ಬುಧವಾರ, ಜೂನ್ 18, 2025
Homehoroscopebroom on the roof : ಯಾವುದೇ ಕಾರಣಕ್ಕೂ ಪೊರಕೆಯನ್ನು ಈ ಜಾಗದಲ್ಲಿ ಇಡಲೇಬೇಡಿ

broom on the roof : ಯಾವುದೇ ಕಾರಣಕ್ಕೂ ಪೊರಕೆಯನ್ನು ಈ ಜಾಗದಲ್ಲಿ ಇಡಲೇಬೇಡಿ

- Advertisement -

broom on the roof : ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಜನರು ಅವರ ಕಾರ್ಯಗಳಲ್ಲಿಯೇ ಹೆಚ್ಚು ನಿರತರಾಗಿರುತ್ತಾರೆ. ಸಣ್ಣ ಸಣ್ಣ ವಿಚಾರಗಳತ್ತ ಗಮನ ಕೊಡಲು ಯಾರ ಬಳಿಯೂ ಸಮಯ ಇರುವುದಿಲ್ಲ. ಆದರೆ ನಾವು ನಿರ್ಲಕ್ಷಿಸುವ ಸಣ್ಣ ಸಣ್ಣ ವಿಚಾರಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರಬಲ್ಲದು.

ಸಾಮಾನ್ಯವಾಗಿ ಜನರು ತಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಎಂದು ಗೊಣಗುತ್ತಿರುತ್ತಾರೆ. ತಮ್ಮ ಸುತ್ತಮುತ್ತಲಿನ ವಾತಾವರನ ನಕಾರಾತ್ಮಕವಾಗಿದೆ ಎಂದು ಭಾವಿಸುತ್ತಾರೆ. ಇದರ ಹಿಂದೆ ವಾಸ್ತು ದೋಷ ಕೂಡ ಇರಬಹುದು ಅಂತಾ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮನೆ ಸ್ವಚ್ಛವಾಗಿರಲಿ ಎಂದು ತೆಲೆಕೆಡಿಸಿಕೊಳ್ಳುವ ಜನರು ಮನೆಯ ಛಾವಣಿ ಕಡೆಗೆ ಗಮನವನ್ನೆ ನೀಡೋದಿಲ್ಲ. ಆದರೆ ಕೊಳಕು ಹಾಗೂ ಅನುಪಯುಕ್ತ ವಸ್ತುಗಳಿಂದ ತುಂಬಿರುವ ಛಾವಣಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಜೀವನ, ಆಹಾರ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು, ಆದ್ದರಿಂದ ಇಂದು ನಾವು ವಿಶೇಷವಾಗಿ ಮನೆಯ ಮೇಲ್ಛಾವಣಿಯಲ್ಲಿ ತಪ್ಪಿಸಬೇಕಾದ ವಿಶೇಷ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ :

ಸಾಮಾನ್ಯವಾಗಿ ಜನರು ಮನೆಯ ಛಾವಣಿಯಲ್ಲಿ ಪೊರಕೆಯನ್ನು ಇಡುತ್ತಾರೆ.. ಆದರೆ ಅದನ್ನು ತಪ್ಪಿಸಬೇಕು. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಪೊರಕೆಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಛಾವಣಿಯ ಮೇಲೆ ಇಡುವುದರಿಂದ ಪೊರಕೆ ಇಡೋದ್ರಿಂದ ಲಕ್ಷ್ಮೀ ಕೋಪಗೊಳ್ಳಬಹುದು. ಇದು ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಪೊರಕೆ ಎಂದಿಗೂ ಮನೆಯ ಒಳಗಡೆ ಇಡಬೇಕು.

ಸಾಮಾನ್ಯವಾಗಿ ಒಣಗಿದ ಎಲೆಗಳು ಛಾವಣಿಯ ಮೇಲೆ ಬೀಳುತ್ತದೆ. ಈ ರೀತಿ ಒಣ ಎಲೆಗಳು ಛಾವಣಿಗಳ ಮೇಲೆ ಸಂಗ್ರಹವಾಗೋದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ನಿಮಗೆ ಆಹಾರ ಹಾಗೂ ಹಣದ ಅಭಾವವನ್ನು ಉಂಟು ಮಾಡಬಹುದು.

ಜನರು ಮನೆಯ ಛಾವಣಿಯ ಮೇಲೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಇಡುತ್ತಾರೆ. ಈ ರೀತಿ ಮಾಡುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಛಾವಣಿಯ ಮೇಲೆ ತುಕ್ಕು ಹಿಡಿದ ಕಬ್ಬಿಣವನ್ನು ಇಟ್ಟರೆ ಅದರಿಂದ ದೈಹಿಕ ಹಾಗೂ ಆರ್ಥಿಕ ತೊಂದರೆ ಉಂಟಾಗುತ್ತದೆ. ಸಾಮಾನ್ಯವಾಗಿ ಜನರು ಬಿದಿರಿನ ಮರವನ್ನು ಛಾವಣಿಯ ಮೇಲೆ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಮನೆಯ ಛಾವಣಿಯ ಮೇಲೆ ಬಿದ್ದಿರುವ ಬಿದಿರು ಜೀವನದಲ್ಲಿ ತೊಂದರೆಗಳನ್ನು ಆಹ್ವಾನಿಸುತ್ತದೆ.

ಇದನ್ನು ಓದಿ : Vaastu Tips for success : ಯಶಸ್ಸಿಗಾಗಿ ಪರಿತಪಿಸುತ್ತಿದ್ದರೆ ಮನೆಯಲ್ಲಿ ಇಡಿ ಈ ಫೋಟೋ

ಇದನ್ನೂ ಓದಿ : plant parijat : ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆಯೇ..? ಈ ಗಿಡವನ್ನು ನಿಮ್ಮ ಅಂಗಳದಲ್ಲಿ ನೆಡಿ

How auspicious to have a broom on the roof These measures will solve all the problems far away

RELATED ARTICLES

Most Popular