Horoscope Today : ರಾಶಿಭವಿಷ್ಯ ಜೂನ್‌ 16 2024 : ಧನಲಕ್ಷ್ಮೀ ಯೊಗ ಈ 5 ರಾಶಿಯವರಿಗೆ ಆರ್ಥಿಕ ಲಾಭ

Horoscope Today In Kannada : ರಾಶಿಭವಿಷ್ಯ ಜೂನ್‌ 16 2024 ಭಾನುವಾರ. ಹಸ್ತಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಕನ್ಯಾ ರಾಶಿಯಲ್ಲಿ ಚಂದ್ರನು ಸಾಗಲಿದ್ದಾನೆ.

Horoscope Today In Kannada : ರಾಶಿಭವಿಷ್ಯ ಜೂನ್‌ 16 2024 ಭಾನುವಾರ. ಹಸ್ತಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಕನ್ಯಾ ರಾಶಿಯಲ್ಲಿ ಚಂದ್ರನು ಸಾಗಲಿದ್ದಾನೆ. ಶುಕ್ರಾದಿತ್ಯ ಯೋಗ, ತ್ರಿಗ್ರಾಹಿ ಯೋಗ, ರವಿ ಯೋಗದ ಪ್ರಭಾವದಿಂದ ಈ 5 ರಾಶಿಯವರು ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Daily Horoscope) ಹೇಗಿದೆ.

ಮೇಷರಾಶಿ ದಿನಭವಿಷ್ಯ
ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿಯೂ ಸುಧಾರಣೆಯನ್ನು ಕಾಣುವಿರಿ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿದೆ. ವ್ಯವಹಾರದಲ್ಲಿನ ಧನಾತ್ಮಕ ಬದಲಾವಣೆ ಮುಂದೆ ಅಪಾರ ಪ್ರಯೋಜನವನ್ನು ತರಲಿದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

ವೃಷಭರಾಶಿ ದಿನಭವಿಷ್ಯ
ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಿ. ಉದ್ಯೋಗಿಗಳು ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತಾರೆ. ಪ್ರೀತಿಯ ಜೀವನವು ಸಂತೋಷದಿಂದ ಕೂಡಿರಲಿದೆ. ಕುಟುಂಬದ ಸದಸ್ಯರಿಂದ ನೀವು ಶುಭ ಸುದ್ದಿಯನ್ನು ಕೇಳುತ್ತೀರಿ. ಅಕ್ಕ ಪಕ್ಕದವರಿಂದ ನಿಮಗೆ ಸಹಕಾರ ದೊರೆಯಲಿದೆ.

ಮಿಥುನರಾಶಿ ದಿನಭವಿಷ್ಯ
ಕೆಲಸದ ಸ್ಥಳದಲ್ಲಿ ತಾಳ್ಮೆ ಅತೀ ಅಗತ್ಯ. ಕುಟುಂಬದ ಜೀವನವು ಇಂದು ಅಷ್ಟಾಗಿ ಸಂತೋಷವಾಗಿ ಇರುವುದಿಲ್ಲ. ವಾಹನ ದೋಷದಿಂದ ಆರ್ಥಿಕ ಹೊರೆಯನ್ನು ಅನುಭವಿಸುತ್ತೀರಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ವಿದೇಶಿ ವ್ಯವಹಾರಗಳಲ್ಲಿ ಇಂದು ಯಶಸ್ವಿ ಆಗುತ್ತೀರಿ.

ಕರ್ಕಾಟಕರಾಶಿ ದಿನಭವಿಷ್ಯ
ಕುಟಂಬದ ಆಸ್ತಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆತಡೆಗಳು ಇಂದು ನಿವಾರಣೆ ಆಗಲಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಯಶಸ್ಸು ಕಾಣುತ್ತೀರಿ. ಸಂಗಾತಿಯಿಂದ ನೀವು ಹೆಚ್ಚಿನ ಸಲಹೆಯನ್ನು ಪಡೆಯುತ್ತೀರಿ. ಸಂಬಂಧಗಳನ್ನು ಬಲ ಪಡಿಸಿಕೊಳ್ಳಿ.

ಸಿಂಹರಾಶಿ ದಿನಭವಿಷ್ಯ
ಬಾಕಿ ಇರುವ ಸರಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಲಿದೆ. ವ್ಯಾಪಾರಿಗಳು ಇಂದು ಹಣದ ಕೊರತೆಯನ್ನು ಎದುರಿಸಲಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಸಕ್ತಿ ಹೆಚ್ಚಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿಕೊಳ್ಳಿ.

Horoscope Today In Kannada In Kannada Today zodiac sign June 16 2024
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ. ಕುಟುಂಬದ ವಾತಾವರಣವು ಆಹ್ಲಾದಕರವಾಗಿ ಇರಲಿದೆ. ಅನಗತ್ಯ ಖರ್ಚುಗಳನ್ನು ಮಾಡುವುದನ್ನು ತಪ್ಪಿಸಿ. ಪ್ರೀತಿಯ ಜೀವನಕ್ಕೆ ಹೊಸ ಶಕ್ತಿ ಸಿಗಲಿದೆ. ತಂದೆಯಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಶುಭ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ.

