ಭಾರತ vs ದಕ್ಷಿಣ ಆಫ್ರಿಕಾ T20I ಸರಣಿ : ಲುಂಗಿ ಎನ್‌ಗಿಡಿ ಔಟ್‌

Lungi Ngidi ruled out IND vs SA T20I : ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಬೌಲರ್‌ ಲುಂಗಿ ಎನ್‌ಗಿಡಿ (Lungi Ngidi ruled out) ಪಾದದ ಉಳುಕಿಗೆ ಸಿಲುಕಿದ್ದು, ಇದಿಗ ಸರಣಿಯಿಂದಲೇ ಹೊರ ನಡೆದಿದ್ದಾರೆ. ಮಾತ್ರವಲ್ಲ ಡಿಸೆಂಬರ್ 26 ರಿಂದ ಆರಂಭವಾಗುವ 2 ಪಂದ್ಯಗಳ ಟೆಸ್ಟ್ ಸರಣಿಗೂ ಲುಂಗಿ ಎನ್‌ಗಿಡಿ ಆಡುವುದು ಅನುಮಾನ.

IND vs SA T20I : ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದದ T20I ಸರಣಿಗೂ ಮೊದಲೇ ದಕ್ಷಿಣ ಆಫ್ರಿಕಾಕ್ಕೆ ನಿರಾಸೆಯಾಗಿದೆ. ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಬೌಲರ್‌ ಲುಂಗಿ ಎನ್‌ಗಿಡಿ (Lungi Ngidi ruled out) ಪಾದದ ಉಳುಕಿಗೆ ಸಿಲುಕಿದ್ದು, ಇದಿಗ ಸರಣಿಯಿಂದಲೇ ಹೊರ ನಡೆದಿದ್ದಾರೆ. ಮಾತ್ರವಲ್ಲ ಡಿಸೆಂಬರ್ 26 ರಿಂದ ಆರಂಭವಾಗುವ 2 ಪಂದ್ಯಗಳ ಟೆಸ್ಟ್ ಸರಣಿಗೂ ಲುಂಗಿ ಎನ್‌ಗಿಡಿ ಆಡುವುದು ಅನುಮಾನ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಗಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಶುಕ್ರವಾರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದೆ. ಡಿಸೆಂಬರ್ 10 ರಿಂದ T20 ಸರಣಿ ಆರಂಭವಾಗಲಿದೆ. ಆರಂಭದಲ್ಲಿ ಲಿಂಗಿ ಎನ್‌ಗಿಡಿ ಅವರನ್ನು ಮೊದಲ ಎರಡು ಪಂದ್ಯಗಳಿಗೆ ಆಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಅವರನ್ನು CSA ಯ ವೈದ್ಯಕೀಯ ತಂಡ ಪರೀಕ್ಷೆಗೆ ಒಳಪಡಿಸಿದೆ.

Lungi Ngidi ruled out India vs South Africa t20 series CSA Replacement
Image Credit to Original Source

ಇದನ್ನೂ ಓದಿ :  IPL 2024 : ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಅಲ್ಲಾ, ಸೂರ್ಯಕುಮಾರ್‌ ಯಾದವ್‌ ನಾಯಕ ?

ಅಂತಿಮವಾಗಿ ವೈದ್ಯರ ತಂಡ ನೀಡಿದ ವರದಿಯ ಆಧಾರದ ಮೇಲೆ ಲುಂಗಿ ಎನ್‌ಗಿಡಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. 27 ವರ್ಷ ವಯಸ್ಸಿನ ಎನ್‌ಗಿಡಿ ತಂಡದಿಂದ ಹೊರಬಿದ್ದಿರುವುದು ದಕ್ಷಿಣ ಆಫ್ರಿಕಾ ತಂಡದ ನಿರಾಸೆಯಾಗಿದೆ. ಎನ್‌ಗಿಡಿ ಬದಲು ವೇಗಿ ಬ್ಯೂರಾನ್ ಹೆಂಡ್ರಿಕ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ವಿಶೇಷ ಕಾಳಜಿ : ಏನಿದು 18 ವಾರಗಳ ವಿಶಿಷ್ಟ ಕಾರ್ಯಕ್ರಮ

ಡರ್ಬನ್, ಜಿಕೆಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂರು T20 ಪಂದ್ಯಗಳು ನಡೆಯಲಿದೆ. ಸರಣಿಯಲ್ಲಿ ಎರಡು ಟೆಸ್ಟ್‌ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 26 ರಿಂದ ಸೆಂಚುರಿಯನ್ ಮೈದಾನದಲ್ಲಿ ಟೆಸ್ಟ್‌ ಪಂದ್ಯ ಆರಂಭಗಾಲಿದೆ. ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಂದು ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ ಆರಂಭವಾಗಲಿದೆ.

ವಿಶ್ವಕಪ್‌ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಇದೀಗ ಭಾರತ ವಿರುದ್ದದ ಸರಣಿಯನ್ನು ಆಡುತ್ತಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಏಡೆನ್‌ ಮಾರ್ಕ್ರಾಮ್‌ ಏಕದಿನ ಹಾಗೂ ಟಿ೨೦ ಸರಣಿಯ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ : BCCI WPL 2024 : ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಹೊಸ ರೂಪ : WPL ಸಮಿತಿ ರಚಿಸಿದ ಬಿಸಿಸಿಐ

T20I ಸರಣಿಗೆ ದಕ್ಷಿಣ ಆಫ್ರಿಕಾ ತಂಡ:
ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್‌ಜಿ (1 ನೇ ಮತ್ತು 2 ನೇ ಟಿ 20), ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಟಿ 1 ನೇ, ಮಹರಾಜ್ ಕೆಸೆನ್‌ಸೆನ್ (ಟಿ 20 ). , ಡೇವಿಡ್ ಮಿಲ್ಲರ್, ಬ್ಯೂರಾನ್ ಹೆಂಡ್ರಿಕ್ಸ್ (1ನೇ ಮತ್ತು 2ನೇ ಟಿ20 ), ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್

Lungi Ngidi ruled out India vs South Africa t20 series CSA Replacement
Image Credit to Original Source

ruled out India vs South Africa t20 series CSA Replacement

Comments are closed.