ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 09 ಡಿಸೆಂಬರ್‌ 2023: ದ್ವಾದಶರಾಶಿಗಳ ಮೇಲೆ ಚಿತ್ರ ನಕ್ಷತ್ರದ ಪ್ರಭಾವ ಈ ರಾಶಿಗಳಿಗೆ ಶುಭ

ದಿನಭವಿಷ್ಯ 09 ಡಿಸೆಂಬರ್‌ 2023: ದ್ವಾದಶರಾಶಿಗಳ ಮೇಲೆ ಚಿತ್ರ ನಕ್ಷತ್ರದ ಪ್ರಭಾವ ಈ ರಾಶಿಗಳಿಗೆ ಶುಭ

- Advertisement -

Horoscope Today : ದಿನಭವಿಷ್ಯ 09 ಡಿಸೆಂಬರ್‌ 2023 ಶನಿವಾರ. ದ್ವಾದಶರಾಶಿಗಳ ಮೇಲೆ ಇಂದು ಚಿತ್ರ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರ ತುಲಾ ರಾಶಿಗೆ ಸಾಗುವುದರಿಂದ ಶುಭ ಯೋಗಗಳು ಹಲವು ರಾಶಿಗಳು ಅನುಕೂಲ ಕಲ್ಪಿಸುತ್ತದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಬಿನ್ನಾಭಿಪ್ರಾಯವನ್ನು ಬಿಟ್ಟು ಸೌಹಾರ್ದವಾಗಿ ನಡೆದುಕೊಳ್ಳಿ. ಮಕ್ಕಳು ಕಡೆಯಿಂದ ನಿರಾಸೆ, ಯಾವುದೇ ಕಾರಣಕ್ಕೂ ಕೋಪಗೊಳ್ಳಬೇಡಿ. ಹೂಡಿಕೆಯ ವಿಚಾರದಲ್ಲಿ ಅತೀ ಹೆಚ್ಚು ಲಾಭ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ. ಚಿನ್ನಾಭರಣ ಖರೀದಿ ಸಾಧ್ಯತೆ.

ವೃಷಭರಾಶಿ ದಿನಭವಿಷ್ಯ
ನಿಮ್ಮ ಆರ್ಥಿಕ ಪರಿಸ್ಥಿತಿಯು ಶೀಘ್ರದಲ್ಲೇ ಸುಧಾರಿಸಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಸಂಗಾತಿಯ ಹುಟುಹಬ್ಬದ ದಿನದಂದೇ ಜಗಳ ಆಡುವ ಸಾಧ್ಯತೆಯಿದೆ. ದೂರ ಪ್ರಯಾಣ ನಿಮಗೆ ಶುಭವನ್ನು ತರಲಿದೆ. ಆಪ್ತ ಸ್ನೇಹಿತನ ಭೇಟಿಯಾಗವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ಉತ್ತಮ ಸಮಯ ಆರಂಭವಾಗಿದೆ. ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇಂದು ಎದುರಾಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಪ್ರಗತಿಯಿಂದ ಮನಸಿಗೆ ನೆಮ್ಮದಿ.

ಕರ್ಕಾಟಕರಾಶಿ ದಿನಭವಿಷ್ಯ
ನಿಮ್ಮ ಪ್ರೀತಿಯ ಕನಸು ಇಂದು ನನಸಾಗುತ್ತದೆ. ಔತಣ ಕೂಟಕ್ಕೆ ನಿಮ್ಮನ್ನು ಆಹ್ವಾನಿಸಲಿದ್ದಾರೆ. ಕಚೇರಿ ಅಥವಾ ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಮಾನಸಿಕ ನೆಮ್ಮದಿಯಾಗಿ ಯೋಗ, ಧ್ಯಾನವನ್ನು ಮಾಡುವುದು ಉತ್ತಮ.

ಸಿಂಹರಾಶಿ ದಿನಭವಿಷ್ಯ
ಆರೋಗ್ಯ ಸ್ಥಿತಿ ಉತ್ತಮವಾಗಿ ಇರಲಿದೆ. ಯಾವುದೇ ಕಾರಣಕ್ಕೂ ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಹೂಡಿಕೆ ಮಾಡುವುದು ಬೇಡ. ಪ್ರೇಮಿಗಳ ಪಾಲಿಗೆ ಇಂದು ಸ್ಮರಣೀಯವಾದ ದಿನ. ದಿನದ ಆರಂಭದಲ್ಲಿ ಆಲಸ್ಯ ನಿಮ್ಮ ಕಾಡಬಹುದು.

ಕನ್ಯಾರಾಶಿ ದಿನಭವಿಷ್ಯ
ಹೊಸ ಯೋಜನೆಯ ಬಗ್ಗೆ ನಿಮಗೆ ಆಸಕ್ತಿ ಮೂಡಲಿದೆ. ಮನೆಯ ಹಿರಿಯ ಸದಸ್ಯರ ಸಲಹೆ ಲಾಭವನ್ನು ತಂದುಕೊಡಲಿದೆ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ತುಲಾರಾಶಿ ದಿನಭವಿಷ್ಯ
ಆರ್ಥಿಕವಾಗಿ ಬಲಗೊಳ್ಳುತ್ತೀರಿ. ವ್ಯಾಪಾರಿಗಳಿಗೆ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ. ಪ್ರೇಮಿಗಳಿಗೆ ಸಂತಸದ ದಿನ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಶತ್ರುಗಳು ನಿಮ್ಮ ವಿರುದ್ದ ಸಂಚು ನಡೆಸಲಿದ್ದಾರೆ.

Horoscope Today 09 December 2023 Zodiac sign 
Image Credit to Original Source

ವೃಶ್ಚಿಕರಾಶಿ ದಿನಭವಿಷ್ಯ
ಅಸಭ್ಯ ವರ್ತನೆಯಿಂದ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾರಿಂದಲಾದರೂ ಸಾಲ ಪಡೆಯುವ ಯೋಚನೆಯಿದ್ದರೆ ಅದನ್ನು ಮುಂದೂಡುವುದು ಉತ್ತಮ. ಇತರರಿಗೆ ನೀಡಿದ ಹಣ ವಾಪಾಸ್‌ ಪಡೆಯಲು ಕಷ್ಟವಾಗುತ್ತದೆ. ಪಾಲುದಾರಿಕೆ ವ್ಯವಹಾರ ಆರಂಭಿಸಲು ಸೂಕ್ತ ಸಮಯವಲ್ಲ.

ಧನಸ್ಸುರಾಶಿ ದಿನಭವಿಷ್ಯ
ಶತ್ರುಗಳಿಂದ ಸಮಸ್ಯೆ ಎದುರಿಸುವಿರಿ. ವಿರೋಧಿಗಳಿಂದ ಪ್ರಶಂಸೆ ಪಡೆಯಲಿದ್ದೀರಿ. ಸರಕಾರದ ಯೋಜನೆಗಳ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ದೂರ ಪ್ರಯಾಣ ಶುಭದಾಯಕ.

ಇದನ್ನೂ ಓದಿ : 600 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ : ಸೋಲದೇವನಹಳ್ಳಿಯಲ್ಲಿ ಅಂತ್ಯಕ್ರೀಯೆ

ಮಕರರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ. ಇಂದು ಸಂಜೆ ಮನೆಗೆ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ. ಅಗತ್ಯ ವಸ್ತುಗಳ ಖರೀದಿಗೆ ಅಧಿಕ ಖರ್ಚುಗಳು ಆಗುವ ಸಾಧ್ಯತೆಯಿದೆ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ.

ಕುಂಭರಾಶಿ ದಿನಭವಿಷ್ಯ
ಕುಟುಂಬ ಸದಸ್ಯರಿಂದ ಮೋಸ ಹೋಗುವ ಸಾಧ್ಯತೆಯಿದೆ. ಸರಕಾರಿ ಅಧಿಕಾರಿಗಳು ಇಂದು ನಿಮಗೆ ಸಹಾಯವನ್ನು ಮಾಡುವರು. ಶತ್ರುಗಳಿಂದಾಗಿ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : BCCI WPL 2024 : ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಹೊಸ ರೂಪ : WPL ಸಮಿತಿ ರಚಿಸಿದ ಬಿಸಿಸಿಐ

ಮೀನರಾಶಿ ದಿನಭವಿಷ್ಯ
ಸಂಗಾತಿಯ ಸಲಹೆಯಂತೆ ವ್ಯವಹಾರ ಮುನ್ನೆಡೆಸಿ. ಯಾವುದೇ ಪ್ರಯಾಣವನ್ನು ನೀವು ರದ್ದು ಮಾಡುವ ಸಾಧ್ಯತೆಯಿದೆ. ಕುಟುಂಬದ ಹಿರಿಯ ಸದಸ್ಯರ ಜೊತೆಗೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಕುಟುಂಬದಲ್ಲಿ ಮಂಗಳ ಕಾರ್ಯಕ್ಕೆ ಸಿದ್ದತೆ ನಡೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 09 December 2023 Zodiac sign 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular