ಅಯ್ಯರ್‌ 26ರನ್‌ ಸಿಡಿಸಿದ್ದಾರೆ. ರಾಹುಲ್‌ ತ್ರಿಪಾಠಿ ಎರಡಂಕಿ ರನ್‌ ದಾಟದಿದ್ರೂ ಕೂಡ ನಿತೀಶ್‌ ರಾಣಾ 23 ಹಾಗೂ ಸುನಿಲ್‌ ನರೇನ್‌ 26ರನ್‌ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. ಆದರೆ ಚಹಲ್‌, ಹರ್ಷಲ್‌ ಪಟೇಲ್‌ ಕೋಲ್ಕತ್ತಾ ತಂಡಕ್ಕೆ ಸತತವಾಗಿ ಆಘಾತವನ್ನು ನೀಡಿದ್ರು. ಆದರೆ ಅಂತಿಮವಾಗಿ ಶಕಿಬ್‌ ಹಲ್‌ ಹಸನ್‌ ಹಾಗೂ ಇಯೊನ್‌ ಮಾರ್ಗನ್‌ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ತಂಡಕ್ಕೆ ಗೆಲುವವನ್ನು ತಂದುಕೊಟ್ರು. ಈ ಮೂಲಕ ಕೋಲ್ಕತ್ತಾ ಕ್ವಾಲಿಫೈಯರ್‌ ಹಂತಕ್ಕೆ ತೇರ್ಗಡೆ ಹೊಂದಿದೆ. ಕೆಕೆಆರ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಗೆಲುವು ಕಂಡ್ರೆ ಫೈನಲ್‌ಗೆ ಎಂಟ್ರಿ ಕೊಡಲಿದೆ.

ಸಂಕ್ಷಿಪ್ತ ಸ್ಕೋರ್‌ :
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು :
ವಿರಾಟ ಕೊಯ್ಲಿ 39 , ದೇವದತ್ತ ಪಡಿಕ್ಕಲ್‌ 21, ಗ್ಲೆನ್‌ ಮ್ಯಾಕ್ಸ್‌ವೆಲ್‌ 15, ಎಬಿ ಡಿವಿಲಿಯರ್ಸ್‌ 13, ಶಹಬಾಜ್‌ ಅಹ್ಮದ್‌ 11, ಸುನಿಲ್‌ ನರೇನ್‌ 21/4, ಲುಕ್‌ ಫರ್ಗುಸನ್‌ 30/2

ಕೋಲ್ಕತ್ತಾ ನೈಟ್‌ ರೈಡರ್ಸ್‌ : ಶುಭಮನ್‌ ಗಿಲ್‌ 29, ವೆಂಕಟೇಶ್‌ ಅಯ್ಯರ್‌ 26 , ಸುನಿಲ್‌ ನರೆನ್‌ 26, ನಿತೇಶ್‌ ರಾಣಾ 23, ದಿನೇಶ್‌ ಕಾರ್ತಿಕ್‌ 10, ಯಜುವೇಂದ್ರ ಚಹಲ್‌ 16/2, ಹರ್ಷಲ್‌ ಪಟೇಲ್‌ 19/2, ಮೊಹಮ್ಮದ್‌ ಸಿರಾಜ್‌ 19/2

ಇದನ್ನೂ ಓದಿ : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

ಇದನ್ನೂ ಓದಿ : ಸಿಕ್ಸರ್‌ ಬಾರಿಸಿ CSK ಗೆಲ್ಲಿಸಿದ ಮಹೇಂದ್ರ ಸಿಂಗ್‌ ಧೋನಿ : ಕಣ್ಣೀರಿಟ್ಟ ಅಭಿಮಾನಿ ಬಾಲಕಿ

Royal Challengers Bangalore vs Kolkata Knight Riders Eliminator Match KKR won by 4 wickets

Comments are closed.