horoscope today : ದಿನಭವಿಷ್ಯ 24 ನವೆಂಬರ್ 2023 ಶುಕ್ರವಾರ. ದ್ವಾದಶರಾಶಿಗಳ ಮೇಲೆ ರೇವತಿ ನಕ್ಷತ್ರದ ಪ್ರಭಾವ ಇರುತ್ತದೆ. ಸಿದ್ದಿಯೋಗ, ರವಿಯೋಗ ಹಾಗೂ ಅಮೃತ ಸಿದ್ದಿಯೋಗಳು ರೂಪುಗೊಳ್ಳುತ್ತವೆ. ಇದರಿಂದಾಗಿ ಮೇಷರಾಶಿ, ಸಿಂಹರಾಶಿ ಸೇರಿ ನಾಲ್ಕು ರಾಶಿಯವರಿಗೆ ಆಕಸ್ಮಿಕ ಆರ್ಥಿಕ ಲಾಭ ದೊರೆಯಲಿದೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಓಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.
ಮೇಷ ರಾಶಿ ದಿನಭವಿಷ್ಯ
ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ವ್ಯಾಪಾರಸ್ಥರಿಗೆ ಶುಭಕಾಲ. ಸುಲಭವಾಗಿ ಸಾಲ ಪಡೆಯಬಹುದು. ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ಕುಟುಂಬ ಜೀವನದಲ್ಲಿ ಸಮಸ್ಯೆ ಗಳಿಂದಾಗಿ ತೊಂದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ದೊರೆಯಲಿದೆ.
ವೃಷಭ ರಾಶಿ ದಿನಭವಿಷ್ಯ
ನಿಮ್ಮ ನಿರ್ಧಾರದಿಂದ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಬಾಕಿ ಉಳಿದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತದೆ. ಹೊಸ ಹೂಡಿಕೆಗಳು ಇಂದು ಲಾಭವನ್ನು ತಂದುಕೊಡಲಿದೆ. ಭವಿಷ್ಯದಲ್ಲಿ ನೀವು ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ.
ಮಿಥುನ ರಾಶಿ ದಿನಭವಿಷ್ಯ
ನಿಮಗಾಗಿ ಸಮಯವನ್ನು ಮೀಸಲಿಡಿ. ಯಾವುದೇ ಕೆಲಸ ಮಾಡುವ ಮೊದಲು ಹಲವು ಬಾರಿ ಯೋಚಿಸಿ. ಕುಟುಂಬದ ಅಗತ್ಯಕ್ಕೆ ಅನುಗುಣವಾಗಿ ವೆಚ್ಚಗಳು ಅಧಿಕವಾಗಲಿದೆ. ನಿಮ್ಮ ಆದಾಯ ಹೆಚ್ಚಿಸುವ ಕುರಿತು ಯೋಚಿಸಿ. ಮಗುವಿನ ವಿಚಾರದಲ್ಲಿ ಸಕಾರಾತ್ಮಕ ಸುದ್ದಿಗಳನ್ನು ಕೇಳುವಿರಿ.
ಕರ್ಕಾಟಕ ರಾಶಿ ದಿನಭವಿಷ್ಯ
ಆರೋಗ್ಯವು ಕ್ಷೀಣಿಸಲಿದೆ. ಮಾಡುವ ಯಾವುದೇ ಕೆಲಸಗಳಲ್ಲಿ ನೀವು ಯಶಸ್ವಿ ಆಗುತ್ತೀರಿ. ಪೋಷಕರಿಂದ ಸಹಾಯ ದೊರೆಯಲಿದೆ. ಐಷಾರಾಮಿ ಜೀವನವನ್ನು ನಡೆಸುವಿರಿ. ಶತ್ರುಗಳ ಮೇಲೆ ಹಿಡಿತ ಸಾಧಿಸಲಿದ್ದೀರಿ. ದೂರ ಪ್ರಯಾಣದಿಂದ ಅಧಿಕ ಲಾಭ ದೊರೆಯಲಿದೆ.
ಸಿಂಹ ರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುವಿರಿ. ಮಾತಿನಲ್ಲಿ ಹಿಡಿತ ಇರಲಿ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ತಂದೆ ತಾಯಿಯ ಆಶೀರ್ವಾದ ಇರಲಿದೆ. ಕಣ್ಣಿನ ಸಮಸ್ಯೆಯಿದ್ದರೆ ಅದು ಇಂದು ಪರಿಹಾರವಾಗಲಿದೆ. ವ್ಯವಹಾರದಲ್ಲಿ ಅಭಿವೃದ್ದಿ ಕಂಡು ಬರಲಿದೆ.

ಕನ್ಯಾ ರಾಶಿ ದಿನಭವಿಷ್ಯ
ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಕಷ್ಟಳು ಎದುರಾಗಲಿದೆ. ಯಾವುದೇ ಕೆಲಸವನ್ನು ನಿರ್ಭಯವಾಗಿ ಮತ್ತು ಧೈರ್ಯದಿಂದ ಮಾಡಿ. ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿನ ಅಡೆತಡೆ ನಿವಾರಣೆ. ಸಂಜೆ ನೀವು ಸಂಬಂಧಿಕರ ಮನೆಗೆ ಭೇಟಿ ನೀಡಬಹುದು.
ಇದನ್ನೂ ಓದಿ : ಮಹಿಳೆಯ ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ : ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ
ತುಲಾ ರಾಶಿ ದಿನಭವಿಷ್ಯ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ ದೊರೆಯಲಿದೆ. ಹೆಚ್ಚಿನ ಪ್ರಗತಿಗೆ ಇಂದು ಅವಕಾಶವಿದೆ. ಹೂಡಿಕೆಗಳು ಸ್ಥಗಿತಗೊಂಡು ಚಿಂತೆ ನಿಮ್ಮನ್ನು ಕಾಡಲಿದೆ. ಸಹೋದರರ ಸಲಹೆ ಪಡೆದ ನಂತರವೇ ಹೂಡಿಕೆಯನ್ನು ಮಾಡಿ. ದೂರ ಬಂದುಗಳ ಭೇಟಿಯಿಂದ ಸಂತಸ.
ವೃಶ್ಚಿಕ ರಾಶಿ ದಿನಭವಿಷ್ಯ
ತಂದೆಯ ಜೊತೆಗಿನ ಭಿನ್ನಾಭಿಪ್ರಾಯ ಇಂದು ಶಮನವಾಗಲಿದೆ. ಹೆಚ್ಚು ಮೌನವಾಗಿರುವುದು ಉತ್ತಮ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಶತ್ರುಗಳ ಬಗ್ಗೆ ಇಂದು ಎಚ್ಚರವಾಗಿರಿ. ನಿಮ್ಮ ಕೆಲಸ ಹಾಳು ಮಾಡಲು ಯತ್ನಿಸುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಇದನ್ನೂ ಓದಿ : ಗುಜರಾತ್ ಟೈಟಾನ್ಸ್‌ಗೆ ರೋಹಿತ್ ಶರ್ಮಾ : ಮುಂಬೈ ಇಂಡಿಯನ್ಸ್‌ಗೆ ಯಾರು ನಾಯಕ ?
ಧನಸ್ಸುರಾಶಿ ದಿನಭವಿಷ್ಯ
ಆರ್ಥಿಕ ಲಾಭ ಪಡೆಯಲಿದ್ದೀರಿ. ಆರೋಗ್ಯ ಸಮಸ್ಯೆ ಎದುರಾಗಲಿದೆ. ಆಹಾರ ಸೇವನೆಯಲ್ಲಿ ನೀವು ಎಚ್ಚರಿಕೆಯನ್ನು ವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಬಗೆಗಿನ ಗೌರವ ಹೆಚ್ಚಲಿದೆ. ಪಾಲುದಾರಿಕೆ ವ್ಯವಹಾರ ನಿಮಗೆ ಲಾಭವನ್ನು ತಂದುಕೊಡಲಿದೆ.
ಮಕರ ರಾಶಿ ದಿನಭವಿಷ್ಯ
ನಿರೀಕ್ಷಿತ ಲಾಭ ದೊರೆಯದೇ ವ್ಯಾಪಾರಿಗಳು ಬೇಸರಗೊಳ್ಳುತ್ತಾರೆ. ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ. ಸಂಗಾತಿಯನ್ನು ದೂರದ ಊರುಗಳಿಗೆ ಕರೆದುಕೊಂಡು ಹೋಗಬಹುದು. ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ.
ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ
ಕುಂಭ ರಾಶಿ ದಿನಭವಿಷ್ಯ
ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಇರಲಿದೆ. ಸಂಬಂಧಿಕರನ್ನು ನಂಬುವ ಮೊದಲು ಹಲವು ಬಾರಿ ಯೋಚಿಸಿ. ನಿಮಗೆ ಇಂದು ದ್ರೋಹ ಆಗುವ ಸಾಧ್ಯತೆಯಿದೆ. ಪ್ರವಾಸಕ್ಕೆ ತೆರಳು ನಿಮ್ಮ ಕನಸು ಇಂದು ಈಡೇರುತ್ತದೆ. ಹಣಕಾಸು ಸಂಗ್ರಹದ ಕಡೆಗೆ ನೀವು ಗಮನ ಹರಿಸುವಿರಿ.
ಮೀನ ರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ ದೊರೆಯಲಿದೆ. ಸ್ನೇಹಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಲವೊಂದು ಒಳ್ಳೆಯ ಸುದ್ದಿಯನ್ನು ಇಂದು ಕೇಳುವಿರಿ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸವಾಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
horoscope today 24 November 2023 Zodiac Sign Arutha Siddi yoga Sarva siddi yoga benefits in kannada