ದಿನಭವಿಷ್ಯ 16 ನವೆಂಬರ್‌ 2023 : ಸುಕರ್ಮ ಯೋಗದಿಂದ ಯಾವ ರಾಶಿಗೆ ಶುಭ

Horoscope Today : ದಿನಭವಿಷ್ಯ 16 ನವೆಂಬರ್‌ 2023 ಗುರುವಾರ. ದ್ವಾದಶರಾಶಿಗಳ ಮೇಲೆ ಇಂದು ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸುಕರ್ಮ ಯೋಗದಿಂದ ಹಲವು ರಾಶಿಯವರಿಗೆ ಅನುಕೂಲವಿದೆ.

Horoscope Today : ದಿನಭವಿಷ್ಯ 16 ನವೆಂಬರ್‌ 2023 ಗುರುವಾರ. ದ್ವಾದಶರಾಶಿಗಳ ಮೇಲೆ ಇಂದು ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸುಕರ್ಮ ಯೋಗದಿಂದ ಹಲವು ರಾಶಿಯವರಿಗೆ ಅನುಕೂಲವಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಮನಸ್ಸಿನಲ್ಲಿನ ಕೆಲವು ಗೊಂದಲಗಳಿಗೆ ಪರಿಹಾರ ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಕೌಟುಂಬಿಕ ವಿಚಾರದಲ್ಲಿ ಎಚ್ಚರವಾಗಿರಿ. ಕಠಿಣ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದಾಗಲಿದೆ.

ವೃಷಭರಾಶಿ ದಿನಭವಿಷ್ಯ
ಹಿರಿಯ ಸಲಹೆಯ ಮೇರೆಗೆ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮುಗಿಸುತ್ತೀರಿ. ಜೀವನದಲ್ಲಿ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಉದ್ಯೋಗಿಗಳ ಕೆಲಸ ಕಾರ್ಯಗಳು ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾಗಲಿದೆ. ಪ್ರೀತಿಯ ಜೀವನ ಸುಖಮಯವಾಗಿ ಇರುತ್ತದೆ.

ಮಿಥುನರಾಶಿ ದಿನಭವಿಷ್ಯ
ಜೀವನ ಸಂಗಾತಿಯು ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಸಂಬಂಧಿಕರ ಭೇಟಿಯಿಂದ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಕುಟುಂಬದ ಸದಸ್ಯರ ಜೊತೆಗೂಡಿ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ದೂರದ ಬಂಧುಗಳ ಭೇಟಿ ಮನಸಿಗೆ ಸಂತಸ ತರಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಉದ್ಯೋಗಿಗಳು ತಮ್ಮ ಜಾಣ್ಮೆಯಿಂದ ಇತರರನ್ನು ಮೆಚ್ಚಿಸಲಿದ್ದಾರೆ. ನೀವು ಈ ಹಿಂದೆ ಮಾಡಿರುವ ಹೂಡಿಕೆಯಿಂದ ಇಂದು ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಹಣದ ಕೊರತೆ ಉಂಟಾಗಲಿದೆ. ಯಾವುದೇ ವಿಚಾರದಲ್ಲಿಯೂ ಯೋಚಿಸಿ ಮಾತನಾಡುವುದು ಒಳಿತು.

Horoscope Today 16 November 2023 Zordic Sign 
Image Credit to Original Soure

ಸಿಂಹರಾಶಿ ದಿನಭವಿಷ್ಯ
ತಾಯಿಯ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ. ವಿರೋಧಿಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳ ಜೊತೆಗೆ ನೀವು ಎಚ್ಚರಿಕೆಯಿಂದ ಇರಬೇಕು. ಎಲ್ಲಾ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುವುದರಿಂದ ಮನಸಿಗೆ ನೆಮ್ಮದಿ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ

ಕನ್ಯಾರಾಶಿ ದಿನಭವಿಷ್ಯ
ಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಸ್ನೇಹಿತರ ವಿಚಾರದಲ್ಲಿ ನೀವು ಎಚ್ಚರವಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣ ವಿಚಾರದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ ತರಲಿದೆ.

ತುಲಾರಾಶಿ ದಿನಭವಿಷ್ಯ
ತಂದೆ ಮಾರ್ಗದರ್ಶನದಲ್ಲಿ ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನೀವು ಯಶಸ್ವಿ ಆಗುತ್ತೀರಿ. ಸ್ನೇಹಿತರ ವಿಚಾರದಲ್ಲಿ ನೀವು ಬಹಳ ಎಚ್ಚರವಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನ ವಿಚಾರದಲ್ಲಿ ಸಮಸ್ಯೆ. ಕುಟುಂಬದಲ್ಲಿ ಯಾರೊಂದಿಗೂ ಜಗಳವಾಡಬೇಡಿ.

ವೃಶ್ಚಿಕರಾಶಿ ದಿನಭವಿಷ್ಯ
ಉದ್ಯೋಗವನ್ನು ಹುಡುಕುತ್ತಿರುವವರು ಇಂದು ಶುಭಫಲಗಳನ್ನು ಪಡೆಯುತ್ತಾರೆ. ತಾಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಯಿದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ. ಹಿರಿಯ ಸದಸ್ಯ ಸಹಕಾರದಿಂದ ಸಮಸ್ಯೆಗಳು ಪರಿಹಾರವಾಗಲಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ವಿಶ್ವದಾಖಲೆಯ ಶತಕ, ವಿಶ್ವಕಪ್‌ 2023 ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಧನಸ್ಸುರಾಶಿ ದಿನಭವಿಷ್ಯ
ಸಹೋದ್ಯೋಗಿಗಳ ಜೊತೆಗೆ ವ್ಯವಹಾರದ ಕ್ಷೇತ್ರದಲ್ಲಿ ಜಗಳವಾಡುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಸಹಕಾರದಿಂದ ಮನಸಿಗೆ ನೆಮ್ಮದಿ. ವ್ಯಾಪಾರಿಗಳು ಇಂದು ನಿರೀಕ್ಷಿತವಾದ ಲಾಭವನ್ನು ಪಡೆಯುತ್ತೀರಿ. ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆಯಿದೆ.

ಮಕರರಾಶಿ ದಿನಭವಿಷ್ಯ
ಉದ್ಯೋಗಗಳು ವ್ಯವಹಾರ ಮಾಡಲು ಬಯಸಿದರೆ ಕೈಗೂಡಲಿದೆ. ಕುಟುಂಬ ಸದಸ್ಯರ ಜೊತೆಗೆ ಆಧ್ಯಾತ್ಮಿಕ ಪ್ರಯಾಣಕ್ಕೆ ತೆರಳುವ ಸಾಧ್ಯತೆಯಿದೆ. ವ್ಯವಹಾರ ಕ್ಷೇತ್ರದಲ್ಲಿ ಅನಿರೀಕ್ಷಿತವಾದ ಲಾಭ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

ಕುಂಭರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಭಡ್ತಿಯ ವಿಚಾರದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳಬಹುದು. ಶತ್ರುಗಳ ಮೇಲೆ ಕೋಪಗೊಳ್ಳುತ್ತೀರಿ. ಇತರರು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತೀರಿ. ನಿಮ್ಮ ಪ್ರೇಮ ಜೀವನವು ಸುಖಮಯವಾಗಿ ಇರಲಿದೆ.

ಮೀನರಾಶಿ ದಿನಭವಿಷ್ಯ
ಕೌಟುಂಬಿಕ ವಾತಾವರಣ ಉತ್ತಮವಾಗಿ ಇರಲಿದೆ. ವ್ಯಾಪಾರಿಗಳು ಹೊಸ ಸವಾಲುಗಳನ್ನು ಎದುರಿಸಲಿದ್ದಾರೆ. ಯಾವುದೇ ಸಮಸ್ಯೆಯಿಂದ ಧೈರ್ಯದಿಂದ ಎದುರಿಸಬೇಕು. ಹೊಸ ಹೂಡಿಕೆ ಇಂದು ನಿಮ್ಮ ಕೈ ಹಿಡಿಯಲಿದೆ.

Horoscope Today 16 November 2023 Zordic Sign 

Comments are closed.