ಇಂದು ಸೆಪ್ಟೆಂಬರ್ 27 2023 ಬುಧವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಇಂದು ಧನಿಷ್ಠ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಧೃತಿಮಾನ್ ಯೋಗ ಉಂಟಾಗುತ್ತದೆ. ಕೆಲವು ರಾಶಿಗಳು ಶತ್ರುಗಳಿಂದ ಸಮಸ್ಯೆಯನ್ನು ಎದುರಿಸಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.
ಮೇಷ ರಾಶಿ
ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರತಾಣ ಸಾಧ್ಯತೆ. ಮನೆಯಲ್ಲಿ ಉತ್ತಮ ವಾತಾವರಣ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ವೃಷಭ ರಾಶಿ
ಇಂದು ಆದಾಯಕ್ಕಿಂದ ಅಧಿಕ ಖರ್ಚುಗಳು ನಿಮ್ಮನ್ನು ಕಂಗೆಡಿಸಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ನಿಮ್ಮ ಮನೆಗೆ ಇಂದು ವಿಶೇಷ ಅತಿಥಿಯ ಆಗಮನ ಆಗುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಸಮಸ್ಯೆಯನ್ನು ಸ್ನೇಹಿತರ ಸಹಾಯದಿಂದ ಪರಿಹರಿಸುವಿರಿ.
ಮಿಥುನ ರಾಶಿ
ಹಣಕಾಸಿನ ವಿಚಾರದಲ್ಲಿ ಅನುಕೂಲಕರವಾದ ದಿನ. ವ್ಯವಹಾರ ಕ್ಷೇತ್ರದವರಿಗೆ ಇಂದು ಸ್ವಲ್ಪ ತೊಂದರೆ ಉಂಟಾಗುತ್ತದೆ. ಶತ್ರುಗಳ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು. ಉದ್ಯೋಗಿಗಳ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ
ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ಅಗತ್ಯವಿದೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಬೇಕು. ಉದ್ಯೋಗಿಗಳಿಗೆ ಇಂದು ವರ್ಗಾವಣೆ ಸಾಧ್ಯತೆ. ಸರಕಾರಿ ನೌಕರರು ಬಾಕಿ ಉಳಿದಿರುವ ಕಾರ್ಯವನ್ನು ಇಂದು ಪೂರ್ಣಗೊಳಿಸಲಿದ್ದಾರೆ. ಮಕ್ಕಳ ಜೊತೆಗೆ ಸಂಜೆಯ ವೇಳೆಗೆ ಸಮಯವನ್ನು ಕಳೆಯುವಿರಿ.
ಸಿಂಹ ರಾಶಿ
ಸಂಗಾತಿಯ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸರಿಯಾದ ಸಮಯದಲ್ಲಿಯೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆ ಆಗಲಿದೆ. ಸೋಮಾರಿತವನ್ನು ದೂರ ಮಾಡಿದ್ರೆ ಯಶಸ್ಸು.
ಇದನ್ನೂ ಓದಿ : ಕರ್ನಾಟಕ ಬಂದ್ : ಸೆಪ್ಟೆಂಬರ್ 28, 29 ರಂದು 2 ದಿನ ಶಾಲೆ, ಕಾಲೇಜುಗಳಿಗೆ ರಜೆ !
ಕನ್ಯಾ ರಾಶಿ
ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಇಂದೇ ಪೂರ್ಣಗೊಳಿಸಿ. ಹವಾಮಾನದ ಸಮಸ್ಯೆಯಿಂದ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ತಾಯಿಯೊಂದಿಗೆ ಯಾವುದೇ ಕಾರಣಕ್ಕೂ ಜಗಳ ಆಡಬೇಡಿ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ತುಲಾ ರಾಶಿ
ಸಂಬಂಧಿಕರಿಂದ ಸಹಕಾರ ದೊರೆಯಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣವನ್ನು ಅನುಭವಿಸುವಿರಿ. ಶತ್ರುಗಳಿಂದ ಇಂದು ತೊಂದರೆ ಎದುರಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಯಶಸ್ಸು ಸಾಧಿಸುವಿರಿ. ಮನಸಿನ ಮೂಲೆಯಲ್ಲಿರುವ ದೌರ್ಬಲ್ಯವನ್ನು ದೂರ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ ರಾಶಿ
ಶುಭ ಸುದ್ದಿಯೊಂದನ್ನು ಕೇಳುವಿರಿ. ನಿಮ್ಮ ಮಗುವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಉದ್ಯೋಗಿಗಳು ಇಂದು ಮೇಲಾಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ. ಹೊಸ ವ್ಯವಹಾರವನ್ನು ಆರಂಭಿಸುವುದರಿಂದ ಹೆಚ್ಚಿನ ಲಾಭ ದೊರೆಯಲಿದೆ.
ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳಿಗೆ ರಜೆ !
ಧನಸ್ಸು ರಾಶಿ
ಯಾವುದೇ ಕಾರ್ಯವನ್ನು ಮಾಡಿದ್ರೂ ಕೂಡ ಯಶಸ್ಸು ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಅಧಿಕ ಲಾಭ ನಿಮಗೆ ದೊರೆಯಲಿದೆ. ಸ್ನೇಹಿತರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ.ಹೊಸ ವ್ಯವಹಾರವನ್ನು ಆರಂಭಿಸಲು ಇಂದು ಸಕಾಲ.
ಮಕರ ರಾಶಿ
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಇಂದು ಕೆಲವೊಂದು ಶುಭ ಸುದ್ದಿಯನ್ನು ನೀವು ಕೇಳುವಿರಿ. ಆರ್ಥಿಕ ಲಾಭವನ್ನು ಪಡೆಯುವಿರಿ. ಕುಟುಂಬ ಸದಸ್ಯರು ಇಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರಭಾವಿ ವ್ಯಕ್ತಿಯ ಭೇಟಿ ಇಂದು ನಿಮಗೆ ಲಾಭವನ್ನು ತಂದುಕೊಡಲಿದೆ.
ಕುಂಭ ರಾಶಿ
ಭವಿಷ್ಯಕ್ಕಾಗಿ ಇಂದು ಸ್ವಲ್ಪವಾದ್ರೂ ಹೂಡಿಕೆ ಮಾಡಿ. ಹೊಸ ವ್ಯವಹಾರವನ್ನು ಆರಂಭಿಸಲು ಇಂದು ಸೂಕ್ತ. ಇತರರಿಂದ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬೇಡಿ. ಪಡೆದುಕೊಂಡ ಸಾಲವನ್ನು ಹಿಂದಿರುಗಿಸಲು ಕಷ್ಟವಾಗುವ ಸಾಧ್ಯತೆಯಿದೆ. ಸರಕಾರಿ ಕೆಲಸವನ್ನು ಮುಂದೂಡಬೇಡಿ.
ಇದನ್ನೂ ಓದಿ :ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ, ಚಿನ್ನ ಖರೀದಿಗೆ ಮುಗಿಬಿದ್ದ ಆಭರಣ ಪ್ರಿಯರು
ನೀಡಿದ ಸಾಲ ಇಂದು ಹಿಂದಿರುಗಿ ಬರಲಿದೆ. ತಂದೆಯ ಆರೋಗ್ಯದ ಬಗ್ಗೆ ಚಿಂತೆ ಮಾಡುವಿರಿ. ಸೂಕ್ತ ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತ. ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿ ಇರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.
Horoscope today september 27 2023 Zordic Sign