ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

Horoscope : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

- Advertisement -

ಮೇಷರಾಶಿ
ಸಂಪತ್ತನ್ನು ಸಂಗ್ರಹಿಸುವಲ್ಲಿ ತೊಂದರೆಯನ್ನು ಅನುಭವಿಸುವಿರಿ, ಕೆಟ್ಟ ಅಭ್ಯಾಸಗಳು ನಿಮ್ಮ ಮೇಲೆ ಪರಿಣಾಮವನ್ನು ಬೀರಲಿದೆ, ನಿಮ್ಮ ಉತ್ಸಾಹವನ್ನು ನಿಯಂತ್ರಿಸಿ, ಕೆಲಸದಲ್ಲಿ ಬದಲಾವಣೆ ಕಂಡು ಬರಲಿದೆ, ಗ್ರಹ ಗತಿಗಳು ಇಂದು ಅನುಕೂಲ ತರಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ವೃಷಭರಾಶಿ
ಹವ್ಯಾಸಗಳು ನಿಮ್ಮನ್ನು ನಿರಾಳವಾಗಿಸುತ್ತದೆ, ಆರ್ಥಿಕವಾಗಿ ನೀವಿಂದು ಸದೃಢರಾಗುವ ಸಾಧ್ಯತೆ, ಸಾಲ ನೀಡಿದ್ದ ಹಣವನ್ನು ಮರಳಿ ಪಡೆಯುವಿರಿ, ಹಠಾತ್‌ ಒಳ್ಳೆಯ ಸುದ್ದಿ ಕುಟುಂಬಕ್ಕೆ ಸಂತಸ ತರಲಿದೆ, ಹೊಸ ಯೋಜನೆಗೆ ಹಣ ಹೂಡಿಕೆಗೆ ಮೊದಲು ಎಚ್ಚರಿಕೆಯನ್ನು ವಹಿಸಿ, ನಿಮ್ಮ ಮನಸ್ಥಿತಿ ಹಾಳು ಮಾಡಲಿದೆ.

ಮಿಥುನರಾಶಿ
ದುಷ್ಚಟಗಳಿಂದ ದೂರವಿರಿ, ಹಿಂದಿನ ಸಂತಸ ನೆನಪು ನಿಮ್ಮನ್ನು ಕಾಡಲಿದೆ, ವೇಳಾಪಟ್ಟಿಯಲ್ಲಿ ಕೊನೆಯ ಹಂತದಲ್ಲಿ ಬದಲಾವಣೆ ನಡೆಯಲಿದೆ, ಕುಟುಂಬ ಸದಸ್ಯರ ಭೇಟಿಯಿಂದ ಸಂತಸ, ಪ್ರತಿಸ್ಪರ್ಧಿಗಳು ಕೆಟ್ಟ ಕೆಲಸವನ್ನು ಮಾಡಲಿದ್ದಾರೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ ಮೂಡಲಿದೆ.

ಕರ್ಕಾಟರಾಶಿ
ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡುಬರಲಿದೆ, ಕೆಲಸದ ಅವಧಿಯಲ್ಲಿ ಗುಪ್ತ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ. ಪ್ರೇಮಿಯನ್ನು ಸಮಾಧಾನಗೊಳಿಸಲು ಸಮಯ ತೆಗೆದುಕೊಳ್ಳುವಿರಿ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ ಮೂಡಲಿದೆ, ಸಹೋದ್ಯೋಗಿಗಳ ನೆರವು.

ಸಿಂಹರಾಶಿ
ನಿರಾಸೆಯ ಮನೋಭಾವ ಪ್ರಗತಿ ಸಾಧಿಸಲು ತೊಡಕಾಗುತ್ತಿದೆ, ಚಿಂತೆ ನಿಮ್ಮ ಆಲೋಚನಾ ಶಕ್ತಿಯನ್ನು ಕುಂಟಿತಗೊಳಿಸಲಿದೆ, ವಿವೇಚನೆಯಿಂದ ಒಂದು ನಿರ್ದಿಷ್ಟ ಬದಲಾವಣೆ ದೊರೆಯಲಿದೆ, ಅನುಕೂಲ ಗ್ರಹಗಳು ನಿಮಗೆ ಸಂತಸವನ್ನು ತರಲಿದೆ, ಕೆಲಸವನ್ನು ಯಾವುದೇ ಕಾರಣಕ್ಕೂ ಮುಂದೂಡಬೇಡಿ.

ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?

ಕನ್ಯಾರಾಶಿ
ದೈಹಿಕ ಸಮಸ್ಯೆ ಪರಿಹಾರಕ್ಕೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ, ಹಿಂದಿನ ಹೂಡಿಕೆಯಿಂದ ಅಧಿಕ ಲಾಭ, ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ, ವ್ಯಾವಹಾರಿಕವಾಗಿ ಲಾಭವನ್ನುತರಲಿದೆ, ಬಾಕಿ ಉಳಿದಿದ್ದ ಕೆಲಸವನ್ನು ಇಂದೆ ಮುಗಿಸಲು ಪ್ರಯತ್ನಿಸಿ, ಸ್ನೇಹಿತರಿಗೆ ಸಹಕಾರದ ನೆರವು ನೀಡುವಿರಿ, ದಿನಾಂತ್ಯಕ್ಕೆ ಶುಭ ವಾರ್ತೆ ಕೇಳುವಿರಿ.

ತುಲಾರಾಶಿ
ಯಾರ ಸಹಾಯವೂ ಇಲ್ಲದೇ ನೀವಿಂದು ಹಣಕಾಸಿನ ಲಾಭವನ್ನು ಪಡೆಯಲಿದ್ದೀರಿ, ಕೆಲಸದ ವಿಚಾರದಲ್ಲಿ ಹೊಂದಾಣಿಕೆಯೊಂದೇ ಪರಿಹಾರ, ನಿಮ್ಮ ಕಾರ್ಯವನ್ನು ಎಲ್ಲರೂ ಮೆಚ್ಚುಗೆ ಸೂಚಿಸಲಿದ್ದಾರೆ, ಬುದ್ದಿವಂತಿಕೆ ಯಿಂದ ಅಧಿಕ ಲಾಭ, ದೂರದ ಬಂಧುಗಳ ಭೇಟಿಯಿಂದ ನೆಮ್ಮದಿ,

ವೃಶ್ಚಿಕರಾಶಿ
ಕಷ್ಟದ ಪರಿಸ್ಥಿತಿಯನ್ನು ಅಸಮಧಾನಗೊಳ್ಳಬೇಡಿ, ಜೀವನ ಮೌಲ್ಯವನ್ನು ಅರಿತುಕೊಳ್ಳುವಿರಿ, ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡುಬರಲಿದೆ, ಕೆಲಸದ ಹೊರೆ ಕಡಿಮೆ ಮಾಡಲು ಮನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ, ದೂರದ ಊರುಗಳಿಗೆ ಪ್ರಯಾಣ ಹೋಗುವಿರಿ, ಅಕಾಲ ಭೋಜನ, ದೂರದೂರಿಗೆ ಸಂಚಾರ.

ಧನಸುರಾಶಿ
ನಿಮ್ಮ ಪ್ರೀತಿಯ ಕನಸು ನನಸಾಗುತ್ತೆ, ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಮನೆಯಲ್ಲಿ ಸಂತಸ, ಸಂಭ್ರಮ, ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ, ಯಾವುದೇ ಹೊಸ ಉದ್ಯಮಕ್ಕೆ ಸಹಿ ಮಾಡುವ ಮೊದಲು ಎಚ್ಚರವಹಿಸಿ, ನಿಮ್ಮ ಪ್ರಯತ್ನಗಳು ಹಾಳಾಗುವ ಸಾಧ್ಯತೆ ಕಂಡುಬರಲಿದೆ.

ಮಕರರಾಶಿ
ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ದಿನ, ಹರ್ಷಚಿತ್ತದ ಮನಸ್ಥಿತಿಯು ನಿಮಗೆ ಟಾನಿಕ್‌ ನೀಡಲಿದೆ, ಹೂಡಿಕೆ ಮಾಡಿದ ಜನರು ಅಧಿಕ ಲಾಭವನ್ನು ತಂದುಕೊಡಲಿದೆ, ಮನೆಯಲ್ಲಿ ಶುಭ ಸಮಾರಂಭಗಳು ನೆರೆವೇರಲಿದೆ, ಬರಬೇಕಾದ ಹಳೆಯ ಬಾಕಿ ವಸೂಲಿಯಾಗಲಿದೆ. ಸಂಗಾತಿಯೊಂದಿಗೆ ಸುಂದರವಾದ ಪ್ರಣಯದ ದಿನ .

ಕುಂಭರಾಶಿ
ಸ್ನೇಹಿತರೊಂದಿಗೆ ಮುಕ್ತವಾಗಿ ವ್ಯವಹರಿಸುವಿರಿ, ಹಣಕಾಸಿನ ವ್ಯಯವಾಗದಂತೆ ಎಚ್ಚರಿಕೆಯನ್ನು ವಹಿಸಿ, ಪಾಲುದಾರಿಕೆಯ ವ್ಯವಹಾರವು ಹೆಚ್ಚು ಲಾಭವನ್ನು ತಂದುಕೊಡಲಿದೆ, ಕೆಲಸ ಕಾರ್ಯಗಳು ನಿಮ್ಮನ್ನು ಅಚ್ಚರಿಗೊಳಿಸಲಿದೆ, ಹಾಸ್ಯದ ಚರ್ಚೆ ಮನಸಿಗೆ ಹಿತವನ್ನು ನೀಡಲಿದೆ, ಹಳೆಯ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಲಿದೆ.

ಮೀನರಾಶಿ
ಮನರಂಜನೆ ಹಾಗೂ ವಿನೋದದ ದಿನ, ನಾನಾ ಮಾರ್ಗಗಳ ಮೂಲ ಆರ್ಥಿಕ ಲಾಭ ದೊರೆಯಲಿದೆ, ಸಂಪೂರ್ಣ ಸತ್ಯವನ್ನು ಅರಿತುಕೊಳ್ಳುವಿರಿ, ನಿಮ್ಮ ಸಾಮರ್ಥ್ಯ ಸಮಸ್ಯೆಗಳಿಗೆ ಮುಕ್ತಿಯನ್ನು ದೊರೆಕಿಸಿಕೊಡಲಿದೆ, ಸಂಗಾತಿಯು ನಿಮ್ಮ ಪ್ರೀತಿಗಾಗಿ ಹಂಬಲಿಸಲಿದ್ದಾರೆ, ಸಂಜೆಯ ವೇಳೆಯಲ್ಲಿ ವಿಶೇಷವಾದುದನ್ನು ಪಡೆಯುವಿರಿ.

ಇದನ್ನೂ ಓದಿ : ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular