ದಿನಭವಿಷ್ಯ 28 ಮಾರ್ಚ್‌ 2024 : ಲಕ್ಷ್ಮೀ ಯೋಗದಿಂದ ಮೇಷ ರಾಶಿ, ಕನ್ಯಾರಾಶಿಯವರಿಗೆ ಲಾಭ

Horoscope Today 28th March 2024 : ದಿನಭವಿಷ್ಯ 28 ಮಾರ್ಚ್‌ 2024 ಗುರುವಾರ. ದ್ವಾದಶರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರುತ್ತದೆ. ಲಕ್ಷ್ಮೀ ಯೋಗ, ರಾಜಯೋಗ, ಹರ್ಷಯೋಗದಿಂದ ಕೆಲವು ರಾಶಿಯವರಿಗೆ ಅನುಕೂಲಕರ.

Horoscope Today 28th March 2024 : ದಿನಭವಿಷ್ಯ 28 ಮಾರ್ಚ್‌ 2024 ಗುರುವಾರ. ದ್ವಾದಶರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರುತ್ತದೆ. ಲಕ್ಷ್ಮೀ ಯೋಗ, ರಾಜಯೋಗ, ಹರ್ಷಯೋಗದಿಂದ ಕೆಲವು ರಾಶಿಯವರಿಗೆ ಅನುಕೂಲಕರ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Astrology) ಹೇಗಿದೆ.

ಮೇಷರಾಶಿ
ಜೀವನ ಮಟ್ಟ ಸುಧಾರಣೆಯನ್ನು ಕಾಣಲಿದೆ. ಸ್ನೇಹಿತರ ಮನೆಯಲ್ಲಿನ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಸಂತೋಷ, ಸಮೃದ್ದಿ ಹೆಚ್ಚಲಿದೆ. ನಿಮ್ಮ ಆದಾಯ ವೃದ್ದಿಸಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಅನುಕೂಲಕರ.

ವೃಷಭರಾಶಿ
ಬ್ಯಾಂಕಿಂಗ್‌ ಉದ್ಯೋಗದಲ್ಲಿ ಇರುವವರಿಗೆ ಅನುಕೂಲಕರ. ಹೊಸ ಹೂಡಿಕೆಗೆ ಹೆಚ್ಚಿನ ಅವಕಾಶ ದೊರೆಯಲಿದೆ. ವೈಯಕ್ತಿಕ ಸಂಬಂಧಗಳು ಬಲಗೊಳ್ಳಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಸಾಮಾಜಿಕವಾಗಿ ಮನ್ನಣೆ ಸಿಗಲಿದೆ.

ಮಿಥುನರಾಶಿ
ವ್ಯವಹಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹಿರಿಯರ ಸಲಹೆಯನ್ನು ಅನುಸರಿಸಿ. ಅನೇಕ ವಿಚಾರಗಳಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಿಮಮ್‌ ಆಲೋಚನೆಗಳನ್ನು ಇಂದೇ ಕಾರ್ಯರೂಪಕ್ಕೆ ತನ್ನಿ.

ಕರ್ಕಾಟಕರಾಶಿ
ಸಂಗಾತಿಯ ಜೊತೆಗೆ ಮಾತನಾಡುವಾಗ ಮಾಧುರ್ಯವಿರಲಿ. ಸಹೋದರರಿಂದ ಸಹಕಾರವನ್ನು ಪಡೆಯುತ್ತೀರಿ. ಹಣ ಸಂಪಾದನೆಗೆ ಸಂಬಂಧಿಸಿದಂತೆ ಹೊಸ ಅವಕಾಶಗಳು ದೊರೆಯಲಿದೆ. ವೃತ್ತಿಯಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ.

ಸಿಂಹರಾಶಿ
ಸೋಮಾರಿತನವನ್ನು ಹೋಗಲಾಡಿಸಿ. ಲಾಟರಿಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ. ಪ್ರೀತಿಯ ಜೀವನವು ಸುಖಮಯವಾಗಿ ಇರುತ್ತದೆ.

ಇದನ್ನೂ ಓದಿ : Gruha Lakshmi Yojana Big Updates : ಗೃಹಲಕ್ಷ್ಮೀ ಯೋಜನೆ ಬಿಗ್‌ ಅಪ್ಟೇಟ್ಸ್‌ : ಈ 3 ದಾಖಲೆ ಕೊಟ್ರೆ ಸಿಗುತ್ತೆ ಬಾಕಿ ಹಣ

ಕನ್ಯಾರಾಶಿ
ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ಸ್ನೇಹಿತರಿಂದ ನೀವಿಂದು ಉಡುಗೊರೆಯನ್ನು ಪಡೆಯಲಿದ್ದೀರಿ. ಯಾವುದೇ ಕಾರ್ಯವನ್ನು ಹಿಂಜರಿಕೆಯಿಲ್ಲದೇ ಪೂರ್ಣಗೊಳಿಸುವಿರಿ.

Horoscope Today 28th March 2024 Lakshmi Yoga will benefit Aries and Virgo Zodiac sign
Image Credit to Original Source

ತುಲಾರಾಶಿ
ಐಶಾರಾಮಿ ವಸ್ತುಗಳ ಖರೀದಿಗೆ ಅನುಕೂಲ. ಜೀವನ ಸಂಗಾತಿಯಿಂದ ನೀವು ಇಂದು ಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಆರ್ಥಿಕವಾಗಿ ಇಂದು ಉತ್ತಮವಾದ ದಿನ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ವೃಶ್ಚಿಕರಾಶಿ
ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಪ್ರಯೋಜನ ದೊರೆಯಲಿದೆ. ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ. ಬಹಳ ದಿನಗಳಿಂದ ಕಾಯುತ್ತಿದ್ದ ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಆಗಲಿದೆ.

ಇದನ್ನೂ ಓದಿ : ಎಸ್‌ಬಿಐ ಗ್ರಾಹಕರ ಗಮನಕ್ಕೆ : ಏಪ್ರಿಲ್ 1 ರಿಂದ ಹೆಚ್ಚಳವಾಗಲಿದೆ ಈ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕ

ಧನಸ್ಸುರಾಶಿ
ಉದ್ಯೋಗಿಗಳಿಗೆ ಕೆಲಸ ಕಾರ್ಯಗಳಲ್ಲಿ ಅನುಕೂಲ. ವೃತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಯಾವುದೇ ವಿಚಾರದಲ್ಲಿ ನೀವು ವಿನಾಕಾರಣ ಹಸ್ತಕ್ಷೇಪ ಮಾಡಬೇಡಿ. ಮಾತುಗಳಲ್ಲಿ ಮಾಧುರ್ಯವಿರಲಿ.

ಮಕರರಾಶಿ
ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಲ್ಲಿ ಬಹುಮಾನ ದೊರೆಯಲಿದೆ. ಇಂದು ಬಹಳ ಎಚ್ಚರವಾಗಿ ಇರಬೇಕು. ಉದ್ಯೋಗಿಗಳಿಗೆ ಶತ್ರುಗಳ ಕಾಟ ಇರಲಿದೆ. ಬುದ್ದಿವಂತಿಕೆಯಿಂದ ನೀವು ಎಲ್ಲವನ್ನೂ ಸಾಧಿಸಲಿದ್ದೀರಿ. ಸ್ನೇಹಿತರ ಜೊತೆಗೆ ಯಾವುದೇ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಯತ್ನಿಸುವಿರಿ.

ಇದನ್ನೂ ಓದಿ : ಐಪಿಎಲ್ 2024 ಅಂಕಪಟ್ಟಿ : ಚೆನ್ನೈಗೆ ಅಗ್ರಸ್ಥಾನ, ಲಕ್ನೋ ಸೂಪರ್‌ ಜೈಂಟ್ಸ್‌ಗೆ ಕೊನೆಯ ಸ್ಥಾನ, ಇಲ್ಲಿದೇ ಸಂಪೂರ್ಣ ವಿವರ

ಕುಂಭರಾಶಿ
ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಬೆಲೆಬಾಳುವ ವಸ್ತುಗಳು ಕಳ್ಳತನವಾಗುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಅಹಂಕಾರದ ಮಾತುಗಳನ್ನು ಆಡಬೇಡಿ. ಆಸ್ತಿ ವಿವಾದಗಳಲ್ಲಿ ಗೆಲುವು ದೊರೆಯಲಿದ್ದು, ಸಂಪತ್ತು ಕೂಡ ವೃದ್ದಿಸಲಿದೆ.

ಮೀನರಾಶಿ
ಸಾಮಾಜಿಕ ಸೇವೆಯಲ್ಲಿ ನಿಮಗೆ ಆಸಕ್ತಿ ಮೂಡಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಅನುಕೂಲಕರ. ಮನೆಯಿಂದಲೇ ಕೆಲಸ ಕಾರ್ಯಗಳನ್ನು ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಬಗ್ಗೆ ಹೆಚ್ಚು ದುಃಖಿತರಾಗಬಹುದು. ಹೊಸ ಉತ್ಪನ್ನಗಳ ಖರೀದಿಯಿಂದ ಸಂತಸ.

Horoscope Today 28th March 2024 : Lakshmi Yoga will benefit Aries and Virgo Zodiac sign

Comments are closed.