ಗುಜರಾತ್‌ ಟೈಟಾನ್ಸ್‌ಗೆ ರೋಹಿತ್‌ ಶರ್ಮಾ : ಮುಂಬೈ ಇಂಡಿಯನ್ಸ್‌ಗೆ ಯಾರು ನಾಯಕ ?

ಮುಂಬೈ ಇಂಡಿಯನ್ಸ್‌ ತಂಡ ನಾಯಕ ರೋಹಿತ್‌ ಶರ್ಮಾ  (Rohit Sharma) ಈ ಬಾರಿ ಗುಜರಾತ್‌ ಟೈಟಾನ್ಸ್‌ (Gujrat Titans) ಪರ ಆಡಲಿದ್ದಾರೆ ಅನ್ನೋ ಸುದ್ದಿ ಬಾರೀ ಸದ್ದು ಮಾಡುತ್ತಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024 ರ (IPL 2023) ಆವೃತ್ತಿಗೆ ಸಿದ್ದತೆಗಳು ಜೋರಾಗಿವೆ. ಐಪಿಎಲ್ 2024ರ ಆಟಗಾರರ ಹರಾಜು 19 ಡಿಸೆಂಬರ್ 2023 ರಂದು ದುಬೈನಲ್ಲಿ ನಡೆಯಲಿದೆ. ಈಗಾಗಲೇ ಆಟಗಾರರ ವಲಸೆ ಕಾರ್ಯ ಆರಂಭಗೊಂಡಿದೆ. ಸದ್ಯ ಮುಂಬೈ ಇಂಡಿಯನ್ಸ್‌ ತಂಡ ನಾಯಕ ರೋಹಿತ್‌ ಶರ್ಮಾ  (Rohit Sharma) ಈ ಬಾರಿ ಗುಜರಾತ್‌ ಟೈಟಾನ್ಸ್‌ (Gujrat Titans) ಪರ ಆಡಲಿದ್ದಾರೆ ಅನ್ನೋ ಸುದ್ದಿ ಬಾರೀ ಸದ್ದು ಮಾಡುತ್ತಿದೆ.

ವಿಶ್ವದ ಪ್ರತಿಷ್ಠಿತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಹರಾಜು ಕಾರ್ಯಕ್ಕೆ ಸಿದ್ದತೆ ಜೋರಾಗಿದೆ. ಈಗಾಗಲೇ ಹಲವು ಆಟಗಾರರನ್ನು ತಂಡಗಳು ಎರವಲು ಪಡೆಯುವ ಕಾರ್ಯ ನಡೆದಿದೆ. ಅದ್ರಲ್ಲೂ ಈ ಬಾರಿ ಐಪಿಎಲ್‌ ಇತಿಹಾಸದಲ್ಲಿಯೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ ಮುಂದಿನ ಐಪಿಎಲ್‌ನಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತೊರೆಯುವುದು ಖಚಿತ ಎನ್ನಲಾಗುತ್ತಿದೆ.

IPL 2024 Rohit Sharma for Gujarat Titans Who is the captain for Mumbai Indians
Image Credit to Original Source

ಗಾಯಗೊಂಡು ವಿಶ್ವಕಪ್‌ ಮಿಸ್‌ ಮಾಡಿಕೊಂಡಿರುವ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರ್ಪಡೆ ಆಗುವ ಸಾಧ್ಯತೆಯಿದೆ. ಈಗಾಗಲೇ ಮುಂಬೈ ಇಂಡಿಯನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಕರೆತರಲು ಸಿದ್ದತೆ ಮಾಡಿದ ಎಎಂದು ಕ್ರಿಕೆಟ್‌ನೆಕ್ಸ್ಟ್ ಡಾಟ್ ಕಾಮ್‌ ವರದಿ ಮಾಡಿದೆ.

ಇದನ್ನೂ ಓದಿ : IPL 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ

ಒಂದೆಡೆಯಲ್ಲಿ ಗುಜರಾತ್‌ ಟೈಟಾನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ನಾಯಕರ ವಿನಿಮಯ ಮಾಡಿಕೊಳ್ಳುತ್ತಿವೆ ಎನ್ನಲಾಗುತ್ತದೆ. ಇದು ನಿಜವೇ ಆದ್ರೆ ರೋಹಿತ್‌ ಶರ್ಮಾ ಗುಜರಾತ್‌ ಟೈಟಾನ್ಸ್‌ ತಂಡದ ಪರ ಆಡಲಿದ್ದಾರೆ. ಅಲ್ಲದೇ ನಾಯಕರಾಗಿಯೂ ತಂಡವನ್ನು ಮುನ್ನೆಡೆಸುತ್ತಾರೆ. ರೋಹಿತ್‌ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಬಿಟ್ಟು ಕೊಡುವುದು ಅಷ್ಟು ಸುಲಭವಲ್ಲ.

ಗುಜರಾತ್‌ ತಂಡಕ್ಕೆ ಚೊಚ್ಚಲ ಐಪಿಎಲ್‌ ಪ್ರಶಸ್ತಿಯನ್ನು ಹಾರ್ದಿಕ್‌ ಪಾಂಡ್ಯ ಗೆದ್ದುಕೊಟ್ಟಿದ್ದರೆ, ರೋಹಿತ್‌ ಶರ್ಮಾ ಐದು ಬಾರಿ ಐಪಿಎಲ್‌ ಟ್ರೋಫಿಯನ್ನು ಮುಂಬೈ ಇಂಡಿಯನ್ಸ್‌ ಮುಡಿಗೇರಿಸಿದ್ದರು. ಹೀಗಾಗಿ ರೋಹಿತ್‌ ಶರ್ಮಾ ಅವರನ್ನು ತಂಡದಿಂದ ಕೈಬಿಡುವುದು ಕಷ್ಟ. ಆದರೆ ಹಾರ್ದಿಕ್‌ ಪಾಂಡ್ಯ ಮುಂದಿನ ಐಪಿಎಲ್‌ನಲ್ಲಿ ಗುಜರಾತ್‌ ತೊರೆದು ಮುಂಬೈ ಇಂಡಿಯನ್ಸ್‌ ಸೇರ್ಪಡೆ ಆಗಲಿದ್ದಾರೆ.

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಸೇರ್ಪಡೆ ಆದ್ರೆ ಮುಂದಿನ ಆವೃತ್ತಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಮುಂಬೈ ಇಂಡಿಯನ್ಸ್‌ ರೋಹಿತ್‌ ಶರ್ಮಾ ಅವರನ್ನು ಕೈಬಿಡದೆ ಚೋಪ್ರಾ ಆರ್ಚರ್‌ ಅವನ್ನು ಗುಜರಾತ್‌ ತಂಡಕ್ಕೆ ನೀಡಿ ಹಾರ್ದಿಕ್‌ ಕರೆತರಲು ಪ್ರಯತ್ನ ನಡೆಸುತ್ತಿದೆ. ಹೀಗಾದ್ರೆ, ಮುಂದಿನ ಆವೃತ್ತಿಗೆ ರೋಹಿತ್‌ ಶರ್ಮಾ ಎಂಐ ತಂಡದ ನಾಯಕರಾಗಿ ಮುಂದುವರಿಲಿದ್ದಾರೆ.

IPL 2024 Rohit Sharma for Gujarat Titans Who is the captain for Mumbai Indians
Image Credit to Original Source

ರೋಹಿತ್‌ ಶರ್ಮಾ ಅವರಿಗೆ ಸದ್ಯ 36 ವರ್ಷ. ಹೀಗಾಗಿ ದೀರ್ಘ ಅವಧಿಯ ವರೆಗೆ ರೋಹಿತ್‌ ಶರ್ಮಾ ಕ್ರಿಕೆಟ್‌ನಲ್ಲಿ ಮುಂದುವರಿಕೆ ಆಗುವುದು ಅಸಾಧ್ಯ. ಇದೇ ಕಾರಣದಿಂದಲೇ ಮುಂಬೈ ಇಂಡಿಯನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಕರೆ ತರಲು ಪ್ರಯತ್ನ ನಡೆಸಿದೆ. ನವೆಂಬರ್‌ 26ರ ಒಳಗಾಗಿ ಐಪಿಎಲ್‌ ತಂಡಗಳು ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.

ಇದನ್ನೂ ಓದಿ : ವಿಶ್ವಕಪ್ 2023 ಸೋಲು : ರೋಹಿತ್ ಶರ್ಮಾ ಔಟ್, ಟೀಂ ಇಂಡಿಯಾಕ್ಕೆ ಹೊಸ ನಾಯಕನ ಆಯ್ಕೆ ಮಾಡಿದ ಬಿಸಿಸಿಐ

ಮುಂಬೈ ಇಂಡಿಯನ್ಸ್‌ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಕರೆ ತರಲು ರೋಹಿತ್‌ ಶರ್ಮಾ ಅಥವಾ ಚೋಪ್ರಾ ಅರ್ಚರ್‌ ಅವರನ್ನು ಕಳೆದುಕೊಳ್ಳ ಬೇಕಾಗುತ್ತದೆ. ಮುಂಬೈ ಇಂಡಿಯನ್ಸ್‌ ತಂಡದ ಪರ ಆರ್ಚರ್‌ ಕಳೆದ ಸಾಲಿನಲ್ಲಿ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ಇದೇ ಕಾರಣಕ್ಕೆ ಅರ್ಚರ್‌ ಅವರನ್ನು ಕೈಬಿಡುವ ಸಾಧ್ಯತೆಯಿದೆ. ರೋಹಿತ್‌ ಶರ್ಮಾ ಮುಂಬೈ ತಂಡದಲ್ಲಿ ಉಳಿದುಕೊಂಡ್ರೆ, ರಶೀದ್‌ ಖಾನ್‌ ನಾಯಕರಾಗಲಿದ್ದಾರೆ.

IPL 2024 Rohit Sharma for Gujarat Titans Who is the captain for Mumbai Indians

Comments are closed.