ಮಂಗಳವಾರ, ಏಪ್ರಿಲ್ 29, 2025
Homehoroscopeದಿನಭವಿಷ್ಯ ಸೆಪ್ಟೆಂಬರ್‌ 24 2023 ಈ ರಾಶಿಯವರಿಗಿದೆ ಸೋಭಾನ ಯೋಗ

ದಿನಭವಿಷ್ಯ ಸೆಪ್ಟೆಂಬರ್‌ 24 2023 ಈ ರಾಶಿಯವರಿಗಿದೆ ಸೋಭಾನ ಯೋಗ

- Advertisement -

ಇಂದು ಸೆಪ್ಟೆಂಬರ್‌ 24, 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಪೂರ್ವಾಷಾಢ ನಕ್ಷತ್ರವು ಪ್ರಭಾವ ಬೀರುತ್ತದೆ. ಜೊತೆಗೆ ಸೋಭಾನ ಯೋಗ ಮತ್ತು ಅತಿಗನ್ನದ ಯೋಗಗಳು ರೂಪುಗೊಳ್ಳುತ್ತವೆ. ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಒಟ್ಟು 12 ರಾಶಿಗಳ ಇಂದಿನ ದಿನ ಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ಶತ್ರುಗಳ ಕಾಟದ ಬಗ್ಗೆ ಎಚ್ಚರವಾಗಿರಿ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ದೊರೆಯಲಿದೆ. ಕುಟುಂಬ ಸದಸ್ಯರ ಆಸೆಗಳನ್ನು ಪೂರೈಸಲು ಹಣ ವ್ಯಯಿಸುವಿರಿ.

ವೃಷಭ ರಾಶಿ
ಯಾರ ಜೊತೆಗೂ ವಾದ ವಿವಾದಕ್ಕೆ ಇಳಿಯ ಬೇಡಿ. ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಕುಟುಂಬ ಸದಸ್ಯರಿಗೆ ವಸ್ತುಗಳನ್ನು ಖರೀದಿ ಮಾಡುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ.

ಮಿಥುನ ರಾಶಿ
ತಾಯಿಯೊಂದಿಗೆ ಭಿನ್ನಾಭಿಪ್ರಾಯ ಎದುರಾಗಲಿದೆ. ಸಂಗಾತಿಯ ಸಲಹೆಯ ಮೇರೆಗೆ ವ್ಯಾಪಾರ ಮಾಡುವುದು ಉತ್ತಮ. ಸಾಮಾಜಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು.

ಕರ್ಕಾಟ ರಾಶಿ
ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಉತ್ತಮವಾದ ದಿನ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ರಾಜಕೀಯ ಕ್ಷೇತ್ರದವರಿಗೆ ಯಶಸ್ಸು ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ.

ಇದನ್ನೂ ಓದಿ : ICC Cricket Ranking : ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿಶ್ವಕ್ಕೆ ಭಾರತವೇ ನಂ.1

ಸಿಂಹ ರಾಶಿ
ಮಿತ್ರರೂ ಇಂದು ಶತ್ರುಗಳಾಗಿ ಕಾಣಿಸಿಕೊಳ್ಳುವರು. ಆಪ್ತ ಸ್ನೇಹಿತರ ಭಾವನೆಗಳನ್ನು ಗುರುತಿಸಿ. ವ್ಯವಹಾರದಲ್ಲಿಯೂ ಒಪ್ಪಂದವನ್ನು ಮುರಿಯ ಬೇಡಿ. ಅಧಿಕಾರಿಗಳ ಸಹಕಾರದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕನ್ಯಾ ರಾಶಿ
ಸ್ನೇಹಿತರ ಜೊತೆಗೆ ಯಾವುದೇ ವಿವಾದವನ್ನು ಹೊಂದಿದ್ದರೆ ಅದು ಕೊನೆಗೊಳ್ಳುತ್ತದೆ. ಮನೆಯಲ್ಲಿ ಉತ್ತಮ ವಾತಾವರಣ. ನಿಮ್ಮ ಪ್ರತಿಷ್ಠೆ ಹೆಚ್ಚಳ ವಾಗಲಿದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ.

ತುಲಾ ರಾಶಿ
ಹೊಸ ವ್ಯವಹಾರ ಆರಂಭಕ್ಕೆ ಇಂದು ಉತ್ತಮವಲ್ಲ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು. ಕಾನೂನು ವ್ಯಾಜ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಅವಿವಾಹಿತರಿಗೆ ಯೋಗ ವಿವಾಹ ಪ್ರಸ್ತಾಪಗಳು ಒಲಿದು ಬರಲಿವೆ. ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ದೊರೆಯಲಿದೆ.

Horoscope Today September 24 2023 Zordic Sign
Image Credit To original Source

ವೃಶ್ಚಿಕ ರಾಶಿ
ಶುತ್ರುಗಳಿಂದ ತೊಂದರೆ, ವ್ಯಾಪಾರಿಗಳಿಗೆ ಹಿರಿಯರ ಸಲಹೆಯನ್ನು ಪಾಲಿಸಿ. ಸಂಬಂಧಿಕರಿಂದ ಆರ್ಥಿಕ ಲಾಭವನ್ನು ಪಡೆಯುವಿರಿ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಯಿಂದ ಯಶಸ್ಸು. ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಸಕ್ಸಸ್‌ ಕಾಣುವಿರಿ.

ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ, ಚಿನ್ನ ಖರೀದಿಗೆ ಮುಗಿಬಿದ್ದ ಆಭರಣ ಪ್ರಿಯರು

ಧನಸ್ಸು ರಾಶಿ
ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ವಿದ್ಯಾಭ್ಯಾಸದಲ್ಲಿ ಯಶಸ್ಸು. ಉದ್ಯೋಗಕ್ಕೆ ಸಂಬಂಧಿಸಿದಂತೆ ಹಿರಿಯರ ಸಲಹೆಯನ್ನು ಪಾಲಿಸಿ. ವ್ಯವಹಾರ ಕ್ಷೇತ್ರದಲ್ಲಿ ಇರುವವರು ದೂರ ಪ್ರಯಾಣವನ್ನು ಮಾಡಬೇಕಾಗುತ್ತದೆ. ವ್ಯಾಪಾರಿಗಳು ಲಾಭವನ್ನು ಪಡೆಯಲಿದ್ದಾರೆ.

ಮಕರ ರಾಶಿ
ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಆಪ್ತರಿಂದ ಹಣಕಾಸಿನ ನೆರವು ದೊರೆಯಲಿದೆ. ಮದುವೆಗೆ ಸಂಬಂಧಿಸಿದಂತೆ ಇದ್ದ ಅಡೆ ತಡೆಗಳು ನಿವಾರಣೆ ಆಗಲಿದೆ. ಪ್ರೀತಿಯ ಜೀವನದಲ್ಲಿ ನೀವು ಯಶಸ್ಸನ್ನು ಕಾಣುವಿರಿ.

ಕುಂಭ ರಾಶಿ
ಸಾಲ ಪಡೆಯಲು ಯೋಚನೆ ಮಾಡುತ್ತಿದ್ದರೆ ಮರು ಪಾವತಿ ಮಾಡುವುದು ಕಷ್ಟಕರವಾಗಲಿದೆ. ರಾಜಕಾರಣಿಗಳು ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು.

ಮೀನ ರಾಶಿ
ದೂರದ ಊರಿನಿಂದ ಆಪ್ತ ಸ್ನೇಹಿತನ ಆಗಮನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸಿಗೆ ನೆಮ್ಮದಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಸಹೋದ್ಯೋಗಿಗಳ ಜೊತೆಗೆ ವಿನಯದಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರವಾಗಿರಿ.

Horoscope Today September 24 2023 Zordic Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular