ಗುರುವಾರ, ಮೇ 1, 2025
Homehoroscopeನಿತ್ಯಭವಿಷ್ಯ : 20-04-2020

ನಿತ್ಯಭವಿಷ್ಯ : 20-04-2020

- Advertisement -

ಮೇಷರಾಶಿ
ಮನಸ್ಸಿಗೆ ದುಃಖ, ವೃತ್ತಿರಂಗದಲ್ಲಿ ಆಗಾಗ ಅಡ್ಡಿ ಆತಂಕ ತೊಂದರೆಗಳು ತೋರಿಬಂದರೂ ನಿಮ್ಮ ಕಾರ್ಯವಿಧಾನದಿಂದ ನಿಮಗೆ ಯಶಸ್ಸು ತೋರಿ ಬರಲಿದೆ. ರಾಹುಭಾಗ್ಯ ಸ್ಥಾನಗತ ನಾದುದರಿಂದ ಧನಾಗಮನ ದುಗುಡ ದೂರ ಮಾಡಿಲಿದೆ. ಅಶಾಂತಿ ವಾತಾವರಣ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಅಧಿಕಾರಿಗಳಲ್ಲಿ ಕಲಹ.

ವೃಷಭರಾಶಿ
ಗುರು, ಶನಿಗಳು ನಿಮಗೆ ಲಾಭಾಗತರಾಗಿ ಆರ್ಥಿಕವಾಗಿ ಮುನ್ನಡೆಯಲು ಸಲಭವಾಗುತ್ತದೆ. ಆದರೂ ಆರೋಗ್ಯ ವಿಚಾರದಲ್ಲಿ ಕಿರಿಕಿರಿ ತಪ್ಪಲಾರದು. ಯುವಕ ಯುವತಿಯರಿಗೆ ಶುಭಮಂಗಲ ಕಾರ್ಯಕ್ಕೆ ಅನುಕೂಲ. ಅಧಿಕ ತಿರುಗಾಟ, ಹಣಕಾಸು ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಸಮಸ್ಯೆ.

ಮಿಥುನರಾಶಿ
ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಸ್ತ್ರೀಯರಿಗೆ ಲಾಭ, ಮಕ್ಕಳಿಗೆ ಅನಾರೋಗ್ಯ, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಲಿವೆ. ನೂತನ ಕೆಲಸಗಳಿಗೆ ಉತ್ತಮ ಸಮಯವಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಭವಿಷ್ಯದಲ್ಲಿ ಉತ್ತಮ ಫ‌ಲವಿರುತ್ತದೆ. ಉದ್ಯೊಗದಲ್ಲಿ ಬಡ್ತಿ.

ಕಟಕರಾಶಿ
ದ್ರವ್ಯ ನಷ್ಟ, ಸಾಲ ಬಾಧೆ, ಯತ್ನ ಕಾರ್ಯದಲ್ಲಿ ಭಂಗ, ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ತೊಂದರೆಗಳಿರುತ್ತದೆ. ದೇವತಾರ್ಚನೆಯಿಂದ ಸುಖ ಸಂತಸದ ಸಂತೃಪ್ತ ಜೀವನ ಸಿಗಲಿದೆ. ಕುಟುಂಬಿಕವಾಗಿ ಖರ್ಚುವೆಚ್ಚಗಳಿದ್ದರೂ ಧನಾಗಮನದಿಂದ ಹೆಚ್ಚಿನ ಸಮಸ್ಯೆಯು ಕಂಡು ಬಾರದು. ಉದ್ಯೋಗದಲ್ಲಿ ಕಿರಿಕಿರಿ, ಹೆಚ್ಚು ಅಶುಭ ಫಲಗಳು.

ಸಿಂಹರಾಶಿ
ನಂಬಿದ ಜನರಿಂದ ಮೋಸ, ಆತ್ಮೀಯರಲ್ಲಿ ಮನಃಸ್ತಾಪ, ಋಣಾತ್ಮಕ ಚಿಂತನೆಗಳಿಂದ ಚಿಂತಿತರಾದರೂ, ಕಾರ್ಯಗಳು ನಿಧಾನಗೊಂಡರೂ ಗುರುಬಲದಿಂದ ವೃತ್ತಿ ಕ್ಷೇತ್ರದಲ್ಲಿ ಆದಾಯ, ಅಭಿವೃದ್ಧಿ, ವ್ಯಾಪಾರಗಳಿಗೆ ಇಷ್ಟಸಿದ್ಧಿ. ಸಾಮಾಜಿಕವಾಗಿ ಜನಾದರಣೆ, ಉದ್ಯೋಗದಲ್ಲಿ ಹಿರಿಮೆ ಇದೆ. ದೂರ ಪ್ರಯಾಣ, ಮನಸ್ಸಿನಲ್ಲಿ ಭಯ ಭೀತಿ.

ಕನ್ಯಾರಾಶಿ
ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಧನ ಲಾಭ, ಹಿಡಿದ ಕೆಲಸ ಕಾರ್ಯಗಳು ವಿಫ‌ಲಗೊಂಡು ಮಾನಸಿಕ ಅಶಾಂತಿಗೆ ಕಾರಣವಾಗಬಹುದು. ಕುಟುಂಬಿಕವಾಗಿ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ಕಂಡು ಬರಲಿದೆ. ಹಲವಾರು ಸಮಸ್ಯೆಗಳಿಂದ ಗೊಂದಲಕ್ಕೆ ಕಾರಣರಾಗುವಿರಿ. ಬಂಧು ಮಿತ್ರರ ಸಮಾಗಮ, ಮಂಗಳ ಕಾರ್ಯ ನಡೆಯುವುದು.

ತುಲಾರಾಶಿ
ಕಾರ್ಯಸಾಧನೆಯಲ್ಲಿ ಯಶಸ್ಸು ತೋರಿಬಂದು ಹಂತಹಂತವಾಗಿ ಮನೋಕಾಮನೆ ಪೂರ್ಣವಾಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಹೆಚ್ಚಿನ ಪ್ರಯತ್ನ ಅಗತ್ಯ. ದೃಢ ನಿರ್ಧಾರಗಳು ಉಪಯುಕ್ತವಾಗಲಿದೆ. ಮಾನಸಿಕ ವ್ಯಥೆ, ಹಣಕಾಸು ತೊಂದರೆ, ಶತ್ರುಗಳ ಬಾಧೆ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಚಂಚಲ ಮನಸ್ಸು, ಸ್ಥಳ ಬದಲಾವಣೆ, ರಾಹುವಿನ ಪ್ರತಿಕೂಲತೆ ನಿಮ್ಮ ಕಾರ್ಯಸಾಧನೆಗೆ ಅಡ್ಡಿಯಾಗಲಿದೆ. ಉದಾಸೀನತೆ ತೋರದೆ ಆದಷ್ಟು ದೃಢ ಮನಸ್ಸಿನಿಂದ ಮುಂದುವರಿಯ ಬೇಕಾಗುವುದು. ಕ್ರೀಡಾಗಾರರಿಗೆ ಯಶಸ್ಸು ಸಂತಸ ತರಲಿದೆ. ಬಂಧುಗಳಲ್ಲಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು.

ಧನಸ್ಸುರಾಶಿ
ಸ್ನೇಹಿತರಿಂದ ಸಹಾಯ, ರಾಹು, ಕೇತುವಿನ ಪ್ರತಿಕೂಲತೆ ನಿಮ್ಮ ಕಾರ್ಯ ಭಾಗದಲ್ಲಿ ಹಿನ್ನಡೆ ತಂದರೂ ಗುರುವಿನ ದೈವಾನುಗ್ರಹವು ನಿಮ್ಮ ಪಾಲಿಗೆ ಸಂತಸ ತರಲಿದೆ. ಅನಿರೀಕ್ಷಿತ ರೂಪದಲ್ಲಿ ಉದ್ಯೋಗ ಲಾಭ, ಅವಿವಾಹಿತರಿಗೆ ಕಂಕಣ ಬಲವಿದೆ. ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಬಾಧೆ, ಗುರು ಹಿರಿಯರಲ್ಲಿ ಭಕ್ತಿ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ಪ್ರವಾಸ, ಅಲೆದಾಟದಿಂದ ಹಣದ ಮುಗ್ಗಟ್ಟು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಮಾನಸಿಕ ಸಮಾಧಾನವಿರದು. ಮುಖ್ಯವಾಗಿ ಆತ್ಮಸ್ಥೆರ್ಯ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಸಲು ಸಹಕಾರಿಯಾಗಲಿದೆ. ಮುಂದುವರಿಯಿರಿ. ಶತ್ರುಗಳನ್ನು ನಾಶ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ.

ಕುಂಭರಾಶಿ
ಋಣ ವಿಮೋಚನೆ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಹಿಡಿದ ಕೆಲಸಗಳು ವಿಫ‌ಲಗೊಂಡು ಮಾನಸಿಕ ಕಿರಿಕಿರಿ ತಂದಾವು. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ಆರ್ಥಿಕವಾಗಿ ಕೊಟ್ಟ ಹಣ ಮರಳಿಬಾರದು. ನಿರುದ್ಯೋಗಿಗಳಿಗೆ ಕಾಯುವ ಸ್ಥಿತಿಯು ಇದೆ. ಕೃಷಿಯಲ್ಲಿ ಲಾಭ, ಈ ದಿನ ಶುಭ ಫಲ, ಮಾನಸಿಕ ನೆಮ್ಮದಿ.

ಮೀನರಾಶಿ
ಹೆಚ್ಚಿನ ಗ್ರಹಗಳೆಲ್ಲಾ ಅನುಕೂಲ ಸ್ಥಿತಿಯಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳು ವಿಳಂಬದಲ್ಲಿ ಆದರೂ ಫ‌ಲ ನೀಡಲಿದೆ. ಕುಟುಂಬಿಕ ಸಹಕಾರ ಉತ್ತಮವಿದ್ದು ಮಾನಸಿಕ ಸಂತೃಪ್ತಿಯನ್ನು ಅನುಭವಿಸಲಿದ್ದಿರಿ. ಕೆಲಸ ಕಾರ್ಯಗಳಲ್ಲಿ ವಿಘ್ನ, ಸುಳ್ಳು ಮಾತನಾಡುವಿರಿ, ಇಲ್ಲಸ ಸಲ್ಲದ ಅಪವಾದ ನಿಂದನೆ, ಅಧಿಕ ಹಣವ್ಯಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular