small plants : ಮನೆಯ ಈ ದಿಕ್ಕಿನಲ್ಲಿ ಗಿಡವನ್ನು ನೆಟ್ಟರೆ ಸಿಗುತ್ತದೆ ಶುಭಯೋಗ

small plants : ಸುಮ್ಮನೇ ಅಂದವಾದ ಮನೆಯನ್ನು ಕಟ್ಟಿದರೆ ಸಾಲದು. ಅದು ವಾಸ್ತು ಪ್ರಕಾರವಾಗಿ ಇದೆಯಾ ಎಂದು ನೋಡಿಕೊಳ್ಳುವುದೂ ಸಹ ತುಂಬಾನೇ ಮುಖ್ಯ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಮುಗೀತು ಎಂಬರ್ಥವಲ್ಲ. ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನೂ ವಾಸ್ತು ಶಾಸ್ತ್ರವೇ ನಿರ್ಧರಿಸುತ್ತದೆ.

ವಸ್ತುಗಳು ಮಾತ್ರವಲ್ಲದೇ ಮನೆಯಲ್ಲಿರುವ ಗಿಡಗಳಿಗೂ ವಾಸ್ತುವಿನ ನಂಟಿದೆ. ಮನೆಯ ಅಂದ ಹೆಚ್ಚಲೆಂದು ಅನೇಕರು ಮನೆಯಲ್ಲಿ ಚಿಕ್ಕ ಚಿಕ್ಕ ಸಸಿಗಳನ್ನು ನೆಡುತ್ತಾರೆ. ಇದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿಯು ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿನವರೆಗೆ ಸಂಚರಿಸುತ್ತಾ ಇರುತ್ತದೆ. ಅಥವಾ ಉತ್ತರದಿಂದ ದಕ್ಷಿಣ ಇಲ್ಲವೇ ಆಗ್ನೇಯದಿಂದ ಈಶಾನ್ಯ ದಿಕ್ಕಿಗೆ ಸಂಚರಿಸುತ್ತಾ ಇರುತ್ತದೆ. ಹೀಗಾಗಿ ನೀವು ಇಂತಹ ಶೋ ಸಸಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಹೂವಿನ ಗಿಡಗಳನ್ನು ನೆಡುವುದು, ಹುಲ್ಲು ಅಥವಾ ಆಯಾ ಋತುಮಾನಗಳನ್ನು ಬೆಳೆಯುವ ಸಸಿಗಳನ್ನು ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದರ ಜೊತೆಯಲ್ಲಿ ಕುಟುಂಬಸ್ಥರು ಅನಾರೋಗ್ಯಕ್ಕೀಡಾಗುವುದೂ ಸಹ ತಪ್ಪಲಿದೆ.

ಕ್ಯಾಲೆಂಡರ್​ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

ಹೊಸ ವರ್ಷದ ಆರಂಭದೊಂದಿಗೆ, ಪ್ರತಿ ಮನೆಯಲ್ಲೂ ಕ್ಯಾಲೆಂಡರ್‌ ಬದಲಿಸಲಾಗಿದೆ. ಕ್ಯಾಲೆಂಡರ್​ ಇಲ್ಲದ ಮನೆಯೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮನೆಯಲ್ಲಿ ಕ್ಯಾಲೆಂಡರ್​ ನೇತು ಹಾಕುವ ವೇಳೆಯಲ್ಲಿ ನಾವು ಜಾಸ್ತಿ ಯೋಚನೆ ಮಾಡೋಕೆ ಹೋಗೋದಿಲ್ಲ. ಎಲ್ಲಿ ಮೊಳೆ ಇರುತ್ತದೆಯೋ ಅಲ್ಲಿ ಕ್ಯಾಲೆಂಡರ್​ ನೇತು ಹಾಕುತ್ತೇವೆ. ಆದರೆ ಈ ಕ್ಯಾಲೆಂಡರ್​ಗೂ ವಾಸ್ತು ಶಾಸ್ತ್ರ ಇದೆ ಅನ್ನೋದನ್ನು ನೀವು ಮರೆಯೋ ಹಾಗಿಲ್ಲ.

ಹಳೆಯ ಕ್ಯಾಲೆಂಡರ್​ ತೆಗೆದು ಹಾಕಿ :
ಸಾಮಾನ್ಯವಾಗಿ ಜನರು ಹಳೆಯ ಕ್ಯಾಲೆಂಡರ್​ಗಳನ್ನು ಎಸೆಯುವ ಗೋಜಿಗೇ ಹೋಗುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್​ಗಳನ್ನು ಗೋಡೆ ಮೇಲೆ ನೇತು ಹಾಕುವುದು ಒಳ್ಳೆಯದಲ್ಲ. ಇದರಿಂದ ಜೀವನದಲ್ಲಿ ಶುಭ ಘಳಿಗೆಗಳು ದೂರಾಗುತ್ತದೆ ಎನ್ನಲಾಗಿದೆ. ಆದ್ದರಿಂದ ಹಳೆಯ ಕ್ಯಾಲೆಂಡರ್​ಗಳಿಗೆ ಈ ಕೂಡಲೇ ಮನೆಯಿಂದ ಗೇಟ್​ ಪಾಸ್​ ನೀಡಿ.

ಕ್ಯಾಲೆಂಡರ್​ನ್ನು ಈ ದಿಕ್ಕಿನಲ್ಲಿಯೇ ಇಡಿ :
ಮನೆಯ ಉತ್ತರ, ಪಶ್ಚಿಮ ಅಥವಾ ಪೂರ್ವದ ಗೋಡೆಗೆ ಪಂಚಾಂಗ ಹಾಕುವುದು ಉತ್ತಮ. ಕೆಲವೊಮ್ಮೆ ಕ್ಯಾಲೆಂಡರ್‌ನ ಪುಟಗಳಲ್ಲಿ ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳು, ದುಃಖದ ಮುಖಗಳು ಇರುತ್ತವೆ. ಈ ರೀತಿಯ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಹೆಚ್ಚಿಸುತ್ತವೆ, ಆದ್ದರಿಂದ ಅಂತಹ ಚಿತ್ರಗಳಿರುವ ಕ್ಯಾಲೆಂಡರ್ ಅನ್ನು ತಪ್ಪಾಗಿ ಮನೆಯಲ್ಲಿ ಇಡಬಾರದು. ಕ್ಯಾಲೆಂಡರ್ ಅನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿದರೆ, ಈ ದಿಕ್ಕನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿಕ್ಕಿನ ಅಧಿಪತಿ ಸೂರ್ಯದೇವನಾಗಿದ್ದಾನೆ.

ಕ್ಯಾಲೆಂಡರ್​ ವಿಚಾರದಲ್ಲಿ ಮಾಡಬೇಡಿ ಈ ತಪ್ಪು:
ಮನೆಯಲ್ಲಿ ಕ್ಯಾಲೆಂಡರ್ ಇರಿಸುವಾಗ, ಕ್ಯಾಲೆಂಡರ್ ಅನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಪಂಚಾಂಗವನ್ನು ಇರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ವೈಭವವನ್ನು ಕಡಿಮೆ ಮಾಡುತ್ತದೆ.

ನಿಮ್ಮ ಮನೆಯಲ್ಲಿ ನೀವು ಬಳಸುವ ಕ್ಯಾಲೆಂಡರ್‌ನಲ್ಲಿ ಯಾವುದೇ ಪ್ರಾಣಿ ಅಥವಾ ದುಃಖದ ಮುಖದ ಚಿತ್ರ ಇರಬಾರದು, ಅಂತಹ ಕ್ಯಾಲೆಂಡರ್‌ನಿಂದ ಮನೆಯಲ್ಲಿ ವಾಸ್ತು ದೋಷಗಳು ಉದ್ಭವಿಸುತ್ತವೆ ಎಂದು ನಂಬಲಾಗಿದೆ. ಮನೆಯ ಬಾಗಿಲಿನ ಹಿಂದೆ ಕ್ಯಾಲೆಂಡರ್ ಅನ್ನು ನೇತುಹಾಕುವ ಅನೇಕ ಜನರಿದ್ದಾರೆ. ನಾವು ಎಂದಿಗೂ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ನೇತುಹಾಕಬಾರದು, ಅದನ್ನು ಮಾಡಿದರೆ ಅದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಯಸ್ಸನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ : plant parijat : ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆಯೇ..? ಈ ಗಿಡವನ್ನು ನಿಮ್ಮ ಅಂಗಳದಲ್ಲಿ ನೆಡಿ

ಇದನ್ನೂ ಓದಿ : Vaastu Tips for success : ಯಶಸ್ಸಿಗಾಗಿ ಪರಿತಪಿಸುತ್ತಿದ್ದರೆ ಮನೆಯಲ್ಲಿ ಇಡಿ ಈ ಫೋಟೋ

Vaastu Tips: Keeping small plants in this direction of the house bring positivity

Comments are closed.