ದಿನಭವಿಷ್ಯ ಅಕ್ಟೋಬರ್‌ 21 2023 : ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ

Horoscope Today ಇಂದು ಅಕ್ಟೋಬರ್‌ 21 2023, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಪೂರ್ವಾಷಾಢ ನಕ್ಷತ್ರದದ ಪ್ರಭಾವ ಇರಲಿದೆ. ಸುಕರ್ಮ ಯೋಗದಿಂದ ಕೆಲವು ರಾಶಿಯವರಿಗೆ ಆರ್ಥಿಕ ಸ್ಥಿತಿ ಚೇತರಿಕೆ.

Horoscope Today ಇಂದು ಅಕ್ಟೋಬರ್‌ 21 2023, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಪೂರ್ವಾಷಾಢ ನಕ್ಷತ್ರದದ ಪ್ರಭಾವ ಇರಲಿದೆ. ಸುಕರ್ಮ ಯೋಗದಿಂದ ಕೆಲವು ರಾಶಿಯವರಿಗೆ ಆರ್ಥಿಕ ಸ್ಥಿತಿ ಚೇತರಿಕೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ನಿಮ್ಮನ್ನು ಕಾಡಲಿದೆ. ಯಾವುದೇ ವಿಚಾರದಲ್ಲಿಯೂ ಮೋಸ ಹೋಗಬೇಡಿ.

ವೃಷಭರಾಶಿ ದಿನಭವಿಷ್ಯ
ಹಳೆಯ ಕಾಯಿಲೆ ಇಂದು ಮತ್ತೆ ಕಾಣಿಸಿಕೊಳ್ಳಬಹುದು. ಕುಟುಂಬದ ಭಿನ್ನಾಭಿಪ್ರಾಯ ನಿಮ್ಮ ಮನಸಿಗೆ ನೋವನ್ನು ತರಲಿದೆ. ಸಂಬಂಧಿಕರಿಂದ ಕೆಲವು ವಿಚಾರಗಳು ನಿಮ್ಮ ಗಮನಕ್ಕೆ ಬರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಸಾಕಷ್ಟು ಹಣ ವಿನಿಯೋಗ ಮಾಡುವಿರಿ.

ಮಿಥುನರಾಶಿ ದಿನಭವಿಷ್ಯ
ಎಲ್ಲಾ ಕ್ಷೇತ್ರಗಳಲ್ಲಿಯೂ ನೀವು ಸಂಗಾತಿಯ ಬೆಂಬಲವನ್ನು ಪಡೆಯುವಿರಿ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಇಂದು ಒದಗಿ ಬರಲಿದೆ. ಹೊಸ ವ್ಯವಹಾರ ಆರಂಭಿಸುವ ಮೊದಲು ಸಾಕಷ್ಟು ಬಾರಿ ಯೋಚಿಸಿ. ಪಾಲುದಾರಿಕೆ ವ್ಯವಹಾರದಿಂದ ಲಾಭ.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪೌರ ಕಾರ್ಮಿಕರ 15 ಕೋಟಿ ಅನುದಾನ ಹಿಂಪಡೆದ ಸರ್ಕಾರ

ಕರ್ಕಾಟಕರಾಶಿ ದಿನಭವಿಷ್ಯ
ದಾಂಪತ್ಯ ಜೀವನದಲ್ಲಿ ಹೊಸ ಸಮಸ್ಯೆಗಳು ಎದುರಾಗಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ. ನಿಮ್ಮ ನಿರ್ಧಾರಗಳು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ಬೇರೆಯವರ ಸಲಹೆಯನ್ನೇ ನೆಚ್ಚಿಕೊಳ್ಳಬೇಡಿ.

ಸಿಂಹರಾಶಿ ದಿನಭವಿಷ್ಯ
ಧಾರ್ಮಿಕ ಪ್ರವಾಸದ ನಿಮ್ಮ ಆಸೆ ಇಂದು ಈಡೇರಲಿದೆ. ಯಾರಿಗೆ ಸಾಲ ನೀಡುವ ಮೊದಲು ಚೆನ್ನಾಗಿ ಅವರ ಬಗ್ಗೆ ಪರಿಶೀಲಿಸಿ, ಕುಟುಂಬದಲ್ಲಿ ನೀವಿಂದು ಕಠಿಣ ಮಾತುಗಳನ್ನು ಕೇಳಬಹುದು. ಹಿರಿಯ ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today October 21 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಆಸ್ತಿ ವಿಚಾರದಲ್ಲಿ ದೊಡ್ಡ ವ್ಯವಹಾರಗಳನ್ನು ಮುಚ್ಚಬೇಕಾಗುತ್ತದೆ. ಆನ್‌ಲೈನ್‌ ವ್ಯವಹಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. ಪ್ರೀತಿಯ ಜೀವನವು ಇಂದು ಉತ್ತಮವಾಗಿ ಇರಲಿದೆ. ಆರ್ಥಿಕ ಪರಿಸ್ಥಿತಿಯು ಇಂದು ವೃದ್ದಿಸಲಿದೆ. ಬಾಕಿ ಇಳಿದ ಕೆಲಸಗಳು ಪೂರ್ಣಗೊಳ್ಳಲಿದೆ.

ತುಲಾರಾಶಿ ದಿನಭವಿಷ್ಯ
ಬಾಕಿ ಉಳಿದಿರುವ ಒಪ್ಪಂದಗಳು ಇಂದು ಅಂತಿಮವಾಗಲಿದೆ. ಸ್ನೇಹಿತರೊಂದಿಗೆ ಉತ್ತಮ ಲಾಭವನ್ನು ಪಡೆಯುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಅನುಕೂಲ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.

ಇದನ್ನೂ ಓದಿ : ದಸರಾ ರಜೆ ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ವಿಸ್ತರಣೆ !

ವೃಶ್ಚಿಕರಾಶಿ ದಿನಭವಿಷ್ಯ
ಸಮಾಜಿಕವಾಗಿ ಗೌರವ ವೃದ್ದಿಸಲಿದೆ. ಏನೇ ಕೆಲಸ ಕಾರ್ಯಗಳನ್ನು ಇಂದು ಮಾಡಿದರೂ ಕೂಡ ಯಶಸ್ಸು ದೊರೆಯಲಿದೆ. ಆತ್ಮವಿಶ್ವಾಸದಿಂದ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು ದೊರೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಯಾವುದೇ ಜವಾಬ್ದಾರಿಯನ್ನು ನೀವು ಉತ್ತಮವಾಗಿ ನಿರ್ವಹಿಸುವಿರಿ. ಮನೆಗೆ ಅತಿಥಿಗಳ ಆಗಮನದಿಂದ ಆತಂಕ. ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಬೇಸರ ಮೂಡಲಿದೆ. ಕೆಲವೊಂದು ವಿಚಾರಗಳನ್ನು ನೀವು ಗೌಪ್ಯವಾಗಿ ಇಡಲೇ ಬೇಕು.

ಮಕರರಾಶಿ ದಿನಭವಿಷ್ಯ
ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಯತ್ನಿಸಿ. ಅಗತ್ಯ ವಸ್ತುಗಳ ಖರೀದಿಯಿಂದ ಸಾಕಷ್ಟು ಹಣವನ್ನು ವ್ಯಯಿಸುತ್ತೀರಿ. ಒಡಹುಟ್ಟಿದವರಿಂದ ಸಲಹೆಯನ್ನು ಪಡೆಯುವುದು ತೀರಾ ಉತ್ತಮ. ವ್ಯವಹಾರದಲ್ಲಿ ಜಾಗರೂಕರಾಗಿ ಇರುವುದು ಉತ್ತಮ

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ನವರಾತ್ರಿ ಗಿಫ್ಟ್, 2 ನೇ ಕಂತಿನ ಹಣ ಜಮೆ

ಕುಂಭರಾಶಿ ದಿನಭವಿಷ್ಯ
ವಿರೋಧಿಗಳನ್ನು ಸುಲಭವಾಗಿ ಸೋಲಿಸುವಿರಿ. ಕಚೇರಿ ಕೆಲಸಗಳಲ್ಲಿಗಾಗಿ ನೌಕರರು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ರಾಜಕಾರಣಿಗಳಿಗೆ ಇಂದು ಉತ್ತಮವಾದ ದಿನ.

ಮೀನರಾಶಿ ದಿನಭವಿಷ್ಯ
ದೂರದ ಬಂಧುಗಳ ಆಗಮನದಿಂದ ಮನಸಿಗೆ ಮುದ ನೀಡಲಿದೆ. ಸಹೋದರರಿಂದ ಸಹಕಾರ ದೊರೆಯಲಿದೆ. ವ್ಯವಹಾರದಲ್ಲಿ ಹೊಸ ನಿರೀಕ್ಷೆಗಳು ಮೂಡಲಿದೆ. ಆದರೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸಾಕಷ್ಟು ಬಾರಿ ಯೋಚಿಸುವುದು ಉತ್ತಮ.

Horoscope Today October 21 2023 Zordic Sign

Comments are closed.