ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ, ಚಿನ್ನ ಖರೀದಿಗೆ ಮುಗಿಬಿದ್ದ ಆಭರಣ ಪ್ರಿಯರು

Gold and Silver Price : ಚಿನಿವಾರು ಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲಿ (ಸೆಪ್ಟೆಂಬರ್ 18 ರಂದು ) 59,320 ರೂ.ನಷ್ಟಿದ್ದ ಚಿನ್ನದ ಬೆಲೆ (Gold Price Drop) ಇಂದು ( ಸೆಪ್ಟೆಂಬರ್ 23 ರಂದು) 10 ಗ್ರಾಂಗೆ 59,134 ರೂ.ಗೆ ಇಳಿಕೆ ಕಂಡಿದೆ. ಇದು ಆಭರಣ ಪ್ರಿಯರಿಗೆ ಸಖತ್‌ ಖುಚಿಕೊಟ್ಟಿದೆ. ಆದ್ರೆ ಬೆಳ್ಳಿದರ (Silver Price Up) ಏರಿಕೆಯಾಗಿದೆ.

ಸಾಮಾನ್ಯವಾಗಿ ಹಬ್ಬಗಳ ಸೀಸನ್‌ ಆರಂಭವಾದ್ರೆ ಸಾಕು ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price Today) ಗಗನಕ್ಕೇರುತ್ತದೆ. ಆದ್ರೆ ಈ ವಾರ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದ್ದು, ಚಿನ್ನ ಖರೀದಿಗೆ ಆಭರಣ ಪ್ರಿಯರು ಮುಗಿಬಿದ್ದಿದ್ದಾರೆ. ಆದರೆ ಬೆಳ್ಳಿಯ ದರದಲ್ಲಿ (Silver Price Up)  ಬಾರೀ ಏರಿಕೆ ಕಂಡಿದೆ.ಮುಂದಿನ ತಿಂಗಳಿನಿಂದ ನವರಾತ್ರಿ, ದೀಪಾವಳಿ, ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಆಗಮನವಾಗಲಿದೆ. ಈ ವಾರ ಚಿನ್ನದ ಬೆಲೆಯಲ್ಲಿ (Gold Price Drop) ಬಾರೀ ಇಳಿಕೆಯನ್ನು ಕಂಡಿದ್ದರೂ ಕೂಡ, ಹಬ್ಬಗಳ ಆಗಮನದ ಹೊತ್ತಲ್ಲಿ ಚಿನ್ನಾಭರಣಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಡಿತ್ತಿದ್ದಾರೆ.

Gold price Drops and Siver price Goes Up Today Gold And Silver Rate in india
Image Credit To Original Source

ಹಬ್ಬ ಹರಿದಿನಗಳ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಬಾರೀ ಬೇಡಿಕೆ ಬರುವುದರಿಂದ, ದರದಲ್ಲಿ ಏರಿಕೆಯಾಗುವುದು ಸರ್ವೇ ಸಾಮಾನ್ಯ ಅಂತಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಬಾರಿಯ ದೀಪಾವಳಿಯ ಸಮಯದಲ್ಲಿ ಪ್ರತಿ 10 ಗ್ರಾಂ ಚಿನ್ನ 62,000 ರೂ.ಗೆ ಏರಿಕೆ ಆಗಬಹುದು ಮತ್ತು ಬೆಳ್ಳಿ ಕೆಜಿಗೆ 78-80 ಸಾವಿರ ರೂ. ಏರಿಕೆ ಕಾಣಲಿದೆ.

ಇದನ್ನೂ ಓದಿ : ಗೃಹ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಹೊಸ ರೂಲ್ಸ್‌, 50 ಲಕ್ಷರೂ. ಗೃಹ ಸಾಲಕ್ಕೆ33 ಲಕ್ಷ ರೂ. ಬಡ್ಡಿ ಉಳಿತಾಯ

ಇನ್ನು 2023 ರ ಅಂತ್ಯದ ವೇಳೆಗೆ ಚಿನ್ನ 65,000 ರೂ ಮತ್ತು ಬೆಳ್ಳಿ 90,000 ರೂ ತಲುಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆಯನ್ನು ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯ ಆಧಾರದ ಮೇಲೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿಳಿತವಾಗಲಿದೆ.

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಅವರ ಅಧಿಕೃತ ವೆಬ್‌ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ,ಈ ವಾರದ ಆರಂಭದಲ್ಲಿ (ಸೆಪ್ಟೆಂಬರ್ 18 ರಂದು) ಚಿನ್ನವು 59,320 ರೂ ಇತ್ತು, ಇಂದು (ಸೆಪ್ಟೆಂಬರ್ 23 ರಂದು ) ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಇಂದಿನ ಚಿನ್ನಾಭರಣ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 59,134 ರೂ.ಗೆ ಇಳಿಕೆಯನ್ನು ಕಂಡಿದೆ. ಇದರಿಂದಾಗಿ ಒಂದು ವಾರದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 186 ರೂಪಾಯಿಗಳಷ್ಟು ಇಳಿಕೆಯಾಗಿದೆ ಎಂದು ಭಾಸ್ಕರ ಡಾಟ್‌ ಕಾಂ ವರದಿ ಮಾಡಿದೆ.

ದುಬಾರಿ ಆಯ್ತು ಬೆಳ್ಳಿ (Silver Price up) !

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ವೆಬ್‌ಸೈಟ್ ನ ಪ್ರಕಾರ, ಚಿನ್ನದ ದರದಲ್ಲಿ ಇಳಿಕೆಯನ್ನು ಕಂಡಿದ್ದರೆ, ಬೆಳ್ಳಿಯ ದರದಲ್ಲಿ ಬಾರೀ ಏರಿಕೆಯಾಗಿದೆ. ಈ ಬಾರದ ಆರಂಭದಲ್ಲಿ ಬೆಳ್ಳಿ ಪ್ರತೀ ಕೆಜಿಗೆ 72,115 ರೂ.ಗಳಷ್ಟಿದ್ದು, ಇಂದು ಪ್ರತಿ ಕೆಜಿಗೆ 73,175 ರೂ.ಗೆ ತಲುಪಿದೆ. ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ ಪ್ರತೀ ಕೆಜಿ ಬೆಳ್ಳಿಯ ದರದಲ್ಲಿ 1,060 ರೂ.ಗಳಷ್ಟು ಏರಿಕೆಯಾಗಿದೆ.

Gold price Drops and Siver price Goes Up Today Gold And Silver Rate in india
Image Credit To Original Source

ಇದನ್ನೂ ಓದಿ : ಪ್ರಧಾನಿ ವಿಶ್ವಕರ್ಮ ಯೋಜನೆ : ಕುಶಲಕರ್ಮಿಗಳಿಗೆ ಸಿಗುತ್ತೆ 2 ಲಕ್ಷರೂ. ಸಬ್ಸಿಡಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ?

ಇಂಡಿಯಾ ಡಾಟ್‌ ಕಾಂ ಮಾಡಿರುವ ವರದಿಯ ಪ್ರಕಾರ ಗೋಲ್ಡ್ ಇಟಿಎಫ್‌ನಲ್ಲಿ (ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಕಳೆದ ತಿಂಗಳು ( ಆಗಸ್ಟ್‌ನಲ್ಲಿ ) ಬರೋಬ್ಬರಿ 1,028 ಕೋಟಿ ರೂಪಾಯಿ ಹೂಡಿಕೆಯಾಗಿತ್ತು. ಇದು ಗೋಲ್ಡ್ ಇಟಿಎಫ್‌ನಲ್ಲಿ 16 ತಿಂಗಳ ದಾಖಲೆಯ ಹೂಡಿಕೆಯಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕಾರಣ 1,100 ಕೋಟಿ ರೂ. ಈ ವರ್ಷ, ಅಮೆರಿಕದಲ್ಲಿ ಬಡ್ಡಿದರಗಳ ನಿರಂತರ ಹೆಚ್ಚಳದಿಂದಾಗಿ ಅಪಾಯದ ಹೆಚ್ಚಳದಿಂದಾಗಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚಾಗಿದೆ.

Gold price Drops and Siver price Goes Up Today Gold And Silver Rate in India

Comments are closed.