ದಿನಭವಿಷ್ಯ 29 ಅಕ್ಟೋಬರ್ 2023 : ಗೃಹಣ ಮೋಕ್ಷ, ಸಿದ್ಧಿ ಯೋಗದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ

Horoscope Today : ದ್ವಾದಶ ರಾಶಿಗಳ ಮೇಲೆ ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಗೃಹಣ ಮೋಕ್ಷದ (Lunar Eclipse) ಜೊತೆಗೆ ಸಿದ್ದಿಯೋಗ (siddhi Yoga) ಹಲವು ರಾಶಿಗಳಿಗೆ ಶುಭಫಲವನ್ನು ತರಲಿದೆ.

Horoscope Today : ದಿನಭವಿಷ್ಯಇಂದು ಅಕ್ಟೋಬರ್ 29 2023 ದ್ವಾದಶ ರಾಶಿಗಳ ಮೇಲೆ ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಗೃಹಣ ಮೋಕ್ಷದ (Lunar Eclipse) ಜೊತೆಗೆ ಸಿದ್ದಿಯೋಗ (siddhi Yoga) ಹಲವು ರಾಶಿಗಳಿಗೆ ಶುಭಫಲವನ್ನು ತರಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆ ಎದುರಾಗಲಿದೆ. ಕುಟುಂಬದಲ್ಲಿ ಯಾರೊಂದಿಗೆ ವಿವಾದ ಹೊಂದಿದ್ದರೆ ಅದು ಕೊನೆಗೊಳ್ಳಲಿದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ.

ವೃಷಭ ರಾಶಿ ದಿನಭವಿಷ್ಯ
ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸಿದ್ರೆ ನಿಮಗೆ ಶುಭಫಲ ದೊರೆಯಲಿದೆ. ಶತ್ರುಗಳು ನಿಮಗೆ ಹೊಸ ಸಮಸ್ಯೆಯನ್ನು ತಂದೊಡ್ಡಲಿದ್ದಾರೆ. ಯಾವುದೇ ಕಾರಣಕ್ಕೂ ಎಚ್ಚರವಾಗಿರಿ. ಸಂಜೆಯ ವೇಳೆ ದೂರ ಪ್ರಯಾಣಕ್ಕೆ ಅವಕಾಶವಿದೆ.

ಮಿಥುನ ರಾಶಿ ದಿನಭವಿಷ್ಯ
ಸ್ನೇಹಿತರ ಸಹಕಾರಿದಂದ ಬಾಕಿ ಉಳಿದ ಹಣವನ್ನು ವಾಪಾಸ್‌ ಪಡೆಯುವಲ್ಲಿ ಯಶಸ್ವಿ ಆಗುವಿರಿ. ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರ ಆಗಲಿದೆ. ವಿದ್ಯಾರ್ಥಿಗಳಿಗೆ ಇಂದು ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಇದನ್ನೂ ಓದಿ : 2 ಎಸೆತ 21 ರನ್‌ ! ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಟ್ರಾವೆಸ್‌ ಹೆಡ್‌

ಕರ್ಕಾಟಕ ರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಮಹತ್ವಾಕಾಂಕ್ಷಿಗಳನ್ನು ಈಡೇರಿಸುವಲ್ಲಿ ಯಶಸ್ವಿ ಆಗುತ್ತೀರಿ. ಕುಟುಂಬದ ಮಕ್ಕಳು ನಿಮ್ಮೊಂದಿಗೆ ಇಂದು ಸಂತೋಷವಾಗಿ ಇರುತ್ತಾರೆ. ಪ್ರೇಮ ವಿವಾಹ ನಡೆಸುತ್ತಿರುವವರ ಮಾತಿನಲ್ಲಿ ಕಠೋರತೆ, ಬಿರುಕು ಮೂಡಿಸಲಿದೆ. ಎಚ್ಚರಿಕೆಯಿಂದ ಇರಿ.

ಸಿಂಹ ರಾಶಿ ದಿನಭವಿಷ್ಯ
ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಯಾವುದೇ ವಿವಾದಾತ್ಮಕ ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸ ಬೇಕು. ಮೇಲಾಧಿಕಾರಿಗಳ ಕೋಪಕ್ಕೆ ನೀವು ಗುರಿಯಾಗಲಿದ್ದೀರಿ. ತಂದೆಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ. ಅನಗತ್ಯ ಜಗಳಗಳಿಗೆ ಸಿಲುಕುವ ಸಾಧ್ಯತೆಯಿದೆ.

Horoscope Today 2023 29 October 2023 Lunar Eclipses siddi Yoga Zordic Sign
image Credit to Original Source

ಕನ್ಯಾ ರಾಶಿ ದಿನಭವಿಷ್ಯ
ಹೊಸ ವ್ಯವಹಾರ ಅಥವಾ ಹಣವನ್ನು ಹೂಡಿಕೆ ಮಾಡಿದ್ರೆ ಯಶಸ್ಸು ದೊರೆಯಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ. ಸಂಬಂಧಿಕರ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಆಗಲಿದೆ. ಸರಕಾರಿ ಕೆಲಸಗಳಲ್ಲಿ ನೀವು ಸಂಪೂರ್ಣ ಬೆಂಬಲ ಪಡೆಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.

ತುಲಾ ರಾಶಿ ದಿನಭವಿಷ್ಯ
ಈ ರಾಶಿಯವರು ಇಂದು ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ನ್ಯಾಯಾಲಯದಲ್ಲಿನ ಯಾವುದೇ ವಿವಾದಗಳು ಪರಿಹಾರವನ್ನು ಕಾಣಲಿದೆ. ನೀವು ವಿರೋಧಿಗಳಿಂದ ಎಚ್ಚರವಾಗಿ ಇರಿ. ಶತ್ರುಗಳು ನಿಮಗೆ ಕಿರುಕುಳ ನೀಡುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಸಂತೋಷದ ಕ್ಷಣವನ್ನು ಕಳೆಯುವಿರಿ.

ವೃಶ್ಚಿಕ ರಾಶಿ ದಿನಭವಿಷ್ಯ
ಈ ರಾಶಿಯವರು ಇಂದು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಆದರೆ ಯಾರ ಸಲಹೆಯ ಮೇರೆಗೆ ಹೂಡಿಕೆಯನ್ನು ಮಾಡಬೇಡಿ. ಇದರಿಂದ ನೀವು ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ಆರೋಗ್ಯವು ಕ್ಷೀಣಿಸಲಿದೆ. ಪ್ರೀತಿಯ ಜೀವನದಲ್ಲಿ ಸಂಗಾತಿಯಿಂದ ಗೌರವ ಪಡೆಯುವಿರಿ. ಖರ್ಚು ವೆಚ್ಚಗಳ ನಡುವೆ ಹಿಡಿತ ಇರಲಿ.

ಇದನ್ನೂ ಓದಿ : TVS Ronin : ಟಿವಿಸ್‌ ರೋನಿನ್ ಸ್ಪೆಷಲ್‌ ಎಡಿಷನ್‌ ಬೈಕ್‌‌ ಬಿಡುಗಡೆ : ಬೆಲೆ 1,72,700 ರೂ

ಧನಸ್ಸುರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಮನಸಿಗೆ ಸಂತೋಷವಾಗಲಿದೆ. ಕುಟುಂಬದ ಸದಸ್ಯರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಸಂಬಂಧಿಕರ ಜೊತೆಗಿನ ಹಣಕಾಸಿನ ವ್ಯವಹಾರವು ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ.

ಮಕರ ರಾಶಿ ದಿನಭವಿಷ್ಯ
ಯಾವುದೇ ಬ್ಯಾಂಕಿನಿಂದ ಸಾಲವನ್ನು ಪಡೆಯುವ ಆಲೋಚನೆಯಲ್ಲಿದ್ದರೆ ಅದು ಸುಲಭವಾಗಿ ದೊರೆಯುವ ಸಾಧ್ಯತೆಯಿದೆ. ಉದ್ಯೋಗಿಗಳು ಅರೆಕಾಲಿನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾನೂನು ಸಮಸ್ಯೆಗಳು ಎದುರಾಗದಂತೆ ಎಚ್ಚರಿಕೆವಹಿಸಿ. ಉದ್ಯೋಗಿಗಳು ಹೊಸ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.

ಕುಂಭ ರಾಶಿ ದಿನಭವಿಷ್ಯ
ಕುಟುಂಬಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡಲು ಯಶಸ್ಚಿ ಆಗುತ್ತೀರಿ. ಆಸ್ತಿ ಖರೀದಿಗೆ ಕಷ್ಟಕರವಾದ ಪರಿಸ್ಥಿತಿ. ಹೊಸ ಹೂಡಿಕೆ ಲಾಭದಾಯಕವಾಗಲಿದೆ. ಹಳೆಯ ಸಾಲಗಳಿಂದ ಉತ್ತಮ ಪರಿಹಾರ ದೊರೆಯಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ಮೀನರಾಶಿ ದಿನಭವಿಷ್ಯ
ವ್ಯಾಪಾರಿಗಳು ಇಂದು ಹೊಸ ಸನ್ನಿವೇಷಗಳು ನಡೆಯಲಿದೆ. ಮಕ್ಕಳ ವಿಚಾರದಲ್ಲಿಂದು ನಿರಾಸೆಯನ್ನು ಎದುರಿಸಬೇಕಾಗುತ್ತದೆ. ನೀವು ಕೆಲವು ಕೆಟ್ಟ ಸುದ್ದಿಗಳನ್ನು ಕೇಳುವಿರಿ. ನಿಮ್ಮ ಸಮಸ್ಯೆಯನ್ನು ತಂದೆಯೊಂದಿಗೆ ಹಂಚಿಕೊಳ್ಳುವಿರಿ. ಹಠಾತ್‌ ಆರ್ಥಿಕ ಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ.

Horoscope Today 2023 29 October 2023 Lunar Eclipses siddi Yoga Zordic Sign

Comments are closed.