ದಿನಭವಿಷ್ಯ 30 ಡಿಸೆಂಬರ್‌ 2023 : ಈ 2 ರಾಶಿಯವರಿಗಿದೆ ಶನಿದೇವರ ಆಶೀರ್ವಾದ

Horoscope Today : ದಿನಭವಿಷ್ಯ 30 ಡಿಸೆಂಬರ್‌ 2023 ಶನಿವಾರ. ಜ್ಯೋತಿಷ್ಯದ ಪ್ರಕಾರ ದ್ವಾದಶರಾಶಿಗಳ ಮೇಲೆ ಇಂದು ಆಶ್ಲೇಷಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಕರ್ಕಾಟಕ ರಾಶಿಯಲ್ಲಿ ಚಂದ್ರನು ಸಾಗಲಿದ್ದಾನೆ. ಇಂದು ಸಿಂಹ ರಾಶಿ ಹಾಗೂ ಧನಸ್ಸು ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸಿಗಲಿದೆ.

Horoscope Today : ದಿನಭವಿಷ್ಯ 30 ಡಿಸೆಂಬರ್‌ 2023 ಶನಿವಾರ. ಜ್ಯೋತಿಷ್ಯದ ಪ್ರಕಾರ ದ್ವಾದಶರಾಶಿಗಳ ಮೇಲೆ ಇಂದು ಆಶ್ಲೇಷಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಕರ್ಕಾಟಕ ರಾಶಿಯಲ್ಲಿ ಚಂದ್ರನು ಸಾಗಲಿದ್ದಾನೆ. ಇಂದು ಸಿಂಹ ರಾಶಿ ಹಾಗೂ ಧನಸ್ಸು ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸಿಗಲಿದೆ. ಮೇಷರಾಶಿ ಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಎದುರಾಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಕುಟುಂಬ ಸದಸ್ಯರ ಜೊತೆಗೆ ಸುತ್ತಾಟಕ್ಕೆ ತೆರಳಬಹುದು. ಸಂಗಾತಿಯ ಸಲಹೆಯ ಮೇರೆಗೆ ವಸ್ತುಗಳನ್ನು ಖರೀದಿಸಿ. ಸಂಗಾತಿಯ ಬೆಂಬಲ ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಪ್ರೇಮ ಜೀವನವು ಸಂತೋಷ ಮಯವಾಗಿ ಇರುತ್ತದೆ. ವಿರೋಧಿಗಳು ನಿಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುವರು. ಸಾಲ ನೀಡಲು ಯೋಚಿಸುತ್ತಿದ್ದರೆ ಯಾವುದೇ ಕಾರಣಕ್ಕೂ ನೀಡಬೇಡಿ. ಕೊಟ್ಟ ಸಾಲ ಎಂದಿಗೂ ಹಿಂದಿರುಗಿ ಬರುವುದಿಲ್ಲ. ಮನಸ್ಥಾಪಗಳು ಪರಿಹಾರವಾಗಲಿದೆ.

ಮಿಥುನರಾಶಿ ದಿನಭವಿಷ್ಯ
ಶತ್ರುಗಳ ಸಂಖ್ಯೆಯಲ್ಲಿ ಏರಿಕೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಇಲ್ಲವಾದ್ರೆ ಭವಿಷ್ಯದಲ್ಲಿ ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅನಾರೋಗ್ಯ ಪೀಡಿತ ಸ್ನೇಹಿತ ಭೇಟಿ. ಮಕ್ಕಳಿಗೆ ಉಡುಗೊರೆ ನೀಡುವಿರಿ.

ಕರ್ಕಾಟಕರಾಶಿ ದಿನಭವಿಷ್ಯ
ಪ್ರವಾಸಕ್ಕೆ ತೆರಳುವ ವೇಳೆಯಲ್ಲಿ ಎಚ್ಚರಿಕೆ ಅತ್ಯಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಇತರರಿಗೆ ಸಹಾಯವನ್ನು ಮಾಡುವಿರಿ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 30 December 2023 Zodiac Sign 
Image Credit to Original Source

ಸಿಂಹರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಶುಭ ದಿನ. ಇಂದು ಕೆಲವೊಂದು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ. ಉದ್ಯೋಗಿಗಳಿಗೆ ವೇತನ ಹೆಚ್ಚಳದ ಖುಷಿ. ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

ಕನ್ಯಾರಾಶಿ ದಿನಭವಿಷ್ಯ
ಕೆಲವೊಂದು ವಿಷಯಗಳಲ್ಲಿ ಒತ್ತಡ ಅನುಭವಿಸುತ್ತೀರಿ. ಪ್ರಮುಖ ಕಾರ್ಯಗಳನ್ನು ಮುಂದೂಡುವ ಸಾಧ್ಯತೆಯಿದೆ. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಸಹಾಯ ದೊರೆಯಲಿದೆ.

ಇದನ್ನೂ ಓದಿ : ನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್ : ಲೋಕಸಭಾ ವಾರ್ ಗೆ ಸಿದ್ಧವಾಗ್ತಿದೆ ಮಂಡ್ಯ

ತುಲಾರಾಶಿ ದಿನಭವಿಷ್ಯ
ವ್ಯವಹಾರ ನಿಮಿತ್ತ ಹೊಸ ಜನರ ಭೇಟಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಕುಟುಂಬದ ಸದಸ್ಯರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ದೂರ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸ.

ವೃಶ್ಚಿಕರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸ್ನೇಹಿತರು ನಿಮ್ಮನ್ನು ಭೇಟಿಯಾಗುವ ಸಾಧ್ಯತೆಯಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಮಿಶ್ರಫಲ ದೊರೆಯಲಿದೆ. ತಾಯಿಯ ಜೊತೆಗೆ ಸಮಯವನ್ನು ಕಳೆಯುವಿರಿ.

ಧನಸ್ಸುರಾಶಿ ದಿನಭವಿಷ್ಯ
ಉದ್ಯೋಗ ಬದಲಾವಣೆಗೆ ಸೂಕ್ತ ಕಾಲ. ವೃತ್ತಿ ಜೀವನವು ಉತ್ತಮವಾಗಿ ಇರಲಿದೆ. ಕೆಲಸದ ಸ್ಥಳದಲ್ಲಿ ಅನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಶತ್ರುಗಳು ನಿಮಗೆ ಕೆಲಸ ಮೇಲೆ ಒತ್ತಡ ಹೇರಲಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ.

ಇದನ್ನೂ ಓದಿ : ಅಂದು ಸಾಮಾನ್ಯ ಪತ್ರಕರ್ತ. ಇಂದು ಫೈಯರ್‌ ಬ್ರ್ಯಾಂಡ್‌ ಶಾಸಕ : ಆರ್‌ಎಸ್‌ಎಸ್‌, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್‌

ಮಕರರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ. ಅಗತ್ಯ ವಸ್ತುಗಳ ಖರೀದಿಗಾಗಿ ಹಣವನ್ನು ವ್ಯಯಿಸುವಿರಿ. ಹೊಸ ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದರೆ ಇದು ಉತ್ತಮ ಸಮಯ. ಮಕ್ಕಳ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.

ಕುಂಭರಾಶಿ ದಿನಭವಿಷ್ಯ
ವ್ಯಾಪಾರಸ್ಥರಿಗೆ ಹಠಾತ್‌ ಆರ್ಥಿಕ ಲಾಭ ದೊರೆಯಲಿದೆ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರವಾಗಿರಿ. ಆಹಾರ ಸೇವನೆಯ ವೇಳೆಯಲ್ಲಿ ಎಚ್ಚರವಾಗಿ ಇರಿ. ಅವಿವಾಹಿತರಿಗೆ ವಿವಾಹ ಯೋಗ್ಯವಿದೆ. ದೂರ ಪ್ರಯಾಣದಿಂದ ಲಾಭ.

ಇದನ್ನೂ ಓದಿ :  All The Best ಅಂದ್ರು ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ : ದರ್ಶನ್‌ ತೂಗುದೀಪ್‌ ನಟನೆಯ ಕಾಟೇರಾಗೆ ಸಿಕ್ತು ಸ್ಪೆಶಲ್ ವಿಶ್

ಮೀನರಾಶಿ ದಿನಭವಿಷ್ಯ
ಶುಭ ಸುದ್ದಿಯನ್ನು ಕೇಳುತ್ತೀರಿ. ಆಸ್ತಿ ಖರೀದಿ ಮಾಡುವ ಭಾಗ್ಯವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಬಾರೀ ಲಾಭವನ್ನು ಗಳಿಸುತ್ತೀರಿ. ಸಂಗಾತಿಯ ಜೊತೆಗೆ ಹೊಂದಾಣಿಕೆ ಅತ್ಯಗತ್ಯ. ಮಕ್ಕಳ ಜೊತೆಗೆ ಸಂಜೆಯ ವೇಳೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ.

Horoscope Today 30 December 2023 Zodiac Sign 

Comments are closed.