ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 24-05-2020

ನಿತ್ಯಭವಿಷ್ಯ : 24-05-2020

- Advertisement -

ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ಒತ್ತಡ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ವ್ಯಾಪಾರ – ವ್ಯವಹಾರದಲ್ಲಿ ಲಾಭ, ಸುತ್ತಾಡಲು ಹೋಗುವುದಿದ್ದರೆ ಶಾಪಿಂಗ್‌ ನಿಂದ ದೂರವಿರಿ. ಸಂತೋಷ ಕೂಟವನ್ನು ತ್ಯಜಿಸುವುದು ಉತ್ತಮ. ಕಚೇರಿಯಲ್ಲಿ ವಿಳಂಬ ಗತಿಯಿಂದ ಕಾರ್ಯವು ನಡೆಯಲಿದೆ. ಹಣಕಾಸು ಪರಿಸ್ಥಿತಿ ಚೇತರಿಕೆ, ಆತ್ಮೀಯರಿಂದ ಕಿರಿಕಿರಿ, ಕುಟುಂಬದಲ್ಲಿ ಅಲ್ಪ ನೆಮ್ಮದಿ ವಾತಾವರಣ, ಅನಗತ್ಯ ಖರ್ಚು ಮಾಡಬೇಡಿ.

ವೃಷಭರಾಶಿ
ಕಾರ್ಯ ಯಶಸ್ಸಿಗಾಗಿ ಓಡಾಟ, ಮನಸ್ಸಿನಲ್ಲಿ ನಾನಾ ಆಲೋಚನೆ, ಕಾರ್ಯಗಳಲ್ಲಿ ಅಡೆತಡೆಗಳು, ಕಷ್ಟಗಳು ಎದುರಾದಾವು. ಹಾಗೆಂದು ಕರ್ತವ್ಯವನ್ನು ನಿರ್ಲಕ್ಷಿಸದಿರಿ. ನಿಮ್ಮ ಗುರಿಯತ್ತ ಲಕ್ಷ್ಯ ಕೇಂದ್ರೀಕರಿಸಿರಿ. ಯಾವುದಕ್ಕೂ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ. ಪರಿಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಣಕಾಸು ವಿಚಾರದಲ್ಲಿ ಓಡಾಟ, ಶುಭ ಕಾರ್ಯ ನಿಮಿತ್ತ ಪ್ರಯಾಣ.

ಮಿಥುನರಾಶಿ
ಕಾರ್ಯಕ್ಷೇತ್ರದಲ್ಲಿ ನಾನಾ ಜನರ ಸಂಪರ್ಕ ನಿಮಗಾಗಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡಿರಿ. ನಿಮ್ಮ ಸುತ್ತಮುತ್ತಲಿನವರು ಹೊಣೆಗೇಡಿಗಳಾಗಿ ವರ್ತಿಸಬಹುದು. ತಾಳ್ಮೆ ಅಗತ್ಯವಿದೆ. ಕಾರಣವಿಲ್ಲದೇ ಓಡಾಡುವಿರಿ, ವ್ಯವಹಾರಗಳಲ್ಲಿ ಅಭಿವೃದ್ಧಿ, ಇಷ್ಟಾರ್ಥ ಸಿದ್ಧಿ ಯೋಗ, ಸೈಟ್-ವಾಹನ ಲಾಭ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದೂರ ಪ್ರಯಾಣಕ್ಕೆ ಮನಸ್ಸು, ಇಲ್ಲ ಸಲ್ಲದ ಅಪವಾದ.

ಕಟಕರಾಶಿ
ಗೌರವ ಸನ್ಮಾನ ಪ್ರಾಪ್ತಿ, ಯೋಚಿಸಿ ನಿರ್ಧಾರ ಕೈಗೊಳ್ಳುವಿರಿ, ಆರ್ಥಿಕವಾಗಿ ನೀವು ಜಾಗ್ರತೆ ಮಾಡದಿದ್ದಲ್ಲಿ ಖರ್ಚುವೆಚ್ಚಗಳು ಮಿತಿ ಮೀರಬಹುದು. ವಿದ್ಯಾರ್ಥಿಗಳಿಗೆ ನಿರುತ್ಸಾಹವು ಹೆಚ್ಚಲಿದೆ ಇದು ವಿದ್ಯಾಭ್ಯಾಸದಲ್ಲಿ ಹಿನ್ನಡೆಗೆ ಕಾರಣವಾಗಲಿದೆ. ಉದ್ಯೋಗಿಗಳಿಗೆ ನಿರಾಸೆ. ನೆಮ್ಮದಿಯ ಜೀವನಕ್ಕೆ ಮನಸ್ಸು, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಹಣಕಾಸು ಸಮಸ್ಯೆ, ದುಷ್ಟರ ಸಹವಾಸದಿಂದ ದೂರವಿರಿ,ಮನಸ್ಸಿನಲ್ಲಿ ಗೊಂದಲ.

ಸಿಂಹರಾಶಿ
ದೃಷ್ಠಿ ದೋಷದಿಂದ ತೊಂದರೆ, ಕಾರ್ಯಗಳಲ್ಲಿ ವಿಳಂಬ, ಅನಿರೀಕ್ಷಿತ ಘಟನೆಗಳನ್ನು ಅವಗಣಿಸದಿರಿ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರಬಹುದು. ತಾಳ್ಮೆ, ಸಮಾಧಾನದಿಂದ ಎದುರಿಸಿರಿ. ಗ್ರಹಗಳು ನಿಮಗೆ ಪೂರಕವಾಗಿವೆ. ಸದುಪಯೋಗಿಸಿರಿ. ವಿದೇಶ ಪ್ರಯಾಣ, ದಂಡ ಕಟ್ಟುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು.

ಕನ್ಯಾರಾಶಿ
ವ್ಯವಹಾರ ಆರಂಭಕ್ಕೆ ಮನಸ್ಸು, ಹೊಸ ಗೆಳೆಯರು ಸಿಗುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಹೆಚ್ಚಿನ ಕಾರ್ಯ ಒತ್ತಡವಿರುತ್ತದೆ. ಹಗಲುಗನಸು ಬಿಟ್ಟು ವಾಸ್ತವಿಕತೆಗೆ ಆದ್ಯತೆ ಕೊಡಿರಿ. ನಿಮಗೆ ಸವಾಲಿನ ದಿನಗಳಿವು ಜಾಗ್ರತೆಯಿಂದ ಇರಿ. ಹೊಸ ಪ್ರಯತ್ನಗಳಲ್ಲಿ ಯಶಸ್ಸು, ಮನೆ ನಿರ್ಮಾಣಕ್ಕೆ ತೊಂದರೆ, ಹಣಕಾಸು ಸಮಸ್ಯೆ, ಕೆಲಸದಲ್ಲಿ ಅನುಕೂಲ, ಚಿನ್ನಾಭರಣ ಖರೀದಿಯೋಗ, ಅಧಿಕಾರ ಪ್ರಾಪ್ತಿ,ಅಪರಿಚಿತರಿಂದ ದೂರ ಉಳಿಯಿರಿ.

ತುಲಾರಾಶಿ
ಆತುರ ಸ್ವಭಾವದಿಂದ ಸಂಕಷ್ಟ, ವಿಶೇಷ ವ್ಯಕ್ತಿಯೊಬ್ಬರಿಂದ ಸೂಕ್ತ ಸಲಹೆಗಳು ಕಂಡುಬರುತ್ತವೆ. ಸ್ಪಂದಿಸಿರಿ. ದಿನವನ್ನು ಸರಿಯಾಗಿ ಬಳಸಿಕೊಳ್ಳಿರಿ. ಸಾಂಸಾರಿಕವಾಗಿ ಬಂಧುಮಿತ್ರರು ನಿಮ್ಮನ್ನು ಸಹಕರಿಸಲಿದ್ದಾರೆ. ಸಂತಸವಿದೆ.
ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅತ್ಯಗತ್ಯ, ಶತ್ರು ವಿಚಾರದಲ್ಲಿ ಭಯ, ಮುಂಗೋಪ ಹೆಚ್ಚಾಗುವುದು, ಅರ್ಥವಿಲ್ಲದ ಮಾತುಗಳನ್ನಾಡುವಿರಿ, ಕಾರ್ಯ ನಿಮಿತ್ತ ಓಡಾಟ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮ, ಕುಟುಂಬದ ಬಗ್ಗೆ ಯೋಚನೆ, ಸಂಕಷ್ಟದ ವಾತಾವರಣ ಸೃಷ್ಟಿಯಾಗಬಹುದು. ಇತರರ ಮಾತಿಗೆ ನೀವು ತಾಳ್ಮೆಯಿಂದ ಇರಿ. ಸಂಬಂಧಗಳನ್ನು ಕೆಡಲು ಆಸ್ಪದ ನೀಡದಿರಿ. ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗಿಸಿಯಾರು. ಆತ್ಮೀಯರಲ್ಲಿ ವೈಮನಸ್ಸು, ಸಂಬಂಧ ಇಲ್ಲದವರಿಂದ ಸಹಕಾರ, ಅಪರಿಚಿತರ ವಿಚಾರದಲ್ಲಿ ಎಚ್ಚರ, ಹಿರಿಯರಿಂದ ಮಾರ್ಗದರ್ಶನ, ಉದ್ಯೋಗದಲ್ಲಿ ಒತ್ತಡ ಜಾಸ್ತಿ, ಎಲ್ಲಿ ಹೋದರೂ ಅಶಾಂತಿ.

