ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 27 ಜನವರಿ 2024: ಯಾವ ರಾಶಿಯ ಮೇಲೆ ಶನಿಯ ಪ್ರಭಾವ

ದಿನಭವಿಷ್ಯ 27 ಜನವರಿ 2024: ಯಾವ ರಾಶಿಯ ಮೇಲೆ ಶನಿಯ ಪ್ರಭಾವ

- Advertisement -

Horoscope Today 27 January 2024 : ದಿನಭವಿಷ್ಯ 27 ಜನವರಿ 2024 ಶನಿವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಆಶ್ಲೇಷಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಕರ್ನಾಟಕ ರಾಶಿಯಿಂದ ಚಂದ್ರನು ಸಿಂಹರಾಶಿಗೆ ಚಲಿಸಲಿದ್ದಾನೆ. ಇದರಿಂದಾಗಿ ಆಯುಷ್ಮಾನ್‌ ಯೋಗ, ಸೌಭಾಗ್ಯ ಯೋಗದ ಲಾಭವಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕುಟುಂಬ ನಿರ್ವಹಣೆಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಆರ್ಥಿಕ ವಿಚಾರವಾಗಿ ಬಹಳ ಎಚ್ಚರಿಕೆಯನ್ನು ವಹಿಸಿ. ವ್ಯವಹಾರಿಕವಾಗಿ ಇಂದು ಲಾಭದಾಯಕವಾದ ದಿನ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ವೃಷಭರಾಶಿ ದಿನಭವಿಷ್ಯ
ಮಕ್ಕಳ ಮದುವೆಯ ಕಾರ್ಯ ನೆರವೇರಲಿದೆ. ಶುಭ ಸುದ್ದಿಯನ್ನು ಕೇಳುವಿರಿ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ವ್ಯವಹಾರಿಕವಾಗಿ ಹೊಸ ಅವಕಾಶಗಳು ದೊರೆಯಲಿದೆ.

ಮಿಥುನರಾಶಿ ದಿನಭವಿಷ್ಯ
ಧಾರ್ಮಿಕ ಪ್ರವಾಸೋಧ್ಯಮಕ್ಕೆ ಯೋಚನ ನಡೆಸುವಿರಿ. ವ್ಯವಹಾರಿಕವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿ. ಕುಟುಂಬದ ಹಳೆಯ ಕಲಹಗಳು ಪರಿಹಾರವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ.

ಕರ್ಕಾಟಕ ದಿನಭವಿಷ್ಯ
ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ. ಅಗತ್ಯ ವಸ್ತುಗಳ ಖರೀದಿಗೆ ಹಣವನ್ನು ವಿನಿಯೋಗಿಸುವಿರಿ. ದಿನವಿಡಿ ಆತಂಕದ ವಾತಾವರಣ ಉಂಟಾಗಲಿದೆ.

ಸಿಂಹರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿ ಇಂದು ಹದಗೆಡುವ ಸಾಧ್ಯತೆಯಿದೆ. ದೂರ ಪ್ರಯಾಣಕ್ಕೆ ಯೋಚನೆ ಮಾಡುವಿರಿ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಹಣವನ್ನು ಸುರಕ್ಷಿತವಾಗಿ ಇರಿಸುವ ಕಡೆಗೆ ಗಮನ ಹರಿಸಿ. ವ್ಯವಹಾರಿಕವಾಗಿ ಚೇತರಿಕೆ ಕಂಡು ಬರಲಿದೆ.

ಕನ್ಯಾರಾಶಿ ದಿನಭವಿಷ್ಯ
ಪರಿಚಯಸ್ಥರ ಜೊತೆಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ಕೆಲವೊಂದು ಚಟುವಟಿಕೆಗಳಿಂದ ದೂರ ಇರುವುದು ಉತ್ತಮ. ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಮಕ್ಕಳ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ. ದೂರ ಪ್ರಯಾಣದಿಂದ ಅನುಕೂಲವಾಗಲಿದೆ.

ಇದನ್ನೂ ಓದಿ : ಕೇವಲ 21,000ಕ್ಕೆ ಬುಕ್‌ ಮಾಡಿ ಟಾಟಾ ಟಿಯಾಗೋ, ಟಾಟಾ ಟಿಗರ್‌ CNG AMT

ತುಲಾರಾಶಿ ದಿನಭವಿಷ್ಯ
ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ನಕಾರಾತ್ಮಕ ಆಲೋಚನೆ ಹೊಳೆಯುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಗಮನ ಇರಲಿ.

Horoscope Today 27 January 2024 Zodiac Sign
Image Credit to Original Source

ವೃಶ್ಚಿಕರಾಶಿ ದಿನಭವಿಷ್ಯ
ಆರ್ಥಿಕವಾಗಿ ನಷ್ಟವನ್ನು ಅನುಭವಿಸುವಿರಿ. ಕುಟುಂಬದ ಶಾಂತಿಗೆ ಭಂಗ ಬರಲಿದೆ. ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಆರೋಗ್ಯದ ಸಂಬಂಧ ವೈದ್ಯರನ್ನು ಭೇಟಿಯಾಗುವ ಸಾಧ್ಯತೆಯಿದೆ. ವ್ಯವಹಾರಿಕವಾಗಿ ಅಭಿವೃದ್ದಿ ಗೋಚರಿಸಲಿದೆ.

ಧನಸ್ಸುರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರವನ್ನು ತಪ್ಪಿಸಿ. ಅನೇಕ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ವ್ಯಾಪಾರಿಗಳು ಇಂದು ಸಮಸ್ಯೆಯನ್ನು ಎದುರಿಸಲಿದ್ದಾರೆ. ಸಂಗಾತಿಯಿಂದ ನೀವು ಮೋಸ ಹೋಗುವ ಸಾಧ್ಯತೆಯಿದೆ. ಆರೋಗ್ಯದ ಸಮಸ್ಯೆಯ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ಇದನ್ನೂ ಓದಿ : ಐಪಿಎಲ್ 2024 ಮಿಸ್‌ ಮಾಡಿಕೊಳ್ಳಲಿದ್ದಾರೆ ಈ ಖ್ಯಾತ ಆಟಗಾರರು

ಮಕರರಾಶಿ ದಿನಭವಿಷ್ಯ
ವಾಹನ ಖರೀದಿಗೆ ಉತ್ತಮವಾದ ದಿನ. ಸಂಗಾತಿಯ ಜೊತೆಗೆ ನೀವು ಇಂದು ಸಂತೋಷವಾಗಿ ಇರುತ್ತೀರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ. ದೂರದ ಬಂಧುಗಳ ಆಗಮನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಒಡಹುಟ್ಟಿದವರ ಬೆಂಬಲ ದೊರೆಯಲಿದೆ.

ಕುಂಭರಾಶಿ ದಿನಭವಿಷ್ಯ
ಸ್ನೇಹಿತರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿ ಇರಿ. ಕುಟುಂಬ ಜೀವನದಲ್ಲಿ ನಕರಾತ್ಮಕ ವಾತಾವರಣ ಕಂಡು ಬರಲಿದೆ. ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಇದನ್ನೂ ಓದಿ : ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

ಮೀನರಾಶಿ ದಿನಭವಿಷ್ಯ
ನ್ಯಾಯಾಲಯದಲ್ಲಿನ ವ್ಯಾಜ್ಯವೊಂದು ಪರಿಹಾರವನ್ನು ಕಾಣಲಿದೆ. ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ. ಕುಟುಂಬ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯಗಳು ಪರಿಹಾರವಾಗಲಿದೆ. ಕುಟುಂಬ ಸದಸ್ಯರನ್ನು ಸಂತೋಷವಾಗಿ ಇರಿಸಲು ಪ್ರಯತ್ನಿಸಿ. ಮನೆಯಲ್ಲಿ ಹಿರಿಯ ಸದಸ್ಯರು ಕೂಡ ಸಂತೋಷವಾಗಿ ಇರುತ್ತಾರೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

Horoscope Today 27 January 2024 Zodiac Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular