ಮೇಷರಾಶಿ
ಸ್ತ್ರೀ-ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನು ವಹಿಸಿಕೊಂಡಲ್ಲಿ ಪರಿಸ್ಥಿತಿಯು ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು. ಆರೋಗ್ಯ ಜಾಗ್ರತೆ. ಪ್ರೇಮ ವಿಚಾರದಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ತಂದೆ ಜೊತೆ ವೈಮನಸ್ಸು, ಉದ್ಯೋಗ ಕಳೆದುಕೊಳ್ಳುವ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭರಾಶಿ
ಸ್ವಯಂಕೃತ ಅಪರಾಧಗಳಿಂದ ನಷ್ಟ, ಶೀತ, ಕಫ, ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸಕಾರ್ಯಗಳು ಮುನ್ನಡೆಯುಲಿವೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು. ಆರೋಗ್ಯದಲ್ಲಿ ವ್ಯತ್ಯಾಸ, ಗರ್ಭ ದೋಷ, ಅನಿರೀಕ್ಷಿತವಾಗಿ ಪೆಟ್ಟಾಗುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಹಿಳೆಯರಲ್ಲಿ ಗೊಂದಲ, ಮಾಟ-ಮಂತ್ರ ತಂತ್ರದ ಭೀತಿ, ಕೋರ್ಟ್ ಕೇಸ್‍ಗೆ ಓಡಾಟ, ಸಾಲ ಬಾಧೆ, ಶತ್ರುಕಾಟ.
ಮಿಥುನರಾಶಿ
ಆಸೆ ಆಕಾಂಕ್ಷೆಗಳಿಂದ ತೊಂದರೆ, ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳಿಂದ ಕಲಹವು ತೋರಿಬರುವುದು. ನಿಮ್ಮ ಕೆಲಸಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿವೆ. ಮಾನಸಿಕವಾಗಿ ಚಂಚಲತೆಯು ಕಾಡಲಿದೆ. ಬಂಧುಗಳ ಆಗಮನವಿದೆ. ಮಕ್ಕಳ ಭವಿಷ್ಯ ಚಿಂತೆ, ಕಲಾ-ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲ, ಬೇಡದ ವಿಚಾರಗಳಿಂದ ಸಂಕಷ್ಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರೆಯಲ್ಲಿ ದುಃಸ್ವಪ್ನಗಳು, ಅಲಂಕಾರಿಕ ವಸ್ತು-ಔಷಧಗಳಿಗೆ ಖರ್ಚು.

ಕಟಕರಾಶಿ
ಕುಟುಂಬದಿಂದ ನೋವು, ಸಂಕಟ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಗ್ಯಾಸ್ಟ್ರಿಕ್, ಶರೀರದಲ್ಲಿ ನೋವು, ಶತ್ರುಗಳ ಕಾಟ, ಚಿಂತಿತ ಶುಭಮಂಗಲ ಕಾರ್ಯವು ಸದ್ಯದಲ್ಲೇ ನೆರವೇರಲಿದೆ. ಸರಕಾರಿ ಕೆಲಸಕಾರ್ಯಗಳಲ್ಲಿ ನಿಮ್ಮ ಪರವಾಗಿ ಫಲ ನೀಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಾರು. ಆರ್ಥಿಕವಾಗಿ ಹಿನ್ನಡೆ. ಮಾಟ-ಮಂತ್ರ ತಂತ್ರದ ಭೀತಿ, ಸೇವಕರು-ಕಾರ್ಮಿಕರಿಂದ ಸಂಕಷ್ಟ, ಬಡತನ ಬಾಧಿಸುವುದು.
ಸಿಂಹರಾಶಿ
ಸಂತಾನ ದೋಷ, ಒಂಟಿತನ ಬಯಸುವಿರಿ, ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಉತ್ತಮ ಫಲವನ್ನು ಪಡೆಯಲಿದ್ದಾರೆ. ಸಾಂಸಾರಿಕ ಸುಖವು ಉತ್ತಮವಿದ್ದರೂ ಗೊಂದಲಗಳು ಅಧಿಕವಾದಾವು. ದೃಢನಿರ್ಧಾರಗಳು ನಿಮ್ಮ ಕಾರ್ಯವನ್ನು ಮುನ್ನಡೆಸಲಿವೆ. ಆರೋಗ್ಯದಲ್ಲಿ ವ್ಯತ್ಯಾಸ, ಕಾನೂನಿನ ಬಲೆಯಲ್ಲಿ ಸಿಲುಕುವ ಆತಂಕ, ದಂಡ ಕಟ್ಟುವ ಸನ್ನಿವೇಶ, ಉದ್ಯೋಗ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ವೈಮನಸ್ಸು.
ಕನ್ಯಾರಾಶಿ
ಮನೆಯಲ್ಲಿ ಹಿರಿಯರ ಆಗಮನವಿರುತ್ತದೆ. ಆರ್ಥಿಕವಾಗಿ ಸಂಪನ್ಮೂಲಗಳನ್ನು ಸರಿಯಾಗಿಟ್ಟುಕೊಳ್ಳಿರಿ. ಅನಾವಶ್ಯಕವಾಗಿ ಹೆಚ್ಚಿನ ಆತ್ಮವಿಶ್ವಾಸ ಉತ್ತಮವಲ್ಲ. ದೈಹಿಕವಾಗಿ ಹೆಚ್ಚಿನ ಗಮನ ಹರಿಸುವುದು ಮುಖ್ಯ. ದೂರ ಪ್ರಯಾಣದಿಂದ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಯೋಜನೆಗಳಿಗೆ ತೊಂದರೆ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆಸೆ ಆಕಾಂಕ್ಷೆಗಳಿಂದ ಸಮಸ್ಯೆ, ಮಾನಸಿಕ ವ್ಯಥೆ, ಮನೆ ವಾತಾವರಣ ಅಶಾಂತಿ, ಹಿತ ಶತ್ರುಗಳಿಂದ ನೋವು.

ತುಲಾರಾಶಿ
ಸ್ವಯಂಕೃತ ಅಪರಾಧದಿಂದ ಸಮಸ್ಯೆ, ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕವಾಗಿ ಖರ್ಚುಗಳೇ ಅಧಿಕವಾದಾವು. ಮನೆಯಲ್ಲಿ ಒಂಟಿತನದ ಅನುಭವವಾದೀತು. ಸಂಚಾರದಲ್ಲಿ ಗಮನವಿರಲಿ. ಪ್ರಯಾಣದಲ್ಲಿ ನೋವು, ಪತ್ರ ವ್ಯವಹಾರದಲ್ಲಿ ಸಮಸ್ಯೆ, ಸ್ಥಿರಾಸ್ತಿ ತಗಾದೆ, ಕೋರ್ಟ್‍ನಲ್ಲಿ ಜಯದ ಸೂಚನೆ, ಮಾನಸಿಕ ವ್ಯಥೆ, ಅಹಂಭಾವ ಹೆಚ್ಚಾಗುವುದು, ಉಸಿರಾಟ ಸಮಸ್ಯೆ, ಶರೀರದಲ್ಲಿ ನೋವು.
ವೃಶ್ಚಿಕರಾಶಿ
ಆರ್ಥಿಕ ಸಂಕಷ್ಟಗಳು, ಆತ್ಮೀಯರು ದೂರಾಗುವರು, ಚಿಂತಿತ ಕೆಲಸಕಾರ್ಯಗಳು ಒಂದೊಂದಾಗಿ ನೆರವೇರಲಿವೆ. ಯೋಗ್ಯ ವಯಸ್ಕರು ಸದ್ಯದಲ್ಲೇ ಕಂಕಣಬಲವನ್ನು ಹೊಂದಲಿದ್ದಾರೆ. ಮಿತ್ರರೊಂದಿಗೆ ಅನಾವಶ್ಯಕ ಕಲಹಕ್ಕೆ ಕಾರಣರಾಗದಿರಿ. ವಾಹನ ಖರೀದಿ ಯೋಗವಿದೆ. ಬಂಧುಗಳಿಂದ ತೊಂದರೆ, ಕುಟುಂಬದಲ್ಲಿ ಕಿರಿಕಿರಿ, ಅನಗತ್ಯ ಮಾತುಗಳಿಂದ ಕಲಹ, ಸ್ಥಿರಾಸ್ತಿ ತಗಾದೆ ಮುಂದುವರಿಯುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುರು, ದೈವ ದರ್ಶನದ ಚಿಂತೆ, ಅನಗತ್ಯ ಖರ್ಚು ಹೆಚ್ಚು ಮಾಡುವಿರಿ.
ಧನಸ್ಸುರಾಶಿ
ಕೆಲಸ ಕಾರ್ಯದಲ್ಲಿ ಹಿನ್ನಡೆ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ಕುಟುಂಬದಿಂದ ದೂರವಾಗುವ ಚಿಂತೆ, ಒಂಟಿಯಾಗಿರಲು ಇಷ್ಟ ಪಡುವಿರಿ, ಸಾಂಸಾರಿಕ ಸುಖ ಉತ್ತಮವಿದ್ದು ಶಾಂತಿ ಸಮಾಧಾನವು ಸಿಗಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಬಂದಾವು. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಚಾಲನೆಯಲ್ಲಿ ಜಾಗ್ರತೆ. ನೆರೆಹೊರೆ ಬಂಧುಗಳಲ್ಲಿ ವೈಮನಸ್ಸು, ದೇಹದಲ್ಲಿ ನೋವು, ಆಯುಷ್ಯದ ಚಿಂತೆ, ಸಹೋದರಿಯಿಂದ ಅನುಕೂಲ.

ಮಕರರಾಶಿ
ಸ್ವಯಂಕೃತ ಅಪರಾಧದಿಂದ ನಷ್ಟ, ಅನಗತ್ಯ ಸಂಬಂಧಗಳಿಂದ ಕಿರಿಕಿರಿ, ಪೆಟ್ಟಾಗುವ ಸಾಧ್ಯತೆ, ಉದ್ಯೋಗದಲ್ಲಿ ನಷ್ಟ-ಸೋಲು, ನಿಮ್ಮ ಸ್ವಪ್ರಯತ್ನಬಲವೇ ನಿಮಗೆ ಮುನ್ನಡೆ ತಂದೀತು. ಎಷ್ಟೋ ಕೆಲಸಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆದಾವು. ಸಾಂಸಾರಿಕವಾಗಿ ಬಂಧುಬಳಗದವರ ಸಹಕಾರ ಸಿಗಲಿದೆ. ಉದರ ಸಂಬಂಧಿ ಬಗ್ಗೆ ಜಾಗ್ರತೆ ಇರಲಿ. ನಿದ್ರೆಯಲ್ಲಿ ದುಃಸ್ವಪ್ನಗಳು, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ದೂರ ಪ್ರದೇಶದಲ್ಲಿ ಅನುಕೂಲ.
ಕುಂಭರಾಶಿ
ಸ್ಥಿರಾಸ್ತಿ-ವಾಹನದಿಂದ ಲಾಭ, ಶುಭ ಕಾರ್ಯ ಯೋಗ, ಅದೃಷ್ಟ ಒಲಿಯುವುದು, ಪಂಚಮದ ರಾಹುವಿನಿಂದ ಮಾನಸಿಕ ಸ್ಥಿತಿ ಅಲ್ಲೋಲಕಲ್ಲೋಲವಾದೀತು. ಆರ್ಥಿಕವಾಗಿ ಕೂಡಾ ಖರ್ಚುವೆಚ್ಚಗಳಿರುತ್ತದೆ. ದೈಹಿಕ ಆರೋಗ್ಯ ಏರುಪೇರಾಗದಂತೆ ಗಮನವಿರಲಿ. ದಾಯಾದಿಗಳಿಂದ ಕಿರುಕುಳವಿದೆ. ಉದ್ಯೋಗದಲ್ಲಿ ಬಡ್ತಿ, ಉತ್ತಮ ಗೌರವ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನರಾಶಿ
ಉದ್ಯೋಗ ಸ್ಥಳದಲ್ಲಿ ಒತ್ತಡ, ಮಹಿಳೆಯರಿಂದ ಸೋಲು, ನಷ್ಟ, ನಿಮ್ಮ ದೃಢ ನಿರ್ಧಾರಗಳೇ ನಿಮ್ಮನ್ನು ಮುನ್ನಡೆಸಲಿದೆ. ಸಾಂಸಾರಿಕವಾಗಿ ಸಂತಸದ ದಿನಗಳಿವು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಉತ್ತಮ ಫಲವನ್ನು ಹೊಂದಲಿದ್ದಾರೆ. ಮಹಿಳೆಯರಿಗೆ ಚಿಂತೆ ಕಾಡಲಿದೆ. ನಿರಾಸೆ, ತೊಂದರೆ, ಅನಿರೀಕ್ಷಿತ ಘಟನೆಗಳಿಂದ ನಿದ್ರಾಭಂಗ, ಲಾಭ ಪ್ರಮಾಣ ಕುಂಠಿತ, ನಷ್ಟ ಅಧಿಕವಾಗುವುದು, ಮಿತ್ರರ ಜೀವನದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗೆ ಅಲೆದಾಟ.