ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 01-04-2020

ನಿತ್ಯಭವಿಷ್ಯ : 01-04-2020

- Advertisement -

ಮೇಷರಾಶಿ
ಆರ್ಥಿಕವಾಗಿ ಧನ ಸಂಗ್ರಹವಾದೀತು. ಕುಟುಂಬ ದವರಿಗೆ ವಿಶ್ರಾಂತಿ ದಿನಗಳಿವು ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ಲಾಭಕ್ಕೆ ಕಾಯುವಂತಾದೀತು. ಮಹಿಳೆಯರಿಗೆ ಮನಸ್ಸು ಅಶಾಂತಿ ಬೀಡಾದೀತು. ಸ್ವಂತ ಉದ್ಯಮವರಿಗೆ ಅಧಿಕ ಲಾಭ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧುಗಳ ಆಗಮನ, ಸುಖ ಭೋಜನ.

ವೃಷಭರಾಶಿ
ತಾಳ್ಮೆ, ಮೌನವಾಗಿರುವುದು ಉತ್ತಮ, ಹಿತ ಶತ್ರುಗಳಿಂದ ಕುತಂತ್ರ, ಸ್ಥಳ ಬದಲಾವಣೆ, ದೃಢ ಮನಸ್ಸಿನಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿರಿ. ಆರ್ಥಿಕವಾಗಿ ಹೊಂದಾಣಿಕೆಯ ಕಟ್ಟುನಿಟ್ಟಿನ ಪ್ರಯತ್ನವಿರಲಿ. ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದು ಅತೀ ಅಗತ್ಯವಿರುತ್ತದೆ. ಸ್ಥಿರಾಸ್ತಿ ಗಳಿಕೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಿಥುನರಾಶಿ
ಹಿರಿಯರ ಮಾತಿಗೆ ಬೆಲೆಕೊಡಿ, ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕಾಗಿ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿರುತ್ತದೆ. ಕುಟುಂಬ ವರ್ಗದವರಿಗೆ ಹಂತ ಹಂತವಾಗಿ ಅಭಿವೃದ್ಧಿಯ ಸೂಚನೆ ತರುತ್ತದೆ. ಅನಾವಶ್ಯಕ ಖರ್ಚು ಬಂದೀತು. ಮುಂಗೋಪ ಹೆಚ್ಚಾಗುವುದು, ವ್ಯವಹಾರದಲ್ಲಿ ಪಾಲುದಾರರ ವೈಮನಸ್ಸು, ಷೇರು ವಾಪಸ್ಸು ಪಡೆಯುವರು.

ಕಟಕರಾಶಿ
ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಹಣಕಾಸು ಲಾಭ, ರಾಜಕೀಯದವರಿಗೆ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಾರದು. ಏಕತಾನತೆಯಿಂದ ಮನೆಯಲ್ಲಿ ಬೋರು ಹೊಡೆಯಬಹುದು. ಎಲ್ಲರ ಮೇಲೆ ವಿನಾಕಾರಣ ಕೋಪತಾಪವು ಹೆಚ್ಚಲಿದೆ. ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಉತ್ತಮ ಶುಭ ಫಲ ಲಭಿಸುವುದು.

ಸಿಂಹರಾಶಿ
ಮನೆಯಲ್ಲಿ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹವು ತಂದೀತು. ವಿದ್ಯಾರ್ಥಿಗಳಿಗೆ ನಿರುತ್ಸಾಹ ತಂದೀತು. ಆಗಾಗ ಭವಿಷ್ಯದ ಬಗ್ಗೆ ಚಿಂತೆ ತಲೆದೋರಿತು. ದಿನಾಂತ್ಯದಲ್ಲಿ ಅತಿಥಿಗಳು ಬಂದಾರು. ದ್ರವ್ಯ ಲಾಭ, ದುಃಖದಾಯಕ ಪ್ರಸಂಗ, ರೋಗ ಬಾಧೆ, ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ.

ಕನ್ಯಾರಾಶಿ
ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು, ಉದ್ಯೋಗ ವ್ಯವಹಾರದಲ್ಲಿ ಏರುಪೇರು ಕಂಡುಬರಬಹುದು. ಬಂಧುಮಿತ್ರರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಮನಸ್ಸಿನ ನೆಮ್ಮದಿಗಾಗಿ ಶ್ರೀ ಕುಲದೇವತಾ ಆರಾಧನೆಯ ಅಗತ್ಯತೆ ಇದೆ. ಮಾನಸಿಕ ನೆಮ್ಮದಿ ಪ್ರಾಪ್ತಿ, ನೌಕರಿಯಲ್ಲಿ ಸಹಕಾರ, ಸಹೋದ್ಯೋಗಿಗಳಿಂದ ಬೆಂಬಲ. ವ್ಯವಹಾರಗಳಲ್ಲಿ ಮುನ್ನಡೆ.

ತುಲಾರಾಶಿ
ಮಹಿಳೆಯರಿಗೆ ಉತ್ತಮ, ನಾನಾ ರೀತಿಯ ಸಂಪಾದನೆ, ಮನೆಯಲ್ಲಿ ಅಭಿಪ್ರಾಯ ಬೇಧ ತೋರಿಬಂದು ಕಿರಿಕಿರಿ ಎನಿಸಲಿದೆ. ಮಕ್ಕಳ ಸಂಗದಲ್ಲಿ ನೆಮ್ಮದಿಯನ್ನೂ, ಸುಖವನ್ನೂ ಪಡೆಯಿರಿ. ಹಲವು ವಿಷಯಗಳು ಚಿಂತೆಗೆ ಕಾರಣವಾದೀತು. ಹಿತೈಷಿಗಳಿಂದ ಸಲಹೆ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ..

ವೃಶ್ಚಿಕರಾಶಿ
ನೀವಾಡುವ ಮಾತಿನಿಂದ ಗೌರವ, ಮಾತಿನ ಮೇಲೆ ನಿಗಾ ಇರಲಿ. ಸಣ್ಣ ಸಣ್ಣ ವಿಚಾರಕ್ಕೆ ಅಸಹನೆ ಮೂಡಿಬರಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಬಾಕಿ ಉಳಿದ ಮನೆಯ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳಿ. ಸ್ನೇಹಿತರಿಂದ ಸಕಾರಾತ್ಮಕ ಸಲಹೆ, ನಿರ್ಧಾರಗಳಿಗೆ ಮನ್ನಣೆ, ಸುಖ ಭೋಜನ ಪ್ರಾಪ್ತಿ.

ಧನಸ್ಸುರಾಶಿ
ಮಾತಿನ ಮೇಲೆ ಹಿಡಿತ ಅಗತ್ಯ, ಅನ್ಯರಿಗೆ ಉಪಕಾರ ಮಾಡುವಿರಿ, ಆಪ್ತರೊಂದಿಗೆ ಕಾಲಕ್ಷೇಪ ಮನಸ್ಸಿಗೆ ಸಮಾಧಾನ ತರಲಿದೆ. ವೃತ್ತಿಯಲ್ಲಿನ ಏರುಪೇರು ಚಿಂತೆಗೆ ಕಾರಣವಾದರೂ ಎಲ್ಲವೂ ಸರಿಯಾಗುತ್ತದೆ ಎಂಬ ನಂಬಿಕೆ ಇಡಿರಿ. ಆರೋಗ್ಯದಲ್ಲಿ ಸುಧಾರಣೆ. ಅಧಿಕ ತಿರುಗಾಟ, ಋಣ ವಿಮೋಚನೆ.

ಮಕರರಾಶಿ
ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸ್ತ್ರೀಯರಿಗೆ ಲಾಭ, ಕಳೆದುಹೋದ ಸಂತೋಷವನ್ನು ಸದ್ಯದಲ್ಲೇ ಮರಳಿ ಪಡೆಯುವ ಸಾಧ್ಯತೆ ಕಂಡುಬರುತ್ತದೆ. ವೃತ್ತಿರಂಗದಲ್ಲಿ ಸರಿಯಾಗಿ ಸಮಾಲೋಚಿಸಿ ಮುಂದುವರೆಯಿರಿ. ಆಪ್ತರಿಂದ ಸೂಕ್ತ ನೆರವು ಸಿಗಲಿದೆ. ಮಾನಸಿಕ ನೆಮ್ಮದಿ, ಸ್ವಯಂಕೃತ ಅಪರಾಧ, ಹಣಕಾಸು ಮುಗ್ಗಟ್ಟು.

ಕುಂಭರಾಶಿ
ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಸಾಂಸಾರಿಕವಾಗಿ ನೆಮ್ಮದಿ ವಾತಾವರಣವಿದ್ದರೂ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದು ಮಾಡದಿರಿ. ಮಾತಿನ ಮೇಲೆ ನಿಯಂತ್ರಣವಿರಲಿ. ಬಾಕಿ ಉಳಿದ ಮನೆಯ ಕಾರ್ಯಗಳನ್ನು ನೆರವೇರಿಸಿಕೊಳ್ಳಿರಿ. ಚೋರ ಭಯ, ತಾಳ್ಮೆ ಅತ್ಯಗತ್ಯ, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.

ಮೀನರಾಶಿ
ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ಕಿರಿಕಿರಿ, ನಿಮ್ಮ ಅವಶ್ಯಕತೆಯನ್ನು ಪೂರೈಸಲು ಇದು ಸಮಯ ಒಳ್ಳೆಯದು. ಯಾವುದೇ ಕೊರಗು ನಿಮ್ಮ ಮನಸ್ಸನ್ನು ತಲೆತಿನ್ನಲಿದೆ. ಉದ್ಯೋಗದಲ್ಲಿ ಕಿರಿಕಿರಿಯು ಹೆಚ್ಚಲಿದೆ. ಸುಧಾರಿಸಿಕೊಂಡು ಹೋಗಿರಿ. ಚಂಚಲ ಸ್ವಭಾವ, ಹೇಳಿಕೆ ಮಾತನ್ನು ಕೇಳಬೇಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular