ದಿನಭವಿಷ್ಯ 22 ಅಕ್ಟೋಬರ್‌ 2023 : ಉತ್ತರಾಷಾಢ ನಕ್ಷತ್ರ ಪ್ರಭಾವದಿಂದ ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ

Horoscope Today 22 ಅಕ್ಟೋಬರ್‌ 2023 ಭಾನುವಾರ. ಉತ್ತರಾಷಾಢ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಧನಸ್ಸು ರಾಶಿ, ತುಲಾರಾಶಿ ಹಾಗೂ ಮಕರರಾಶಿಯವರಿಗೆ ಆರ್ಥಿಕ ಆದಾಯವು ಹೆಚ್ಚಳವಾಗಲಿದೆ.

Horoscope Today 22 ಅಕ್ಟೋಬರ್‌ 2023 ಭಾನುವಾರ. ಉತ್ತರಾಷಾಢ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಧನಸ್ಸು ರಾಶಿ, ತುಲಾರಾಶಿ ಹಾಗೂ ಮಕರರಾಶಿಯವರಿಗೆ ಆರ್ಥಿಕ ಆದಾಯವು ಹೆಚ್ಚಳವಾಗಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ವ್ಯವಹಾರಿಕ ಕ್ಷೇತ್ರದಲ್ಲಿ ಅಭಿವೃದ್ದಿ, ಹೊಂದಾಣಿಕೆಯಿಂದ ಕಾರ್ಯಾನುಕೂಲ. ಹಿರಿಯರ ಸಲಹೆ ಪಾಲನೆಯಿಂದ ಧನಲಾಭ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ದೂರದ ಬಂಧುಗಳ ಆಗಮನ.

ವೃಷಭರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಗೌರವ ವೃದ್ದಿಸಲಿದೆ. ಆಧ್ಯಾತ್ಮದ ಕಡೆಗೆ ಆಸಕ್ತಿ ಹೆಚ್ಚಲಿದೆ. ಯಾವುದೇ ವಿಚಾರದಲ್ಲಿಯೂ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ಸಾಮಾಜಿಕವಾಗಿ ನಿಮ್ಮ ಖ್ಯಾತಿ ಹೆಚ್ಚಲಿದೆ. ಗುರಿ ಸಾಧನೆಗಾಗಿ ಯಾವುದೇ ಮಾರ್ಗವನ್ನು ಕಳೆದುಕೊಳ್ಳಬೇಡಿ.

ಮಿಥುನರಾಶಿ ದಿನಭವಿಷ್ಯ
ಐಷಾರಾಮಿ ವಸ್ತುಗಳ ಖರೀದಿಯಿಂದ ಹಣ ನಷ್ಟ. ಮಕ್ಕಳ ಭವಿಷ್ಯಕ್ಕಾಗಿ ಇಂದೇ ಹೂಡಿಕೆ ಮಾಡಿ. ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಸ್ಪಷ್ಟತೆ ಸಿಗಲಿದೆ. ವ್ಯವಹಾರಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ.

ಇದನ್ನೂ ಓದಿ : ಭಾರತ ತಂಡಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ಉಪನಾಯಕ : ವಿಶ್ವಕಪ್‌ನಿಂದಲೇ ಔಟ್‌ ಆಗ್ತಾರಾ ಪಾಂಡ್ಯ

ಕರ್ಕಾಟಕರಾಶಿ ದಿನಭವಿಷ್ಯ
ಶುಭ ಸಮಾರಂಭಗಳಿಗೆ ಕುಟುಂಬ ಸದಸ್ಯರ ಭೇಟಿ, ಕೆಲಸ ಕಾರ್ಯಗಳಲ್ಲಿ ಸಕ್ರೀಯರಾಗಿ ಇರುತ್ತೀರಿ. ಹಳೆಯ ಸ್ನೇಹಿತರ ಜೊತೆಗೆ ಹೊಂದಿದ್ದ ವಿವಾದಗಳು ಇಂದೇ ಕೊನೆಗೊಳ್ಳಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಸಿಂಹರಾಶಿ ದಿನಭವಿಷ್ಯ
ಆದಾಯಕ್ಕೆ ಅನುಗುಣವಾಗಿ ಖರ್ಚುಗಳನ್ನು ಮಾಡಿ. ಉದ್ಯೋಗೀಗಳಿಗೆ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಬಹಳ ಎಚ್ಚರವಾಗಿ ಇರಿ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ, ಹೊಸ ಯೋಜನೆಯೊಂದು ಕೈಗೂಡಲಿದೆ.

Horoscope Today 22 October 2023 Zordic Sign 
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿನ ವಿವಾದಗಳು ಇಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಮನೋರಂಜನಾ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸುವಿರಿ. ಕೆಲಸದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಚಿಂತೆ ಕಾಡಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ತುಲಾರಾಶಿ ದಿನಭವಿಷ್ಯ
ಆದಾಯ ಹೆಚ್ಚಳವಾಗುವುದರಿಂದ ಮನಸಿಗೆ ನೆಮ್ಮದಿ. ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ. ಸಂಗಾತಿಯೊಂದಿಗಿನ ಆತ್ಮೀಯತೆ ಹೆಚ್ಚಳವಾಗಲಿದೆ. ನಿಮ್ಮ ಕೆಲಸವನ್ನು ಸುಧಾರಿಸಲು ಮಾಡುವ ಯಾವುದೇ ಪ್ರಯತ್ನಗಳಲ್ಲಿಯೂ ಯಶಸ್ವಿಯಾಗುವಿರಿ. ಐಶಾರಾಮಿ ಜೀವನದಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ವಾದದಿಂದ ವಿವಾದವಾಗುವ ಸಾಧ್ಯತೆಯಿದೆ.

ವೃಶ್ವಿಕರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಗೌರವ, ಮನ್ನಣೆ ಹೆಚ್ಚಲಿದೆ. ಶುಭ ಸಮಾರಂಭಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಕೆಲಸವನ್ನು ಪೂರ್ಣಗೊಳಿಸಲು ಸಹೋದ್ಯೋಗಿ ಗಳ ಸಹಕಾರವನ್ನು ಪಡೆಯುವಿರಿ. ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಇದರಿಂದ ಮನಸಿಗೆ ನೆಮ್ಮದಿಯಾಗಲಿದೆ.

ಇದನ್ನೂ ಓದಿ :  ಸರಕಾರಿ ನೌಕರರಿಗೆ ದಸರಾ ಗಿಫ್ಟ್‌ : ಡಿಎ ಹೆಚ್ಚಿಸಿದ ರಾಜ್ಯ ಸರಕಾರ, ವೇತನದಲ್ಲಿ ಎಷ್ಟು ಏರಿಕೆ ?

ಧನಸ್ಸುರಾಶಿ ದಿನಭವಿಷ್ಯ
ಆಹಾರ ಸೇವೆಯ ಕುರಿತು ಗಮನ ಹರಿಸಬೇಕು. ಆರೋಗ್ಯದ ಕುರಿತ ಸಮಸ್ಯೆಗಳು ಇಂದು ಪರಿಹಾರವಾಗಲಿದೆ. ಕುಟುಂಬದ ವಿಷಯದಲ್ಲಿನ ಆಸಕ್ತಿ ಹೆಚ್ಚಲಿದೆ. ಮನೆಗೆ ಅತಿಥಿಗಳ ಆಗಮನದಿಂದ ಹಣಕಾಸಿನ ವೆಚ್ಚಗಳು ಹೆಚ್ಚಲಿದೆ. ಸಂಪತ್ತು ವೃದ್ದಿಸಲಿದೆ. ಕುಟುಂಬದಲ್ಲಿ ನೆಮ್ಮದಿ.

ಮಕರರಾಶಿ ದಿನಭವಿಷ್ಯ
ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹೆತ್ತವರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ವಿರೋಧಿಗಳು ನಿಮಗೆ ಅಡೆತಡೆ ಉಂಟು ಮಾಡಲಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಹೊಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.

ಕುಂಭರಾಶಿ ದಿನಭವಿಷ್ಯ
ವ್ಯಾಪಾರ ಯೋಜನೆಗಳು ವೇಗವನ್ನು ಪಡೆಯಲಿದೆ. ನೀವು ಯಾರನ್ನಾದರೂ ಪಾಲುದಾರರಾಗಿ ಪಡೆಯಬಹುದು. ವಿದೇಶ ವ್ಯಾಸಂಗದ ನಿಮ್ಮ ಕನಸು ಕೈಗೂಡಲಿದೆ. ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಉತ್ತಮ ಆದಾಯದಿಂದ ಕುಟುಂಬ ಸದಸ್ಯರು ಸಂತೋಷವಾಗಿ ಇರುತ್ತಾರೆ.

ಇದನ್ನೂ ಓದಿ :  ಮಹಿಳೆಯರಿಗೆ ಬಡ್ಡಿಯಿಲ್ಲದೇ ಸಿಗುತ್ತೆ 2 ಲಕ್ಷ ರೂ ಸಾಲ : ಗೃಹಲಕ್ಷ್ಮೀ ಬೆನ್ನಲ್ಲೇ ಸರಕಾರದಿಂದ ಮತ್ತೊಂದ ಯೋಜನೆ

ಮೀನರಾಶಿ ದಿನಭವಿಷ್ಯ
ಹಳೆಯ ಹೂಡಿಕೆಯಿಂದ ಲಾಭ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ಪಾಲುದಾರರ ಸಹಕಾರದಿಂದ ವ್ಯವಹಾರಿಕವಾಗಿ ಅಭಿವೃದ್ದಿ. ಮಕ್ಕಳ ವಿಚಾರದಲ್ಲಿ ಶುಭಸುದ್ದಿಯೊಂದನ್ನು ಕೇಳುವಿರಿ. ಸಹೋದರರ ಸಹಕಾರದಿಂದ ಆರ್ಥಿಕ ಅಭಿವೃದ್ದಿ. ಹಳೆಯ ಭಿನ್ನಾಭಿಪ್ರಾಯಗಳು ಪರಿಹಾರವಾಗಲಿದೆ.

Horoscope Today 22 October 2023 Zordic Sign 

Comments are closed.