ಧನಸ್ಸುರಾಶಿ
ಶುಭ ಕಾರ್ಯ ನಿಮಿತ್ತ ಬಂಧುಗಳ ಆಗಮನ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ನಿಮ್ಮ ಬದುಕಿಗೆ ಒಂದು ತಿರುವು ದೊರಕಲಿದೆ. ನೀವಿಡುವ ಹೆಜ್ಜೆ ಸರಿಯಾಗಿ ಮುಂದುವರಿಯಲಿದೆ. ಮಾನಸಿಕ ದೃಢತೆಯನ್ನು ಕಾಯ್ದುಕೊಳ್ಳಿರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋಗಲಿದೆ. ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ಶುಭ ಕಾರ್ಯದ ಚಿಂತೆ, ವಿದ್ಯಾರ್ಥಿಗಳಿಗೆ ಓದಿನ ಒತ್ತಡ, ಸ್ಥಿರಾಸ್ತಿ ಅನುಕೂಲ.

ಮಕರರಾಶಿ
ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಅಚ್ಚರಿಯ ಬೆಳವಣಿಗೆಯು ಸಂಭವಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ತೋರಿಬರುವುದು. ಹಿತಶತ್ರುಗಳ ವಂಚನೆ ಬಯಲಾಗಬಹುದು. ಭಾವನೆಗಳನ್ನು ನಿಯಂತ್ರಿಸಿಕೊಳ್ಳಿರಿ. ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದಿಲ್ಲ, ಸ್ತ್ರೀಯರಿಗೆ ಅಲ್ಪ ಅನುಕೂಲ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ ನಿರಾಸಕ್ತಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ನೆಮ್ಮದಿ ಇಲ್ಲದ ಜೀವನ.

ಕುಂಭರಾಶಿ
ಭೂ ವ್ಯವಹಾರದಲ್ಲಿ ಅನುಕೂಲ, ಕೌಟುಂಬಿಕ ಸಾಮರಸ್ಯ ಕಂಡುಬರುವುದು. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸುವ ಕಾಲ ಬರಲಿದೆ. ಕಠಿಣ ನಿರ್ಧಾರ ತೆಗೆದುಕೊಳ್ಳದಿರಿ. ಬಳಿಕ ಪಶ್ಚಾತ್ತಾಪಪಡುವ ಸಮಯವಿದು. ಟ್ರಾವೆಲ್ಸ್ ನವರಿಗೆ ಲಾಭ, ವ್ಯಾಪಾರದಲ್ಲಿ ನಷ್ಟ, ಕಾರಣವಿಲ್ಲದೇ ದ್ವೇಷ-ಕೋಪ, ಮಾಡಿದ ಸಾಲ ತೀರಿಸಲು ಯತ್ನ, ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ, ಅಪರಿಚಿತರಿಂದ ಎಚ್ಚರಿಕೆ.

ಮೀನರಾಶಿ
ಉದ್ಯೋಗಕ್ಕಾಗಿ ಅಲೆದಾಟ, ಅವಕಾಶಗಳು ಕೈ ತಪ್ಪುವುದು, ಮನಸ್ಸಿನಲ್ಲಿ ನಾನಾ ಆಲೋಚನೆ, ಚಿಂತೆಯಿಂದ ನೆಮ್ಮದಿಗೆ ಭಂಗ, ಕೆಲಸ ಕಾರ್ಯಗಳಲ್ಲಿ ಅಲ್ಪ ಸಿದ್ಧಿ, ನೆಮ್ಮದಿ ಇಲ್ಲದ ವಾತಾವರಣ, ಆಪ್ತರೊಂದಿಗೆ ಮೂಡಿಬಂದ ಭಿನ್ನಮತ ಹಂತ ಹಂತವಾಗಿ ಪರಿಹಾರವಾಗಲಿದೆ. ಅನಾವಶ್ಯಕವಾಗಿ ಭಾವುಕರಾಗಿ ವರ್ತಿಸದಿರಿ. ಆದಾಯದ ಹೊಸ ಮೂಲಗಳು ಗೋಚರಕ್ಕೆ ಬರಲಿವೆ. ಸದುಪಯೋಗಿಸಿರಿ. ಅಗೌರವ, ಅವಮಾನ ಪ್ರಾಪ್ತಿ, ಹಿರಿಯರ ಸಲಹೆಗೆ ಮನ್ನಣೆ ನೀಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular