Horoscope Today : ರಾಶಿಭವಿಷ್ಯ ಜೂನ್‌ 15 2024 : ಕನ್ಯಾ, ತುಲಾ ರಾಶಿಯವರಿಗೆ ಶಶ ರಾಜಯೋಗ, ಶನಿದೇವರ ಆಶೀರ್ವಾದ

Horoscope Today In Kannada : ರಾಶಿಭವಿಷ್ಯ ಜೂನ್‌ 15 2024 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಉತ್ತರ ಫಲ್ಗುಣಿ ಮತ್ತು ಹಸ್ತಾ ನಕ್ಷತ್ರದ ಪ್ರಭಾವ ಇರಲಿದೆ. ಚಂದ್ರನು ಇಂದು ಕನ್ಯಾರಾಶಿಯಲ್ಲಿ ಸಾಗುತ್ತಾನೆ.

Horoscope Today In Kannada : ರಾಶಿಭವಿಷ್ಯ ಜೂನ್‌ 15 2024 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಉತ್ತರ ಫಲ್ಗುಣಿ ಮತ್ತು ಹಸ್ತಾ ನಕ್ಷತ್ರದ ಪ್ರಭಾವ ಇರಲಿದೆ. ಚಂದ್ರನು ಇಂದು ಕನ್ಯಾರಾಶಿಯಲ್ಲಿ ಸಾಗುತ್ತಾನೆ. ಮಿಥುನ ರಾಶಿಯಲ್ಲಿ ತ್ರಿಗಾಹಿ ಯೋಗ, ಶುಕ್ರಾದಿತ್ಯ ಯೋಗ, ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ (Today Horoscope) ಹೇಗಿದೆ.

ಮೇಷರಾಶಿ ಭವಿಷ್ಯ
ವಿದ್ಯಾರ್ಥಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶ ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಮತೋಲನ ಇರಬೇಕು. ಸಂಗಾತಿಯು ಇಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಹಳೆಯ ಸ್ನೇಹಿತರ ಬೆಂಬಲ ಇಂದು ನಿಮಗೆ ಸಿಗಲಿದೆ. ಹೊಸ ಸ್ನೇಹಿತರ ಸಂಖ್ಯೆಯಲ್ಲಿಯೂ ವೃದ್ದಿಯಾಗಲಿದೆ. ಸಾಮಾಜಿಕವಾಗಿ ಗೌರವ ಸಿಗಲಿದೆ.

ವೃಷಭರಾಶಿ ಭವಿಷ್ಯ
ವ್ಯವಹಾರದಲ್ಲಿ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳಲಿದೆ. ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ. ಹಣಕಾಸು ವ್ಯವಹಾರ ಲಾಭವನ್ನು ತಂದುಕೊಡಲಿದೆ. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಯಿದೆ. ತಾಯಿಯ ಕಡೆಯಿಂದ ವಿಶೇಷ ಅನುಕೂಲ ದೊರೆಯಲಿದೆ.

ಮಿಥುನರಾಶಿ ಭವಿಷ್ಯ
ಹಿರಿಯರ ಸಹಾಯದಿಂದ ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೊಸ ಯೋಜನೆಯನ್ನು ಪ್ರಾರಂಭಿಸಲು ನಿಮಗೆ ಅವಕಾಶ ದೊರೆಯಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ವೈದ್ಯರನ್ನು ಭೇಟಿ ಮಾಡುವಿರಿ. ರಾಜಕಾರಣಿಗಳಿಗೆ ಉತ್ತಮವಾದ ದಿನ.

ಕರ್ಕಾಟಕರಾಶಿ ಭವಿಷ್ಯ
ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ. ಕುಟುಂಬದ ಅಗತ್ಯಗಳು ಈಡೇರಲಿದೆ. ಶತ್ರುಗಳು ಇಂದು ಸಮಾಧಾನಗೊಳ್ಳಲಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.

ಸಿಂಹರಾಶಿ ಭವಿಷ್ಯ
ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದ್ರೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಸಾಲವನ್ನು ತೆಗೆದುಕೊಳ್ಳುವವರು ಇಂದು ಸಾಧ್ಯವಾದರೆ ಅದನ್ನು ತಪ್ಪಿಸಿ. ಸಾಮಾಜಿಕವಾಗಿ ಸ್ಥಾನಮಾನ ವೃದ್ದಿಸಲಿದೆ. ಇಂದು ಹೆತ್ತವರ ಸಹಕಾರ ದೊರೆಯಲಿದೆ. ಸಮಸ್ಯೆಗಳು ಪರಿಹಾರವಾಗಲಿದೆ.

Horoscope Today In Kannada In Kannada Today zodiac sign June 15 2024
Image Credit to Original Source

ಕನ್ಯಾರಾಶಿ ಭವಿಷ್ಯ
ಮಾತಿನ ಮೇಲೆ ಹಿಡಿತ ಇರಲಿ. ಎಚ್ಚರಿಕೆ ತಪ್ಪಿದ್ರೆ ಅಪಾಯ ಗ್ಯಾರಂಟಿ. ಆಧ್ಯಾತ್ಮಕ ಕ್ಷೇತ್ರದ ಕಡೆಗೆ ಹೆಚ್ಚಿನ ಆಸಕ್ತಿ ಮೂಡಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ವೃದ್ದಿಸಲಿದೆ. ಮಗುವಿನ ವಿಚಾರದಲ್ಲಿ ನೀವಿಂದು ಸಂತೋಷದ ಸುದ್ದಿಯನ್ನು ಕೇಳುತ್ತೀರಿ.

ತುಲಾರಾಶಿ ಭವಿಷ್ಯ
ಕೌಟುಂಬಿಕ ಜೀವನ ಸುಖಮಯವಾಗಿ ಇರಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಉತ್ತಮ ಬೆಂಬಲ ಸಿಗಲಿದೆ. ವ್ಯಪಾರಿಗಳಿಗೆ ಆರ್ಥಿಕ ಲಾಭವಿದೆ. ಪ್ರೀತಿಸಿದವರ ನೆನಪು ಕಾಡುತ್ತದೆ. ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಎಲ್ಲಾ ಕಾರ್ಯಗಳಲ್ಲಿಯೂ ಜಯ ನಿಮ್ಮದಾಗಲಿದೆ.

ಇದನ್ನೂ ಓದಿ : ಅನ್ನ ತಿನ್ನೋದ್ರಿಂದ ಇಷ್ಟೇ ಅಲ್ಲಾ ಸಮಸ್ಯೆ ಇದೆಯಾ !!! ಅನ್ನದಿಂದ ರೋಗವೋ, ಅನಾರೋಗ್ಯವೋ ?

ವೃಶ್ಚಿಕರಾಶಿ ಭವಿಷ್ಯ
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಶುಭ ಸುದ್ದಿ ಕೇಳುವಿರಿ. ತಾಳ್ಮೆ ಮತ್ತು ಪ್ರತಿಭೆಯಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಪ್ರೀತಿಯ ಜೀವನ ಸಂತಸ ತರಲಿದೆ. ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರಲಿದೆ.

ಧನಸ್ಸುರಾಶಿ ಭವಿಷ್ಯ
ವ್ಯಾಪಾರಿಗಳಿಗೆ ಪ್ರಯತ್ನಗಳಿಂದ ಉತ್ತಮ ಯಶಸ್ಸು ಪಡೆಯಲಿದ್ದಾರೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ವಿವಾದಗಳು ಬಾಕಿ ಇದ್ದರೆ ಅದು ಪರಿಹಾರ ಆಗಲಿದೆ. ವಾಹನ ಚಾಲನೆಯ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಿ. ಇತರರಿಗೆ ಉಪಕಾರ ಮಾಡುವುದರಿಂದ ಮನಸಿಗೆ ನೆಮ್ಮದಿ.

ಮಕರರಾಶಿ ಭವಿಷ್ಯ
ಇಷ್ಟವಿಲ್ಲದಿದ್ದರೂ ಕೆಲವೊಂದು ಕಾರ್ಯಗಳನ್ನು ಬಲವಂತವಾಗಿ ಮಾಡಬೇಕಾಗುತ್ತದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಾಲ ಮನ್ನಾ ವಿಚಾರದಲ್ಲಿ ಪ್ರಯತ್ನಗಳು ಫಲ ಕೊಡಲಿದೆ. ಸಣ್ಣ ವ್ಯಾಪಾರ, ಪ್ರವಾಸಗಳು ಲಾಭದಾಯಕವಾಗಿ ಇರಲಿದೆ. ಮನಸ್ಸನ್ನು ಸಂತೋಷವಾಗಿ ಇರಿಸಲು ದೂರ ಪ್ರಯಾಣ ಉತ್ತಮ.

ಇದನ್ನೂ ಓದಿ : KSRTC Bus : ಎಬಿವಿಪಿ ಹೋರಾಟಕ್ಕೆ ಜಯ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

ಕುಂಭರಾಶಿ ಭವಿಷ್ಯ
ಖರ್ಚುಗಳನ್ನು ನಿಯಂತ್ರಿಸಿ, ಉದ್ಯೋಗಿಗಳು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ. ಸಂಜೆಯ ವೇಳೆಗೆ ಸಂಬಂಧಿಕರು ಆಗಮಿಸುವ ಸಾಧ್ಯತೆಯಿದೆ. ಮಕ್ಕಳ ನಡುವಿನ ಸಂಬಂಧ ಸುಧಾರಿಸಲಿದೆ. ಸಂಗಾತಿಯೊಂದಿಗೆ ವಿವಾದವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿ.

ಮೀನರಾಶಿ ಭವಿಷ್ಯ
ಸಾಮಾಜಿಕ ಗೌರವದಿಂದ ನೈತಿಕತೆ ಉತ್ತಮವಾಗಿ ಇರಲಿದೆ. ಯೋಜಿತ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುವಿರಿ. ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕುಟುಂಬದ ವಾತಾವರಣ ಒತ್ತಡದಿಂದ ಕೂಡಿರಲಿದೆ. ಸಂಬಂಧವನ್ನು ಬೆಸೆಯಲು ಪ್ರಯತ್ನಿಸಿ.

ಇದನ್ನೂ ಓದಿ : Hardik Pandya Insults Gill‌ ? ವಾಟರ್ ಬಾಟಲ್ ಎಸೆದು ಶುಭಮನ್ ಗಿಲ್‌ಗೆ ಅವಮಾನ ಮಾಡಿದ್ರಾ ಪಾಂಡ್ಯ ?

Horoscope Today In Kannada In Kannada Today zodiac sign June 15 2024

Comments are closed.