ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ಚಿಂತೆ ನೆಮ್ಮದಿಗೆ ಭಂಗ ತರಲಿದೆ

Horoscope : ದಿನಭವಿಷ್ಯ : ಚಿಂತೆ ನೆಮ್ಮದಿಗೆ ಭಂಗ ತರಲಿದೆ

- Advertisement -

ಮೇಷರಾಶಿ
ನಿಮ್ಮ ಸಣ್ಣ ಕೋಪವು ನಿಮ್ಮನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಬಹುದು, ಬ್ಯಾಂಕ್‌ ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಹೊಸ ಆಲೋಚನೆಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಕೆಲಸವನ್ನು ಮುಂದೂಡುವುದರಿಂದ ಸಮಸ್ಯೆ ಎದುರಾಗಲಿದೆ, ನಿಮ್ಮ ಭಾವನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ.

ವೃಷಭರಾಶಿ
ಧೂಮಪಾನವನ್ನು ತ್ಯೆಜಿಸಿ, ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸಿ, ಹಲವು ಮೂಲಗಳಿಂದ ಹಣದ ಸಹಕಾರ ದೊರೆಯಲಿದೆ, ಪ್ರೇಮ ಜೀವನವು ಅದ್ಬುತವಾಗಿರಲಿದೆ, ಪಾಲುದಾರಿಕೆಯ ವ್ಯವಹಾರಕ್ಕೆ ಕೈ ಹಾಕಬೇಡಿ, ಹೊಸ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆಯನ್ನು ಪಡೆಯುವಿರಿ, ಸಂಗಾತಿಯ ಸಹಕಾರ ದೊರೆಯಲಿದೆ.

ಮಿಥುನರಾಶಿ
ಅತಿಯಾದ ಮಾನಸಿಕ ಚಿಂತೆ ನೆಮ್ಮದಿಗೆ ಭಂಗ ತರಬಹುದು, ಆತಂಕ, ಚಿಂತೆ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ, ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ವೃತ್ತಿಯಲ್ಲಿ ನಿಮ್ಮ ಪಾಂಡಿತ್ಯವನ್ನು ಪರೀಕ್ಷಿಸಲಾಗುವುದು, ಕುಟುಂಬದ ಅಗತ್ಯತೆಯನ್ನು ಪೂರೈಸುವಾಗ ನಿಮಗೆ ವಿರಾಮ ನೀಡಲು ಮರೆಯಬೇಡಿ.

ಕರ್ಕಾಟಕರಾಶಿ
ಉದ್ಯೋಗ, ವ್ಯವಹಾರದಲ್ಲಿ ಇತರರ ಸಹಕಾರ ದೊರೆಯಲಿದೆ, ಹಿಂದೆ ಮಾಡಿದ ಅನಗತ್ಯ ಖರ್ಚು ತಲೆನೋವು ತರಿಸಲಿದೆ, ಕೌಟುಂಬಿಕ ಪರಿಸ್ಥಿತಿಗಳಿಂದಾಗಿ ಗೆಳತಿ ಕೋಪಗೊಳ್ಳಬಹುದು, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಆಧ್ಯಾತ್ಮದ ಕಡೆಗೆ ಒಲವು ಮೂಡಲಿದೆ ಅತಿಯಾದ ಚಿಂತೆಯನ್ನು ದೂರ ಮಾಡಿಕೊಳ್ಳಿ.

ಸಿಂಹರಾಶಿ
ಧ್ಯಾನ ಹಾಗೂ ಯೋಗವು ಹೆಚ್ಚು ಲಾಭವನ್ನು ತರಲಿದೆ, ಮಗುವಿನ ಮೂಲಕ ಹಣಕಾಸಿನ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ, ನಿಮ್ಮ ಮಗುವಿನ ಬಗ್ಗೆ ಹೆಮ್ಮೆ ಪಡುತ್ತೀರಿ, ಅಧ್ಯಯನಕ್ಕಾಗಿ ಹೆಚ್ಚಿನ ವೆಚ್ಚವನ್ನು ಮಾಡುವಿರಿ, ಪೋಷಕರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ, ಹೊಸ ಆಲೋಚನೆಗಳು ಲಾಭವನ್ನು ತಂದುಕೊಡಲಿದೆ, ವ್ಯಾಪಾರ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯ ಪ್ರಯೋಜನ ದೊರೆಯಲಿದೆ.

ಕನ್ಯಾರಾಶಿ
ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ, ಸಂತೋಷವು ನಿಮಗೆ ನಿರಾಸೆಗಿಂತಲೂ ಹೆಚ್ಚಿನ ಸಂತಸವನ್ನು ತರಲಿದೆ, ಆರ್ಥಿಕವಾಗಿ ಮಿಶ್ರದಿನ, ಕಷ್ಟಕರ ದಿನಗಳು ಕಳೆದು ಹೋಗುತ್ತದೆ, ಕುಟುಂಬ, ಸ್ನೇಹಿತರೊಂದಿಗೆ ಸಂತೋಷವನ್ನು ನೀಡುತ್ತದೆ, ಮನೆಯನ್ನು ಸ್ವಚ್ಚಗೊಳಿಸುವ ಮೂಲಕ ಸಮಯವನ್ನು ಕಳೆಯುವಿರಿ, ಸಂಗಾತಿಯೊಂದಿಗೆ ವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ತುಲಾರಾಶಿ
ಪ್ರೀತಿ ಪಾತ್ರರಿಂದ ಆರ್ಥಿಕ ಪ್ರಯೋಜನವನ್ನು ಪಡೆಯಲಿದ್ದೀರಿ, ಸ್ನೇಹಿತರೊಂದಿಗೆ ಸ್ಮರಣೀಯ ಅವಧಿಯನ್ನು ಕಳೆಯಲಿದ್ದೀರಿ, ಚೆನ್ನಾಗಿ ಯೋಚಿಸಿ ಕಚೇರಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ, ನಿಮ್ಮ ಮನಸ್ಸಿನಲ್ಲಿ ಉದ್ವೇಗ ಆವರಿಸಲಿದೆ, ಜೀವನದ ಜಟಿಲತೆಯನ್ನು ಅರ್ಥ ಮಾಡಿಕೊಳ್ಳು ಕುಟುಂಬದ ಹಿರಿಯರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯಿಂದ ಅದ್ಬುತವಾದ ಸುದ್ದಿ ಸಿಗುವ ಸಾಧ್ಯತೆಯಿದೆ.

ವೃಶ್ಚಿಕರಾಶಿ
ಹಾಸ್ಯ ಪ್ರಜ್ಞೆಯು ನಿಮ್ಮ ಕೌಶಲ್ಯವನ್ನು ಅಭಿವೃದ್ದಿ ಪಡಿಸಲು ಪ್ರೋತ್ಸಾಹಿಸುತ್ತದೆ, ಮನೆಗೆ ಸಂಜೆಯ ವೇಳೆಯಲ್ಲಿ ಸಂಬಂಧಿಕರು ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ, ಇತರರ ಸಲಹೆಯನ್ನು ಆಲಿಸಿ, ಆಸ್ತಿ ವಿಚಾರದಲ್ಲಿ ಲಾಭವನ್ನು ಪಡೆದುಕೊಳ್ಳಲಿದ್ದೀರಿ, ಮನೆಯವರ ಜೊತೆ ಹೊಂದಾಣಿಕೆ ಅಗತ್ಯ, ಮದುವೆಯ ವಿಚಾರದಲ್ಲಿ ನಿಮಗೆ ಶುಭ ಸುದ್ದಿಯೊಂದು ದೊರೆಯಲಿದೆ.

ಧನಸುರಾಶಿ
ನಿಮ್ಮ ಮಗುವಿನ ಸ್ವಭಾವವು ಹೊರಹೊಮ್ಮುತ್ತದೆ, ನೀವು ತಮಾಷೆಯ ಮನಸ್ಥಿತಿಯಲ್ಲಿರುತ್ತೀರಿ, ನಿಮ್ಮ ಹತ್ತಿರವಿರುವ ಯಾರೊಂದಿಗಾದ್ರೂ ಜಗಳವಾಡಬಹುದು, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಖರ್ಚು ಮಾಡುತ್ತೀರಿ, ದೂರದೂರಿನ ಕರೆಯೊಂದು ನಿಮಗೆ ಸಂತಸವನ್ನು ತರಲಿದೆ, ಮಹಿಳೆಯರಿಂದ ಸಹಕಾರ ದೊರೆಯಲಿದೆ, ವೈವಾಹಿಕ ಜೀವನವು ವಿನೋದಮಯವಾಗಿರುವುದಿಲ್ಲ.

ಮಕರರಾಶಿ
ಹಣವನ್ನು ಉಳಿಸುವ ನಿಮ್ಮ ಆಲೋಚನೆ ಇಂದು ಫಲವನ್ನು ಕೊಡುತ್ತದೆ, ಇಂದು ನೀವು ಹೆಚ್ಚುವರಿ ಶಕ್ತಿಯನ್ನು ಹೊಂದಿರುತ್ತೀರಿ, ಉದ್ಯಮಿಗಳು ಪಾಲುದಾರರ ಬಗ್ಗೆ ಉಸ್ತುಕರಾಗಿರುತ್ತೀರಿ, ನಿಮ್ಮ ಪಾಲಿಗೆ ಇಂದು ಅದ್ಬುತವಾದ ದಿನ, ನಿಮ್ಮ ನ್ಯೂನ್ಯತೆಯನ್ನು ಮೌಲ್ಯ ಮಾಪನ ಮಾಡಿ, ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ, ನಿಮ್ಮ ವೈವಾಹಿಕ ಜೀವನ ಆನಂದವನ್ನು ತರಲಿದೆ.

ಕುಂಭರಾಶಿ
ಹೆಚ್ಚು ಆಶಾವಾದಿಯಾಗಿರಲು ನಿಮ್ಮನ್ನು ಪ್ರೇರೆಪಿಸಿ, ಆತ್ಮವಿಶ್ವಾಸ ಹಾಗೂ ನಮ್ಯತೆಯನ್ನು ಹೆಚ್ಚಿಸುತ್ತದೆ, ಭಯ, ದ್ವೇಷ, ಅಸೂಯೆಯಂತಹ ನಕರಾತ್ಮಕ ಭಾವನೆಗಳನ್ನು ಬಿಡಲು ಸಿದ್ದಪಡಿಸುತ್ತದೆ, ಕಮಿಷನ್‌ಗಳಿಂದ ಲಾಭಾಂಶಗಳನ್ನು ಪಡೆಯುತ್ತೀರಿ, ಸಂಗಾತಿಯ ಆರೋಗ್ಯವು ಸ್ವಲ್ಪ ಚಿಂತೆಯನ್ನು ಉಂಟು ಮಾಡುತ್ತದೆ, ಉದ್ಯಮಿಗಳು ನಿಮ್ಮ ಪಾಲುದಾರರ ಮೇಲೆ ಕಣ್ಣಿಡುವ ಸಾಧ್ಯತೆಯಿದೆ.

ಮೀನರಾಶಿ
ಸೃಜನಶೀಲ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ, ಕೆಲವು ಅಭ್ಯಾಸಗಳು ಮಾನಸಿಕ ಶಾಂತಿಗೆ ಮಾರಕವಾಗಬಹುದು, ನಿಮ್ಮ ಖರ್ಚುಗಳು ಅನಿರೀಕ್ಷಿತ ಏರಿಕೆ ನಿಮ್ಮ ಮಾನಸ್ಸಿನ ಶಾಂತಿಗೆ ಭಂಗವನ್ನು ತರುತ್ತದೆ, ವೃತ್ತಿಯಲ್ಲಿನ ಲೆಕ್ಕಾಚಾರಗಳು ಲಾಭದಾಯಕವಾಗಿರಲಿದೆ, ದೂರ ಪ್ರಯಾಣ, ಹೊಸ ಒಪ್ಪಂದ ಭವಿಷ್ಯಕ್ಕೆ ನೆರವಾಗಲಿದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ.

ಇದನ್ನೂ ಓದಿ : ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗಕ್ಕೆ ಮುಕ್ತಿ !

ಇದನ್ನೂ ಓದಿ : ಬೆಂಕಿ ಇಟ್ರು ಬಟ್ಟೆ ಸುಡಲ್ಲ.. ತೆಂಗಿನಕಾಯಿ ಪುಡಿ.. ನೀರು ಚಿಮುಕಿಸಿದರೆ ಜೋಳ ಅರಳುತ್ತೆ..! ನಿಂಬೆ ಹಣ್ಣು ಕುಣಿಯುತ್ತೆ..! ಭಾಗ-30

( Horoscope today astrological prediction for September 27)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular