ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 23-04-2020

ನಿತ್ಯಭವಿಷ್ಯ : 23-04-2020

- Advertisement -

ಮೇಷರಾಶಿ
ಕೃಷಿ ಉತ್ಪನ್ನ ಕ್ಷೇತ್ರದವರಿಗೆ ಲಾಭ, ಸ್ಥಿರಾಸ್ತಿ ವಾಹನ ಖರೀದಿ ಯೋಗ, ಕಿರು ಸಂಚಾರದ ಸಾಧ್ಯತೆ ತಂದೀತು. ಆರ್ಥಿಕ ಸ್ಥಿತಿ ಏರು ಪೇರಾಗದಂತೆ ಗಮನಹರಿಸಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಅಗತ್ಯ. ದಿನಾಂತ್ಯ ಸಹಿ ಸುದ್ದಿ ಇದೆ. ಹೆಣ್ಣು ಮಕ್ಕಳಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಭಾವನಾತ್ಮಕ ವಿಚಾರದಲ್ಲಿ ಯಶಸ್ಸು, ಮಕ್ಕಳಿಗಾಗಿ ಅಧಿಕ ಖರ್ಚು, ಪ್ರಯಾಣ ಮಾಡುವ ಹಂಬಲ.

ವೃಷಭರಾಶಿ
ದೀರ್ಘಕಾಲದ ಅನಾರೋಗ್ಯ, ಮಾನಸಿಕ ವ್ಯಥೆ, ಸ್ಥಿರಾಸ್ತಿ-ವಾಹನ ಲಾಭ, ದುಶ್ಚಟಗಳಿಗೆ ಖರ್ಚು, ಮನೆಯಲ್ಲಿ ಖರ್ಚು ವೆಚ್ಚಗಳು ಅಧಿಕವಾಗಲಿವೆ. ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸಲಿದ್ದೀರಿ. ವೈಯಕ್ತಿಕ ಆರೋಗ್ಯದಲ್ಲಿ ಜಾಗ್ರತೆ ಬೇಕು. ಗೌರವ ಸಂಪಾದಿಸುವ ಹಂಬಲ, ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು, ಮನಸ್ಸಿನಲ್ಲಿ ಆತಂಕ.

ಮಿಥುನರಾಶಿ
ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ಹೆಣ್ಣು ಮಕ್ಕಳಿಂದ ಸಂಕಷ್ಟ, ಅನಿರೀಕ್ಷಿತ ದೂರ ಸಂಚಾರದಲ್ಲಿ ಅಡಚಣೆ ತೋರಿಬರುತ್ತದೆ. ಇತರರೊಂದಿಗೆ ಬೆರೆಯಲು ಹಿಂಜರಿಕೆ ಇರುತ್ತದೆ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗವಿದೆ. ಪ್ರೀತಿ ಪ್ರೇಮ ವಿಚಾರದಲ್ಲಿ ದ್ರೋಹ, ಭಾವನಾತ್ಮಕ ವಿಚಾರದಲ್ಲಿ ಯಶಸ್ಸು, ಮಕ್ಕಳಿಂದ ಯಶಸ್ಸು, ಉದ್ಯೋಗ ಬಡ್ತಿ ಆಲೋಚನೆ, ಮಿತ್ರರಿಗಾಗಿ ಅಧಿಕ ಖರ್ಚು.

ಕಟಕರಾಶಿ
ವ್ಯಾಪಾರದಲ್ಲಿ ಅಧಿಕ ಲಾಭ, ಮಕ್ಕಳಲ್ಲಿ ವಾಗ್ವಾದ, ಅನಗತ್ಯ ಮಾತುಗಳಿಂದ ಕಿರಿಕಿರಿ, ಕುಟುಂಬದಲ್ಲಿ ನೋವು ನಿರಾಸೆ, ಪ್ರಮುಖ ವಿಚಾರಗಳನ್ನು ಇತ್ಯರ್ಥ ಪಡಿಸಲು ಇದು ಸೂಕ್ತ ದಿನವಲ್ಲ. ಕೌಟುಂಬಿಕವಾಗಿ ಅಸಮಾಧಾನ ತಂದೀತು. ಆರ್ಥಿಕ ಸ್ಥಿತಿ ಸುಧಾರಣೆಯಿಂದ ಸಂತಸವಾಗಲಿದೆ. ಮಹಿಳೆಯರಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ತೊಂದರೆ.

ಸಿಂಹರಾಶಿ
ಉದ್ಯೋಗದಲ್ಲಿ ಗೊಂದಲ, ಕೆಲಸದಲ್ಲಿ ನಿರಾಸಕ್ತಿ, ಆಕಸ್ಮಿಕ ಸಂಕಷ್ಟ, ಅಸಹನೆಯು ನಿಮ್ಮಿಂದ ಅನಪೇಕ್ಷಿತ ವರ್ತನೆಗೆ ಕಾರಣವಾದೀತು. ಆರ್ಥಿಕವಾಗಿ ಚೇತರಿಕೆ ಇರುತ್ತದೆ. ಆದರೂ ಖರ್ಚು ವೆಚ್ಚಗಳು ನಿಲ್ಲಲಾರದು. ನಿರ್ಧಾರದಲ್ಲಿ ಅನಿಶ್ಚಿತತೆ ಕಾಡಲಿದೆ. ನಿದ್ರಾಭಂಗ, ಉದ್ಯೋಗದಲ್ಲಿ ಪ್ರಗತಿ ಸಾಧ್ಯತೆ, ಸ್ವಯಂಕೃತ್ಯಗಳಿಂದ ಅವಕಾಶ ಕೈ ತಪ್ಪುವುದು. ಗೃಹ, ಸ್ಥಳ ಬದಲಾವಣೆಗೆ ಮನಸ್ಸು.

ಕನ್ಯಾರಾಶಿ
ನಿಗೂಢ ಪ್ರಸಂಗವೊಂದರ ಮೂಲಕ ಸತ್ಯ ಗೋಚರಕ್ಕೆ ಬರಲಿದೆ. ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬರಲಿವೆ. ನೀವು ಆಪ್ತೇಷ್ಟರಿಂದ ಅಡಗಿಸಿಡಲು ಬಯಸಿದ ವಿಷಯವು ಬಹಿರಂಗವಾಗಲಿದೆ. ಆರ್ಥಿಕ ಸಂಕಷ್ಟಗಳು, ಪ್ರಯಾಣ ಮುಂದೂಡಿಕೆ, ಸಂಗಾತಿಯಿಂದ ದೂರ, ಆಕಸ್ಮಿಕ ನಷ್ಟ, ನಷ್ಟಗಳು ಹೆಚ್ಚಾಗುವುದು, ಅಹಂಭಾವದ ನಡವಳಿಕೆಯಿಂದ ಸಂಕಷ್ಟ.

ತುಲಾರಾಶಿ
ಕೆಲಸ ಕಾರ್ಯಗಲ್ಲಿ ಮುನ್ನಡೆ, ವ್ಯಾಪಾರದಲ್ಲಿ ಧನ ಲಾಭ, ದುಷ್ಟ ಆಲೋಚನೆ ಹೆಚ್ಚಾಗುವುದು, ಕೌಟುಂಬಿಕವಾಗಿ ಗೊಂದಲದ ಪರಿಸ್ಥಿತಿ ತೋರಿಬರಲಿದೆ. ಮಾನಸಿಕ ಅಸ್ಥಿರತೆಯಿಂದ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವಿರಿ. ಬದಲಾವಣೆಗೆ ಮನಸ್ಸು ಮಾಡಿದ್ದಲ್ಲಿ ಕಾರ್ಯಸಾಧನೆಯಾಗಲಿದೆ. ದಾಂಪತ್ಯದಲ್ಲಿ ಅನ್ಯರ ಪ್ರವೇಶದಿಂದ ಸಂಕಷ್ಟ, ಆರ್ಥಿಕ ಸಮಸ್ಯೆ, ಗೌರವಕ್ಕೆ ಧಕ್ಕೆ.

ವೃಶ್ಚಿಕರಾಶಿ
ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಹಿರಿಯರಿಂದ ತಾಮ್ರಪತ್ರ ದೊರಕಲಿದೆ. ಉದ್ಯೋಗಿಗಳಿಗೆ ವೃತ್ತಿ ಬದಲಾವಣೆಯ ಸಂಭವವಿದೆ. ದುಡಿಮೆಗೆ ತಕ್ಕುದಾದ ಸಂಭಾವನೆ ದೊರಕಿ ಸಂತಸ ತರಲಿದೆ. ಸಾಂಸಾರಿಕ ಸಂಬಂಧಗಳು ಗಟ್ಟಿಯಾಗಲಿವೆ. ಉದ್ಯೋಗದಲ್ಲಿ ಸಂತಸ, ಮಿತ್ರರಿಂದ ನೆಮ್ಮದಿ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಸಂಗಾತಿಯೇ ಶತ್ರುವಾಗುವರು.

ಧನಸ್ಸುರಾಶಿ
ಭಾವನ ಲೋಕದಲ್ಲಿ ವಿಹಾರ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಹೋಗದಿರಿ. ವೃತ್ತಿ ಬದಲಾವಣೆ ಸಂಭವವಿದೆ. ಆಪೇಷ್ಟರೊಂದಿಗೆ ಆತ್ಮೀಯವಾಗಿ ಸಮಯವನ್ನು ಕಳೆಯಲಿದ್ದೀರಿ. ದಿನಾಂತ್ಯ ಶುಭ. ಹಿರಿಯರ ಸಹೋದರರಿಂದ ಸಹಾಯ, ಪ್ರಯಾಣದಲ್ಲಿ ವಸ್ತು ಕಳವು, ತಂದೆಯಿಂದ ಅನುಕೂಲ, ಗುತ್ತಿಗೆದಾರರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಯೋಗ.

ಮಕರರಾಶಿ
ಪ್ರೀತಿ ಪ್ರೇಮ ವಿಚಾರಗಳಿಂದ ತೊಂದರೆ, ಸಂಸಾರದಲ್ಲಿ ಕಿರಿಕಿರಿ, ಯಾವುದೇ ಕೆಲಸವನ್ನು ಆತುರತೆಯಿಂದ ಮಾಡಲು ಹೋಗದಿರಿ. ಹಿರಿಯರ ಸಲಹೆಗಳಿಗೆ ಕಿವಿಗೊಡಿರಿ. ಹರಿತ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿರಿ. ಇತರರೊಡನೆ ಸಂಘರ್ಷಕ್ಕೆ ಇಳಿಯದಿರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು, ಸ್ಥಿರಾಸ್ತಿ-ವಾಹನ ಲಾಭ, ಗೃಹ ನಿರ್ಮಾಣಕ್ಕೆ ಒಲವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಭಾವನೆಗಳಿಗೆ ಧಕ್ಕೆ.

ಕುಂಭರಾಶಿ
ವಿಪರೀತ ರಾಜ ಯೋಗ, ಸಂಗಾತಿಯಿಂದ ನೆಮ್ಮದಿ, ಪತ್ರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ವೈಮನಸ್ಸು. ಮೋಜಿಗೆ ಇದು ಸೂಕ್ತ ಸಮಯವಲ್ಲ. ಅನಿರೀಕ್ಷಿತವಾಗಿ ಅವಘಡದ ಸಂಭವವಿದೆ. ನಿಮ್ಮ ಸುತ್ತಮುತ್ತಲಿನವರು ನಿಮ್ಮ ವಿರುದ್ಧವಾಗಿ ವರ್ತಿಸುವರು. ದಿನನಿತ್ಯದ ಕರ್ತವ್ಯಗಳನ್ನು ನಿರ್ಲಕ್ಷಿಸದಿರಿ.

ಮೀನರಾಶಿ
ಯೋಚಿಸಿ, ಚಿಂತಿಸಿ ಮುಂದಡಿ ಇಡಿರಿ. ಇಲ್ಲದಿದ್ದಲ್ಲಿ ಹತಾಶೆ ನಿಮ್ಮನ್ನು ಕಾಡಬಹುದು. ತಾಳ್ಮೆ ನಿಮಗೆ ಅವಶ್ಯವಿದೆ. ಹೊಸ ಗೆಳೆಯರು ಸಿಗುವ ಸಾಧ್ಯತೆ ಇದೆ. ಬಿಪಿ, ಶುಗರ್ ಬಾಧೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕ ಸಮಸ್ಯೆ ನಿವಾರಣೆ, ಉದ್ಯೋಗ ಬದಲಾವಣೆಗೆ ಅವಕಾಶ, ಆಕಸ್ಮಿಕ ಧನ ಲಾಭ, ಸಾಲ ಲಭಿಸುವುದು. ಇವತ್ತು ನಿಮಗೆ ಸವಾಲಿನ ದಿನವಿದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular