ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ ಸೆಪ್ಟೆಂಬರ್‌ 25 2023 : ಈ ರಾಶಿಯವರು ಇಂದು ಎಚ್ಚರಿಕೆ ವಹಿಸಿ

ದಿನಭವಿಷ್ಯ ಸೆಪ್ಟೆಂಬರ್‌ 25 2023 : ಈ ರಾಶಿಯವರು ಇಂದು ಎಚ್ಚರಿಕೆ ವಹಿಸಿ

- Advertisement -

ದಿನಭವಿಷ್ಯ ಸೆಪ್ಟೆಂಬರ್‌ 25,2023 ಸೋಮವಾರ  (Monday Astrology). ಜೋತಿಷ್ಯದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಇಂದು ಉತ್ತರಾಷಾಢ ನಕ್ಷತ್ರದ ಪ್ರಭಾವ ಇರುತ್ತದೆ. ಅತಿಗಂಧ ಯೋಗದಿಂದ ಕೆಲವು ರಾಶಿಯವರಿಗೆ ಇಂದು ಶುಭಫಲ ದೊರೆಯುತ್ತದೆ. ಆದರೆ ಕೆಲವು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾದ್ರೆ ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ಕೆಲಸ ಕಾರ್ಯಗಳಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ಅವುಗಳನ್ನು ಮೀರಲು ನೀವು ಇನ್ನೊಬ್ಬರ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಕುಟುಂಬ ಖರ್ಚುಗಳ ಮೇಲೆ ಹಿಡಿತ ಇರಲಿ. ಮಾನಸಿಕ ಒತ್ತಡ ಇರುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಯಾರೊಂದಿಗಾದರೂ ವ್ಯಾಪಾರ ಮಾಡಲು ಯೋಚಿಸಿದರೆ, ಅದನ್ನು ಆಲೋಚನೆಯಿಂದ ಮಾಡಿ. ಈ ದಿನ ನೀವು ಅಪಾಯಕರ ಹೂಡಿಕೆಯಲ್ಲಿ ಹಣವನ್ನು ಹೂಡಿಕೆ ಮಾಡದೆ ಇರಬೇಕು.

ವೃಷಭ ರಾಶಿ
ವ್ಯಾಪಾರಿಗಳಿಗೆ ಎಚ್ಚರಿಕೆ ಅಗತ್ಯ. ಹಣವನ್ನು ಸಾಲವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸಹೋದರಿಯ ಸಲಹೆಯನ್ನು ಪಾಲಿಸಿ. ಹೊಸ ಕೆಲಸವನ್ನು ಆರಂಭಿಸಿದ್ರೆ ನಿಮಗೆ ಇಂದು ಶುಭದಾಯಕವಾಗಿ ಇರುತ್ತದೆ. ಯಾವುದೇ ಕೆಲಸಗಳನ್ನು ಶ್ರದ್ದೆಯಿಂದ ಮಾಡಿದ್ರೆ ಯಶಸ್ಸು ಖಚಿತ. ಸಂಜೆಯ ವೇಳೆಗೆ ವಿನೋದದಿಂದ ಕಳೆಯುವಿರಿ.

ಮಿಥುನ ರಾಶಿ
ಮಕ್ಕಳ ಕಡೆಯಿಂದ ಕೆಲವು ಶುಭವಾರ್ತೆ ಕೇಳುವಿರಿ. ನಿಮ್ಮ ಮನೋಧೈರ್ಯ ಹೆಚ್ಚಲಿದೆ. ನಿಮ್ಮ ವಸ್ತುಗಳ ಬಗ್ಗೆ ಜಾಗೃತೆ ವಹಿಸಿ. ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ. ಯಾವುದೇ ಕಾರಣಕ್ಕೂ ಯಾರ ಜೊತೆಗೂ ಕಲಹಕ್ಕೆ ಇಳಿಯ ಬೇಡಿ. ಸಂಬಂಧಿಕರ ಕಡೆಯಿಂದ ನಿಮಗೆ ಇಂದು ಹಣಕಾಸಿನ ಸಹಕಾರ ದೊರೆಯಲಿದೆ.

ಕರ್ಕಾಟಕ ರಾಶಿ
ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಇಂದು ಉತ್ತಮ ಲಾಭವನ್ನು ತಂದುಕೊಡಲಿದೆ. ನಿಮ್ಮ ಜೀವನದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ್ರೆ ಯಶಸ್ಸು ಸಾಧಿಸುವಿರಿ. ಪ್ರೇಮ ಜೀವನವು ಉತ್ತಮವಾಗಿ ಇರಲಿದೆ. ಬಾಕಿ ಉಳಿದ ಕಾರ್ಯಗಳನ್ನು ಇಂದೇ ಪೂರ್ಣಗೊಳಿಸಿ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಪಾಲುದಾರರ ಜೊತೆಗೆ ಎಚ್ಚರಿಕೆಯಿಂದ ವ್ಯವಹರಿಸಿ.

ಇದನ್ನೂ ಓದಿ : ಕುಂದಾಪುರದ ಕಾವೇರಿ ಮೋಟಾರ್ಸ್‌ನಲ್ಲಿ ಟಾಟಾ ನೆಕ್ಸಾನ್‌ ಇವಿ ಬಿಡುಗಡೆ : ಒಂದೇ ಚಾರ್ಜ್‌ 463 ಕಿ.ಮೀ. ಮೈಲೇಜ್‌

ಸಿಂಹ ರಾಶಿ
ಈ ದಿನ ಮನಸ್ಸಿಗೆ ತುಂಬಾ ಸಂತೋಷವಾಗಿರುತ್ತದೆ. ದೈನಂದಿನ ಅಗತ್ಯಗಳಿಗೆ ಹಣವನ್ನು ವ್ಯಯಿಸುವಿರಿ. ವ್ಯಾಪರದಲ್ಲಿ ಉದ್ಯೋಗದಲ್ಲಿ ಎಚ್ಚರಿಕೆವನ್ನು ವಹಿಸಿ. ಸಂಜೆಯ ವೇಳೆಗೆ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಜೀವನ ಸಂಗಾತಿಗಾಗಿ ಉಡುಗೊರೆಯನ್ನು ಖರೀದಿಸುವಿರಿ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ.

Horoscope Today September 25 2023 Zordic Sign
Image Credit to Original Source

ಕನ್ಯಾ ರಾಶಿ
ವೈವಾಹಿಕ ಜೀವನವು ಸಂತೋಷವಾಗಿ ಇರುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ. ಕೆಲಸ ಮಾಡುವ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆಯಿದೆ. ಮಾತಿನಲ್ಲಿ ಸೌಮ್ಯತೆ ಇರಲಿ. ಪಾಲುದಾರರ ಜೊತೆಗಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವೈದ್ಯಕೀಯ ಸಲಹೆ ಪಡೆಯುವುದು ಅತೀ ಮುಖ್ಯ.

ತುಲಾ ರಾಶಿ
ಸ್ನೇಹಿತರ ಭೂಮಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗೆ ಸಮಯ ನೀಡಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಜೀವನ ಸಂಗಾತಿ ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಭವಿಷ್ಯದ ಯೋಜನೆಗಳ ಬಗ್ಗೆ ನೀವು ಚರ್ಚೆ ನಡೆಸಲಿದ್ದಾರೆ. ಸಂಬಂಧಗಳು ಕೂಡ ಇಂದು ಬಲಗೊಳ್ಳಲಿದೆ.

ವೃಶ್ಚಿಕ ರಾಶಿ
ಇಷ್ಟು ದಿನ ಬಾಕಿ ಉಳಿದಿರುವ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ತಂದೆಯ ಸಲಹೆಯಂತೆ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ದೊರೆಯಲಿದೆ. ಶಿಕ್ಷಣದಲ್ಲಿ ಶಿಕ್ಷಕರ ಸಲಹೆಯನ್ನು ಪಾಲಿಸಿ. ಹೊಸ ಬಂಡವಾಳ ಹೂಡಲು ಚಿಂತನೆ ಮಾಡುತ್ತಿದ್ದರೆ ಇಂದು ಸಕಾಲ. ಜೀವನ ಸಂಗಾತಿಯ ಸಂಪೂರ್ಣ ಸಹಕಾರ ದೊರೆಯಲಿದೆ. ಮಕ್ಕಳ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುವಿರಿ. ಇದು ನಿಮಗೆ ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲಿದೆ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಧನಸ್ಸು ರಾಶಿ
ಭೂಮಿಯನ್ನು ಖರೀದಿ ಮಾಡಲು ಯೋಚನೆ ಮಾಡುತ್ತಿದ್ದರೆ ಇಂದು ಸಕಾಲ. ವ್ಯವಹಾರ ಕ್ಷೇತ್ರದಲ್ಲಿ ಶತ್ರುಗಳಿಂದ ತೊಂದರೆ ಎದುರಾಗಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಪೋಷಕರು, ಜೀವನ ಸಂಗಾತಿಯ ಸಲಹೆಯನ್ನು ಪಾಲಿಸಿ. ಹೊಸ ವ್ಯಕ್ತಿಗಳ ಜೊತೆಗೆ ವ್ಯವಹರಿಸುವಾಗ ಎಚ್ಚರಿಕೆಯನ್ನು ವಹಿಸಿ.

ಮಕರ ರಾಶಿ
ಸರಕಾರಿ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬ ಕಲಹಗಳು ಇಂದು ಕೊನೆಗೊಳ್ಳುವ ಸಾಧ್ಯತೆಯಿದೆ.ಸಂಜೆ ನಿಮ್ಮ ಆರೋಗ್ಯ ಕ್ಷೀಣಿಸುವ ಸಾಧ್ಯತೆಯಿದೆ. ವೈದ್ಯರನ್ನು ಕೂಡಲೇ ಭೇಟಿ ಮಾಡುವುದು ಸೂಕ್ತ. ವಿದ್ಯಾರ್ಥಿಗಳು ಹೊಸ ಕೋರ್ಸುಗಳಿಗೆ ಇಂದು ಅರ್ಜಿ ಸಲ್ಲಿಸುವುದು ಉತ್ತಮ. ಕೆಲಸ ಕಾರ್ಯಗಳಲ್ಲಿ ಹೊಂದಾಣಿಯಿಂದ ಯಶಸ್ಸು ದೊರೆಯಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ.

ಕುಂಭ ರಾಶಿ
ವ್ಯಾಪಾರಿಗಳಿಗೆ ಇಂದು ಅನುಕೂಲಕರ. ಸರಕಾರಿ ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಶೆ ದೊರೆಯಿದೆ. ಮಹಿಳೆಯೋರ್ವಳ ಭೇಟಿ ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ. ಸಂಜೆಯ ವೇಳೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಕುಟುಂಬಸ್ಥರಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಂಬಂಧಿಕರ ಜೊತೆಗೆ ವಿವಾದಗಳು ನಡೆಯದಂತೆ ಎಚ್ಚರಿಕೆ ವಹಿಸಿ.

ಇದನ್ನೂ ಓದಿ : ಕೇವಲ 3 ಲಕ್ಷಕ್ಕೆ ಮಾರುತಿ ಸರ್ವೋ ! ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ ಅತ್ಯಂತ ಕಡಿಮೆ ಬೆಲೆಯ ಕಾರುಗಳು

ಮೀನ ರಾಶಿ
ಹೊಸ ಆದಾಯಗಳು ದೊರೆಯಲಿದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ವೃದ್ದಿಸುತ್ತದೆ. ಇಂದು ಶತ್ರುಗಳು ಮಿತ್ರರಾಗಿ ಕಾಣಿಸಲಿದ್ದಾರೆ. ಹಣವನ್ನು ಹೂಡಿಕೆ ಮಾಡಲು ನಿರ್ಧಾರ ಮಾಡಿದ್ದರೆ ಇಂದು ನಿಮ್ಮ ಪಾಲಿಗೆ ಅನುಕೂಲಕರವಾಗಿ ಇರುತ್ತದೆ. ನೌಕರರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮನಸಿಗೆ ಸಂತೋಷವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಹೋದರ ನಡುವೆ ವಿರೋಧ ಉಂಟಾಗಲಿದೆ.

Horoscope today september 25 2023 Zordic sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular