ಮೇಷರಾಶಿ
ಕೃಷಿಕರಿಗೆ ಲಾಭ, ವ್ಯಾಪಾರಿಗಳಿಗೆ ಧನಾಗಮನ, ವ್ಯಾಪಾರ ವ್ಯವಹಾರಗಳಲ್ಲಿ ವಂಚನೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಉದ್ಯೋಗಿ ಮಹಿಳೆಯರಿಗೆ ಬದಲಾವಣೆಯ ಸಾಧ್ಯತೆ. ಸ್ಥಿರಾಸ್ತಿ ಲಾಭ, ವಾಹನದಿಂದ ಅನುಕೂಲ, ವಸ್ತ್ರಾಭರಣ ಖರೀದಿಯಲ್ಲಿ ಮೋಸ.
ವೃಷಭರಾಶಿ
ಆರೋಗ್ಯ ಸಮಸ್ಯೆ, ಮಾನಸಿಕ ವೇದನೆ, ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇದ್ದರೂ ಉದಾಸೀನ ಸಲ್ಲದು. ರಾಜಕೀಯದವರಿಗೆ ಶುಭದಾಯಕ ವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಸವಾಲು. ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅನುಕೂಲ, ಮೋಜು-ಮಸ್ತಿಗಾಗಿ ಅಧಿಕ ಖರ್ಚು.
ಮಿಥುನರಾಶಿ
ಧನಾದಾಯದಿಂದ ಅಸ್ತಿಪಾಸ್ತಿಗಳ ಸಂಗ್ರಹ. ಮನೆಯಲ್ಲಿ ಮಂಗಲಕಾರ್ಯಗಳ ಸಾಧ್ಯತೆ. ಕೋರ್ಟು ಸಂಬಂಧದ ವ್ಯವಹಾರಕ್ಕೆ ಧನವ್ಯಯವಾಗಲಿದೆ. ವಾಹನ ಸಂಚಾರದಲ್ಲಿ ಅಡಚಣೆ. ಕುಟುಂಬ ಸಮೇತ ಪ್ರಯಾಣ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಪ್ರೇಮ ವಿಚಾರದಲ್ಲಿ ತಗಾದೆ, ಮಿತ್ರರಿಂದ ನಂಬಿಕೆ ದ್ರೋಹ.
ಕಟಕರಾಶಿ
ವ್ಯಾಪಾರಸ್ಥರಿಗೆ ಅಧಿಕ ಲಾಭ, ಬಟ್ಟೆ ಉದ್ಯಮ ಹಾಗೂ ದಲ್ಲಾಳಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭವಿರದು. ವಾಹನಾದಿ ಸಂಬಂಧಿಸಿದ ವ್ಯವಹಾರದಲ್ಲಿ ನಷ್ಟ. ಅತಂಕಕ್ಕೆ ಒಳಗಾಗುವಿರಿ. ಸಾಂಸಾರಿಕವಾಗಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿ ಬರಲಿದೆ. ಮಕ್ಕಳೊಂದಿಗೆ ವಾಗ್ವಾದ, ಅನಗತ್ಯ ಮಾತುಗಳಿಂದ ತೊಂದರೆ, ಸ್ತ್ರೀಯರಿಂದ ಬೈಗುಳ ಕೇಳುವಿರಿ.
ಸಿಂಹರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ ಇದ್ದರೂ ಅಡಚಣೆ. ನೌಕರ ವರ್ಗದವರಿಗೆ ಅಶುಭ ಫಲವಿದ್ದು ಹಣಕಾಸಿನ ತೊಂದರೆ ಹಾಗೂ ತಾಪತ್ರಯ ಹೆಚ್ಚಲಿದೆ. ಸರಕಾರಿ ಅಧಿಕಾರಿಗಳಿಗೆ ಹಿನ್ನಡೆ ತಂದೀತು. ಕೆಲಸಗಳಲ್ಲಿ ನಿರುತ್ಸಾಹ, ಕಲಾವಿದರಿಗೆ ತೊಂದರೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಯೋಚನೆಯಿಂದ ನಿದ್ರಾಭಂಗ.
ಕನ್ಯಾರಾಶಿ
ವಿಪರೀತ ಆರ್ಥಿಕ ಸಂಕಷ್ಟ, ಆಕಸ್ಮಿಕ ಅವಘಡ, ವೃತ್ತಿರಂಗದಲ್ಲಿ ಕಾರ್ಯ ಒತ್ತಡಗಳು ಕಂಡು ಬಂದಾವು. ಕುಟುಂಬ ಸ್ಥಾನದಲ್ಲಿ ವಾದವಿವಾದ ಗಳಿಂದ ಕಾರ್ಯಭಂಗವಾದೀತು. ಶನಿಯ ಪ್ರತಿಕೂಲ ದೇಹಾರೋಗ್ಯದಲ್ಲಿ ಪರಿಣಾಮ ಬೀರಬಹುದು. ಧರ್ಮಕಾರ್ಯಕ್ಕೆ ಅಡಚಣೆ ಇದೆ. ಪ್ರಯಾಣ ಮಾಡುವಿರಿ, ದಾಂಪತ್ಯದಲ್ಲಿ ಕಿರಿಕಿರಿ, ಸಂಗಾತಿಯಿಂದ ದೂರವಾಗುವ ಆಲೋಚನೆ.
ತುಲಾರಾಶಿ
ಉದ್ಯೋಗ – ವ್ಯಾಪಾರದಲ್ಲಿನ ಬಾಕಿ ಹಣ ಪ್ರಾಪ್ತಿ, ಮಹಿಳೆಯರಿಗೆ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆ ಹೆಚ್ಚಲಿದೆ. ವೃತ್ತಿರಂಗದಲ್ಲಿ ವಿರೋಧವನ್ನು ಎದುರಿಸುವಂತಾದೀತು. ವ್ಯಾಪಾರಸ್ಥರಿಗೆ, ಲೇವಾದೇವಿರಿಗೆ ನಷ್ಟ ಸಂಭವವಿದೆ. ಸಂಚಾರದಲ್ಲಿ ಜಾಗ್ರತೆ. ಮಹಿಳಾ ಮಿತ್ರರೊಂದಿಗೆ ಕಲಹ, ಮಾನಸಿಕ ವ್ಯಥೆ, ದುಶ್ಚಟಗಳಿಗೆ ಮನಸ್ಸು.
ವೃಶ್ಚಿಕರಾಶಿ
ಐಷಾರಾಮಿ ಜೀವನಕ್ಕೆ ಮನಸ್ಸು, ವಿಪರೀತ ಖರ್ಚು, ರಾಜಕೀಯ ವ್ಯವಹಾರದವರು ಸಮಸ್ಯೆಗಳನ್ನು ಎದುರಿಸಬೇಕಾದೀತು. ವಿವಾಹ ಯೋಗ, ಮನೆಯಲ್ಲಿ ಮಂಗಲಕಾರ್ಯಕ್ಕೆ ಭಂಗವಾದೀತು. ಸಂಧಿನೋವುಗಳ ತೊಂದರೆಯಿಂದ ಅನಾರೋಗ್ಯವು ಕಾಡಲಿದೆ. ಜಾಗ್ರತೆ ಮಾಡಿರಿ. ವ್ಯಾಪಾರ-ವ್ಯವಹಾರದಲ್ಲಿ ಬಂಡವಾಳ ನಷ್ಟ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮಿತ್ರರೊಂದಿಗೆ ಸಂತಸ.
ಧನಸ್ಸುರಾಶಿ
ಭಾವನೆಗಳಲ್ಲಿ ವಿಹಾರ, ಹಿರಿಯ ಸಹೋದರಿಯಿಂದ ಲಾಭ, ರಾಜಕಾರಣಿಗಳಿಗೆ ಉತ್ತಮ ಫಲವಿದೆ. ಆರೋಗ್ಯದ ಬಗ್ಗೆ ಉದಾಸೀನ ಮಾಡದಿರಿ. ಅನಿರೀಕ್ಷಿತ ಪ್ರಯಾಣ ಕಂಡು ಬರಲಿದೆ. ಕುಟುಂಬ ಜನರ ವಿರೋಧ. ವಾಹನ ಸಂಚಾರದಲ್ಲಿ ಸಮಸ್ಯೆ ಇದೆ. ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳವು.
ಮಕರರಾಶಿ
ಪ್ರೇಮ ವಿಚಾರದಲ್ಲಿ ತೊಂದರೆ, ಹೆಚ್ಚಿನ ಕೆಡುಕು ಉಂಟಾಗಿದೆ. ಕೆಲಸ ಕಾರ್ಯಗಳು ನಡೆಯಲಿವೆ. ಕಾನೂನು ಸಂಬಂಧಿತ ಕೆಲಸಕಾರ್ಯ ಯಶಸ್ಸನ್ನು ತರಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ. ಗಾಳಿ ಮಾತುಗಳಿಂದ ಸಂಸಾರದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ.
ಕುಂಭರಾಶಿ
ವಿಪರೀತ ರಾಜಯೋಗ, ವ್ಯಾಪಾರ, ವ್ಯವಹಾರಗಳನ್ನು ಬಹು ಕಷ್ಟ ಹಾಗೂ ಎಚ್ಚರಿದಿಂದ ಮುನ್ನಡೆಸಬೇಕಾದೀತು. ಬಂಧುಗಳಿಂದ ವ್ಯಾಜ್ಯ ವಿವಾದಗಳು ತೋರಿಬಂದಾವು. ಹೆಚ್ಚಿನ ಗಮನಹರಿಸಿರಿ. ಸಾಂಸಾರಿಕವಾಗಿ ಪತ್ನಿಯ ಆರೋಗ್ಯದ ಜಾಗ್ರತೆ ಮಾಡಿರಿ. ಸಂಗಾತಿಯಿಂದ ಶುಭ, ಸ್ನೇಹಿತರಿಂದ ಸಮಸ್ಯೆಗೆ ಮುಕ್ತಿ, ಮಾನಸಿಕ ರೋಗ ಬಾಧೆ.
ಮೀನರಾಶಿ
ಶುಭ ಫಲಗಳು ಗೋಚರಕ್ಕೆ ಬರುವ ಸಮಯದಲ್ಲೇ ಅಡತಡೆಗಳನ್ನು ಎದುರಿಸಬೇಕಾಗುತ್ತವೆ. ಸಂಸಾರ ಸುಖವಿದ್ದರೂ ಕಿರಿಕಿರಿ ತಪ್ಪದು. ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಅಭಿವೃದ್ಧಿ ಕಂಡು ಬರಲಿದೆ. ರೋಗ ಬಾಧೆ, ಸಂತಾನ ದೋಷ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕ ಸಮಸ್ಯೆ ನಿವಾರಣೆ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.
