ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

SaiKumar  with Nirup Bhandari : ರಂಗಿತರಂಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ. ಭಂಡಾರಿ ಸಹೋದರರ ತಾಕತ್ತು ಏನು ಅನ್ನೋದನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ಸಿನಿಮಾವಿದು.

SaiKumar  with Nirup Bhandari : ರಂಗಿತರಂಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ. ಭಂಡಾರಿ ಸಹೋದರರ ತಾಕತ್ತು ಏನು ಅನ್ನೋದನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ಸಿನಿಮಾವಿದು. ಈ ಸಿನಿಮಾ ಬಿಡುಗಡೆ ಆಗಿ ಸರಿ ಸುಮಾರು ಹತ್ತು ವರ್ಷಗಳೇ ಕಳೆದು ಹೋಗಿದೆ. ಆದ್ರೆ ಇದೀಗ ಮತ್ತೆ ರಂಗಿತರಂಗ ಜೋಡಿ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಹೊಸ ಸಿನಿಮಾದಲ್ಲಿ ನಿರೂಪ್‌ ಭಂಡಾರಿಗೆ ಸಾಯಿ ಕುಮಾರ್‌ ಜೊತೆಯಾಗಲಿದ್ದಾರೆ.

SaiKumar teamed up with Nirup Bhandari, a charming Rangitaran duo
Image Credit to Original Source

ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸಲಿದ್ದಾರೆ. ಈಗಾಗಲೇ ಸಾಯಿಕುಮಾರ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.ಬಹಳ ವರ್ಷಗಳ ನಂತರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಮೂಡಿಸಿದೆ. ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ.

ಇದನ್ನೂ ಓದಿ : ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥೆಯನ್ನು ಹೊಂದಿದೆ. ಸಿನಿಮಾ ಅಂಕೆತ್ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಅಂಕಿತ್ ಸೋನಿಗಾರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಯುವ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಸಂಗೀತ ಸಿನಿಮಾಕ್ಕಿದೆ.

ಇದನ್ನೂ ಓದಿ : ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

ಸಂದೀಪ್ ವಲ್ಲೂರಿ ಛಾಯಾಗ್ರಹಣದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬರಲಿದೆ. ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಸಿನಿಮಾಕ್ಕಿದೆ. ಸದ್ಯ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ರಂಗಿತರಂಗ ಸಿನಿಮಾದಲ್ಲಿ ಇದೇ ಜೋಡಿ ಕಮಾಲ್‌ ಮಾಡಿತ್ತು. ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳೇ ಕಳೆದಿದ್ದರೂ ಕೂಡ ಜನರು ಇಂದಿಗೂ ರಂಗಿತರಂಗ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ.

SaiKumar teamed up with Nirup Bhandari, a charming Rangitaran duo
Image Credit to Original Source

ಇನ್ನು ಸಿನಿಮಾದ ನಾಯಕಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಳ್ಳಲಿದ್ದಾರೆ. ಡಾರ್ಲಿಂಗ್‌ ಕೃಷ್ಣ ನಟನೆಯ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ನಾಯಕಿ ಯಾಗಿ ಬಣ್ಣ ಹಚ್ಚಿದ್ದ ಬೃಂದಾ ಇದೀಗ ಸಾಯಿ ಕುಮಾರ್‌ ಮತ್ತು ನಿರೂಪ್‌ ಭಂಡಾರಿ ಅಭಿನಯದ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್

SaiKumar teamed up with Nirup Bhandari, a charming Rangitaran duo

Comments are closed.