ಭಟ್ಕಳ ಕೊರೊನಾ ರೋಗಿಯ ಬಗ್ಗೆ ಅಲರ್ಟ್ : ಮಂಗಳೂರು ಎಕ್ಸ್ ಪ್ರೆಸ್ ಪ್ರಯಾಣಿಕರೇ ಎಚ್ಚರ !!!

0

ಬೆಂಗಳೂರು : ಭಟ್ಕಳ ಮೂಲದ 65 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಮಂಗಳೂರು ಎಕ್ಸ್ ಪ್ರೆಸ್ ರೈಲಿನ ಕೋಚ್ ಎಸ್3 ಪ್ರಯಾಣಿಸಿದ್ದ ಪ್ರಯಾಣಿಕರು ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ.

ದುಬೈನಿಂದ ಮಾರ್ಚ್ 17ರಂದು ಮುಂಬೈಗೆ ಆಗಮಿಸಿದ್ದ ಮಹಿಳೆ ಮುಂಬೈನಿಂದ ಭಟ್ಕಳಕ್ಕೆ ಮಂಗಳೂರು ಎಕ್ಸ್ ಪ್ರೆಸ್ ರೈಲಿನ ಮೂಲಕ ಪ್ರಯಾಣಿಸಿದ್ದರು. ಮನೆಗೆ ತೆರಳಿದ್ದ ನಂತರದಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು.

ಇದೀಗ ಆರೋಗ್ಯ ಇಲಾಖೆ ಭಟ್ಕಳ ಮೂಲದ ಮಹಿಳೆಯ ಜೊತೆಯಲ್ಲಿ ಪ್ರಯಾಣಿಸಿದ್ದ ಸಹ ಪ್ರಯಾಣಿಕರ ಮಾಹಿತಿಯನ್ನು ಕೋರಿದೆ. ಮಂಗಳೂರು ಎಕ್ಸ್ ಪ್ರೆಸ್ ರೈಲಿನ ಎಸ್ 3 ಬೋಗಿಯಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೆಲ್ಲರೂ ವೈದ್ಯಕೀಯ ಸಹಾಯವಾಣಿಗೆ ತುರ್ತಾಗಿ ಕರೆಮಾಡುವಂತೆ ಸೂಚನೆಯನ್ನು ನೀಡಿದೆ,

Leave A Reply

Your email address will not be published.