ಭಾರತ್‌ ಬಂದ್‌ ಹಿನ್ನೆಲೆ : ಬೆಂಗಳೂರು ನಗರ ವಿವಿ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ

ಬೆಂಗಳೂರು : ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ( Bengaluru City University )ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

ಸಪ್ಟೆಂಬರ್‌ 27 ರಂದು ಸ್ನಾತಕ (ಯುಜಿ). ಸ್ನಾತಕೋತ್ತರ (ಪಿ.ಜಿ) ಹಾಗೂ ಬಿಎಡ್‌ ಪದವಿ ಪರೀಕ್ಷೆಗಳು ನಡೆಯಬೇಕಾಗಿತ್ತು. ಆದ್ರೆ ಇದೀಗ ಭಾರತ ಬಂದ್‌ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಮುಂದಿನ ಆದೇಶದ ವರೆಗೆ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಬೆಂಗಳೂರು ನಗರ ವಿವಿ ಕುಲಸಚಿವರಾದ ( ಮೌಲ್ಯಮಾಪನ) ಪ್ರೊ. ರಮೇಶ್‌ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಧಾರವಾಡ ವಿವಿ ಕೂಡ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಆದರೆ ಬೆಂಗಳೂರು ಉತ್ತರ ವಿವಿ ಮಾತ್ರ ಪರೀಕ್ಷೆಯನು ರದ್ದು ಮಾಡಿಲ್ಲ. ನಿಗದಿಯಂತೆಯೇ ಬೆಂಗಳೂರು ವಿವಿಯ ೬೬ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ. ಒಂದೊಮ್ಮೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನಾನುಕೂಲವಾಗಿ ಗೈರಾದ ವಿದ್ಯಾರ್ಥಿ ಗಳಿಗೆ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ನಾಳೆಯ ಪರೀಕ್ಷೆಯಿಂದ ಯಾವುದೇ ವಿನಾಯಿತಿ ಇಲ್ಲ ಎಂದು ವಿವಿ ಮೌಲ್ಯಮಾಪನ ಕುಲಸಚಿವರಾದ ಜನಾರ್ದನ್‌ ಅವರು ಮಾಹಿತಿ ನೀಡಿದ್ದಾರೆ.

( Bharat Bandh September 27 Bengaluru City VV Exams Postponed )

Comments are closed.