ಇದನ್ನೂ ಓದಿ : ಅನ್ನ ತಿನ್ನೋದ್ರಿಂದ ಇಷ್ಟೇ ಅಲ್ಲಾ ಸಮಸ್ಯೆ ಇದೆಯಾ !!! ಅನ್ನದಿಂದ ರೋಗವೋ, ಅನಾರೋಗ್ಯವೋ ?

ತುಲಾರಾಶಿ ದಿನಭವಿಷ್ಯ
ನಿಮ್ಮ ಜವಾಬ್ದಾರಿಯು ಹೆಚ್ಚಾಗುತ್ತದೆ. ನಿಮ್ಮ ಧೈರ್ಯವನ್ನು ಇಂದು ಎಲ್ಲರೂ ಮೆಚ್ಚುತ್ತಾರೆ. ತವರು ಮನೆಯ ಕಡೆಯಿಂದ ಶುಭ ಸುದ್ದಿಯನ್ನು ಕೇಳುತ್ತೀರಿ. ಮನಸಿಗೆ ಸಂತಸ ಮೂಡುವ ಘಟನೆಗಳು ನಡೆಯಲಿದೆ. ಸಂಗಾತಿಯ ನೆನಪು ಕಾಡಲಿದೆ. ಆರೋಗ್ಯದ ಕಡೆಗೆ ಗಮನ ಹರಿಸುವುದು ಉತ್ತಮ.

ವೃಶ್ಚಿಕರಾಶಿ ದಿನಭವಿಷ್ಯ
ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡಿ. ಅನಗತ್ಯ ಖರ್ಚುಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಸಂಜೆಯ ವೇಳೆಗೆ ಶುಭ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಹಣಕಾಸಿನ ವಹಿವಾಟು ಹೆಚ್ಚಲಿದೆ.

ಧನಸ್ಸುರಾಶಿ ದಿನಭವಿಷ್ಯ
ಕುಟುಂಬದ ಜೀವನದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ವಿ ಆಗುತ್ತೀರಿ. ಆಹಾರದ ಪದ್ದತಿಯ ಕಡೆಗೆ ಹೆಚ್ಚಿನ ಗಮನ ಹರಿಸಿ. ಸಂಗಾತಿಯಿಂದ ನೀವು ಉಡುಗೊರೆಗಳನ್ನು ಪಡೆಯುತ್ತೀರಿ. ಸಂಗಾತಿಯು ಇಂದು ಸಂತೋಷಗೊಳ್ಳುತ್ತಾರೆ.

ಇದನ್ನೂ ಓದಿ : Mayank Agarwal : ಕರಾವಳಿಯ ದೈವೀಶಕ್ತಿ, ಪ್ರಕೃತಿ ಸೌಂದರ್ಯಕ್ಕೆ ಮನಸೋತ ಟೀಮ್ ಇಂಡಿಯಾ ಕ್ರಿಕೆಟರ್

ಮಕರರಾಶಿ ದಿನಭವಿಷ್ಯ
ಪ್ರೀತಿಯ ಜೀವನವು ಸಂತೋಷದಿಂದ ಕೂಡಿರಲಿದೆ. ವ್ಯವಹಾರಿಕವಾದ ನಿಮ್ಮ ನಿರ್ಧಾರ ಭವಿಷ್ಯದಲ್ಲಿ ಆರ್ಥಿಕ ಸ್ಥಿತಿಯನ್ನು ವೃದ್ದಿಸಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಯಲಿದೆ. ರಾಜಕಾರಣಿಗಳಿಗೆ ಇಂದು ಉತ್ತಮ ಬೆಂಬಲ ಸಿಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಕುಂಭರಾಶಿ ದಿನಭವಿಷ್ಯ
ಭವಿಷ್ಯಕ್ಕಾಗಿ ಹೊಸ ಯೋಜನೆಗಳಲ್ಲಿ ಉದ್ಯಮಿಗಳು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಕಚೇರಿ ಕೆಲಸ ಕಾರ್ಯಗಳಲ್ಲಿ ನೀವು ಬ್ಯುಸಿಯಾಗಿ ಇರುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಬಹಳ ಸಮಸ್ಯೆಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಪರಿಹಾರ ಕಾಣಲಿದೆ.

ಮೀನರಾಶಿ ದಿನಭವಿಷ್ಯ
ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುತ್ತೀರಿ. ಕುಟುಂಬದ ಜೀವನವು ಸಂತೋಷವಾಗಿ ಇರಲಿದೆ. ನಿಮ್ಮ ಒಳ್ಳೆಯ ಕಾರ್ಯಗಳಿಂದಾಗಿ ಕುಟುಂಬವು ಸಂತೋಷಗೊಳ್ಳುತ್ತದೆ. ಸಹೋದರನಿಂದ ಬೆಂಬಲ ಸಿಗಲಿದೆ. ಯಾವುದೇ ಸಾಲ ಪಡೆದಿದ್ದರೆ, ಸಾಲದಿಂದ ಮುಕ್ತರಾಗಲು ಇಂದು ಪರಿಹಾರ ಕಾಣಲಿದೆ. ಮನೆಗೆ ಸಂಜೆ ಅತಿಥಿಗಳ ಆಗಮನವಾಗಲಿದೆ.

ಇದನ್ನೂ ಓದಿ : USA Cricket Team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ

Horoscope Today In Kannada In Kannada Today zodiac sign June 16 2024

Comments are closed.