ಶಿವರಾತ್ರಿಯಲ್ಲಿ ಪೂಜೆ ಮಾಡಿದ್ರೆ ಒಲಿತಾನೆ ಶಿವ ; ಸಾವಿರ ಲಿಂಗವಾಗಿ ನೆಲೆನಿಂತ ಮಹಾದೇವ

  • ವಂದನ ಕೊಮ್ಮುಂಜೆ

ಎಲ್ಲಿಲ್ಲ ಹೇಳಿ ಆ ಮಹಾದೇವ. ಶಿವನನ್ನು ಸರ್ವಾಂತರಯಾಮಿ ಅಂತಾರೆ. ಆತನಿಲ್ಲದ ಜಾಗವೇ ಇಲ್ಲ ಅನ್ನೋದು ಭಕ್ತರ ಮಾತು. ನೀವು ಇಲ್ಲಿಗೆ ಬಂದ್ರೆ ಇದನ್ನು ಅಕ್ಷರಶಹಃ ಒಪ್ಪಿಕೊಳ್ಳುತ್ತೀರ. ಇಲ್ಲಿ ಕಂಡಲೆಲ್ಲಾ ಶಿವಲಿಂಗಗಳೇ. ಸಾವಿರಾರು ಲಿಂಗ ರೂಪದಲ್ಲಿ ಶಿವ ಇಲ್ಲಿ ನೆಲೆನಿಂತಿದ್ದಾನೆ. ಇದು ದೇವಾಲಯವಲ್ಲ ಅದಕ್ಕಿಂತಲೂ ಪವಿತ್ರ ಕ್ಷೇತ್ರ. ಯಾಕಂದ್ರೆ ಇಲ್ಲಿ ಪ್ರಕೃತಿಯೇ ಶಿವನಿಗೆ ಅಭ್ಯಂಗ ಮಾಡುತ್ತೆ.

ಹೌದು ಹೀಗೊಂದು ಪವಿತ್ರ ಹಾಗೂ ವಿಸ್ಮಯಕಾರಿ ಪ್ರದೇಶ ನಮ್ಮ ಕರ್ನಾಟಕದಲ್ಲಿಯೇ ಇದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೋಕಿನಿಂದ 14 ಕಿಲೋ ಮೀಟರ್ ದೂರದಲ್ಲಿದೆ ಈ ಪವಿತ್ರ ತೀರ್ಥ ಕ್ಷೇತ್ರ. ಇದನ್ನು ಸಹಸ್ರಲಿಂಗ ಅಂತಾನೇ ಕರೆಯಲಾಗುತ್ತೆ. ಇದು ಶಿರಸಿಯ ಶಾಲ್ಮಲಾ ನದಿಯ ದಂಡೆಯಲ್ಲಿದೆ .

ನದಿಯ ಕಲ್ಲುಗಳಲ್ಲಿ ಶಿವಲಿಂಗವನ್ನು ಕೆತ್ತಲಾಗಿದೆ. ಯಾವಾಗ ನದಿಯ ಹರಿವು ಕಡಿಮೆಯಾಗುತ್ತೋ ನದಿಯ ಕಲ್ಲಿನ ಮೇಲಿನ ಶಿವಲಿಂಗ ಮೇಲಕ್ಕೆ ಕಾಣಿಸಿಕೊಳ್ಳೋಕೆ ಶುರುವಾಗುತ್ತೆ. ಅಂತಹ ದಿನದಲ್ಲಿ ಈ ಶಿವಲಿಂಗಗಳಿಗೆ ಪೂಜೆ ಮಾಡೋಕೆ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ.

ಶಿವರಾತ್ರೆಯಲ್ಲಂತು ಇಲ್ಲಿಗೆ ಬರೋದೇ ಒಂದು ಹಬ್ಬ. ಶಿವರಾತ್ರಿಯಂದು ಶಿವನನ್ನು ಫೂಜಿಸಿ ಇಷ್ಟಾರ್ಥವನ್ನು ಈಡೇರಿಸಿಕೊಳ್ಳೋಕೆ ಲಕ್ಷಾಂತರ ಮಂದಿ ಇಲ್ಲಿ ಸೇರುತ್ತಾರೆ. ಅಂದು ಈ ಪ್ರಕೃತಿ ನಡುವೆ ನೆಲೆ ನಿಂತ ಶಿವನನ್ನು ಪೂಜಿಸಿದ್ರೆ ಕಷ್ಟಗಳು ಕರಗಿ ಹೋಗುತ್ತೆ ಅನ್ನೋ ನಂಬಿಕೆ ಜನರದ್ದು.

ಇನ್ನು ಈ ಸಹಸ್ರಲಿಂಗಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಕ್ರಿಶ 1678 ರಲ್ಲಿ ಶಿರಸಿಯ ರಾಜ ಸದಾಶಿವರಾಯ ಈ ಶಿವಲಿಂಗಳನ್ನು ಕೆತ್ತಿಸಿದ ಅಂತ ಹೇಳಲಾಗುತ್ತೆ. ಈತ ಪರಮ ಶಿವ ಭಕ್ತ . ಹೀಗಾಗಿ ಶಿವನನ್ನು ಒಲಿಸಲು ಈ ಲಿಂಗಗಳ ನಿರ್ಮಾಣ ಮಾಡಿದ ಅಂತ ಹೇಳುತ್ತೆ ಇತಿಹಾಸ.

ಇನ್ನು ಇಲ್ಲಿಗೆ ಹೋಗಬೇಕಾದ್ರೆ ಶಿರಸಿಗೆ ಹೋಗಲೇ ಬೇಕು. ಇಲ್ಲಿಗೆ ಹೋಗೋಕೆ ಸರ್ಕಾರಿ ವಾಹನಗಳು ಲಭ್ಯವಿಲ್ಲ. ಬದಲಾಗಿ ಸಿರಸಿಯಿಂದ ಖಾಸಗಿ ಜೀಪ್ ವ್ಯವಸ್ಥೆ ಇದೆ. ಅದರಲ್ಲೂ ನಿಮ್ಮ ಸ್ವಂತ ವಾಹನ ಇದ್ರಂತು ಈ ಸ್ಥಳವನ್ನು ಚೆನ್ನಾಗಿ ನೋಡ ಬಹುದು. ಇನ್ನು ಇಲ್ಲಿ ಯಾವುದೇ ಉಪಹಾರ ಕೇಂದ್ರಗಳಿಲ್ಲ . ಆದ್ರಿದಂದ ನೀವು ನಿಮ್ಮ ಆಹಾರವನ್ನು ನೀವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಾರೆ ಪ್ರಕೃತಿಯೇ ಈಶ್ವರನನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸ್ಥಳಕ್ಕೆ ಒಮ್ಮೆಯಾದ್ರೂ ನೀವು ಬೇಟಿ ನೀಡಿ. ಶಿವನ ಕೃಪೆಗೆ ಪಾತ್ರರಾಗಿ.

The holy and awe-inspiring shrine of Sahasralingheshwara is located in Sirsi taluk of Uttara Kannada district.

Comments are closed.